ಜೂನ್ ತಿಂಗಳಿನಲ್ಲಿ 4,767 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ 2021ರ ಜೂನ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ವರದಿಗಳ ಪ್ರಕಾರ, ಹೋಂಡಾ ಕಂಪನಿಯು ಕಳೆದ ತಿಂಗಳು ಹೋಂಡಾ ಕಂಪನಿಯು 4,767 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಜೂನ್ ತಿಂಗಳಿನಲ್ಲಿ 4,767 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ಈ ವರ್ಷದ ಮೇ ತಿಂಗಳಿನಲ್ಲಿ ಹೋಂಡಾ ಕಂಪನಿಯು 2,032 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದರು. ಈ ವರ್ಷದ ಮೇ ತಿಂಗಳ ಮಾರಾಟವನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.134 ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ಸಾಧಿಸಿದೆ. ಮೇ ತಿಂಗಳಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿತ್ತು. ಜೂನ್ ತಿಂಗಳಿನಲ್ಲಿ ಹಲವು ಕಡೆಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಿದ ಕಾರಣ ಜೂನ್ ತಿಂಗಳಿನಲ್ಲಿ ಶೋರೋಂಗಳು ಕಾರ್ಯಚರಣೆಯನ್ನು ಪ್ರಾರಂಭಿಸಿತು.

ಜೂನ್ ತಿಂಗಳಿನಲ್ಲಿ 4,767 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

2020ರ ಜೂನ್ ತಿಂಗಳಲ್ಲಿ ಹೋಂಡಾ ಕಂಪನಿಯು 1,398 ಯುನಿಟ್‌ಗಳನ್ನು ಮಾರಾಟಗೊಳಿಸಿತು. ಇದನ್ನು ಕಳೆದ ತಿಂಗಳು ಮಾರಾಟಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. , ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕಳೆದ ತಿಂಗಳು 1,241 ಯುನಿಟ್‌ಗಳನ್ನು ರಫ್ತು ಮಾಡಿದೆ.

ಜೂನ್ ತಿಂಗಳಿನಲ್ಲಿ 4,767 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ಈ ವರ್ಷದ ಮೇ ತಿಂಗಳಿನಲ್ಲಿ ಹೊಂಡಾ ಕಂಪನಿಯು 385 ಯುನಿಟ್‌ಗಳನ್ನು ರಫ್ತು ಮಾಡಿತು, ಇನ್ನು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಹೋಂಡಾ ಕಂಪನಿಯು 9,072 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದರು.

ಜೂನ್ ತಿಂಗಳಿನಲ್ಲಿ 4,767 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್'ನ ಹಿರಿಯ ಉಪಾಧ್ಯಕ್ಷ ಮತ್ತು ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ನಿರ್ದೇಶಕ ರಾಜೇಶ್ ಗೋಯೆಲ್ ಅವರು ಮಾತನಾಡಿ, ಜೂನ್ ತಿಂಗಳ ಕಾರು ಮಾರಾಟವು ನಮ್ಮ ಉತ್ಪಾದನಾ ಉತ್ಪಾದನೆಗೆ ಅನುಗುಣವಾಗಿರುತ್ತವೆ, ಅದನ್ನು ನಾವು ಈ ಕಠಿಣ ಪರಿಸ್ಥಿತಿಯಲ್ಲಿ ಉತ್ತಮವಾಗಿ ನಿರ್ವಹಿಸಿದ್ದೇವೆ.

ಜೂನ್ ತಿಂಗಳಿನಲ್ಲಿ 4,767 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ಅನೇಕ ರಾಜ್ಯಗಳು ಅಲಾ ಲಾಕ್ ಮತ್ತು ಹೆಚ್ಚಿನ ಮಾರುಕಟ್ಟೆಗಳಲ್ಲಿ ಪಾರಿ ಮಳಿಗೆಗಳನ್ನು ಪುನಃ ತೆರೆಯುವುದರೊಂದಿಗೆ, ಈ ತಿಂಗಳಿನಿಂದ ಕಾರು ಮಾರಾಟವು ಮತ್ತಷ್ಟು ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ನಮ್ಮ ಉತ್ಪಾದನೆಯನ್ನು ಹೆಚ್ಚಿಸುತ್ತೇವೆ ಎಂದು ಹೇಳಿದ್ದಾರೆ.

ಜೂನ್ ತಿಂಗಳಿನಲ್ಲಿ 4,767 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕರಾದ ಹೋಂಡಾ ತನ್ನ ಮೊದಲ ಆಲ್-ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಹೋಂಡಾ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಎಸ್‍ಯುವಿಯ ಹೆಸರನ್ನು ಬಹಿರಂಗಪಡಿಸಿದೆ.

ಜೂನ್ ತಿಂಗಳಿನಲ್ಲಿ 4,767 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ಹೊಸ ಹೋಂಡಾ ಎಲೆಕ್ಟ್ರಿಕ್ ಎಸ್‍ಯುವಿಯು ಪ್ರೊಲಾಗ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಹೊಸ ಹೋಂಡಾ ಪ್ರೊಲಾಗ್ ಎಲೆಕ್ಟ್ರಿಕ್ ಎಸ್‍ಯುವಿಯು 2024ರಲ್ಲಿ ಉತ್ತರ ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ. ಅಮೆರಿಕಾ ಮಾರುಕಟ್ಟೆಯಲ್ಲಿ ಎಸ್‍ಯುವಿಗಳಿಗೆ ಹೆಚ್ಚಿನ ಆಧ್ಯತೆಗಳನ್ನು ನೀಡಲಾಗುತ್ತದೆ.

ಜೂನ್ ತಿಂಗಳಿನಲ್ಲಿ 4,767 ಕಾರುಗಳನ್ನು ಮಾರಾಟ ಮಾಡಿದ ಹೋಂಡಾ

ಇನ್ನು ಒಟ್ಟಾರೆಯಾಗಿ ಹೋಂಡಾ ಕಾರುಗಳ ಮಾರಾಟದಲ್ಲಿ ಚೇತರಿಕೆಯನ್ನು ಕಂಡಿದೆ. ಹಲವು ಕಡೆಗಳಲ್ಲಿ ಅನಾ ಲಾಕ್ ಮಾಡಲಾಗಿದ್ದರೆ ಕೆಲವು ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಿದ್ದಾರೆ. ಇದರಿಂದ ಉತ್ಪಾದನೆಯನ್ನು ಹೆಚ್ಚಿಸಬಹುದು. ಇನ್ನು ಮುಂದಿನ ದಿನಗಳಲ್ಲಿ ಕಾರುಗಳ ಮಾರಾಟದಲ್ಲಿ ಇನ್ನಷ್ಟು ಚೇತರಿಕೆಯನ್ನು ಕಾಣಬಹುದು.

Most Read Articles

Kannada
Read more on ಹೋಂಡಾ honda
English summary
Honda Sells 4,767 Units In The Domestic Market. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X