ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಇವಿ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ರೆಸಿಡೆನ್ಶಿಯಲ್ ಸೊಸೈಟಿ, ಅಪಾರ್ಟ್‌ಮೆಂಟ್‌, ಉದ್ಯಾನವನ ಹಾಗೂ ಶಾಪಿಂಗ್ ಮಾಲ್‌ಗಳಂತಹ ಸ್ಥಳಗಳಲ್ಲಿಯೂ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ಇದರಿಂದ ಎಲೆಕ್ಟ್ರಿಕ್ ವಾಹನ ಸವಾರರು ಸುಲಭವಾಗಿ ತಮ್ಮ ವಾಹನಗಳನ್ನು ಚಾರ್ಜ್ ಮಾಡಲು ಸಾಧ್ಯವಾಗಲಿದೆ. ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆಯ ವೆಚ್ಚವನ್ನು ಕಡಿಮೆ ಮಾಡಲು ದೆಹಲಿ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರದ ಅನ್ವಯ ದೆಹಲಿ ಸರ್ಕಾರವು ಯಾವುದೇ ಖಾಸಗಿ ಆಸ್ತಿ, ಮಾಲ್, ಆಸ್ಪತ್ರೆ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವವರಿಗೆ ಸಬ್ಸಿಡಿ ನೀಡಲಿದೆ.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನ ಗ್ರಾಹಕರಿಗಾಗಿ ಏಕ ಗವಾಕ್ಷಿ ಆನ್‌ಲೈನ್ ಸೇವೆಯನ್ನು ಆರಂಭಿಸಿದೆ. ಈ ಪೋರ್ಟಲ್‌ನಲ್ಲಿಅರ್ಜಿ ಸಲ್ಲಿಸುವ ಮೂಲಕ ಅಥವಾ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಖಾಸಗಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಬಹುದು. ದೆಹಲಿ ಸರ್ಕಾರವು ಚಾರ್ಜಿಂಗ್ ಸ್ಟೇಷನ್‌ಗಳಿಗಾಗಿ ಮೊದಲ 30,000 ಅರ್ಜಿದಾರರಿಗೆ ರೂ. 6,000 ಸಬ್ಸಿಡಿ ನೀಡಲಿದೆ.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ಇದರಿಂದ ಪ್ರತಿ ಚಾರ್ಜರ್‌ ಸ್ಥಾಪಿಸಲು ಸುಮಾರು ರೂ. 2,500 ವೆಚ್ಚವಾಗಲಿದೆ. ದೆಹಲಿ ಸರ್ಕಾರವು ನೀಡುವ ಸಬ್ಸಿಡಿಯಿಂದಾಗಿ ಚಾರ್ಜರ್‌ಗಳ ನಿರ್ಮಾಣ ವೆಚ್ಚವು 70% ನಷ್ಟು ಕಡಿಮೆಯಾಗುತ್ತದೆ. ನಿಗದಿ ಪಡಿಸಿದ ಸ್ಥಳದಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜರ್‌ನ ಸ್ಥಾಪನೆ ಹಾಗೂ ಕಾರ್ಯಾಚರಣೆಯನ್ನು ಅರ್ಜಿ ಸಲ್ಲಿಸಿದ ಏಳು ಕೆಲಸದ ದಿನಗಳಲ್ಲಿ ಆರಂಭಿಸಬೇಕು.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ಅರ್ಜಿದಾರರು ತಮ್ಮ ಸ್ವಂತ ಸ್ಥಳದಲ್ಲಿ ಎರಡು ರೀತಿಯಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಬಹುದು. ಮೊದಲ ಆಯ್ಕೆಯಲ್ಲಿ, ಅರ್ಜಿದಾರರು ಚಾರ್ಜಿಂಗ್ ಸ್ಟೇಷನ್‌ಗೆ ಹೊಸ ಸಂಪರ್ಕವನ್ನು ತೆಗೆದುಕೊಳ್ಳಲು ಬಯಸಿದರೆ, ನಂತರ ಅವರಿಗೆ ಪ್ರಿಪೇಯ್ಡ್ ಮೀಟರ್‌ನೊಂದಿಗೆ ಹೊಸ ಸಂಪರ್ಕವನ್ನು ನೀಡಲಾಗುತ್ತದೆ. ಅದರ ದರವು ಸ್ವಂತದ ಸಂಪರ್ಕಕ್ಕಿಂತ ಕಡಿಮೆಯಿರುತ್ತದೆ. ಎರಡನೇ ಆಯ್ಕೆಯಲ್ಲಿ, ಅರ್ಜಿದಾರರು ಸ್ವಂತ ಮೀಟರ್ ಸಂಪರ್ಕದಲ್ಲಿ ಚಾರ್ಜಿಂಗ್ ಸ್ಟೇಷನ್‌ಗೆ ಸಂಪರ್ಕವನ್ನು ಪಡೆಯಬಹುದು.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ಚಾರ್ಜಿಂಗ್ ದರ

ಈ ಇವಿ ಚಾರ್ಜಿಂಗ್ ಪಾಯಿಂಟ್‌ಗಳ ಮೂಲಕ ವಾಹನಗಳನ್ನು ಚಾರ್ಜ್ ಮಾಡಲು ಸರ್ಕಾರವು ಪ್ರತಿ ಯೂನಿಟ್‌ಗೆ ರೂ. 4.5 ನಿಗದಿ ಪಡಿಸಿದೆ. ಸಿಂಗಲ್ ವಿಂಡೋ ಪೋರ್ಟಲ್ ಅರ್ಜಿದಾರರಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸ್ಥಾಪನೆ ಮಾಡಲು ಅನುಮತಿ ನೀಡಲಾಗುತ್ತದೆ. ಗ್ರಾಹಕರು ಹಗುರವಾದ ಇವಿ ಚಾರ್ಜರ್‌ಗೆ ರೂ. 6,000 ಗಳವರೆಗೆ ಸಬ್ಸಿಡಿ ಪಡೆದು, ಇನ್ನುಳಿದ ರೂ. 2,500 ಪಾವತಿಸಬೇಕು.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ಇವಿ ಚಾರ್ಜರ್ ಗಳನ್ನು ಅಳವಡಿಸಲು ಕಡಿಮೆ ಸ್ಥಳಾವಕಾಶ ಬೇಕಾಗುತ್ತದೆ. ಎಲ್‌ಇವಿ ಎಸಿ ಚಾರ್ಜರ್‌ಗೆ ಕೇವಲ ಒಂದು ಚದರ ಅಡಿ ಹಾಗೂ ಎಸಿ 001 ಚಾರ್ಜರ್‌ಗೆ ಎರಡು ಚದರ ಅಡಿ ಜಾಗದ ಅಗತ್ಯವಿದ್ದರೆ, ಡಿಸಿ 001 ಚಾರ್ಜರ್‌ಗೆ ಎರಡು ಚದರ ಮೀಟರ್ ಜಾಗದ ಅಗತ್ಯವಿದೆ.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ಎಲ್‌ಇವಿ ಎಸಿ ಚಾರ್ಜರ್ ಹಾಗೂ ಎಸಿ 001 ಚಾರ್ಜರ್ ಎರಡೂ ವಾಲ್ ಮೌಂಟೆಡ್ ಆಗಿವೆ. ದೆಹಲಿ, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಧಿಕೃತ ಅಧಿಸೂಚನೆ ಹೊರಡಿಸಿದ ಎರಡು ತಿಂಗಳೊಳಗೆ 2021ರ ಚಾರ್ಜಿಂಗ್ ಮಾನದಂಡಗಳಿಗೆ ಅನುಗುಣವಾಗಿ ಎಲ್‌ಇವಿ ಎಸಿ ಚಾರ್ಜರ್‌ಗಳನ್ನು ಪರಿಚಯಿಸುವ ದೇಶದ ಮೊದಲ ಸರ್ಕಾರವಾಗಿದೆ ಎಂದು ದೆಹಲಿ ಸಾರಿಗೆ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ಈ ಎರಡೂ ಚಾರ್ಜರ್‌ಗಳನ್ನು ಮುಖ್ಯವಾಗಿ ದ್ವಿ ಚಕ್ರ ವಾಹನ ಹಾಗೂ ತ್ರಿ ಚಕ್ರ ವಾಹನಗಳನ್ನು ಚಾರ್ಜ್ ಮಾಡಲು ಬಳಸಲಾಗುತ್ತದೆ. ಡಿಸಿ 001 ಚಾರ್ಜಿಂಗ್ ಮಾನದಂಡವನ್ನು ಪ್ರಾಥಮಿಕವಾಗಿ ಫ್ಲೀಟ್ ಆಪರೇಟರ್‌ಗಳು ಬಳಸುವ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಸಲಾಗುತ್ತದೆ.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ಇನ್ನು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ಮುಂದಿನ ಆರು ತಿಂಗಳಲ್ಲಿ ನಗರದಲ್ಲಿ 50 ಹೊಸ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಿದೆ. ಇದಕ್ಕಾಗಿ ಈಗಾಗಲೇ ಮೂರು ಕಂಪನಿಗಳಿಗೆ ಆರು ನಿವೇಶನಗಳನ್ನು ಎನ್‌ಡಿಎಂಸಿ ಪ್ರಾಥಮಿಕವಾಗಿ ಅನುಮೋದನೆ ನೀಡಿದೆ. ಕಳೆದ ವರ್ಷ, ದೆಹಲಿ ಸರ್ಕಾರವು ದೆಹಲಿ ಇವಿ ಫೋರಂ ಅನ್ನು ಆರಂಭಿಸಿತ್ತು.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ಈ ಫೋರಂ ದೆಹಲಿ ಇವಿ ನೀತಿಯ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲಾ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ವಾಹನ ತಯಾರಕ ಕಂಪನಿಗಳು, ಫ್ಲೀಟ್ ಆಪರೇಟರ್‌ಗಳು, ಚಾರ್ಜಿಂಗ್ ಸ್ಟೇಷನ್ ಆಪರೇಟರ್‌ಗಳು, ತಜ್ಞರು ಹಾಗೂ ವಿವಿಧ ಸರ್ಕಾರಿ ಏಜೆನ್ಸಿಗಳು ದೆಹಲಿ ಇವಿ ಫೋರಂನ ಸದಸ್ಯರಾಗಿದ್ದಾರೆ. ಈ ವೇದಿಕೆಯು ಎಲ್ಲಾ ಮಧ್ಯಸ್ಥಗಾರರ ನಡುವಿನ ಸಂವಹನಕ್ಕಾಗಿ ವೇದಿಕೆಯನ್ನು ಒದಗಿಸುತ್ತದೆ.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ದೆಹಲಿ ಸರ್ಕಾರವು 2024 ರ ವೇಳೆಗೆ ರಾಜ್ಯದಲ್ಲಿ ಎಲ್ಲಾ ಹೊಸ ವಾಹನಗಳ ಮಾರಾಟದಲ್ಲಿ 24% ನಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಬೇಕೆಂದು ಬಯಸುತ್ತದೆ. ಇದರಿಂದ ರಾಜ್ಯದಲ್ಲಿ ವಾಹನ ಮಾಲಿನ್ಯವನ್ನು ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ದೆಹಲಿ ಸರ್ಕಾರ ಹೇಳಿದೆ. ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸಮಗ್ರ ಯೋಜನೆಯನ್ನು ರೂಪಿಸಲಾಗಿದೆ.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ಇದಕ್ಕಾಗಿ, ದೆಹಲಿ ಸರ್ಕಾರವು ನೀತಿಯನ್ನು ಸಿದ್ಧಪಡಿಸಿದ್ದು, ಅದರ ಅಡಿಯಲ್ಲಿ ಆರ್ಥಿಕ ಪ್ರೋತ್ಸಾಹ, ಆರ್ಥಿಕೇತರ ಪ್ರೋತ್ಸಾಹ, ಚಾರ್ಜಿಂಗ್ ಮೂಲಸೌಕರ್ಯಗಳ ಸೃಷ್ಟಿ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜಾಗೃತಿ ಹೆಚ್ಚಿಸುವ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಕೆಲವು ದಿನಗಳ ಹಿಂದೆ ದೆಹಲಿಯ ಸಾರಿಕಾಲೆ ಖಾನ್ ಹಾಗೂ ಲೋನಿಯಲ್ಲಿ ಎಲೆಕ್ಟ್ರಿಕ್ ಆಟೋ ಮೇಳವನ್ನು ಆಯೋಜಿಸಲಾಗಿತ್ತು.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ಈ ಏಳು ದಿನಗಳ ಮೇಳದಲ್ಲಿ, ಆಟೋ ಚಾಲಕರು ಎಲೆಕ್ಟ್ರಿಕ್ ರಿಕ್ಷಾ ಎಂದರೇನು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿತ್ತು. ಜೊತೆಗೆ ಎಲೆಕ್ಟ್ರಿಕ್ ರಿಕ್ಷಾವನ್ನು ಖರೀದಿಸಲು ಸುಲಭ ಹಣಕಾಸು ಆಯ್ಕೆಗಳನ್ನು ಸಹ ನೀಡಲಾಗಿತ್ತು. ಅಕ್ಟೋಬರ್ 25 ರಂದು ಆರಂಭವಾದ ಈ ಎಲೆಕ್ಟ್ರಿಕ್ ಆಟೋ ಮೇಳವು ಅಕ್ಟೋಬರ್ 31 ರಂದು ಮುಕ್ತಾಯವಾಯಿತು.

ಖಾಸಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವವರಿಗೆ ಸಿಗಲಿದೆ ಸಬ್ಸಿಡಿ

ದೆಹಲಿ ಸರ್ಕಾರವು ತನ್ನ ಗ್ರೀನ್ ದೆಹಲಿ ಅಭಿಯಾನದ ಅಡಿಯಲ್ಲಿ 4,261 ಇ-ಆಟೋಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದರಲ್ಲಿ 33% ನಷ್ಟು ಇ-ಆಟೋ ಪರ್ಮಿಟ್‌ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ದೆಹಲಿ ಸರ್ಕಾರವು ಮಹಿಳೆಯರಿಗೆ 1,406 ಪರವಾನಗಿಗಳನ್ನು ನೀಡಲಿದೆ. ಎಲೆಕ್ಟ್ರಿಕ್ ಆಟೋಗಳು ಎಲೆಕ್ಟ್ರಿಕ್ ಬಸ್‌ಗಳಂತೆ ನೀಲಿ ಬಣ್ಣವನ್ನು ಹೊಂದಿರಲಿವೆ.

ಇವುಗಳನ್ನು ಶೀಘ್ರದಲ್ಲೇ ದೆಹಲಿ ಸಾರಿಗೆಗೆ ಸೇರಿಸಲಾಗುತ್ತದೆ. ಮಹಿಳಾ ಆಟೋ ಚಾಲಕರು ನೋಂದಾಯಿಸಿರುವ ಇ-ಆಟೋ ಗುಲಾಬಿ ಬಣ್ಣವನ್ನು ಹೊಂದಿರಲಿದೆ. ದೆಹಲಿ ಸರ್ಕಾರವು ತನ್ನ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿಯ ಅಡಿಯಲ್ಲಿ ಇ-ಆಟೋಗಳ ಖರೀದಿಗೆ ರೂ. 30,000 ಗಳವರೆಗೆ ಆರ್ಥಿಕ ಸಹಾಯವನ್ನು ನೀಡಲಿದೆ. ದೆಹಲಿ ವಿಳಾಸ, ಲಘು ಮೋಟಾರು ವಾಹನದ ಮಾನ್ಯ ಚಾಲನಾ ಪರವಾನಗಿ ಹೊಂದಿರುವ ಯಾವುದೇ ವ್ಯಕ್ತಿ ಆಧಾರ್ ಸಂಖ್ಯೆಯೊಂದಿಗೆ ಇ-ಆಟೋ ಪರ್ಮಿಟ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

Most Read Articles

Kannada
English summary
Delhi government offers subsidy to open private ev charging points details
Story first published: Tuesday, November 9, 2021, 19:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X