ಆಗಸ್ಟ್ ತಿಂಗಳಿನಲ್ಲಿ 11,177 ಕಾರುಗಳನ್ನು ಮಾರಾಟ ಮಾಡಿದ Honda

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ 2021ರ ಆಗಸ್ಟ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ವರದಿಗಳ ಪ್ರಕಾರ, ಹೋಂಡಾ ಕಂಪನಿಯು ಕಳೆದ ತಿಂಗಳು 11,177 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಆಗಸ್ಟ್ ತಿಂಗಳಿನಲ್ಲಿ 11,177 ಕಾರುಗಳನ್ನು ಮಾರಾಟ ಮಾಡಿದ Honda

ಹೋಂಡಾ ಕಂಪನಿಯು ಶೇ.49 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇನ್ನು ಈ ವರ್ಷದ ಜುಲೈ ತಿಂಗಳಿನಲ್ಲಿ ಹೋಂಡಾ ಕಂಪನಿಯು 7,509 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.85 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಹೊಸದಾಗಿ ಬಿಡುಗಡೆಗೊಂಡ ಹೋಂಡಾ ಅಮೇಜ್ ಫೇಸ್ ಲಿಫ್ಟ್ ಮತ್ತು 2020 ಹೋಂಡಾ ಸಿಟಿಗೆ ಉತ್ತಮ ಬೇಡಿಕೆಯನ್ನು ಕಂಡಿದೆ. ಹೋಂಡಾ ಅಮೇಜ್ ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಯಾಯಿತು.

ಆಗಸ್ಟ್ ತಿಂಗಳಿನಲ್ಲಿ 11,177 ಕಾರುಗಳನ್ನು ಮಾರಾಟ ಮಾಡಿದ Honda

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಉಪಾಧ್ಯಕ್ಷ ಮತ್ತು ನಿರ್ದೇಶಕ ರಾಜೇಶ್ ಗೋಯೆಲ್ ಅವರು ಮಾತನಾಡಿ, ಧನಾತ್ಮಕ ಮಾರಾಟದ ವೇಗ ಮತ್ತು ಒಟ್ಟಾರೆ ಬಲವಾದ ಬೇಡಿಕೆಯು ನಮಗೆ ಹಬ್ಬದ ಸೀಸನ್ ಆರಂಭದೊಂದಿಗೆ ಉತ್ತಮ ಪ್ರಮಾಣವನ್ನು ಸಾಧಿಸಲು ಸಹಾಯ ಮಾಡಿದೆ.

ಆಗಸ್ಟ್ ತಿಂಗಳಿನಲ್ಲಿ 11,177 ಕಾರುಗಳನ್ನು ಮಾರಾಟ ಮಾಡಿದ Honda

ದಕ್ಷಿಣ ಭಾರತದಲ್ಲಿ ಓಣಂನಿಂದ ಆರಂಭವಾದ ಸಂಭ್ರಮದ ಉತ್ಸಾಹ ನಾವು ಹಬ್ಬಗಳ ಉತ್ತುಂಗದತ್ತ ಸಾಗುತ್ತಿದ್ದಂತೆ ಉಳಿದ ಮಾರುಕಟ್ಟೆಗಳಿಗೂ ವಿಸ್ತರಿಸುತ್ತೇವೆ. ನಾವು ಕಳೆದ ತಿಂಗಳು ತನ್ನ ಹೊಸ ಅವತಾರದಲ್ಲಿ ಪ್ರಾರಂಭಿಸಿದ ನಮ್ಮ ಅತ್ಯುತ್ತಮ ಮಾರಾಟಗಾರ ಅಮೇಜ್, 6,591 ಯುನಿಟ್‌ಗಳೊಂದಿಗೆ ಶ್ಲಾಘನೀಯ ಮಾರಾಟ ಪ್ರಮಾಣವನ್ನು ಹೆಚ್ಚಿಸಿತು.

ಆಗಸ್ಟ್ ತಿಂಗಳಿನಲ್ಲಿ 11,177 ಕಾರುಗಳನ್ನು ಮಾರಾಟ ಮಾಡಿದ Honda

ಭಾರತದ ಅತ್ಯಂತ ಆದ್ಯತೆಯ ಫ್ಯಾಮಿಲಿ ಸೆಡಾನ್ ಆಗಿ ತನ್ನ ಸ್ಥಾನವನ್ನು ಬಲಪಡಿಸಿತು.ನಾವು ಬೇಡಿಕೆಯ ಬದಿಯಲ್ಲಿ ಸಾಕಷ್ಟು ಆಶಾವಾದಿಗಳಾಗಿದ್ದರೂ, ಉದ್ಯಮದ ಮೇಲೆ ಪರಿಣಾಮ ಬೀರುವ ಪೂರೈಕೆ ಸಮಸ್ಯೆಗಳು ಮತ್ತು ಯಾವುದೇ ಭವಿಷ್ಯದ ಕೋವಿಡ್ ಸಂಬಂಧಿತ ಅಡೆತಡೆಗಳನ್ನು ನಾವು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಆಗಸ್ಟ್ ತಿಂಗಳಿನಲ್ಲಿ 11,177 ಕಾರುಗಳನ್ನು ಮಾರಾಟ ಮಾಡಿದ Honda

ಹೋಂಡಾ ತನ್ನ 2021ರ Amaze ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ನವೀಕರಿಸಿದ ಹೊಸ Amaze ಕಾರಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.6.32 ಲಕ್ಷಗಳಾಗಿದೆ. ಹೋಂಡಾ ಕಂಪನಿಯು ಹೊಸ Amaze ಕಾರಿಗಾಗಿ ಅಕ್ಸೆಸರೀಸ್ ಗಳನ್ನು ಪರಿಚಯಿಸಿದೆ.

ಆಗಸ್ಟ್ ತಿಂಗಳಿನಲ್ಲಿ 11,177 ಕಾರುಗಳನ್ನು ಮಾರಾಟ ಮಾಡಿದ Honda

ಈ ಹೋಂಡಾ Amaze ಕಾರಿನ ಹೊರಭಾಗವನ್ನು ಹೊಳೆಯುವ ಕ್ರೋಮ್ ಹೈಲೈಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವುಗಳನ್ನು ORVM ಗಳು, ಟೈಲ್ ಲ್ಯಾಂಪ್‌ಗಳು, ಟ್ರಂಕ್, ಡೋರ್ ವಿಸರ್, ವಿಂಡೋ ಲೈನ್ ಮತ್ತು ಡೋರುಗಳ ಕೆಳಗಿನ ಭಾಗದಲ್ಲಿ ಹೊಂದಬಹುದು.. ಸೊಗಸಾದ ಟ್ರಂಕ್ ಸ್ಪಾಯ್ಲರ್, ಬಾಡಿ ಸೈಡ್ ಮೋಲ್ಡಿಂಗ್, ಡೋರ್ ಹ್ಯಾಂಡಲ್ ಪ್ರೊಟೆಕ್ಟರ್, ಮಡ್ ಫ್ಲಾಪ್ಸ್ ಮತ್ತು ಬಂಪರ್ ಪ್ರೊಟೆಕ್ಟರ್‌ಗಳನ್ನು ಕೂಡ ಆಯ್ಕೆ ಮಾಡಬಹುದು.

ಆಗಸ್ಟ್ ತಿಂಗಳಿನಲ್ಲಿ 11,177 ಕಾರುಗಳನ್ನು ಮಾರಾಟ ಮಾಡಿದ Honda

ಇನ್ನು ಹೋಂಡಾ ಬೇಸಿಕ್ ಕಿಟ್, ಕ್ರೋಮ್ ಪ್ಯಾಕೇಜ್ ಮತ್ತು ಯುಟಿಲಿಟಿ ಪ್ಯಾಕೇಜ್ ಎಂಬ ಮೂರು ಕ್ಯುರೇಟೆಡ್ ಆಕ್ಸೆಸರಿ ಪ್ಯಾಕೇಜ್‌ಗಳನ್ನು ಸಹ ನೀಡುತ್ತದೆ. ಅಧಿಕೃತ ಹೋಂಡಾ ಡೀಲರ್‌ಶಿಪ್‌ಗಳಲ್ಲಿ ಅಕ್ಸೆಸರೀಸ್ ಗಳನು ಖರೀದಿಸಬಹುದು ಮತ್ತು ಫಿಟ್‌ಮೆಂಟ್‌ಗಳನ್ನು ಮಾಡಬಹುದು ಎಂಬುದನ್ನು ಗಮನಿಸಬೇಕು.

ಆಗಸ್ಟ್ ತಿಂಗಳಿನಲ್ಲಿ 11,177 ಕಾರುಗಳನ್ನು ಮಾರಾಟ ಮಾಡಿದ Honda

ಈ ಹೊಸ ಹೋಂಡಾ Amaze ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ರೂ,21,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೋಂಡಾ ಕಾಂಪ್ಯಾಕ್ಟ್-ಸೆಡಾನ್ ನ ಹಳೆಯ ಮಾದರಿಯ ಮೇಲೆ ಅಮೇಜ್ ಫೇಸ್‌ಲಿಫ್ಟ್‌ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿದೆ.

ಆಗಸ್ಟ್ ತಿಂಗಳಿನಲ್ಲಿ 11,177 ಕಾರುಗಳನ್ನು ಮಾರಾಟ ಮಾಡಿದ Honda

ಹೋಂಡಾ ಕಂಪನಿಯು 2021ರ ಅಮೇಜ್ ಕಾರನ್ನು ಒಳಗೆ ಮತ್ತು ಹೊರಗೆ ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದೆ. ಇದು ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಖರೀದಿದಾರರಿಗೆ ತನ್ನ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಗಳೊಂದಿಗೆ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. .

ಆಗಸ್ಟ್ ತಿಂಗಳಿನಲ್ಲಿ 11,177 ಕಾರುಗಳನ್ನು ಮಾರಾಟ ಮಾಡಿದ Honda

ಇನ್ನು ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ City ಹೈಬ್ರಿಡ್ ಕಾರನ್ನು ಬಿಡುಗಡೆಗೊಳಿಸಲಿದೆ. Honda ಕಂಪನಿಯು City ಹೈಬ್ರಿಡ್ ಕಾರನ್ನು ಮಲೇಷ್ಯಾ ಮಾರುಕಟ್ಟೆಯಲ್ಲಿ ಕಳೆದ ವರ್ಷ ಪರಿಚಯಿಸಿದರು. 2021ರ ಹೋಂಡಾ City ಹೈಬ್ರಿಡ್ ಕಾರು ಈ ವರ್ಷದಲ್ಲೇ ಬಿಡುಗಡೆಗೊಳಿಸಲು ಉದ್ದೇಶಿಸಿತ್ತು.

ಆಗಸ್ಟ್ ತಿಂಗಳಿನಲ್ಲಿ 11,177 ಕಾರುಗಳನ್ನು ಮಾರಾಟ ಮಾಡಿದ Honda

ಆದರೆ ಕರೋನಾ ಆತಂಕದಿಂದ ಈ ಹೈಬ್ರಿಡ್ ಕಾರಿನ ಬಿಡುಗಡೆಯನ್ನು ಮುಂದೂಡಲಾಗಿದೆ. ಹೋಂಡಾ ಕಾರ್ಸ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷ ಮತ್ತು ನಿರ್ದೇಶಕ ರಾಜೇಶ್ ಗೋಯೆಲ್ ಅವರು ಹೊಸ City ಹೈಬ್ರಿಡ್ ಕಾರನ್ನು ಮುಂದಿನ ವರ್ಷ ಬಿಡುಗಡೆಗೊಳಿಸಲಿದೆ ಎಂದು ಖಚಿತಪಡಿಸಿದ್ದಾರೆ. ಅವರ ಪ್ರಕಾರ, ಮುಂಬರುವ Honda City ಹೈಬ್ರಿಡ್ ಕಾರನ್ನು ಮುಂದಿನ ಹಣಕಾಸು ವರ್ಷದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಆಗಸ್ಟ್ ತಿಂಗಳಿನಲ್ಲಿ 11,177 ಕಾರುಗಳನ್ನು ಮಾರಾಟ ಮಾಡಿದ Honda

ಹೋಂಡಾ ಕಾರ್ಸ್ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಹೋಂಡಾ ಎಸ್‍ಯುವಿಯು Hyundai creta ಮಾದರಿಗೆ ಪೈಪೋಟಿಯಾಗಿ ಬರಲಿದೆ. ಹೋಂಡಾ ಇತ್ತೀಚೆಗೆ ಭಾರತದಲ್ಲಿ ಎಲಿವೇಟ್ ಎಂಬ ಹೆಸರಿಗಾಗಿ ಟ್ರೇಡ್‌ಮಾರ್ಕ್ ನೋಂದಾಯಿಸಿದೆ. ಭಾರತೀಯ ಮಾರುಕಟ್ಟೆಯ ಬಿಡುಗಡೆಯಾಗಲಿರುವ ಹೊಸ ಹೋಂಡಾ ಎಸ್‍ಯುವಿಗೆ ಎಲಿವೇಟ್ ಎಂಬ ಹೆಸರನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ

Article Published On: Thursday, September 2, 2021, 12:45 [IST]
English summary
Honda cars india sold 11177 units in august 2021 details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+