ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟ ಜೋರಾಗಿದೆ. ಭಾರತ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿರುವುದರ ಜೊತೆಗೆ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ತಪ್ಪಿಸುತ್ತವೆ.

ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ಎಲೆಕ್ಟ್ರಿಕ್ ವಾಹನಗಳು ಪೂರ್ತಿಯಾಗಿ ಚಾರ್ಜ್ ಆದ ನಂತರ ಹೆಚ್ಚು ದೂರ ಚಲಿಸುವುದಿಲ್ಲವೆಂಬ ಕಾರಣಕ್ಕೆ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ವರ್ಷ ಸೆಪ್ಟೆಂಬರ್ 9 ರಂದು ವಿಶ್ವ ಎಲೆಕ್ಟ್ರಿಕ್ ವಾಹನ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಅಂಗವಾಗಿ ಚೆನ್ನೈ ಮೂಲದ ಗೋಫ್ಯೂಯಲ್ ಪೈವೇಟ್ ಲಿಮಿಟೆಡ್ ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ನಿವಾರಿಸಲು ಚಾರ್ಜ್ ಆನ್ ದಿ ಗೋ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ.

ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ಗೋಫ್ಯೂಯಲ್ ಕಂಪನಿಯ ಅಂಗ ಸಂಸ್ಥೆಯಾದ ಗೋಎಲೆಕ್ಟ್ರಿಕ್, ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ ಹಾಗೂ ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನಗಳಿಗೆ ಲಾಸ್ಟ್ ಮೈಲಿ ಕನೆಕ್ಟಿವಿಟಿ ನೀಡಲು ಸ್ವಿಗ್ಗಿ ಹಾಗೂ ಜೊಮಾಟೊ ಕಂಪನಿಗಳ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಮುಂದಾಗಿದೆ.

ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ಡೀಸೆಲ್ ಅನ್ನು ಡೋರ್ ಡೆಲಿವರಿ ಮಾಡುವ ಮೂಲಕ ಯಶಸ್ಸು ಸಾಧಿಸಿರುವ ಕಂಪನಿಯು ಈಗ ತನ್ನ ಸೇವೆಯನ್ನು ಇನ್ನೂ 3 ರಾಜ್ಯಗಳಿಗೆ ವಿಸ್ತರಿಸುತ್ತಿದೆ. ಕಂಪನಿಯು 2022ರ ಒಳಗೆ ಸೌರ ಶಕ್ತಿಯನ್ನು ಬಳಸಿಕೊಂಡು 100 ಮೊಬೈಲ್ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಹಾಗೂ ವಿನಿಮಯ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಿದೆ.

ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ಪ್ರಾಯೋಗಿಕವಾಗಿ ಚೆನ್ನೈ ನಗರದಲ್ಲಿ 5 ತಿಂಗಳಲ್ಲಿ 5 ಲಕ್ಷ ಲೀಟರಿಗೂ ಹೆಚ್ಚು ಡೀಸೆಲ್ ವಿತರಿಸಿ ರೂ. 5 ಕೋಟಿ ಆದಾಯ ಗಳಿಸಿರುವ ಕಂಪನಿಯು ಇನ್ನೂ ಎರಡು ಸ್ಮಾರ್ಟ್‌ ಯೋಜನೆಗಳನ್ನು ಆರಂಭಿಸುತ್ತಿದೆ. ಕಂಪನಿಯು 2022ರ ಒಳಗೆ 100 ಡೀಸೆಲ್ ಡೆಲಿವರಿ ಸ್ಮಾರ್ಟ್ ಟ್ರಕ್‌ಗಳನ್ನು ನಿಯೋಜಿಸುವ ಗುರಿಯನ್ನು ಹೊಂದಿದ್ದು, ತನ್ನ ಡೀಸೆಲ್ ವಿತರಣಾ ಕಾರ್ಯಾಚರಣೆಯನ್ನು ಪಂಜಾಬ್, ಅಸ್ಸಾಂ ಹಾಗೂ ಆಂಧ್ರಪ್ರದೇಶಗಳಿಗೆ ವಿಸ್ತರಿಸಿದೆ.

ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ಗೋಫ್ಯೂಯಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಈಗ ಇನ್ನೂ ಎರಡು ಸ್ಮಾರ್ಟ್ ಕಾರ್ಯಗಳನ್ನು ಆರಂಭಿಸುತ್ತಿದೆ. ಪ್ರತಿ ದಿನ 12,000 ಲೀಟರ್‌ಗಳಷ್ಟು ಹೈ-ಸ್ಪೀಡ್ ಡೀಸೆಲ್ (ಹೆಚ್‌ಎಸ್‌ಡಿ) ಅನ್ನು ಡೋರ್ ಡೆಲಿವರಿ ಮಾಡುವ ಕಾರ್ಯಾಚರಣೆಯನ್ನು ಆರಂಭಿಸುತ್ತಿದೆ. ಗೋಫ್ಯೂಯಲ್ ಕಂಪನಿಯ ಯೋಜನೆಯು ದೇಶಾದ್ಯಂತವಿರುವ ಸಂಭಾವ್ಯ ಫ್ರಾಂಚೈಸಿಗಳನ್ನು ಆಕರ್ಷಿಸುತ್ತಿದೆ.

ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ಗೋಫ್ಯೂಯಲರ್ ಹೆಸರಿನ ಈ ಫ್ರಾಂಚೈಸಿ ಮಾದರಿ ಯೋಜನೆಯು ಹೊಸ ಉದ್ಯಮಿಗಳನ್ನು ಪೋಷಿಸಲಿದೆ. ಅಸ್ಸಾಂ, ಆಂಧ್ರಪ್ರದೇಶ ಹಾಗೂ ಪಂಜಾಬ್‌ ರಾಜ್ಯಗಳಲ್ಲಿ ದಿ ಲಾಸ್ಟ್ ಮೈಲ್ ಡೀಸೆಲ್ ವಿತರಣೆ ವ್ಯವಹಾರವು ಹೆಚ್ಚು ವೇಗದಲ್ಲಿ ಬೆಳೆಯುವ ನಿರೀಕ್ಷೆಗಳಿವೆ. ಗೋಫ್ಯೂಯಲ್ ಕಂಪನಿಯು ಈಗ ತನ್ನ ಚಿತ್ತವನ್ನು ಬೆಳವಣಿಗೆ ಕಾಣುತ್ತಿರುವ ಎಲೆಕ್ಟ್ರಿಕ್ ವಾಹನಗಳತ್ತ ನೆಟ್ಟಿದೆ.

ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ಈ ಹಿನ್ನೆಲೆಯಲ್ಲಿ ಕಂಪನಿಯು ಇತ್ತೀಚೆಗೆ ದೇಶೀಯ ಸೋಲಾರ್ ಇಪಿಸಿ ಪೂರೈಕೆದಾರರು, ಚಾರ್ಜಿಂಗ್ ಸ್ವಾಪಿಂಗ್ ಸಲಕರಣೆ ತಯಾರಕರೊಂದಿಗೆ ಒಪ್ಪಂದ ಮಾಡಿ ಕೊಳ್ಳುವ ಮೂಲಕ ಚಾರ್ಜ್ ಪಾಯಿಂಟ್ ಕಾರ್ಯಾಚರಣೆಗಳಿಗಾಗಿ ಪ್ರಬಲ ನೆಟ್ ವರ್ಕ್ ಜಾಲವನ್ನು ಹೊಂದಲು ಮುಂದಾಗಿದೆ. ಇದರ ಜೊತೆಗೆ ಕಂಪನಿಯು ಚಾರ್ಜರ್ ಉಪಕರಣಗಳನ್ನು ಒದಗಿಸುವ ಜನಪ್ರಿಯ ಯುರೋಪ್ ಕಂಪನಿಯೊಂದಿಗೂ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.

ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ಈ ಒಪ್ಪಂದ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ. ಈ ಒಪ್ಪಂದವು ಕಾರ್ಯ ರೂಪಕ್ಕೆ ಬಂದರೆ ಭಾರತದಲ್ಲಿ ಮೊದಲ ಬಾರಿಗೆ 100% ನಷ್ಟು ಸೌರ ಶಕ್ತಿಯನ್ನು ಬಳಸಿ ಇವಿ ಮೊಬೈಲ್ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಈ ಅಂತರ ರಾಷ್ಟ್ರೀಯ ಪಾಲುದಾರ ಕಂಪನಿಯು ಈಗಾಗಲೇ ಯುರೋಪಿನಾದ್ಯಂತ ಸುಮಾರು 15,000 ಚಾರ್ಜಿಂಗ್ ಕೇಂದ್ರಗಳನ್ನು ತೆರೆದಿದೆ.

ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ಈ ಮೂಲಕ ಗೋಫ್ಯೂಯಲ್ ಕಂಪನಿಯು ಎಲೆಕ್ಟ್ರಿಕ್ ವಾಹನ ಬಳಕೆದಾರರ ಆತಂಕವನ್ನು ದೂರ ಮಾಡಲು ಮುಂದಾಗಿದೆ. ಇದರಿಂದ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬಹುದು. ಎಲೆಕ್ಟ್ರಿಕ್ ವಾಹನ ಸವಾರರು ಈ ಸೌಲಭ್ಯವನ್ನು ಗೋಫ್ಯೂಯಲ್ ಅಪ್ಲಿಕೇಶನ್ ನಲ್ಲಿರುವ ಬಟನ್ ಗಳನ್ನು ಒತ್ತುವ ಮೂಲಕ ಪಡೆಯಬಹುದು.

ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ಗೋಫ್ಯೂಯಲ್'ನ ಗೋ ಎಲೆಕ್ಟ್ರಿಕ್ ಅಭಿಯಾನವು ಚಾರ್ಜ್ ಆನ್ ದಿ ಗೋ ಮೊಬೈಲ್ ಚಾರ್ಜಿಂಗ್ ಸ್ಟೇಷನ್ ಆಗಿದೆ. ಇದನ್ನು ಇವಿ ಚಾರ್ಜಿಂಗ್ ಆನ್ ಡಿಮ್ಯಾಂಡ್' ವಿಧಾನ ಹಾಗೂ ಇಂಟರ್ ನೆಟ್ ಆಫ್ ಥಿಂಗ್ಸ್ (ಐಒಟಿ) ಮೂಲಕ ನಿರ್ವಹಿಸಲಾಗುತ್ತದೆ. ಈ ಚಾರ್ಜಿಂಗ್ ವಿಧಾನವನ್ನು 240 ವಿಎಸಿ ಯಿಂದ 480 ವಿಎಸಿ ವರೆಗಿನ ಇನ್ ಪುಟ್ ಬಳಸಿ 200 ಕಿ.ವ್ಯಾವರೆಗಿನ ಚಾರ್ಜಿಂಗ್ ಸ್ಪೀಡ್ ನೀಡಲಾಗುತ್ತದೆ.

ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ಪ್ಲಗ್ ಅಂಡ್ ಚಾರ್ಜ್ ವ್ಯವಸ್ಥೆಯು, ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನಗಳು ಹಾಗೂ ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನಗಳ ಚಾರ್ಜ್ ಆನ್ ಡಿಮಾಂಡ್ ಅಗತ್ಯಗಳನ್ನು ಸುಲಭವಾಗಿ ಪರಿಹರಿಸುತ್ತದೆ. ಜೊತೆಗೆ ತುರ್ತು ಚಾರ್ಜಿಂಗ್ ಅವಶ್ಯಕತೆ ಇರುವವರಿಗೆ ನೆರವಾಗುತ್ತದೆ. ಎಲೆಕ್ಟ್ರಿಕ್ ವಾಹನಗಳು ಚಾರ್ಜ್ ಇಲ್ಲದೆ ರಸ್ತೆಯಲ್ಲಿ ಸಿಲುಕಿಕೊಂಡಿರುವ ಸಂದರ್ಭಗಳಲ್ಲಿ ಗೋಫ್ಯೂಯಲ್'ನ ಚಾರ್ಜ್ ಆನ್ ದಿ ಗೋ ನೆರವಿಗೆ ಬರುತ್ತದೆ.

ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ಗೋಫ್ಯೂಯಲ್ ಕಂಪನಿಯ ಸಂಸ್ಥಾಪಕರು ಹಾಗೂ ಸಿಇಒ ಆದ ವಿನೋದ್ ರಾಜ್ ರವರು, ತಮ್ಮ ತಂಡವು ಗ್ರಾಹಕರ ವಿಶ್ವಾಸಗಳಿಸಿ ಯಶಸ್ಸಿಯಾಗಲು ಕಾರಣವಾಗಿದೆ ಎಂದು ತಿಳಿಸಿ, ತಮಗೆ ಬೇಷರತ್ ಬೆಂಬಲ ನೀಡಿದ ಎಲ್ಲಾ ತೈಲ ಕಂಪನಿಗಳಿಗೂ ಧನ್ಯವಾದ ಸಲ್ಲಿಸಿದ್ದಾರೆ.

ಎಲೆಕ್ಟ್ರಿಕ್ ವಾಹನ ಸವಾರರ ಆತಂಕವನ್ನು ದೂರ ಮಾಡಲಿದೆ ಗೋಫ್ಯೂಯಲ್ ಕಂಪನಿಯ ಈ ಯೋಜನೆ

ಗೋಎಲೆಕ್ಟ್ರಿಕ್‌ನ ಕಾರ್ಯತಂತ್ರವು ಎಲ್ಲಾ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ಅವಶ್ಯಕತೆಗಳಿಗೆ ಲಾಸ್ಟ್ ಮೈಲ್ ಕನೆಕ್ಟಿವಿಟಿ ಆಗಲಿದೆ. ಗೋಫ್ಯೂಯಲ್ ಕಂಪನಿಯು ಡೀಸೆಲ್ ವಿತರಣೆ ರೀತಿಯಲ್ಲಿಯೇ ಎಲೆಕ್ಟ್ರಿಕ್ ವಾಹನಗಳ ಚಾರ್ಜ್ ಆನ್ ಡಿಮಾಂಡ್'ನಲ್ಲಿಯೂ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸೋಣ.

ಗಮನಿಸಿ: ಈ ಲೇಖನದಲ್ಲಿ ಮೊದಲ ಮೂರು ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Go fuel company to provide last mile connectivity to electric vehicles details
Story first published: Thursday, September 9, 2021, 20:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X