ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ದೇಶದ ಅಗ್ರಗಣ್ಯ ಕಾರು ಉತ್ಪಾದಕ ಮತ್ತು ಮಾರಾಟ ಕಂಪನಿಯಾಗಿರುವ Maruti Suzuki India Limited(MSIL) ಕಂಪನಿಯು ನ್ಯಾಯಸಮ್ಮತವಲ್ಲದ ವ್ಯಾಪಾರ ನೀತಿಯಿಂದಾಗಿ ಭಾರೀ ಪ್ರಮಾಣದ ದಂಡತೆತ್ತ ಬೇಕಾದ ಪರಿಸ್ಥಿತಿ ಎದುರಾಗಿದೆ.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ದೇಶಾದ್ಯಂತ ಪ್ರತಿನಗರದಲ್ಲೂ ತನ್ನ ಮಾರಾಟ ಜಾಲ ಹೊಂದಿರುವ Maruti Suzuki ಕಂಪನಿಗೆ ಮಾರಾಟ ಪಾಲುದಾರರೊಂದಿಗೆ ಮಾಡಿಕೊಂಡಿರುವ ನ್ಯಾಯಸಮ್ಮತವಲ್ಲದ ವ್ಯಾಪಾರ ನೀತಿಯು ಕಂಟಕವಾಗಿ ಪರಿಣಮಿಸಿದ್ದು, Maruti Suzuki ಕಂಪನಿಯ ವರ್ತನೆಗೆ ಕಿಡಿಕಾರಿರುವ CCI(ಭಾರತೀಯ ಸ್ಪರ್ಧಾ ಆಯೋಗ)ವು ಬರೋಬ್ಬರಿ ರೂ. 200 ಕೋಟಿ ದಂಡವಿಧಿಸಿದೆ.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ಮಾರಾಟ ಪಾಲುದಾರರೊಂದಿಗೆ ಸ್ಪರ್ಧಾತ್ಮಕ ಕೊಡುಗೆಗಳನ್ನು ಗ್ರಾಹಕರಿಗೆ ವಿತರಿಸಲು ನಿರ್ಬಂಧ ಹೇರುವ ನೀತಿಯೊಂದಿಗೆ ಸ್ಪರ್ಧಾತ್ಮಕ ವಿರೋಧಿ ನಡವಳಿಕೆ ಅನುಸರಿಸಿದ್ದಕ್ಕಾಗಿ ಭಾರತೀಯ ಸ್ಪರ್ಧಾ ಆಯೋಗವು Maruti Suzuki ಕಂಪನಿಗೆ ಛೀಮಾರಿ ಹಾಕಿದೆ.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

Maruti Suzuki ಡೀಲರ್ಸ್‌ಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಕಂಪನಿಯು ನಿಗದಿಪಡಿಸಿದ ರಿಯಾಯ್ತಿಗಳಿಂತ ಡೀಲರ್ಸ್‌ಗಳು ಗ್ರಾಹಕರಿಗೆ ಯಾವುದೇ ಹೆಚ್ಚುವರಿ ರಿಯಾಯ್ತಿ ನೀಡುವಂತಿಲ್ಲ ಎಂಬ ನಿರ್ಬಂಧ ವಿಧಿಸಿತ್ತು.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ಒಂದು ವೇಳೆ ಯಾವುದೇ ಒಂದು ಕಾರಿನ ಮೇಲೆ ಗ್ರಾಹಕನಿಗೆ ಕಂಪನಿಯು ನಿಗದಿಪಡಿಸಿದ ರಿಯಾಯಿತಿಗಿಂತ ಹೆಚ್ಚು ಕೊಡುಗೆಗಳನ್ನು ನೀಡುವುದಾದರೆ ಕಂಪನಿಯಿಂದ ಪೂರ್ವಾನುಮತಿ ಪಡೆದುಕೊಳ್ಳುವುದಲ್ಲದೆ ಹೆಚ್ಚುವರಿ ರಿಯಾಯ್ತಿ ನೀಡುತ್ತಿರುವುದಕ್ಕೆ ಸೂಕ್ತ ಕಾರಣವನ್ನು ಮಾರಾಟ ಪ್ರತಿನಿಧಿಯು ಕಂಪನಿಯ ಉನ್ನತ ಮಟ್ಟದ ಅಧಿಕಾರಿಗಳಿಗೆ ತಿಳಿಸಬೇಕಿತ್ತು.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ಹೀಗಾಗಿ ಪ್ರತಿಸ್ಪರ್ಧಿ ಕಾರುಗಳ ಮಾರಾಟದ ನಡುವೆ ತಮ್ಮ ಗ್ರಾಹಕರಿಗೆ ಹೆಚ್ಚಿನ ಕೊಡುಗೆಗಳನ್ನು ನೀಡಲು ಬಯಸುತ್ತಿದ್ದ ಡೀಲರ್ಸ್‌ಗಳ ಸ್ವತಂತ್ರ ಕಾರ್ಯನಿರ್ವಹಣೆಗೆ Maruti Suzuki ಕಂಪನಿಯು ನಿರ್ಬಂಧ ವಿಧಿಸಿರುವುದರ ಜೊತೆ ನಿಯಮ ಪಾಲನೆ ಮಾಡದ ಡೀಲರ್ಸ್‌ಗಳಿಂದ ದಂಡ ವಸೂಲಿ ಮಾಡುತ್ತಿತ್ತು.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ರಿಯಾಯ್ತಿ ನಿಯಂತ್ರಣವನ್ನು ಡೀಲರ್ಸ್‌ಗಳಲ್ಲಿ ಕಡ್ಡಾಯ ಅನುಸ್ಠಾನಗೊಳಿಸಲು ಡಿಟೆಕ್ಟಿವ್ ಏಜೆನ್ಸಿಗಳನ್ನು ಬಳಸಿಕೊಂಡಿದ್ದು, ಗ್ರಾಹಕರ ಸೋಗಿನಲ್ಲಿ ಬರುತ್ತಿದ್ದ ಡಿಟೆಕ್ಟಿವ್ ಏಜೆನ್ಸಿ ಪ್ರತಿನಿಧಿಗಳು ಡೀಲರ್ಸ್‌ ನೀಡುತ್ತಿರುವ ನಿಗದಿತ ಆಫರ್‌ಗಳು ಮತ್ತು ಕಂಪನಿಯ ನಿಯಮ ಮೀರಿ ನೀಡುತ್ತಿರುವ ರಿಯಾಯ್ತಿ ಬಗೆಗೆ ನೇರವಾಗಿ ಕಂಪನಿಗೆ ವರದಿ ನೀಡುತ್ತಿದ್ದವು.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ಗ್ರಾಹಕರ ಸೋಗಿನಲ್ಲಿ ಬರುತ್ತಿದ್ದ ಡಿಟೆಕ್ಟಿವ್ ಏಜೆನ್ಸಿ ಪ್ರತಿನಿಧಿಗಳು ಡೀಲರ್ಸ್‌ಗಳಲ್ಲಿ ಹೆಚ್ಚುವರಿ ಕೊಡುಗೆಗಳನ್ನು ನೀಡಿದರೆ ಕಾರು ಖರೀದಿಸುವುದಾಗಿ ಕೇಳಿಕೊಳ್ಳುತ್ತಿದ್ದರು. ಒಂದು ವೇಳೆ ಡೀಲರ್ಸ್‌ಗಳು ಕಂಪನಿಯು ನಿಗದಿಪಡಿಸಿ ರಿಯಾಯ್ತಿ ಹೊರತುಪಡಿಸಿ ಹೆಚ್ಚು ಆಫರ್ ನೀಡಲು ಒಪ್ಪಿದರೆ ಅಂತಹ ಡೀಲರ್ಸ್‌ಗಳ ಬಗೆಗೆ ಹಿರಿಯ ಅಧಿಕಾರಿಗಳಿಗೆ ಸಾಕ್ಷಿ ಸಮೇತ ವರದಿ ಮಾಡುತ್ತಿದ್ದರು.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ಒಂದು ವೇಳೆ ಗ್ರಾಹಕರು ಹೆಚ್ಚು ಕೊಡುಗೆಗಳನ್ನು ಬಯಸಿದರೆ ಕಂಪನಿಯ ಪೂರ್ವಾನುಮತಿಯಿಲ್ಲದೆ ಕೊಡುಗೆಗಳನ್ನು ನೀಡಿ ಸಿಕ್ಕಿಬಿಳುವ ಡೀಲರ್ಸ್‌ಗಳಿಂದ ಭಾರೀ ಪ್ರಮಾಣದ ದಂಡ ವಸೂಲಿ ಮಾಡಲಾಗುತ್ತಿತ್ತು.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ಇದರಿಂದಾಗಿ ಸ್ಪರ್ಧೆಯ ಯುಗದಲ್ಲಿ ಗ್ರಾಹಕರಿಗೆ ಹೆಚ್ಚಿಗೆ ಕೊಡುಗೆಗಳನ್ನು ನೀಡಲು ಮತ್ತು ಸ್ವತಂತ್ರ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತಿರುವ ಬಗೆಗೆ ಭಾರತೀಯ ಸ್ಪರ್ಧಾ ಆಯೋಗದಲ್ಲಿ ಹಲವಾರು ದೂರುಗಳು ದಾಖಲಾಗಿದ್ದವು.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ಡೀಲರ್ಸ್‌ಗಳ ದೂರುಗಳನ್ನು ಆಲಿಸಿ ತನಿಖೆ ನಡೆಸಿದ್ದ ಭಾರತೀಯ ಸ್ಪರ್ಧಾ ಆಯೋಗವು ಇದೀಗ Maruti Suzuki ಕಂಪನಿಗೆ ನ್ಯಾಯಸಮ್ಮತವಲ್ಲದ ವಾಣಿಜ್ಯ ಚಟುವಟಿಕೆಗಳನ್ನು ನಡೆಸಿದರೆ ಸಹಿಸಲು ಸಾಧ್ಯವಿಲ್ಲವೆಂದು ತಾಕೀತು ಮಾಡುವುದರ ಜೊತೆಗೆ ರೂ.200 ಕೋಟಿ ದಂಡ ವಿಧಿಸಿದೆ.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

CCI ಸಂಸ್ಥೆಯು ಕೇಂದ್ರ ಸರ್ಕಾರದಿಂದ ನೇಮಕಗೊಂಡ ಶಾಸನ ಬದ್ದವಾದ ಆಯೋಗವಾಗಿದ್ದು, ಇದರಲ್ಲಿ ಅಧ್ಯಕ್ಷರು ಸೇರಿ 6 ಸದಸ್ಯರನ್ನು ಒಳಗೊಂಡಿದೆ. ಆಯೋಗವು ಸ್ಪರ್ಧೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಭ್ಯಾಸಗಳನ್ನು ನಿಯಂತ್ರಿಸುವುದು, ಗ್ರಾಹಕರ ಪರವಾದ ಸ್ಪರ್ಧೆಯನ್ನು ಉತ್ತೇಜಿಸುವುದು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವುದು ಇದರ ಪ್ರಮುಖ ಧ್ಯೇಯವಾಗಿದೆ.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ಜೊತೆಗೆ ಭಾರತೀಯ ಮಾರುಕಟ್ಟೆಗಳಲ್ಲಿ ವ್ಯಾಪಾರದ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವುದು ಕೂಡಾ ಆಯೋಗದ ಕರ್ತವ್ಯವಾಗಿದ್ದು, ವ್ಯಾಪಾರದ ಸ್ವಾತಂತ್ರ್ಯಕ್ಕೆ ನಿರ್ಬಂಧ ವಿಧಿಸಿದ್ದಕ್ಕೆ Maruti Suzuki ಕಂಪನಿಗೆ ಭಾರೀ ಪ್ರಮಾಣದ ದಂಡವಿಧಿಸಿ ಇತರೆ ಕಂಪನಿಗಳಿಗೂ ಎಚ್ಚರಿಕೆ ರವಾನಿಸಿದೆ.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ಇನ್ನು Maruti Suzuki ಕಂಪನಿಯು ಕಾರು ಮಾರಾಟದಲ್ಲಿ ಎರಡು ಹಂತದ ಮಾರಾಟ ಮಳಿಗೆಗಳನ್ನು ಹೊಂದಿದ್ದು, ಅರೆನಾ ಕಾರು ಮಾರಾಟ ಮಳಿಗೆಗಳಲ್ಲಿ ಎಸ್-ಪ್ರೆಸ್ಸೊ, ಸ್ವಿಫ್ಟ್, ವಿಟಾರಾ ಬ್ರೆಝಾ, ಆಲ್ಟೊ, ವ್ಯಾಗನ್ಆರ್, ಡಿಸೈರ್, ಇಕೋ, ಸೆಲೆರಿಯೊ, ಎರ್ಟಿಗಾ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಲಾಭಕ್ಕಾಗಿ ಡೀಲರ್ಸ್‌ಗಳಿಗೆ ಕಿರುಕುಳ ನೀಡುತ್ತಿದ್ದ Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ಹಾಗೆಯೇ ನೆಕ್ಸಾ ಶೋರೂಂನಲ್ಲಿ ಪ್ರೀಮಿಯಂ ಕಾರು ಮಾದರಿಗಳಾದ ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್6 ಮತ್ತು ಎಸ್-ಕ್ರಾಸ್ ಕಾರು ಮಾರಾಟ ಸೌಲಭ್ಯ ಹೊಂದಿದ್ದು, ದೇಶಾದ್ಯಂತ ಸದ್ಯ 2,600ಕ್ಕೂ ಹೆಚ್ಚು ಅರೆನಾ ಕಾರು ಮಾರಾಟ ಮಳಿಗೆಗಳನ್ನು ಮತ್ತು 370 ನೆಕ್ಸಾ ಶೋರೂಂಗಳನ್ನು ಹೊಂದಿದೆ.

Most Read Articles

Kannada
English summary
Competition commission of india imposes rs 200 crore penalty on maruti suzuki details
Story first published: Tuesday, August 24, 2021, 0:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X