ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ 2021ರ ಸೆಪ್ಟೆಂಬರ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಗಳ ಪ್ರಕಾರ, ಕಳೆದ ತಿಂಗಳ ಹೋಂಡಾ ಕಂಪನಿಯು 6,765 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 10,199 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.33.66 ರಷ್ಟು ಕುಸಿತವನ್ನು ಕಂಡಿದೆ. ಕಂಪನಿಯು ಕಳೆದ ತಿಂಗಳಲ್ಲಿ 2964 ಯುನಿಟ್‌ಗಳನ್ನು ರಫ್ತು ಮಾಡಿದೆ, ಕಳೆದ ವರ್ಷ ಇದೇ ತಿಂಗಳಲ್ಲಿ ರಫ್ತು ಮಾಡಿದ 170 ಯುನಿಟ್‌ಗಳಿಗೆ ಹೋಲಿಸಿದರೆ ಭಾರೀ ಬೆಳವಣಿಗೆಯನ್ನು ಸಾಧಿಸಿದೆ. ಏರಿಕೆಯು ರಫ್ತುಗಳನ್ನು ಪ್ರಾಥಮಿಕವಾಗಿ ಕಳೆದ ವರ್ಷ ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಅತ್ಯಂತ ಕಡಿಮೆ ಬೇಸ್‌ಗೆ ಕಾರಣವಾಗಿದೆ. ಪೂರೈಕೆಯಲ್ಲಿ ಕೊರತೆಗೆ ಸೆಮಿಕಂಡಕ್ಟರ್ ಸಮಸ್ಯೆಯನ್ನು ಕಂಪನಿ ಉಲ್ಲೇಖಿಸಿದೆ, ಇದು ಅಂತಿಮವಾಗಿ ತನ್ನ ಮಾರಾಟ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಗಿದೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್'ನ ಸೀನಿಯರ್ ಉಪಾಧ್ಯಕ್ಷ ಮತ್ತು ಮಾರ್ಕೆಟಿಂಗ್ & ಸೇಲ್ಸ್ ವಿಭಾಗದ ನಿರ್ದೇಶಕರಾದ ರಾಜೇಶ್ ಗೋಯೆಲ್, ಅವರು ಮಾತನಾಡಿ, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯ ವೇಗವನ್ನು ಪಡೆದಿದೆ, ಖರೀದಿ ಮನೋಭಾವ ಸುಧಾರಿಸಿದೆ.ವ್ಯಾಪಕವಾದ ಚಿಪ್ ಕೊರತೆ ಸೇರಿದಂತೆ ಪೂರೈಕೆ ಸರಪಳಿ ಅಡೆತಡೆಗಳು ಉದ್ಯಮಕ್ಕೆ ಇದೀಗ ಒಂದು ದೊಡ್ಡ ಸವಾಲಾಗಿದೆ,

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಇದು ಕಳೆದ ತಿಂಗಳಲ್ಲಿ ನಮ್ಮ ಉತ್ಪಾದನಾ ಪ್ರಮಾಣ ಮತ್ತು ವಿತರಣೆಯ ಮೇಲೆ ಪರಿಣಾಮ ಬೀರಿತು. ಮುಂಬರುವ ತಿಂಗಳುಗಳಲ್ಲಿ ಈ ಕೊರತೆಯನ್ನು ನೀಗಿಸಲು ನಾವು ನಮ್ಮ ಅತ್ಯುತ್ತಮ ಪ್ರಯತ್ನಗಳ ಮೂಲಕ ನಮ್ಮ ಉತ್ಪಾದನೆಯನ್ನು ಜೋಡಿಸುವುದನ್ನು ಮುಂದುವರಿಸುತ್ತೇವೆ. "ಮುಂದಿನ ವಾರ ನವರಾತ್ರಿಯ ಅವಧಿಯು ಆರಂಭವಾಗುವುದರೊಂದಿಗೆ ಹಬ್ಬದ ಸೀಸನ್ ನಲ್ಲಿ ನಮ್ಮ ರಿಫ್ರೆಶ್ ಲೈನ್‌ಅಪ್‌ಗೆ ಬೇಡಿಕೆ ಮತ್ತಷ್ಟು ಹೆಚ್ಚಾಗುತ್ತದೆ ಮತ್ತು ಅದು ನಮಗೆ ಫಲಪ್ರದವಾಗಲಿದೆ ಎಂದು ನಾವು ನಂಬಿದ್ದೇವೆ ಎಂದು ಹೇಳಿದರು,

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಹೋಂಡಾ ತನ್ನ 2021ರ ಅಮೇಜ್ (Amaze) ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ನವೀಕರಿಸಿದ ಹೊಸ ಅಮೇಜ್ ಕಾರಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.6.32 ಲಕ್ಷಗಳಾಗಿದೆ. ಹೋಂಡಾ ಕಂಪನಿಯು ಹೊಸ ಅಮೇಜ್ ಕಾರಿಗಾಗಿ ಅಕ್ಸೆಸರೀಸ್ ಗಳನ್ನು ಪರಿಚಯಿಸಿದೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಈ ಹೋಂಡಾ ಅಮೇಜ್ ಕಾರಿನ ಹೊರಭಾಗವನ್ನು ಹೊಳೆಯುವ ಕ್ರೋಮ್ ಹೈಲೈಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವುಗಳನ್ನು ORVM ಗಳು, ಟೈಲ್ ಲ್ಯಾಂಪ್‌ಗಳು, ಟ್ರಂಕ್, ಡೋರ್ ವಿಸರ್, ವಿಂಡೋ ಲೈನ್ ಮತ್ತು ಡೋರುಗಳ ಕೆಳಗಿನ ಭಾಗದಲ್ಲಿ ಹೊಂದಬಹುದು.. ಸೊಗಸಾದ ಟ್ರಂಕ್ ಸ್ಪಾಯ್ಲರ್, ಬಾಡಿ ಸೈಡ್ ಮೋಲ್ಡಿಂಗ್, ಡೋರ್ ಹ್ಯಾಂಡಲ್ ಪ್ರೊಟೆಕ್ಟರ್, ಮಡ್ ಫ್ಲಾಪ್ಸ್ ಮತ್ತು ಬಂಪರ್ ಪ್ರೊಟೆಕ್ಟರ್‌ಗಳನ್ನು ಕೂಡ ಆಯ್ಕೆ ಮಾಡಬಹುದು.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಈ ಹೋಂಡಾ ಬೇಸಿಕ್ ಕಿಟ್, ಕ್ರೋಮ್ ಪ್ಯಾಕೇಜ್ ಮತ್ತು ಯುಟಿಲಿಟಿ ಪ್ಯಾಕೇಜ್ ಎಂಬ ಮೂರು ಕ್ಯುರೇಟೆಡ್ ಆಕ್ಸೆಸರಿಸ್ ಪ್ಯಾಕೇಜ್‌ಗಳನ್ನು ಸಹ ನೀಡುತ್ತದೆ. ಅಧಿಕೃತ ಹೋಂಡಾ ಡೀಲರ್‌ಶಿಪ್‌ಗಳಲ್ಲಿ ಅಕ್ಸೆಸರೀಸ್ ಗಳನು ಖರೀದಿಸಬಹುದು ಮತ್ತು ಫಿಟ್‌ಮೆಂಟ್‌ಗಳನ್ನು ಮಾಡಬಹುದು ಎಂಬುದನ್ನು ಗಮನಿಸಬೇಕು.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಈ ಹೊಸ ಹೋಂಡಾ ಅಮೇಜ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ರೂ,21,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೋಂಡಾ ಕಾಂಪ್ಯಾಕ್ಟ್-ಸೆಡಾನ್ ನ ಹಳೆಯ ಮಾದರಿಯ ಮೇಲೆ ಅಮೇಜ್ ಫೇಸ್‌ಲಿಫ್ಟ್‌ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದೆ,

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಹೋಂಡಾ ಕಂಪನಿಯು 2021ರ ಅಮೇಜ್ ಕಾರನ್ನು ಒಳಗೆ ಮತ್ತು ಹೊರಗೆ ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದೆ. ಇದು ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಖರೀದಿದಾರರಿಗೆ ತನ್ನ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಗಳೊಂದಿಗೆ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ,

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಇನ್ನು ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಿಟಿ ಹೈಬ್ರಿಡ್ ಕಾರನ್ನು ಬಿಡುಗಡೆಗೊಳಿಸಲಿದೆ. ಹೋಂಡಾ ಕಂಪನಿಯು ಸಿಟಿ ಹೈಬ್ರಿಡ್ ಕಾರನ್ನು ಮಲೇಷ್ಯಾ ಮಾರುಕಟ್ಟೆಯಲ್ಲಿ ಕಳೆದ ವರ್ಷ ಪರಿಚಯಿಸಿದರು. 2021ರ ಹೋಂಡಾ ಸಿಟಿ ಹೈಬ್ರಿಡ್ ಕಾರು ಈ ವರ್ಷದಲ್ಲೇ ಬಿಡುಗಡೆಗೊಳಿಸಲು ಉದ್ದೇಶಿಸಿತ್ತು.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಆದರೆ ಕರೋನಾ ಆತಂಕದಿಂದ ಈ ಹೈಬ್ರಿಡ್ ಕಾರಿನ ಬಿಡುಗಡೆಯನ್ನು ಮುಂದೂಡಲಾಗಿದೆ. ಹೋಂಡಾ ಕಾರ್ಸ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷ ಮತ್ತು ನಿರ್ದೇಶಕ ರಾಜೇಶ್ ಗೋಯೆಲ್ ಅವರು ಹೊಸ ಸಿಟಿ ಹೈಬ್ರಿಡ್ ಕಾರನ್ನು ಮುಂದಿನ ವರ್ಷ ಬಿಡುಗಡೆಗೊಳಿಸಲಿದೆ ಎಂದು ಖಚಿತಪಡಿಸಿದ್ದಾರೆ. ಅವರ ಪ್ರಕಾರ, ಮುಂಬರುವ ಹೋಂಡಾ ಸಿಟಿ ಹೈಬ್ರಿಡ್ ಕಾರನ್ನು ಮುಂದಿನ ಹಣಕಾಸು ವರ್ಷದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಹೋಂಡಾ ಕಾರ್ಸ್ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಹೋಂಡಾ ಎಸ್‍ಯುವಿಯು ಹ್ಯುಂಡೈ ಕ್ರೆಟಾ ಮಾದರಿಗೆ ಪೈಪೋಟಿಯಾಗಿ ಬರಲಿದೆ. ಹೋಂಡಾ ಇತ್ತೀಚೆಗೆ ಭಾರತದಲ್ಲಿ ಎಲಿವೇಟ್ ಎಂಬ ಹೆಸರಿಗಾಗಿ ಟ್ರೇಡ್‌ಮಾರ್ಕ್ ನೋಂದಾಯಿಸಿದೆ. ಭಾರತೀಯ ಮಾರುಕಟ್ಟೆಯ ಬಿಡುಗಡೆಯಾಗಲಿರುವ ಹೊಸ ಹೋಂಡಾ ಎಸ್‍ಯುವಿಗೆ ಎಲಿವೇಟ್ ಎಂಬ ಹೆಸರನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಮಿಡ್ ಸೈಜ್ ಎಸ್‍ಯುವಿ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ.

Most Read Articles

Kannada
Read more on ಹೋಂಡಾ honda
English summary
Honda cars india records 33 66 percent sales decline in september 2021 details
Story first published: Monday, October 4, 2021, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X