ಡಿಸೆಂಬರ್ ತಿಂಗಳಿನಲ್ಲಿ ಏರಿಕೆ ಕಂಡ ಅಶೋಕ್ ಲೇಲ್ಯಾಂಡ್ ಕಮರ್ಷಿಯಲ್ ವಾಹನ ಮಾರಾಟ

ಕಮರ್ಷಿಯಲ್ ವಾಹನ ತಯಾರಕ ಕಂಪನಿಯಾದ ಅಶೋಕ್ ಲೇಲ್ಯಾಂಡ್ 2020ರ ಡಿಸೆಂಬರ್ ತಿಂಗಳ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ಅಂಕಿಅಂಶಗಳ ಪ್ರಕಾರ ಕಂಪನಿಯು ಕಳೆದ ತಿಂಗಳು 11,857 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ಡಿಸೆಂಬರ್ ತಿಂಗಳಿನಲ್ಲಿ ಏರಿಕೆ ಕಂಡ ಅಶೋಕ್ ಲೇಲ್ಯಾಂಡ್ ಕಮರ್ಷಿಯಲ್ ವಾಹನ ಮಾರಾಟ

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣವು 14%ನಷ್ಟು ಹೆಚ್ಚಾಗಿದೆ. 2019ರ ಡಿಸೆಂಬರ್‌ ತಿಂಗಳಿನಲ್ಲಿ ಕಂಪನಿಯು 10,378 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಟ್ರಕ್ ಮಾರಾಟದಲ್ಲಿ ಕಂಪನಿಯು 56%ನಷ್ಟು ಲಾಭ ಗಳಿಸಿದರೆ, ಬಸ್ ಮಾರಾಟದಲ್ಲಿ 90%ನಷ್ಟು ಕುಸಿತವನ್ನು ದಾಖಲಿಸಿದೆ.

ಡಿಸೆಂಬರ್ ತಿಂಗಳಿನಲ್ಲಿ ಏರಿಕೆ ಕಂಡ ಅಶೋಕ್ ಲೇಲ್ಯಾಂಡ್ ಕಮರ್ಷಿಯಲ್ ವಾಹನ ಮಾರಾಟ

ಕಂಪನಿಯು ಕಳೆದ ತಿಂಗಳು 5,930 ಯುನಿಟ್‌ ಮಧ್ಯಮ ಗಾತ್ರದ ಹಾಗೂ ಭಾರೀ ಗಾತ್ರದ ಟ್ರಕ್‌ಗಳನ್ನು ಮಾರಾಟ ಮಾಡಿದೆ. 2019ರ ಡಿಸೆಂಬರ್‌ ತಿಂಗಳಿನಲ್ಲಿ ಕಂಪನಿಯು 3,809 ಮಧ್ಯಮ ಗಾತ್ರದ ಹಾಗೂ ಭಾರೀ ಗಾತ್ರದ ಟ್ರಕ್‌ಗಳನ್ನು ಮಾರಾಟ ಮಾಡಿತ್ತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಡಿಸೆಂಬರ್ ತಿಂಗಳಿನಲ್ಲಿ ಏರಿಕೆ ಕಂಡ ಅಶೋಕ್ ಲೇಲ್ಯಾಂಡ್ ಕಮರ್ಷಿಯಲ್ ವಾಹನ ಮಾರಾಟ

ಕಂಪನಿಯು ಕಳೆದ ತಿಂಗಳು ಕೇವಲ 245 ಯುನಿಟ್ ಬಸ್ಸುಗಳನ್ನು ಮಾರಾಟ ಮಾಡಿದೆ. 2019ರಲ್ಲಿ 2,560 ಯುನಿಟ್ ಬಸ್ಸುಗಳನ್ನು ಮಾರಾಟ ಮಾಡಲಾಗಿತ್ತು. ಈ ಎರಡು ಸೆಗ್'ಮೆಂಟ್‌ಗಳಲ್ಲಿ ಒಟ್ಟಾರೆಯಾಗಿ 6,175 ಯುನಿಟ್‌ಗಳು ಮಾರಾಟವಾಗಿವೆ.

ಡಿಸೆಂಬರ್ ತಿಂಗಳಿನಲ್ಲಿ ಏರಿಕೆ ಕಂಡ ಅಶೋಕ್ ಲೇಲ್ಯಾಂಡ್ ಕಮರ್ಷಿಯಲ್ ವಾಹನ ಮಾರಾಟ

ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು 6,369 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಸೆಗ್'ಮೆಂಟ್‌ನಲ್ಲಿ ಈ ಬಾರಿಯ ಮಾರಾಟದಲ್ಲಿ 3%ನಷ್ಟು ಕುಸಿತ ಉಂಟಾಗಿದೆ. 2020ರ ಏಪ್ರಿಲ್ - ಡಿಸೆಂಬರ್ ತಿಂಗಳ ನಡುವೆ ಕಂಪನಿಯು 22,191 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಡಿಸೆಂಬರ್ ತಿಂಗಳಿನಲ್ಲಿ ಏರಿಕೆ ಕಂಡ ಅಶೋಕ್ ಲೇಲ್ಯಾಂಡ್ ಕಮರ್ಷಿಯಲ್ ವಾಹನ ಮಾರಾಟ

ಕಳೆದ ವರ್ಷ ಇದೇ ಅವಧಿಯಲ್ಲಿ 56,229 ಯುನಿಟ್ ವಾಹನಗಳು ಮಾರಾಟವಾಗಿದ್ದವು. ಇನ್ನು ಲಘು ಕಮರ್ಷಿಯಲ್ ವಾಹನಗಳ ಮಾರಾಟದಲ್ಲಿ ಕಂಪನಿಯು 42%ನಷ್ಟು ಲಾಭ ಗಳಿಸಿದೆ.

ಡಿಸೆಂಬರ್ ತಿಂಗಳಿನಲ್ಲಿ ಏರಿಕೆ ಕಂಡ ಅಶೋಕ್ ಲೇಲ್ಯಾಂಡ್ ಕಮರ್ಷಿಯಲ್ ವಾಹನ ಮಾರಾಟ

2019ರ ಡಿಸೆಂಬರ್‌ನಲ್ಲಿ ಮಾರಾಟವಾದ 4,009 ಯುನಿಟ್‌ಗಳಿಗೆ ಹೋಲಿಸಿದರೆ ಕಂಪನಿಯು 2020ರ ಡಿಸೆಂಬರ್‌ನಲ್ಲಿ 5,682 ಯುನಿಟ್ ಲಘು ಕಮರ್ಷಿಯಲ್ ವಾಹನಗಳನ್ನು ಮಾರಾಟ ಮಾಡಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಡಿಸೆಂಬರ್ ತಿಂಗಳಿನಲ್ಲಿ ಏರಿಕೆ ಕಂಡ ಅಶೋಕ್ ಲೇಲ್ಯಾಂಡ್ ಕಮರ್ಷಿಯಲ್ ವಾಹನ ಮಾರಾಟ

2020ರ ಏಪ್ರಿಲ್ - ಡಿಸೆಂಬರ್ ವರೆಗೆ ಕಂಪನಿಯ 29,629 ಯುನಿಟ್ ಲಘು ಕಮರ್ಷಿಯಲ್ ವಾಹನಗಳನ್ನು ಮಾರಾಟವಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 36,855 ಯುನಿಟ್ ಲಘು ಕಮರ್ಷಿಯಲ್ ವಾಹನಗಳು ಮಾರಾಟವಾಗಿದ್ದವು.

ಡಿಸೆಂಬರ್ ತಿಂಗಳಿನಲ್ಲಿ ಏರಿಕೆ ಕಂಡ ಅಶೋಕ್ ಲೇಲ್ಯಾಂಡ್ ಕಮರ್ಷಿಯಲ್ ವಾಹನ ಮಾರಾಟ

ಈ ಸೆಗ್'ಮೆಂಟ್‌ನಲ್ಲಿ ಕಂಪನಿಯ ಮಾರಾಟವು 2020ರಲ್ಲಿ 20% ನಷ್ಟು ಕಡಿಮೆಯಾಗಿದೆ. ಇನ್ನು ಕಂಪನಿಯ ರಫ್ತು ಹಾಗೂ ದೇಶಿಯ ಮಾರಾಟದ ಬಗ್ಗೆ ಹೇಳುವುದಾದರೆ ಕಂಪನಿಯು ಮಧ್ಯಮ ಗಾತ್ರದ ಹಾಗೂ ಭಾರೀ ಗಾತ್ರದ ಕಮರ್ಷಿಯಲ್ ವಾಹನ ವಿಭಾಗದಲ್ಲಿ ಒಟ್ಟು 6,235 ಯುನಿಟ್‌ಗಳನ್ನು ಮಾರಾಟ ಮಾಡಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಡಿಸೆಂಬರ್ ತಿಂಗಳಿನಲ್ಲಿ ಏರಿಕೆ ಕಂಡ ಅಶೋಕ್ ಲೇಲ್ಯಾಂಡ್ ಕಮರ್ಷಿಯಲ್ ವಾಹನ ಮಾರಾಟ

ಕಳೆದ ವರ್ಷ ಇದೇ ತಿಂಗಳಲ್ಲಿ 3,958 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಸೆಗ್'ಮೆಂಟ್‌ನಲ್ಲಿ 2020ರ ಡಿಸೆಂಬರ್ ತಿಂಗಳಿನಲ್ಲಿ ಕಂಪನಿಯ ಮಾರಾಟವು 20%ನಷ್ಟು ಹೆಚ್ಚಾಗಿದೆ.

ಡಿಸೆಂಬರ್ ತಿಂಗಳಿನಲ್ಲಿ ಏರಿಕೆ ಕಂಡ ಅಶೋಕ್ ಲೇಲ್ಯಾಂಡ್ ಕಮರ್ಷಿಯಲ್ ವಾಹನ ಮಾರಾಟ

ಕಂಪನಿಯು ಕಳೆದ ತಿಂಗಳು ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಒಟ್ಟಾರೆಯಾಗಿ 5,878 ಯುನಿಟ್ ಲಘು ಕಮರ್ಷಿಯಲ್ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ಕಳೆದ ವರ್ಷ 4,143 ಯುನಿಟ್'ಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಮಾರಾಟವು ಈ ಸೆಗ್'ಮೆಂಟ್‌ನಲ್ಲಿ 2020ರ ಡಿಸೆಂಬರ್‌ ತಿಂಗಳಿನಲ್ಲಿ 42%ನಷ್ಟು ಹೆಚ್ಚಾಗಿದೆ.

More from DriveSpark

Article Published On: Sunday, January 3, 2021, 10:55 [IST]
English summary
Ashok Leyland commercial vehicle sales increased in December 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+