ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಸಾವಿರ ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ದೇಶಾದ್ಯಂತ ತೈಲ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ತೈಲ ಬೆಲೆಗಳ ಏರಿಕೆಯಿಂದ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲೂ ಇದೀಗ ಉತ್ತಮ ಬೆಳವಣಿಗೆ ಕಂಡುಬರುತ್ತಿದೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಇವಿ ವಾಹನಗಳ ಬ್ಯಾಟರಿ ರೇಂಜ್ ಸಾಮಾರ್ಥ್ಯವು ಹೊಸ ಇವಿ ವಾಹನಗಳ ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದ್ದು, ಬ್ಯಾಟರಿ ರೇಂಜ್ ಸಮಸ್ಯೆ ಬಗೆಹರಿಸಲು ತ್ವರಿತಗತಿಯ ಪಬ್ಲಿಕ್ ಚಾರ್ಜಿಂಗ್ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣವು ಕಾರ್ಯವು ಅತಿಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಹೊಸ ಯೋಜನೆಗೆ ಚಾಲನೆ ನೀಡಿರುವ ಬ್ಲ್ಯೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸುವುದರ ಜೊತೆಗೆ ತನ್ನ ಫ್ಲಿಟ್‌ನಲ್ಲ ಭಾರೀ ಪ್ರಮಾಣಣದ ಇವಿ ಕಾರುಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ದೆಹಲಿ ಮೂಲದ ಬ್ಲ್ಯೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಈಗಾಗಲೇ ಸಂಪೂರ್ಣವಾಗಿ ಇವಿ ವಾಹನಗಳೊಂದಿಗೆ ತನ್ನ ಫ್ಲಿಟ್ ಸೇವೆಗಳನ್ನು ಮುನ್ನಡೆಸುತ್ತಿದ್ದು, ಉದ್ಯಮ ಕಾರ್ಯಾಚರಣೆ ವಿಸ್ತರಿಸುವ ಯೋಜನೆಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ಬ್ಲ್ಯೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ದೆಹಲಿ ಮತ್ತು ಗುರ್‌ಗ್ರಾಮ್‌ಗಳಲ್ಲಿ ಇವಿ ಫ್ಲೀಟ್ ಸೇವೆಗಳನ್ನು ಒದಗಿಸುವುದರ ಜೊತೆಗೆ ಇವಿ ಕಾರುಗಳಿಗಾಗಿ ಡಿಸಿ ಮತ್ತು ಎಸಿ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯುವ ಮೂಲಕ ಹೊಸ ಬದಲಾವಣೆಗೆ ಕಾರಣವಾಗಿದ್ದು, ಇದೀಗ ಇವಿ ಫ್ಲೀಟ್ ವಿಸ್ತರಿಸಲು ಭಾರೀ ಪ್ರಮಾಣದಲ್ಲಿ ಇವಿ ವಾಹನ ಖರೀದಿಸಲು ಸಿದ್ದತೆ ನಡೆಸಿದೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

2025 ರ ಹೊತ್ತಿಗೆ ಕಂಪನಿಯು ತನ್ನ ಫ್ಲೀಟ್ ಮತ್ತು ಕಾರ್ಯಾಚರಣೆಗಳನ್ನು ವಿಸ್ತರಿಸಲು ಸುಮಾರು 1 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದ್ದು, ಹೊಸ ಯೋಜನೆ ಅಡಿಯಲ್ಲಿ ಕಂಪನಿಯು ತನ್ನ ಫ್ಲೀಟ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳನ್ನು ಸೇರ್ಪಡೆಗೊಳಿಸಿಲಿದೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ಪ್ರಸ್ತುತ ಬ್ಲ್ಯೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಕೇವಲ 685 ಯುನಿಟ್ ಇವಿ ಕಾರುಗಳೊಂದಿಗೆ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದ್ದು, ಹೊಸ ಯೋಜನೆಗಾಗಿ ಬಜೆಟ್ ಬೆಲೆಯ ಮಾರುತಿ ಸುಜುಕಿ ನಿರ್ಮಾಣದ ಎಲೆಕ್ಟ್ರಿಕ್ ಕಾರುಗಳಿಗೆ ಎದುರುನೋಡುತ್ತಿದೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ಫ್ಲೀಟ್ ಕಾರ್ಯಚರಣೆಗಾಗಿ ದುಬಾರಿ ಇವಿ ಕಾರು ಮಾದರಿಗಳಿಂತ ಬಜೆಟ್ ಇವಿ ಕಾರುಗಳ ಅಳವಡಿಕೆಯಿಂದ ಮಾತ್ರವೇ ಹೆಚ್ಚಿನ ಲಾಭ ನೀರಿಕ್ಷಿಸಬಹುದೆಂಬ ಲೆಕ್ಕಾಚಾರ ಹಂಚಿಕೊಂಡಿರುವ ಬ್ಲ್ಯೂಸ್ಮಾರ್ಟ್ ಕಂಪನಿಯು ತನ್ನ ನೀರಿಕ್ಷೆಯಂತೆ ಎಲೆಕ್ಟ್ರಿಕ್ ವ್ಯಾಗನ್‌ಆರ್ ಬಿಡುಗಡೆಗೊಂಡಲ್ಲಿ ಮೊದಲ ಹಂತದಲ್ಲೇ ಹತ್ತು ಸಾವಿರ ಯುನಿಟ್ ಖರೀದಿ ಮಾಡುವುದಾಗಿ ಮಾಹಿತಿ ಹಂಚಿಕೊಂಡಿದೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ಸದ್ಯ ಮಾರುತಿ ಸುಜುಕಿಯು ತನ್ನ ಇವಿ ಕಾರು ಮಾದರಿಯಾದ ವ್ಯಾಗನ್ಆರ್ ಇವಿ ಆವೃತ್ತಿಯನ್ನು ಬಿಡುಗಡೆ ಮಾಡಲು ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಹೊಸ ಇವಿ ಮಾದರಿಯನ್ನು ಪೆಟ್ರೋಲ್ ಕಾರುಗಳ ಬೆಲೆಯಲ್ಲಿ ಬಿಡುಗಡೆಗಾಗಿ ಸಿದ್ದತೆ ನಡೆಸುತ್ತಿದೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ಸದ್ಯ ಮಾರುಕಟ್ಟೆಯಲ್ಲಿ ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುತ್ತಿರುವ ಬ್ಯಾಟರಿ ಸಂಪನ್ಮೂಲ ಪರಿಣಾಮ ಇವಿ ಕಾರುಗಳ ಬೆಲೆಯು ಸಾಮಾನ್ಯ ಕಾರುಗಳಿಂತಲೂ ದುಪ್ಟಟ್ಟು ಬೆಲೆ ಹೊಂದಿದ್ದು, ಮಾರುತಿ ಸುಜುಕಿಯು ಇದೇ ಕಾರಣಕ್ಕೆ ಸ್ಥಳೀಯವಾಗಿ ಉತ್ಪಾದನೆಗೊಳ್ಳುವ ಬ್ಯಾಟರಿ ಸಂಪನ್ಮೂಲಕ್ಕಾಗಿ ಎದುರುನೋಡುತ್ತಿದೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ಸ್ಥಳೀಯವಾಗಿ ಉತ್ಪಾದನೆಗೊಳ್ಳುವ ಬ್ಯಾಟರಿ ಸಂಪನ್ಮೂಲವು ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲೇ ಲಭ್ಯವಾಗಲಿದ್ದು, ಇದೇ ಕಾರಣಕ್ಕೆ ಮಾರುತಿ ಸುಜುಕಿಯು ಸದ್ಯ ಇವಿ ಕಾರುಗಳು ದುಬಾರಿಯಾಗುವ ಕಾರಣ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ಬ್ಲ್ಯೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಕೂಡಾ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಮಾದರಿಯು ರೂ. 6 ಲಕ್ಷದಿಂದ ರೂ.7 ಲಕ್ಷ ಬೆಲೆ ಅಂತರದಲ್ಲಿ ಇದ್ದರೆ ಮಾತ್ರವೇ ಖರೀದಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ಫ್ಲೀಟ್ ಕಾರ್ಯಾಚರಣೆಗೆ ಬಜೆಟ್ ಬೆಲೆಯಲ್ಲಿ ಸುಮಾರು 10 ಸಾವಿರ ಕಾರುಗಳನ್ನು ಖರೀದಿ ಮಾಡುವ ಭರವಸೆ ನೀಡಿರುವ ಬ್ಲ್ಯೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಮಾರುತಿ ಸುಜುಕಿ ನಿರ್ಮಾಣದ ಹೊಸ ಇವಿ ಕಾರುಗಳಿಗೆ ಎದುರು ನೋಡುತ್ತಿದ್ದು, ಸದ್ಯಕ್ಕೆ ಟಾಟಾ ನಿರ್ಮಾಣದ ನೆಕ್ಸಾನ್ ಇವಿ ಖರೀದಿಗೆ ಸಿದ್ದವಾಗಿದೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ಬ್ಲ್ಯೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಫ್ಲೀಟ್ ಕಾರ್ಯಾಚರಣೆಗಾಗಿ ರೂ. 13 ಲಕ್ಷ ಬೆಲೆ ಅಂತರದಲ್ಲಿ ನೆಕ್ಸಾನ್ ಇವಿ ಎಂಟ್ರಿ ಲೆವಲ್ ಮಾದರಿಗಳನ್ನು ಖರೀದಿ ಮಾಡಲು ಮುಂದಾಗಿದ್ದು, ಸುಮಾರು 3,500 ಯನಿಟ್ ಖರೀದಿಸುವ ಸಿದ್ದತೆಯಲ್ಲಿದೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ಸದ್ಯ ದುಬಾರಿ ಇವಿ ಕಾರುಗಳನ್ನು ಅಳವಡಿಸಿಕೊಳ್ಳುತ್ತಿರುವ ಬ್ಲ್ಯೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಭವಿಷ್ಯದಲ್ಲಿ ಮಾರುತಿ ಸುಜುಕಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ಸಲ್ಲಿಸುವ ಯೋಜನೆಯಲ್ಲಿದ್ದು, ಇವಿ ಕಾರುಗಳಿಗೆ ಬ್ಲ್ಯೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿಯು ಭಾರೀ ಪ್ರಮಾಣದ ಫಾಸ್ಟ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣ ಮಾಡುತ್ತಿದೆ.

ಮಾರುತಿ ಸುಜುಕಿ ನಿರ್ಮಾಣದ ಸುಮಾರು 10 ಇವಿ ಕಾರು ಖರೀದಿಗೆ ಸಿದ್ದವಾದ ಬ್ಲ್ಯೂಸ್ಮಾರ್ಟ್

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಪೂರಕವಾದ ವಾತಾವರಣವಿದ್ದರೂ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಇವಿ ವಾಹನಗಳ ಖರೀದಿಗೆ ಹಿನ್ನಡೆಯುಂಟು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಕಂಪನಿಗಳು ಈ ನಿಟ್ಟಿನಲ್ಲಿ ಹೊಸ ಯೋಜನೆಯೊಂದಿಗೆ ಚಾರ್ಜಿಂಗ್ ಸ್ಟೆಷನ್‌ಗಳತ್ತ ಹೆಚ್ಚು ಗಮನಹರಿಸುತ್ತಿವೆ.

Most Read Articles

Kannada
English summary
Electric mobility company blusmart is ready to buy 10 000 maruti suzuki wagonr evs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X