ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ ಮಾಡಿದ ರೆನಾಲ್ಟ್

ರೆನಾಲ್ಟ್ ಇಂಡಿಯಾ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ತನ್ನ ಬಹುನೀರಿಕ್ಷಿತ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಲು ಸಜ್ಜಾಗುತ್ತಿದ್ದು, ಉತ್ಪಾದನಾ ಆವೃತ್ತಿಯ ವಿನ್ಯಾಸದ ಕುರಿತಾಗಿ ಮೊದಲ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ

ಹೊಸ ಕಾರು ಮಾದರಿಗಳನ್ನು ಒಂದೇ ಪ್ಲ್ಯಾಟ್‌ಫಾರ್ಮ್ ಅಡಿ ಅಭಿವೃದ್ದಿಗೊಳಿಸುತ್ತಿರುವ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಳ್ಳುತ್ತಿದ್ದು, ಹೊಸ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ನಿಸ್ಸಾನ್ ಮ್ಯಾಗ್ನೈಟ್ ನಂತರ ರೆನಾಲ್ಟ್ ಕಿಗರ್ ಕಾರು ಕೂಡಾ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಸದ್ಯ ಕಾನ್ಸೆಪ್ಟ್ ಮಾದರಿಯಲ್ಲಿ ಅನಾವರಣಗೊಂಡಿರುವ ಕಿಗರ್ ಕಾರು ಶೀಘ್ರದಲ್ಲೇ ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳಲಿದ್ದು, ಮ್ಯಾಗ್ನೈಟ್ ಕಾರು ಮಾದರಿಯಲ್ಲೇ ಕಿಗರ್ ಕೂಡಾ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ

ರೆನಾಲ್ಟ್ ಹೊಸ ಕಿಗರ್ ಕಾರು ಮಾದರಿಯು ಮ್ಯಾಗ್ನೈಟ್ ಮಾದರಿಯಲ್ಲೇ ತಾಂತ್ರಿಕ ಸೌಲಭ್ಯಗಳು, ಎಂಜಿನ್ ಆಯ್ಕೆ ಹೊಂದಿದ್ದರೂ ವಿಭಿನ್ನವಾದ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ನಾಲ್ಕು ಮೀಟರ್‌ಗಿಂತಲೂ ಕಡಿಮೆ ಉದ್ದಳತೆಯ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾಗಿ ಮಾರಾಟಗೊಳ್ಳಲಿದೆ.

ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ

ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ವಿಭಾಗದಲ್ಲಿ ಪ್ರಮುಖ ಕಾರು ಕಂಪನಿಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದ್ದು, ಕಿಗರ್ ಕಾರು ಮಾದರಿಯು ಸಹ ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಹೊಸ ಸಂಚಲನ ಸೃಷ್ಟಿಸುವ ತವಕದಲ್ಲಿದೆ.

ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ

ಕಿಗರ್ ಕಾರಿನಲ್ಲಿ ಕಟಿಂಗ್ ಎರ್ಡ್ಜ್ ವಿನ್ಯಾಸ ನೀಡಲಾಗಿದ್ದು, ಸ್ಪೋರ್ಟಿ ಲುಕ್ ಹೊಂದಿರುವ ಹೊಸ ಕಾರು ಮಾದರಿಯು ಮುಂಭಾಗದಲ್ಲಿ ಡ್ಯುಯಲ್ ಹೆಡ್‌ಲ್ಯಾಂಪ್ ಜೊತೆಗೆ ಎಲ್ಇಡಿ ಡಿಆರ್‌ಎಲ್ಎಸ್ ಜೋಡಿಸಲಾಗಿದೆ. ಹೊಸ ಹೆಡ್‌ಲ್ಯಾಂಪ್ ಸೌಲಭ್ಯವು ಬಂಪರ್ ಮೇಲ್ಭಾಗದಲ್ಲಿ ಮತ್ತು ಎಲ್ಇಡಿ ಡಿಆರ್‌ಎಲ್ಎಸ್ ಸೌಲಭ್ಯವು ಬ್ಯಾನೆಟ್‌ಗೆ ಹೊಂದಿಕೊಂಡಂತೆ ವಿನ್ಯಾಸ ನೀಡಲಾಗಿದ್ದು, ಕಿಗರ್ ಆವೃತ್ತಿಯು ಕಾನ್ಸೆಪ್ಟ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ

ಹಾಗೆಯೇ ಡೇ ಲೈಟ್ ರನ್ನಿಂಗ್ ಲೈಟ್ ಸೌಲಭ್ಯವು ಫ್ರಂಟ್ ಗ್ರಿಲ್‍ವರೆಗೂ ಮುಂದುವರೆದಿದ್ದು, ಮಧ್ಯದಲ್ಲಿ ರೆನಾಲ್ಟ್ ಲೊಗೊ ಪಡೆದುಕೊಂಡಿದೆ. ಫ್ರಂಟ್ ಬಂಪರ್ ಸೌಲಭ್ಯವು ಮಧ್ಯದಲ್ಲಿ ದೊಡ್ಡದಾದ ಏರ್ ಡ್ಯಾಮ್ ಜೊತೆ ಸಿಲ್ವರ್ ಕೊಟಿಂಗ್ ಹೊಂದಿರುವ ಸ್ಕೀಡ್ ಪ್ಲೇಟ್ ಪಡೆದುಕೊಂಡಿದ್ದು, ಕಟಿಂಗ್ ಎಡ್ಜ್ ವಿನ್ಯಾಸಗಳು ಹೊಸ ಕಾರಿಗೆ ಮತ್ತಷ್ಟು ಬಲಿಷ್ಠತೆಗೆ ಪೂರಕವಾಗಿವೆ.

ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ

ಕಾರಿನ ಮುಂಭಾಗದಲ್ಲಿನ ಬಲಿಷ್ಠ ವಿನ್ಯಾಸದಂತೆ ಸೈಡ್ ಪ್ರೋಫೈಲ್ ಕೂಡಾ ಆಕರ್ಷಕವಾಗಿದ್ದು, ಕ್ರೀಸ್‌ ಲೈನ್‌ಗಳೊಂದಿಗೆ ಬ್ಲ್ಯಾಕ್ ಕ್ಲ್ಯಾಂಡಿಂಗ್ ಒಳಗೊಂಡ ವೀಲ್ಹ್ ಆರ್ಚ್ ಮತ್ತು ಆಕರ್ಷಕ ಡೈಮಂಡ್ ಕಟ್ ಅಲಾಯ್ ವೀಲ್ಹ್ ಹೊಂದಿರಲಿದೆ.

ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ

ಹೊಸ ಕಾರಿನಲ್ಲಿ ಪ್ರತಿ ಸ್ಪರ್ಧಿ ಕಾರು ಮಾದರಿಗಳಂತೆ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದರಲಿರುವ ಕಿಗರ್ ಕಾರು ಮಾದರಿಯು ಇಂಟ್ರಾಗ್ರೆಟೆಡ್ ಟರ್ನ್ ಇಂಡಿಕೇಟರ್ ಹೊಂದಿರುವ ರಿಯಲ್ ವ್ಯೂ ಮಿರರ್, ಬಾಡಿ ಕಲರ್ ಹೊಂದಿರುವ ಡೋರ್ ಹ್ಯಾಂಡಲ್, ಬಾಡಿ ಪ್ಯಾನೆಲ್, ಕಪ್ಪು ಬಣ್ಣ ಹೊಂದಿರುವ ರೂಫ್ ರೈಲ್ಸ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಪಡೆದುಕೊಂಡಿರಲಿದೆ.

ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ

ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯವು ರೆನಾಲ್ಟ್ ಕಿಗರ್ ಹೈ ಎಂಡ್ ಮಾದರಿಗಳಲ್ಲಿ ಜೋಡಣೆ ಮಾಡಲಾಗಿದ್ದು, ನಿಸ್ಸಾನ್ ಮ್ಯಾಗ್ನೈಟ್ ಮಾದರಿಯಲ್ಲೂ ಈ ಸೌಲಭ್ಯವನ್ನು ನೀಡಲಾಗಿಲ್ಲ. ಆದರೆ ಕಿಗರ್ ಕಾರಿನಲ್ಲಿ ಸನ್‌ರೂಫ್ ಸೇರಿದಂತೆ ಕೆಲವು ವಿಭಿನ್ನ ತಾಂತ್ರಿಕ ಸೌಲಭ್ಯಗಳು ಗ್ರಾಹಕರನ್ನು ಸೆಳೆಯಲಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ

ಇನ್ನುಳಿದಂತೆ ಹೊಸ ಕಾರಿನಲ್ಲಿ ರೆನಾಲ್ಟ್ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸುವ ಸಾಧ್ಯತೆಗಳಿವೆ.

ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ

ಹೊಸ ಕಾರು ಕಿಗರ್ ಮಾದರಿಯು ಮ್ಯಾಗ್ನೈಟ್ ಕಾರಿನಲ್ಲಿರುವಂತೆಯೇ 1.0-ಲೀಟರ್ ಎನ್ಎ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಆಯ್ಕೆಗಳನ್ನು ಪಡೆದುಕೊಳ್ಳಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.20 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ

ಕಿಗರ್ ಕಾರಿನ ಟರ್ಬೊ ಪೆಟ್ರೋಲ್ ಮಾದರಿಯು ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ಹೊಸ ಕಾರು ಈ ತಿಂಗಳಾಂತ್ಯಕ್ಕೆ ಅನಾವರಣಗೊಳ್ಳುವ ಮೂಲಕ ಫೆಬ್ರುವರಿ ಮಧ್ಯಂತರದಲ್ಲಿ ಖರೀದಿಗೆ ಲಭ್ಯವಾಗುವ ನೀರಿಕ್ಷೆಯಿದೆ.

Article Published On: Wednesday, January 20, 2021, 17:56 [IST]
English summary
Renault Kiger Compact SUV New Teaser Released. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+