Just In
Don't Miss!
- Sports
ಸತತ ಮೂರನೇ ಸೋಲಿಗೆ ಬೇಸತ್ತ ಡೇವಿಡ್ ವಾರ್ನರ್ ಹೇಳಿದ್ದೇನು?
- News
ತೊಂದರೆಗೊಳಗಾಗಿರುವ ರಾಜ್ಯಗಳಿಗೆ ಮುಂದಿನ ವಾರದೊಳಗೆ ಮತ್ತಷ್ಟು ಲಸಿಕೆ: ಕೇಂದ್ರ
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಣ್ಮರೆಯಾಗುತ್ತಿರುವ 'ಟಾಂಗಾ ಸವಾರಿ'ಗೆ ಹೊಸ ರೂಪದಲ್ಲಿ ಚಾಲನೆ
ಪ್ರಾಚಿನ ಕಾಲದಿಂದಲೂ ಪ್ರಮುಖ ಸಾರಿಗೆ ಸಂವಹನವಾಗಿ ಗುರುತಿಸಿಕೊಂಡಿದ್ದ ಜಟಕಾ ಬಂಡಿಗಳ ಸೇವೆಗಳು ನಗರೀಕರಣದ ಪರಿಣಾಮ ಕೇವಲ ಪ್ರವಾಸಿ ತಾಣಗಳಲ್ಲಿ ಮಾತ್ರ ಸೀಮಿತವಾಗಿದ್ದು, ತೆರೆಮರೆಗೆ ಸರಿಯುತ್ತಿರುವ ಬದುಕಿನ ಜಟಕಾ ಬಂಡಿಗೆ ಮತ್ತೆ ಹೊಸರೂಪ ನೀಡಿರುವುದು ಮಹತ್ವದ ಬದಲಾವಣೆಗೆ ಕಾರಣವಾಗಿದೆ.

ನಗರೀಕರಣದ ಪರಿಣಾಮ ಸ್ವಚ್ಚತೆ ಮತ್ತು ಸುಗಮ ಸಂಚಾರ ಸುವ್ಯವಸ್ಥೆಗಾಗಿ ಸಂಚಾರ ಬಂದ್ ಮಾಡಲಾಗಿರುವ ಟಾಂಗಾಗಳಿಗೆ ಮತ್ತೆ ಹೊಸ ರೂಪ ನೀಡುವ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದ್ದು, ಈ ಬಾರಿ ಟಾಂಗಾ ಸೇವೆಗಳನ್ನು ನೀಡಲು ಕುದರೆಗಳ ಬದಲಾಗಿ ಎಲೆಕ್ಟ್ರಿಕ್ ವಾಹನವನ್ನಾಗಿ ಮಾರ್ಪಡಿಸಿ ರಸ್ತೆಗಿಳಿಸಲಾಗುತ್ತಿದೆ. ಒಂದೂ ಕಾಲದಲ್ಲಿ ರಾಜ-ಮಾಹಾರಾಜರಿಂದ ಹಿಡಿದು ಜನಸಾಮಾನ್ಯರ ಸಂಚಾರಕ್ಕೂ ಮುಖ್ಯ ಸಾರಿಗೆ ಸೌಲಭ್ಯವಾಗಿದ್ದ ಟಾಂಗಾ ಸೇವೆಯು ಇತ್ತೀಚೆಗೆ ದೇಶದ ಪ್ರಮುಖ ನಗರಗಳಲ್ಲಿ ಸಂಚಾರ ನಿಷೇಧಿಸಿದ್ದು, ಇದೀಗ ಹೊಸ ರೂಪದಲ್ಲಿ ಟಾಂಗ್ ಸೇವೆಗಳನ್ನು ಮರಳಿಪರಿಚಯಿಸಲಾಗಿದೆ.

ಟಾಂಗಾ ಸೇವೆಗಳಲ್ಲಿ ಮುಂಚೂಣಿಯಲ್ಲಿದ್ದ ಮುಂಬೈ ಮಹಾನಗರದಲ್ಲೂ ಕೂಡಾ ಲಕ್ಷಾಂತರ ಸಂಖ್ಯೆಯಲ್ಲಿದ್ದ ಟಾಂಗಾಗಳಿಗೆ 2015ರಿಂದಲೇ ನಿಷೇಧ ಹೇರಲಾಗಿದ್ದು, ಟಾಂಗಾ ಸಂಚಾರದ ನಿಷೇಧದಿಂದಾಗಿ ಅದನ್ನೇ ನಂಬಿಕೊಂಡಿದ್ದ ಲಕ್ಷಾಂತರ ಜನರ ಬದುಕಿಗೆ ಬರೆಎಳೆದಂತಾಗಿತ್ತು.

ಕುದುರೆ ಮೂಲಕ ಎಳೆಯುವ ಟಾಂಗಾಗಳಿಗೆ 2015 ರಲ್ಲಿ ನಿಷೇಧ ಹೇರಿದ್ದ ಮುಂಬೈ ಹೈಕೋರ್ಟ್ ಇದೀಗ ಟಾಂಗಾ ಸೇವೆಯನ್ನು ಪುನಾರಂಭಿಸಲು ಹೊಸ ಷರತ್ತುಗಳೊಂದಿಗೆ ಅವಕಾಶ ನೀಡಿದ್ದು, ಈ ಬಾರಿ ಟಾಂಗಾಗಳು ಕುದರೆಯ ಬದಲಾಗಿ ಎಲೆಕ್ಟ್ರಿಕ್ ರೂಪದಲ್ಲಿ ರಸ್ತೆಗಿಳಿದಿವೆ.

ಹೊಸ ಸಾರಿಗೆ ಸೌಲಭ್ಯಕ್ಕೆ ಹಸಿರು ನಿಶಾನೆ ತೋರಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಆಧುನಿಕ ತಂತ್ರಜ್ಞಾನದೊಂದಿಗೆ ನಶಿಸುತ್ತಿರುವ ಟಾಂಗಾ ಸವಾರಿಗೆ ಮತ್ತೆ ಚಾಲನೆ ನೀಡುತ್ತಿರುವ ಹರ್ಷ ವ್ಯಕ್ತಪಡಿಸಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಅಗತ್ಯ ಯೋಜನೆಗಳೊಂದಿಗೆ ಸರ್ಕಾರವು ಬದ್ದವಾಗಿದೆ ಎಂದಿದ್ದಾರೆ.

ಕುದರೆಗಳಿಯಿಲ್ಲದೆ ಟಾಂಗಾ ಸವಾರಿಯು ಪರಿಪೂರ್ಣವಾಗುವುದಿಲ್ಲವಾದರೂ ಸದ್ಯದ ಪರಿಸ್ಥಿತಿಗೆ ಮತ್ತು ಟ್ರಾಫಿಕ್ ದಟ್ಟಣೆಯ ಪರಿಣಾಮವಾಗಿ ಕೆಲವು ಬದಲಾವಣೆಗಳು ಅನಿವಾರ್ಯವಾಗಿದ್ದು, ಟಾಂಗಾ ಚಾಲನೆಯನ್ನೇ ಹೊಟ್ಟೆಪಾಡಾಗಿಸಿಕೊಂಡಿದ್ದ ಕುಟುಂಬಗಳಿಗೆ ಈ ಹೊಸ ಯೋಜನೆಯು ಸದುಪಯೋಗವಾಗಲಿದೆ.

ಮಾಲಿನ್ಯ ತಡೆ ಜೊತೆಗೆ ಅಚ್ಚುಕಟ್ಟಾದ ಸಾರಿಗೆ ಸಂವಹನವನ್ನು ಬಲಪಡಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ಮಾದರಿಯ ಟಾಂಗಾ ಸೇವೆಗಳಿಗೆ ಚಾಲನೆ ನೀಡಲು ಅನುಮತಿ ನೀಡಲಾಗಿದ್ದು, ಹೊಸ ಯೋಜನೆಯನ್ನು ಅಚ್ಚುಕಟ್ಟಾಗಿ ಜಾರಿಗೆ ತರಲು ಮುಂದಾಗಿರುವ ಯುಬಿಒ ರೈಡ್ಜ್ ಕಂಪನಿಯು ಸಾಮಾನ್ಯ ಟಾಂಗಾಗಳನ್ನು ಎಲೆಕ್ಟ್ರಿಕ್ ಮಾದರಿಯಾಗಿ ಸಿದ್ದಪಡಿಸುತ್ತಿದೆ.

ಮುಂಬೈ ನಗರದಲ್ಲಿ ವಿಕ್ಟೋರಿಯಾ ಟಾಂಗಾ ಎಂದೇ ಜನಪ್ರಿಯವಾಗಿದ್ದ ಟಾಂಗಾ ಸೇವೆಗಳನ್ನು ಎಲೆಕ್ಟ್ರಿಕ್ ರೂಪರೊಂದಿಗೆ ಮರುಚಾಲನೆ ನೀಡುತ್ತಿರುವ ಯುಬಿಒ ರೈಡ್ಜ್ ಕಂಪನಿಯು ಮೊದಲ ಹಂತದಲ್ಲಿ ಹತ್ತು ಇ-ಟಾಂಗಾಗಳನ್ನು ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಪ್ರಾಯೋಗಿಕ ಚಾಲನೆಯಲ್ಲಿ ನಗರದ ಪ್ರಮುಖ ಪ್ರವಾಸಿ ತಾಣಗಳಿಗೆ ಸೇವೆ ನೀಡಲು ಸಿದ್ದತೆ ನಡೆಸಲಾಗುತ್ತಿದ್ದು, ಮಾಹಿತಿಗಳ ಪ್ರಕಾರ ಹೊಸ ಇ-ಟಾಂಗಾಗಳು ಚಾಲಕ ಸೇರಿ 7 ಆಸನಗಳ ಜೊತೆಗೆ ಅತ್ಯುತ್ತಮ ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 70 ಕಿ.ಮೀ ಸಂಚರಿಸಲಿವೆ.

ಹೊಸ ಸಾರಿಗೆ ಸೌಲಭ್ಯವನ್ನು ವ್ಯವಸ್ಥಿತವಾಗಿ ಜಾರಿಗೆ ತರುತ್ತಿರುವ ಯುಬಿಒ ರೈಡ್ಜ್ ಕಂಪನಿಯು ಅಗತ್ಯ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಇ-ಟಾಂಗಾ ಸೇವೆಗಳಿಗೆ ಪ್ರತ್ಯೇಕ ಆ್ಯಪ್ ಅಭಿವೃದ್ದಿಗೊಳಿಸುತ್ತಿದ್ದು, ಮುಗಿದುಹೋಗಿದ್ದ ಟಾಂಗಾ ಚಾಲಕರ ಬದುಕಿಗೆ ಇದು ಭರವಸೆಯ ಬೆಳಕಾಗಿ ಬಂದಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇನ್ನು ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚು ಗಮನಸೆಳೆಯುತ್ತಿದ್ದು, ಗ್ರಾಹಕರನ್ನು ಕೂಡಾ ಎಲೆಕ್ಟ್ರಿಕ್ ವಾಹನಗಳನ್ನೇ ಬಳಕೆ ಮಾಡುವಂತೆ ವಿವಿಧ ಯೋಜನೆಗಳ ಮೂಲಕ ಗಮನಸೆಳೆಯುತ್ತಿರುವುದು ಮುಂಬರುವ ದಿನಗಳಲ್ಲಿ ಮಹತ್ವದ ಬದಲಾವಣೆಯನ್ನು ನೀರಿಕ್ಷಿಸಲಾಗಿದೆ.