ಅನಾವರಣವಾಯ್ತು 2022ರ ಬಿಎಂಡಬ್ಲ್ಯು ಎಕ್ಸ್3, ಎಕ್ಸ್4 ಫೇಸ್‌ಲಿಫ್ಟ್ ಎಸ್‍ಯುವಿಗಳು
ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಎಕ್ಸ್3 ಮತ್ತು ಎಕ್ಸ್4 ಫೇಸ್‌ಲಿಫ್ಟ್ ಎಸ್‌ಯುವಿಗಳನ್ನು ಜಾಗತಿಕವಾಗಿ ಅನಾವರಣಗೊಳಿಸಲಾಗಿದೆ. ಈ ಎರಡು ಹೊಸ ಎಸ್‍ಯುವಿಗಳು ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಸೂಕ್ಷ್ಮ ವಿನ್ಯಾಸ ನವೀಕರಣಗಳನ್ನು ಪಡೆದುಕೊಂಡಿದೆ.

ಈ ಹೊಸ ಬಿಎಂಡಬ್ಲ್ಯು ತನ್ನ ಎಕ್ಸ್3 ಮತ್ತು ಎಕ್ಸ್4 ಫೇಸ್‌ಲಿಫ್ಟ್ ಎಸ್‍ಯುವಿಗಳು ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿವೆ. ಈ ಎರಡು ಎಸ್‍ಯುವಿಗಳನ್ನು 'ಎಂ ಸ್ಪೋರ್ಟ್' ಪ್ಯಾಕೇಜ್‌ನೊಂದಿಗೆ ನೀಡುತ್ತದೆ. ಇದು ಹೆಚ್ಚು ಅಗ್ರೇಸಿವ್ ಸ್ಟೈಲಿಂಗ್ ನೀಡುತ್ತದೆ ಆದರೆ ಪೂರ್ಣ ಪ್ರಮಾಣದ ಎಂ ಮಾದರಿಗಳಿಗಿಂತ ಹೆಚ್ಚು ಕೈಗೆಟುಕುವಂತಿರುತ್ತದೆ. ಈ ಎರಡು ಎಸ್‍ಯುವಿಗಳು ಆಕರ್ಷಕ ಲುಕ್ ಅನ್ನು ಹೊಂದಿದೆ.

ಈ ಬಿಎಂಡಬ್ಲ್ಯು ತನ್ನ ಎಕ್ಸ್3 ಮತ್ತು ಎಕ್ಸ್4 ಫೇಸ್‌ಲಿಫ್ಟ್ ಎಸ್‍ಯುವಿಗಳು ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ, ಅದು ಮೊದಲಿಗಿಂತಲೂ ತೆಳುವಾಗಿದೆ. ಎರಡು ಎಸ್‍ಯುವಿಗಳ ಮುಂಭಾಗದಲ್ಲಿ ಸ್ವಲ್ಪ ದೊಡ್ಡದಾದ ಕಿಡ್ನಿ ಗ್ರಿಲ್ ಅನ್ನು ಹೊಂದಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ಬಿಎಂಡಬ್ಲ್ಯು ಎಸ್‍ಯುವಿಗಳಲ್ಲಿ ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್ ಗಳು, ಸ್ಟ್ಯಾಂಡರ್ಡ್ 19-ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್ ಲೈಟ್‌ಗಳನ್ನು ಸಹ ಹೊಂದಿವೆ.

ಈ ಐಷಾರಾಮಿ ಎಸ್‍ಯುವಿಗಳಲ್ಲಿ ಒಳಭಾಗದಲ್ಲಿ ಹೊಸ ಐಡ್ರೈವ್ 9 ಆಪರೇಟಿಂಗ್ ಸಿಸ್ಟಂ, 12.3-ಇಂಚಿನ ಡಿಜಿಟಲ್ ಇನ್ ಟ್ರೂಮೆಂಟ್ ಕ್ಲಸ್ಟರ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 16-ಸ್ಪೀಕರ್ ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಅನ್ನು ಪಡೆಯುತ್ತದೆ ಎಂದು ನಿರೀಕ್ಷಿಸುತ್ತೇವೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಎರಡು ಎಂ ಮಾದರಿಗಳು ಸ್ಪೋರ್ಟ್ಸ್ ಸೀಟುಗಳನ್ನು ಪ್ರಕಾಶಮಾನವಾದ ಎಂ ಲೋಗೊ, ಪ್ರೀಮಿಯಂ ಲೆದರ್ , ಮೌಂಟಡ್ ಕಂಟ್ರೋಲ್ ಗಳೊಂದಿಗೆ ಎಂ-ಸ್ಟೀರಿಂಗ್ ವ್ಹೀಲ್, ಎಂ-ಬ್ರ್ಯಾಂಡೆಡ್ ಸೀಟ್ ಬೆಲ್ಟ್‌ಗಳನ್ನು ಹೊಂದಿವೆ. ಇನ್ನು ಹಗುರವಾದ 20 ಇಂಚಿನ ಎಂ ಅಲಾಯ್ ವ್ಹೀಲ್‌ಗಳನ್ನು ಹೊಂದಿವೆ. ಇದರೊಂದಿಗೆ 21 ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ.

ಬಿಎಂಡಬ್ಲ್ಯು ತನ್ನ ಎಕ್ಸ್3, ಎಕ್ಸ್4 ಫೇಸ್‌ಲಿಫ್ಟ್ ಎಸ್‍ಯುವಿಗಳಲ್ಲಿ ಅದೇ 2.0 ಲೀಟರ್ ಟ್ವಿನ್ ಪವರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 248 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಇದರೊಂದಿಗೆ 2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗುತ್ತದೆ. ಈ ಎಂಜಿನ್ 184 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಇನ್ನು ಹೊಸ ಅಪ್‌ಡೇಟ್‌ಗಳು ಮತ್ತು ಟ್ವೀಕ್‌ಗಳೊಂದಿಗೆ ಬಿಎಂಡಬ್ಲ್ಯು ತನ್ನ ಎಕ್ಸ್3, ಎಕ್ಸ್4 ಫೇಸ್‌ಲಿಫ್ಟ್ ಎಸ್‍ಯುವಿಗಳು ಆಕರ್ಷಕ ಲುಕ್ ಅನ್ನು ಹೊಂದಿರಲಿದೆ.


Click it and Unblock the Notifications








