ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ

ಕೋವಿಡ್ ಪರಿಣಾಮ ತಗ್ಗಿರುವ ಹೊಸ ವಾಹನ ಮಾರಾಟವನ್ನು ಸುಧಾರಿಸಲು ಯತ್ನಿಸುತ್ತಿರುವ ಆಟೋ ಉತ್ಪದನಾ ಕಂಪನಿಗಳು ವಾಹನ ಖರೀದಿ ಮೇಲೆ ಆಕರ್ಷಕ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಹೋಂಡಾ ಕಾರ್ಸ್ ಕಂಪನಿಯು ಸಹ ತನ್ನ ಪ್ರಮುಖ ಖರೀದಿ ಮೇಲೆ ಹಲವಾರು ಆಫರ್‌ಗಳನ್ನು ನೀಡುತ್ತಿದೆ.

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ

ಕಳೆದ ವರ್ಷದ ಆರಂಭದಲ್ಲಿ ಕೋವಿಡ್ ಪರಿಣಾಮ ಕನಿಷ್ಠ ಪ್ರಮಾಣದ ಹೊಸ ವಾಹನಗಳನ್ನು ಮಾರಾಟ ಮಾಡಿದ್ದ ವಾಹನ ಕಂಪನಿಗಳಿಗೆ ಈ ವರ್ಷದ ಆರಂಭದಲ್ಲಿ ಭಾರೀ ಪ್ರಮಾಣದ ಬೇಡಿಕೆ ಹರಿದುಬಂದಿತ್ತು. ಆದರೆ ಇದೀಗ ಕೋವಿಡ್ 2ನೇ ಅಲೆ ಪರಿಣಾಮ ಮತ್ತೆ ಸಂಕಷ್ಟ ಎದುರಿಸುವಂತಾಗಿದ್ದು, ಕುಸಿದಿರುವ ಆರ್ಥಿಕ ಪರಿಸ್ಥಿತಿಯಿಂದಾಗಿ ತಗ್ಗಿರುವ ವಾಹನ ಮಾರಾಟವನ್ನು ಸುಧಾರಿಸಲು ಗ್ರಾಹಕರಿಗೆ ಹಲವಾರು ಕೊಡುಗೆಗಳನ್ನು ಪ್ರಕಟಿಸಲಾಗುತ್ತಿದೆ.

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ

ಹೊಸ ವಾಹನ ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ

ಹೋಂಡಾ ಕಂಪನಿಯ ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿದ್ದು, ಅಮೇಜ್ ಕಂಪ್ಯಾಕ್ಟ್ ಸೆಡಾನ್, ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮತ್ತು ಡಬ್ಲ್ಯುಆರ್-ವಿ ಕಾರುಗಳ ಮೇಲೆ ಗರಿಷ್ಠ ರೂ.35 ಸಾವಿರ ತನಕ ಡಿಸ್ಕೌಂಟ್ ನೀಡುತ್ತಿದೆ.

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ

ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿಯ ಮೇಲೆ ಹೋಂಡಾ ಕಂಪನಿಯು ಎಎಂಟಿ ವರ್ಷನ್ ಹೊರತುಪಡಿಸಿ ಇನ್ನುಳಿದ ಮಾದರಿಗಳ ಮೇಲೆ ರೂ. 15 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡಲಾಗುತ್ತಿದೆ. ಹೊಸ ಆಫರ್‌ಗಳಲ್ಲಿ ರೂ. 20 ಸಾವಿರ ಕ್ಯಾಶ್‌ ಬ್ಯಾಕ್ ಇಲ್ಲವೇ ರೂ. 24 ಸಾವಿರ ಮೌಲ್ಯದ ಆಕ್ಸೆಸರಿಸ್ ಪಡೆದುಕೊಳ್ಳಬಹುದಾಗಿದೆ.

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ

ಅಮೇಜ್ ಎಎಂಟಿ ಮಾದರಿಗಳಿಗಾಗಿ ಕಂಪನಿಯು ರೂ. 10 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡಲಾಗುತ್ತಿದ್ದು, ರೂ.5 ಸಾವಿರ ಕ್ಯಾಶ್‌ ಬ್ಯಾಕ್ ಇಲ್ಲವೇ ರೂ.5,900 ಮೌಲ್ಯದ ಆಕ್ಸೆಸರಿಸ್ ಪಡೆದುಕೊಳ್ಳಬಹುದಾಗಿದೆ.

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ

ಕ್ರಾಸ್ಒವರ್ ಎಸ್‌ಯುುವಿ ಕಾರು ಮಾದರಿಯಾದ ಡಬ್ಲ್ಯುಆರ್-ವಿ ಮಾದರಿಯ ಎಲ್ಲಾ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳ ಮೇಲೂ ಹೋಂಡಾ ಕಂಪನಿಯು ರೂ. 21,158 ಆಫರ್ ನೀಡುತ್ತಿದ್ದು, ಇದರಲ್ಲಿ ರೂ.5 ಸಾವಿರ ಕ್ಯಾಶ್ ಬ್ಯಾಕ್ ಸೇರಿದಂತೆ ಉಚಿತ ಆಕ್ಸೆಸರಿಸ್ ಪ್ಯಾಕೇಜ್ ನೀಡುತ್ತಿದೆ.

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ

ಇನ್ನು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಹೋಂಡಾ ಜಾಝ್ ಮಾದರಿಯು ಎಲ್ಲಾ ರೂಪಾಂತರಗಳ ಮೇಲೂ ಗ್ರಾಹಕರಿಗೆ ರೂ. 21 ಸಾವಿರ ತನಕ ಆಫರ್ ಲಭ್ಯವಿದ್ದು, ಇದರಲ್ಲಿ ರೂ. 5 ಸಾವಿರ ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ ಉಚಿತ ಆಕ್ಸೆಸರಿಸ್ ಪ್ಯಾಕೇಜ್ ಸಹ ಲಭ್ಯವಿರಲಿದೆ.

ಹೋಂಡಾ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ

ಅಮೇಜ್ ಕಂಪ್ಯಾಕ್ಟ್ ಸೆಡಾನ್, ಜಾಝ್ ಹ್ಯಾಚ್‌ಬ್ಯಾಕ್, ಡಬ್ಲ್ಯುಆರ್-ವಿ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಕಾರುಗಳ ಮೇಲೆ ಯಾವುದೇ ಆಫರ್ ಲಭ್ಯವಿಲ್ಲವಾದರೂ ಹೋಂಡಾ ಕಂಪನಿಯು ಗ್ರಾಹಕರಿಗೆ ಸರಳ ಸಾಲಸೌಲಭ್ಯಗಳನ್ನು ಖಾತ್ರಿಪಡಿಸುತ್ತಿದೆ.

More from DriveSpark

Article Published On: Wednesday, July 14, 2021, 10:52 [IST]
English summary
Honda Cars India Announced Attractive Discounts And Benefit Offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+