ನ್ಯೂ ಜನರೇಷನ್ Suzuki S-Cross ಕಾರಿನ ಟೀಸರ್ ಬಿಡುಗಡೆ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಸುಜುಕಿ ತನ್ನ ಸರಣಿಯಲ್ಲಿರುವ ಕೆಲವು ಮಾದರಿಗಳನ್ನು ನವೀಕರಿಸಲಾಗುತ್ತಿದೆ. ಇದೀಗ ಸುಜುಕಿ ಕಂಪನಿಯು ತನ್ನ ನ್ಯೂ ಜನರೇಷನ್ ಎಸ್-ಕ್ರಾಸ್ ಕಾರಿನ ಆಕರ್ಷಕ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ನ್ಯೂ ಜನರೇಷನ್ Suzuki S-Cross ಕಾರಿನ ಟೀಸರ್ ಬಿಡುಗಡೆ

ಸುಜುಕಿ ಇಟಾಲಿಯನ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೆಡ್‌ಲ್ಯಾಂಪ್ ಅನ್ನು ಬಹಿರಂಗಪಡಿಸುವ ಚಿತ್ರದ ಟೀಸರ್ ಆಗಿದೆ, ಕಳೆದ ತಿಂಗಳು, ಸುಜುಕಿ ಸ್ಪೇನ್ ನ್ಯೂ ಜನರೇಷನ್ ಎಸ್-ಕ್ರಾಸ್ ಇದೇ ತಿಂಗಳ 25 ರಂದು ಪಾದಾರ್ಪಣೆ ಮಾಡಲಿದೆ ಎಂದು ದೃಢಪಡಿಸಿತ್ತು. ಟೀಸರ್ ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಕಂಪನಿಯು ಯಾವ ಮಾದರಿಯ ಟೀಸರ್ ಎಂದು ಬಹಿರಂಗಪಡಿಸಿಲ್ಲ.

ನ್ಯೂ ಜನರೇಷನ್ Suzuki S-Cross ಕಾರಿನ ಟೀಸರ್ ಬಿಡುಗಡೆ

ನ್ಯೂ ಜನರೇಷನ್ ಎಸ್-ಕ್ರಾಸ್ ಕಾರನ್ನು ಸುಜುಕಿಯ ಹಂಗೇರಿಯನ್ ಸ್ಥಾವರದಲ್ಲಿ ತಯಾರಿಸುವ ಸಾಧ್ಯತೆಯಿದೆ, ಹೊಸ ಕ್ರಾಸ್ಒವರ್ ಅತ್ಯಾಧುನಿಕ ಅಂಶಗಳೊಂದಿಗೆ ಹೊಸ ವಿನ್ಯಾಸ ಶೈಲಿಯನ್ನು ಹೊಂದಿರುತ್ತದೆ. ಟೀಸರ್‌ನಲ್ಲಿ ಕಾಣುವಂತೆ ಕೋನೀಯ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಶೀಟ್ ಮೆಟಲ್ ಪ್ರದೇಶವು ಕ್ಲೀನ್ ಲೈನ್‌ಗಳು ಮತ್ತು ಬಿಗಿಯಾದ ಮೇಲ್ಮೈಗಳೊಂದಿಗೆ ಬಾಕ್ಸಿ ಎಸ್‌ಯುವಿಯಂತಿದೆ.

ನ್ಯೂ ಜನರೇಷನ್ Suzuki S-Cross ಕಾರಿನ ಟೀಸರ್ ಬಿಡುಗಡೆ

ಈ ಹೊಸ ಕಾರು 4.2 ಎಂ ಮತ್ತು 4.5 ಎಂ ಉದ್ದವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಇದು ಯುರೋಪಿಯನ್ ಮತ್ತು ಏಷ್ಯನ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ, ಟ್ರೆಂಡ್‌ಗೆ ಅನುಗುಣವಾಗಿ, 2022ರ ಸುಜುಕಿ ಎಸ್-ಕ್ರಾಸ್ ಕಾರು ಟಾಪ್-ಶೆಲ್ಫ್ ಕನೆಕ್ಟಿವಿಟಿ ವೈಶಿಷ್ಟ್ಯಗಳೊಂದಿಗೆ ತಂತ್ರಜ್ಞಾನ-ಹೊತ್ತ ಒಳಾಂಗಣವನ್ನು ಹೊಂದಿರುತ್ತದೆ,

ನ್ಯೂ ಜನರೇಷನ್ Suzuki S-Cross ಕಾರಿನ ಟೀಸರ್ ಬಿಡುಗಡೆ

ಯುರೋಪಿಯನ್ ಮಾರುಕಟ್ಟೆಗೆ, ವಾಹನವು ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್, ಪಾರ್ಕ್ ಅಸಿಸ್ಟ್, ಕ್ರಾಸ್ ಟ್ರಾಫಿಕ್ ಅಲರ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮುಂತಾದ ADAS ಅಂಶಗಳನ್ನು ಒಳಗೊಂಡಂತೆ ಉನ್ನತ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿರಬಹುದು.

ನ್ಯೂ ಜನರೇಷನ್ Suzuki S-Cross ಕಾರಿನ ಟೀಸರ್ ಬಿಡುಗಡೆ

ಈ ವಿಭಾಗದಲ್ಲಿನ ಸ್ಪರ್ಧೆಯು ಹಲವಾರು ಉತ್ತಮ ಮಾದರಿಯನ್ನು ಹೊಂದಿರುವುದರಿಂದ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ನ್ಯೂ ಜನರೇಷನ್ ಎಸ್-ಕ್ರಾಸ್ ಹೊಂದಿರಬಹುದು. ಇನ್ನು ಮಾಲಿನ್ಯ ನಿಯಮಗಳು ಪ್ರತಿ ವರ್ಷ ಹೆಚ್ಚು ಕಠಿಣವಾಗುತ್ತಿರುವ ಕಾರಣ, ಹೊಸ ಸುಜುಕಿ ಕ್ರಾಸ್ಒವರ್ ಅನ್ನು ಸಾಂಪ್ರದಾಯಿಕ ಪೆಟ್ರೋಲ್ ಅಥವಾ ಡೀಸೆಲ್ ಮೋಟಾರ್‌ನಿಂದ ನೀಡಿದರೆ ಅದು ಆಶ್ಚರ್ಯಕರವಾಗಿರುತ್ತದೆ.

ನ್ಯೂ ಜನರೇಷನ್ Suzuki S-Cross ಕಾರಿನ ಟೀಸರ್ ಬಿಡುಗಡೆ

ಸುಜುಕಿಯು ಎಂಟ್ರಿ ಲೆವೆಲ್ ರೂಪಾಂತರದಲ್ಲಿ 48V ಮೈಲ್ಡ್-ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಟರ್ಬೋಚಾರ್ಜ್ಡ್ ಪೆಟ್ರೋಲ್ ಯುನಿಟ್ ನೀಡುತ್ತದೆ ಎಂದು ನಾವು ಊಹಿಸುತ್ತೇವೆ ಆದರೆ ಸರನಿ-ಟಾಪ್ ವೇರಿಯಂಟ್‌ಗಾಗಿ ಹೈ-ವೋಲ್ಟೇಜ್ ಪ್ಲಗ್-ಇನ್ ಹೈಬ್ರಿಡ್ ಅನ್ನು ತಳ್ಳಿಹಾಕಲಾಗುವುದಿಲ್ಲ. ಸಂಪೂರ್ಣ ಎಲೆಕ್ಟ್ರಿಕ್ ಆವೃತ್ತಿಯು ಭವಿಷ್ಯದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

ನ್ಯೂ ಜನರೇಷನ್ Suzuki S-Cross ಕಾರಿನ ಟೀಸರ್ ಬಿಡುಗಡೆ

ಇದು ನಿಜವಾಗಿಯೂ ಹೊಸ ಎಸ್-ಕ್ರಾಸ್ ಆಗಿದ್ದರೆ, ಅದು ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶದ ಕೆಲವು ತಿಂಗಳ ನಂತರ ಭಾರತೀಯ ಮಾರುಕಟ್ಟೆಯನ್ನು ಕೂಡ ತಲುಪುತ್ತದೆ ಎಂದು ನಿರೀಕ್ಷಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ಹೊಸ ಮಾದರಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು.

ನ್ಯೂ ಜನರೇಷನ್ Suzuki S-Cross ಕಾರಿನ ಟೀಸರ್ ಬಿಡುಗಡೆ

ಇನ್ನು ಭಾರತದಲ್ಲಿ ಮೊದಲು ಎಸ್-ಕ್ರಾಸ್ ಬಿಎಸ್ -4 ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದ್ದರಿಂದ, ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಸ್ಥಗಿತಗೊಳಿಸಲಾಗಿತ್ತು. ನಂತರ ಮಾರುತಿ ಸುಜುಕಿ ಕಂಪನಿಯು ಎಸ್-ಕ್ರಾಸ್ ಕಾರನ್ನು ಪೆಟ್ರೋಲ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದ್ದರು. ಪೆಟ್ರೋಲ್ ಎಂಜಿನ್ ಖಂಡಿತವಾಗಿಯೂ ಬಿಎಸ್-6 ಮಾರುತಿ ಸುಜುಕಿ ಎಎಸ್‌-ಕ್ರಾಸ್‌ಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಲು ಸಹಾಯ ಮಾಡಿದೆ.

ನ್ಯೂ ಜನರೇಷನ್ Suzuki S-Cross ಕಾರಿನ ಟೀಸರ್ ಬಿಡುಗಡೆ

ಈ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಆವೃತ್ತಿಯನ್ನು ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಬಿಎಸ್-6 ಮಾರುತಿ ಎಸ್-ಕ್ರಾಸ್ ಕಾರಿನಲ್ಲಿ ಹೊಸ ಎಂಜಿನ್ ಆಯ್ಕೆಯ ಜೊತೆ ವಿನ್ಯಾಸದಲ್ಲಿ ಮತ್ತು ಫೀಚರ್ ಗಳನ್ನು ಕೂಡ ಅಪ್ದೇಟ್ ಮಾಡಿ ಬಿಡುಗಡೆಗೊಳಿಸಿತ್ತು.

ನ್ಯೂ ಜನರೇಷನ್ Suzuki S-Cross ಕಾರಿನ ಟೀಸರ್ ಬಿಡುಗಡೆ

ಹೊಸ ಮಾರುತಿ ಎಸ್-ಕ್ರಾಸ್ ನಲ್ಲಿ 1.5 ಪೆಟ್ರೋಲ್ ಮಾದರಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಣೆಯ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 103.5 ಬಿ‍ಹೆಚ್‍‍ಪಿ ಪವರ್ ಮತ್ತು 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ನ್ಯೂ ಜನರೇಷನ್ Suzuki S-Cross ಕಾರಿನ ಟೀಸರ್ ಬಿಡುಗಡೆ

ಈ ಹೊಸ ಮಾರುತಿ ಎಸ್-ಕ್ರಾಸ್ ಕಾರಿನ ಇಂಟಿರಿಯರ್ ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಟಚ್ ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ, ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋವನ್ನು ಹೊಂದಿದೆ. ಇದರೊಂದಿಗೆ ಎಸಿ ವೆಂಟ್ಸ್, ಸ್ಟಿಯರಿಂಗ್ ಮೌಟೆಂಡ್ ಕಂಟ್ರೋಲ್ ಅನ್ನು ಅಳವಡಿಸಲಿದೆ. ಇನ್ನು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಇದರಲ್ಲಿ ಏರ್‍‍ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಎಸ್ಒ‍ಫಿಕ್ಸ್ ಚೈಲ್ಡ್ ಸೀಟ್, ಸ್ಪೀಡ್ ವಾರ್ನಿಂಗ್ ಸಿಸ್ಟಂ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಹೊಂದಿದೆ.

ನ್ಯೂ ಜನರೇಷನ್ Suzuki S-Cross ಕಾರಿನ ಟೀಸರ್ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಮಾರುತಿ ಸುಜುಕಿ ನಿಸ್ಸಂದೇಹವಾಗಿ ನಾಯಕನಾಗಿದ್ದರೂ, ಪ್ರೀಮಿಯಂ ವಾಹನಗಳ ಮಾರಾಟದಲ್ಲಿ ಹ್ಯುಂಡೈ ಕಂಪನಿಗೆ ಹೋಲಿಸಿದರೆ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿಲ್ಲ. ಮಾರುತಿ ಸುಜುಕಿ ಎಸ್-ಕ್ರಾಸ್ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಪೈಪೋಟಿ ನೀಡುತ್ತಿದೆ. ಇನ್ನು ನ್ಯೂ ಜನರೇಷನ್ ಮಾರುತಿ ಎಸ್-ಕ್ರಾಸ್ ಬಿಡುಗಡೆಯಾಗುವ ಸಾಧ್ಯತೆಗಳಿದೆ.

Most Read Articles

Kannada
English summary
2022 suzuki s cross crossover new teaser released find here all details
Story first published: Friday, November 12, 2021, 15:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X