ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಹೋಂಡಾ ಕಾರ್ಸ್ ಇಂಡಿಯಾ(Honda Cars India) ಕಾರು ಕಂಪನಿಯು ಪ್ರಮುಖ ಕಾರುಗಳ ಖರೀದಿ ಮೇಲೆ ಇಯರ್ ಎಂಡ್ ಆಫರ್ ಘೋಷಣೆ ಮಾಡಿದ್ದು, ಹೋಂಡಾ ಕಾರ್ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.

ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಕೋವಿಡ್ ಪರಿಣಾಮ ಕಳೆದ ವರ್ಷದ ಕನಿಷ್ಠ ಪ್ರಮಾಣದ ಹೊಸ ವಾಹನಗಳನ್ನು ಮಾರಾಟ ಮಾಡಿದ್ದ ವಾಹನ ಕಂಪನಿಗಳಿಗೆ ಈ ವರ್ಷದ ಆರಂಭದಿಂದಲೂ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದವು. ಆದರೆ ಕೋವಿಡ್ 2ನೇ ಅಲೆ ಪರಿಣಾಮದಿಂದ ಮತ್ತೆ ಕುಸಿತ ಕಂಡಿದ್ದ ವಾಹನ ಮಾರಾಟವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ವಾಹನ ಮಾರಾಟವನ್ನು ಸುಧಾರಿಸಲು ವಿವಿಧ ಕಾರು ಕಂಪನಿಗಳು ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಕೊಡುಗೆಗಳನ್ನು ಪ್ರಕಟಿಸುತ್ತಿವೆ.

ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಹೊಸ ವಾಹನ ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಮಧ್ಯಮ ಕ್ರಮಾಂಕದ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರು ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಅಮೇಜ್(Amaze), ಜಾಝ್(Jazz), ಡಬ್ಲ್ಯುಆರ್-ವಿ(WR-V), ಸಿಟಿ(City) ಸೇರಿದಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಎಲ್ಲಾ ಮಾದರಿಗಳ ಮೇಲೂ ಡಿಸೆಂಬರ್ ಅವಧಿಯ ಆಫರ್ ಘೋಷಣೆ ಮಾಡಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಹೋಂಡಾ ಕಂಪನಿಯ ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿದ್ದು, ಅಮೇಜ್ ಕಂಪ್ಯಾಕ್ಟ್ ಸೆಡಾನ್, ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮತ್ತು ಡಬ್ಲ್ಯುಆರ್-ವಿ ಕಾರುಗಳ ಮೇಲೆ ಗರಿಷ್ಠ ರೂ.45 ಸಾವಿರ ತನಕ ಡಿಸ್ಕೌಂಟ್ ನೀಡುತ್ತಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿಯ ಮೇಲೆ ಹೋಂಡಾ ಕಂಪನಿಯು ಎಎಂಟಿ ವರ್ಷನ್ ಸೇರಿದಂತೆ ಎಲ್ಲಾ ಮಾದರಿಗಳ ಮೇಲೂ ರೂ. 15 ಸಾವಿರ ತನಕ ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್‌‌ಬ್ಯಾಕ್, ಎಕ್ಸ್‌ಚೆಂಜ್ ಸೇರಿದಂತೆ ಆಕ್ಸೆಸರಿಸ್ ಪ್ಯಾಕೇಜ್ ಪಡೆದುಕೊಳ್ಳಬಹುದಾಗಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಹೊಸ ಆಫರ್‌ಗಳಲ್ಲಿ ಕ್ರಾಸ್ಒವರ್ ಎಸ್‌ಯುುವಿ ಕಾರು ಮಾದರಿಯಾದ ಡಬ್ಲ್ಯುಆರ್-ವಿ ಮಾದರಿಯ ಎಲ್ಲಾ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳ ಮೇಲೂ ಹೋಂಡಾ ಕಂಪನಿಯು ರೂ. 28 ಸಾವಿರ ತನಕ ಆಫರ್ ನೀಡುತ್ತಿದ್ದು, ಇದರಲ್ಲಿ ಕ್ಯಾಶ್ ಬ್ಯಾಕ್ ಸೇರಿದಂತೆ ಉಚಿತ ಆಕ್ಸೆಸರಿಸ್ ಪ್ಯಾಕೇಜ್ ನೀಡುತ್ತಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಹೋಂಡಾ ಜಾಝ್ ಮಾದರಿಯ ಎಲ್ಲಾ ರೂಪಾಂತರಗಳ ಮೇಲೂ ಗ್ರಾಹಕರಿಗೆ ರೂ. 35 ಸಾವಿರ ತನಕ ಆಫರ್ ಲಭ್ಯವಿದ್ದು, ಇದರಲ್ಲಿ ರೂ. 10 ಸಾವಿರ ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ, ಎಕ್ಸ್‌ಚೆಂಜ್, ಉಚಿತ ಆಕ್ಸೆಸರಿಸ್ ಪ್ಯಾಕೇಜ್ ಸಹ ಲಭ್ಯವಿರಲಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಇನ್ನುಳಿದಂತೆ ಹೋಂಡಾ ಹೊಸ ಆಫರ್‌ ಸಿಟಿ ಸೆಡಾನ್ ಆವೃತ್ತಿಯ ಮೇಲೂ ಹೋಂಡಾ ಕಂಪನಿಯು ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಸಿಟಿ ಕಾರಿನ ಮೇಲೆ ರೂ.45 ಸಾವಿರ ತನಕ ಆಫರ್ ಲಭ್ಯವಿವೆ.

ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಹೋಂಡಾ ಕಂಪನಿಯು ಸದ್ಯ ನ್ಯೂ ಜನರೇಷನ್ ಸಿಟಿ ಮಾರಾಟದ ನಡುವೆಯೂ ನಾಲ್ಕನೇ ತಲೆಮಾರಿನ ಸಿಟಿ ಸೆಡಾನ್ ಕಾರಿನ ಮಾರಾಟವನ್ನು ಸಹ ಮುಂದುವರಿಸಿದ್ದು, ಹೊಸ ಸಿಟಿ ಮಾದರಿಯನ್ನು ಒಳಗೊಂಡು ರೂ.45 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಸದ್ಯ ಖರೀದಿಗೆ ಲಭ್ಯವಿರುವ ಹಳೆಯ ತಲೆಮಾರಿನ ಸಿಟಿ ಸೆಡಾನ್ ಮಾದರಿಯು ಕೆಲವೇ ಕೆಲವು ವೆರಿಯೆಂಟ್‌ಗಳನ್ನು ಮಾತ್ರ ಖರೀದಿಗೆ ಲಭ್ಯವಿದ್ದು, ಹೊಸ ಸಿಟಿ ಕಾರು ಮಾದರಿಯು ಮಾತ್ರ ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಅತ್ಯುತ್ತಮ ಬೇಡಿಕೆ ಹೊಂದಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಇನ್ನು ಕೋವಿಡ್ ಹರಡುವಿಕೆ ತಡೆಯಲು ಹಲವಾರು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಹೋಂಡಾ ಕಾರ್ಸ್ ಕಂಪನಿಯು ಈ ನಿಟ್ಟಿನಲ್ಲಿ ಹೊಸ ಪ್ರಯೋಗದೊಂದಿಗೆ ಯಶಸ್ವಿ ಕ್ರಮವೊಂದನ್ನು ಅಳವಡಿಸಿಕೊಳ್ಳುವ ಮೂಲಕ ಕಾರು ಪ್ರಯಾಣವನ್ನು ಸುರಕ್ಷಿತವಾಗಿಸುವಲ್ಲಿ ಹೊಸ ಪ್ರಯತ್ನ ಮಾಡಿದೆ.

ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಿಡಿಭಾಗಗಳ ಪೂರೈಕೆ ಕಂಪನಿಗಳೊಂದಿಗೆ ಜೊತೆಗೂಡಿ ಹೊಸದಾಗಿ ಆಂಟಿವೈರಸ್ ಕ್ಯಾಬಿನ್ ಏರ್ ಫಿಲ್ಟರ್ ಉತ್ಪನ್ನವನ್ನು ಪರಿಚಯಿಸಿದ್ದು, ಹೊಸ ಏರ್ ಫಿಲ್ಟರ್ ಉತ್ಪನ್ನವು ಕಾರಿನ ಕ್ಯಾಬಿನ್ ವಾತಾವರಣವನ್ನು ಕೆಲವೇ ನಿಮಿಷಗಳಲ್ಲಿ ಶುದ್ದಗೊಳಿಸುವುದಲ್ಲದೆ ಅಪಾಯಕಾರಿ ವೈರಸ್‌ಗಳನ್ನು ಸಹ ಮಟ್ಟಹಾಕಬಲ್ಲದು.

ಹೋಂಡಾ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ

ಹೊಸದಾಗಿ ಬಿಡುಗಡೆ ಮಾಡಲಾಗಿರುವ ಪಿ.ಎಂ 2.5 ಏರ್ ಫಿಲ್ಟರ್ ಸೌಲಭ್ಯವು ಕಾರಿನ ಕ್ಯಾಬಿನ್‌ನಲ್ಲಿರುವ ಹಾನಿಕಾರಕ ಪರಿಸರ ಅನಿಲಗಳನ್ನು ಯಶಸ್ವಿಯಾಗಿ ಫಿಲ್ಟರ್ ಮಾಡಿ ಸೆರೆಹಿಡಿಯುತ್ತವೆ ಹಾಗೂ ಅಜೈವಿಕ ಮತ್ತು ಸಾವಯವ ಕಣಗಳು ಮತ್ತು ಏರೋಸಾಲ್‌ಗಳನ್ನು ಕಡಿಮೆಗೊಳಿಸುತ್ತವೆ.

Most Read Articles

Kannada
Read more on ಹೋಂಡಾ honda
English summary
Honda cars discount december 2021 upto rs 45000 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X