ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಿಎಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ 5-ಸೀರಿಸ್ ಫೇಸ್‌ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ನಾಳೆ ಈ ಹೊಸ ಬಿಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಿಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಬಿಎಂಡಬ್ಲ್ಯು ಕಂಪನಿಯು ಈ ಹೊಸ 5-ಸೀರಿಸ್ ಫೇಸ್‌ಲಿಫ್ಟ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಬಿಎಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು ಹೊಸ ಫೀಚರ್ಸ್ ಗಳನ್ನು ಮತ್ತು ತಾಂತ್ರಿಕ ನವೀಕರಣಗಳ ಜೊತೆಗೆ ಅದರ ಸ್ಟೈಲಿಂಗ್‌ನಲ್ಲಿ ಸ್ವಲ್ಪ ಬದಲಾವಣೆಗಳನ್ನು ಪಡೆದುಕೊಂಡಿದೆ. ಆದರೆ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇನ್ನು ಈ ಐಷಾರಾಮಿ ಕಾರು ಹಿಂದಿನ ಮಾದರಿಗಿಂತ ತುಸು ದುಬಾರಿಯಾಗಿರಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಿಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಹೊಸ ಬಿಎಂಡಬ್ಲ್ಯು 5-ಸೀರೀಸ್ ಫೇಸ್‌ಲಿಫ್ಟ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರ ಮುಂಭಾಗ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಹೊಸ ಗ್ರಿಲ್ ಮತ್ತು ಹೊಸ ಸ್ಲೀಕ್ ಹೆಡ್ ಲೈಟ್ ಅನ್ನು ಅಳವಡಿಸಿದ್ದಾರೆ. ಈ ಹೊಸ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು ಹಿಂದಿನ ಮಾದರಿಗಿಂತ ಆಕರ್ಷಕವಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಿಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಈ ಹೊಸ ಬಿಎಂಡಬ್ಲ್ಯು 5-ಸೀರಿಸ್ ಕಾರಿನ ಬಂಪರ್ ಗಳೊಂದಿಗೆ ಆಗ್ರೆಸಿವ್ ವಿನ್ಯಾಸಗೊಳಿಸಿದ ಏರ್ ಡ್ಯಮ್ ಗಳನ್ನು ಹೊಂದಿದೆ, ಇನ್ನು ಈ ಕಾರಿನಲ್ಲಿ ಮರುವಿನ್ಯಾಸಗೊಳಿಸಿದ ಡ್ಯುಯಲ್ ಟೋನ್ ಅಲಾಯ್ ವ್ಜೀಲ್ ಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಿಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಈ ಐಷಾರಾಮಿ ಕಾರಿನ ಮುಂಭಾಗ ಹೊಸ ಆಕಾರದ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಹೊಸ ತೆಳ್ಳನೆಯ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಇದನ್ನು ಹೊರತುಪಡಿಸಿದರೆ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗೆ ಹೋಲುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಿಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಈ ಕಾರಿನ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಟೇಲ್ ಲ್ಯಾಂಪ್ ಮತ್ತು ಕ್ವಾಡ್-ಎಕ್ಸಾಸ್ಟ್ ಗಳೊಂದಿಗೆ ಸ್ಪೋರ್ಟಿಯರ್ ಬಂಪರ್ ಅನ್ನು ಹೊಂದಿದೆ. ಹೊಸ ಬಿಎಂಡಬ್ಲ್ಯು 5-ಸೀರಿಸ್ ಕಾರಿನ ಇಂಟಿರಿಯರ್ ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಿಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಈ ಹೊಸ ಬಿಎಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು ಡಿಜಿಟಲ್ ಇನ್ಸ್ ಟ್ರೂಮೆಂಟ್ ಪ್ಯಾನೆಲ್, ಆಂಬಿಯೆಂಟ್ ಲೈಟಿಂಗ್, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಂ, ಸನ್‌ರೂಫ್, ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ವೈರ್‌ಲೆಸ್ ಆಪಲ್ ಕಾರ್‌ಪ್ಲೇಯೊಂದಿಗೆ ಬಿಎಂಡಬ್ಲ್ಯು ಐ-ಡ್ರೈವ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಿಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಈ 5-ಸೀರಿಸ್ ಫೇಸ್‌ಲಿಫ್ಟ್ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇದರಲ್ಲಿ ಸುರಕ್ಷತೆಗಾಗಿ 8 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ವ್ಯೂ ಕ್ಯಾಮೆರಾ, ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಿಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಇನ್ನು ಈ ಐಷಾರಾಮಿ ಕಾರು, 2.0-ಲೀಟರ್, ಇನ್ ಲೈನ್-ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 248 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 2.0-ಲೀಟರ್ ಇನ್ ಲೈನ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 187.7 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಬಿಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಇದರೊಂದಿಗೆ 3.0-ಲೀಟರ್, ಡಿಸೇಲ್ ಎಂಜಿನ್ ಆಯ್ಕೆಯನ್ನು ನೀಡಲಾಗುತ್ತದೆ. ಈ ಹೊಸ ಬಿಎಂಡಬ್ಲ್ಯು 5-ಸೀರಿಸ್ ಫೇಸ್‌ಲಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಆಡಿ ಎ6, ಮರ್ಸಿಡಿಸ್ ಬೆಂಝ್ ಇ-ಕ್ಲಾಸ್, ಜಾಗ್ವಾರ್ ಎಕ್ಸ್‌ಎಫ್ ಮತ್ತು ವೋಲ್ವೋ ಎಸ್90 ಕಾರುಗಳಿಗೆ ಪೈಪೋಟಿ ನೀಡುತ್ತದೆ,

Most Read Articles

Kannada
English summary
BMW 5 Series Facelift Teased Ahead Of Launch. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X