ಕೋವಿಡ್ ಸಂಕಷ್ಟ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹೋಂಡಾ ಕಾರ್ಸ್ ಇಂಡಿಯಾ

ದೇಶಾದ್ಯಂತ ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಭಾಗಶಃ ಲಾಕ್ಡೌನ್, ಕರ್ಫ್ಯೂ ಕೈಗೊಳ್ಳಲಾಗುತ್ತಿದ್ದು, ಕೋವಿಡ್ ಪರಿಣಾಮ ಆಟೋ ಉದ್ಯಮ ಸೇರಿದಂತೆ ಎಲ್ಲಾ ವಲಯಗಳಲ್ಲೂ ಆರ್ಥಿಕ ಚಟುವಟಿಕೆಗಳು ನೆಲಕಚ್ಚಿವೆ.

ಕೋವಿಡ್ ಸಂಕಷ್ಟ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹೋಂಡಾ ಕಾರ್ಸ್ ಇಂಡಿಯಾ

ಕಳೆದ ವರ್ಷದ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಿಸಿಕೊಳ್ಳುತ್ತಿದ್ದ ಆಟೋ ಉದ್ಯಮವು ಇದೀಗ ಮತ್ತೊಮ್ಮೆ ಲಾಕ್‌ಡೌನ್ ಸಂಕಷ್ಟ ಎದುರಿಸುತ್ತಿದ್ದು, ದೇಶಾದ್ಯಾಂತ ನೆಲೆಗೊಂಡಿರುವು ಹಲವು ಆಟೋ ಕಂಪನಿಗಳು ಈಗಾಗಲೇ ಕನಿಷ್ಠ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಮತ್ತೆ ಉತ್ಪಾದನೆಯು ತಗ್ಗಿರುವುರುವುದು ಭಾರೀ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮ ಕೈಗೊಂಡು ಉತ್ಪಾದನೆಯನ್ನು ಕೈಗೊಳ್ಳುತ್ತಿವೆ.

ಕೋವಿಡ್ ಸಂಕಷ್ಟ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹೋಂಡಾ ಕಾರ್ಸ್ ಇಂಡಿಯಾ

ಪ್ರಮುಖ ಆಟೋ ಕಂಪನಿಗಳು ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಮಾಡುತ್ತಿದ್ದು, ವಾಹನ ಮಾರಾಟದಲ್ಲೂ ಕೂಡಾ ಹೊಸ ತಂತ್ರಗಳನ್ನು ಅಳವಡಿಸಿಕೊಂಡು ವೈರಸ್ ಹರಡುವಿಕೆ ತಡೆಯೊಂದಿಗೆ ಉದ್ಯಮ ವ್ಯವಹಾರ ಕೈಗೊಳ್ಳುತ್ತಿವೆ.

ಕೋವಿಡ್ ಸಂಕಷ್ಟ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹೋಂಡಾ ಕಾರ್ಸ್ ಇಂಡಿಯಾ

ಪರಿಸ್ಥಿತಿಗೆ ಅನುಗುಣವಾಗಿ ಇನ್ನು ಕೆಲವು ವಾಹನ ಉತ್ಪಾದನಾ ಕಂಪನಿಗಳು ಹೊಸ ವಾಹನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಪರಿಸ್ಥಿತಿ ತುಸು ನಿಯಂತ್ರಣಕ್ಕೆ ಬರುವ ತವಕವೂ ಉತ್ಪಾದನಾ ಪ್ರಕ್ರಿಯೆಯನ್ನು ಕೈಗೊಳ್ಳದಿರಲು ನಿರ್ಧರಿಸಿದೆ.

ಕೋವಿಡ್ ಸಂಕಷ್ಟ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹೋಂಡಾ ಕಾರ್ಸ್ ಇಂಡಿಯಾ

ಮಾರುತಿ ಸುಜುಕಿ, ಎಂಜಿ ಮೋಟಾರ್ ಇಂಡಿಯಾ ಕಂಪನಿಯ ಕಾರು ಉತ್ಪಾದನೆಯ ಸ್ಥಗಿತ ನಂತರ ಇದೀಗ ಹೋಂಡಾ ಕಾರ್ಸ್ ಕಂಪನಿಯು ಕೂಡಾ ರಾಜಸ್ತಾನದಲ್ಲಿ ಕಾರು ಉತ್ಪಾದನಾ ಘಟಕವನ್ನು ಬಂದ್ ಮಾಡುವುದಾಗಿ ಹೇಳಿಕೊಂಡಿದ್ದು, ಉದ್ಯೋಗಿಗಳ ಆರೋಗ್ಯ ದೃಷ್ಠಿಯಿಂದ ಈ ಕ್ರಮ ತೆಗೆದುಕೊಂಡಿರುವಾಗಿ ಕಂಪನಿಯೇ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಕೋವಿಡ್ ಸಂಕಷ್ಟ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹೋಂಡಾ ಕಾರ್ಸ್ ಇಂಡಿಯಾ

ಇಂದಿನಿಂದ 12 ದಿನಗಳ ಕಾಲ ಕಾರು ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದಾಗಿ ಹೇಳಿಕೊಂಡಿರುವ ಹೋಂಡಾ ಕಂಪನಿಯು ಉದ್ಯೋಗಿಗಳ ಆರೋಗ್ಯ ದೃಷ್ಠಿಯಿಂದ ಮಹತ್ವದ ನಿರ್ಧಾರ ಪ್ರಕಟಿಸಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಕೋವಿಡ್ ಸಂಕಷ್ಟ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹೋಂಡಾ ಕಾರ್ಸ್ ಇಂಡಿಯಾ

ಕೋವಿಡ್ ಪರಿಣಾಮ ಆಟೋ ಉದ್ಯಮ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದ ನಷ್ಟ ಅನುಭವಿಸುವ ಸಾಧ್ಯತೆಗಳಿದ್ದು, ಲಾಕ್‌ಡೌನ್ ನಡುವೆ ಹೊಸ ವಾಹನಗಳ ಖರೀದಿಗೆ ಬುಕ್ಕಿಂಗ್ ಸಲ್ಲಿಕೆ ತೀವ್ರ ಕಂಡಿರುವುದಲ್ಲದೆ ಈಗಾಗಲೇ ಬುಕ್ಕಿಂಗ್ ಸಲ್ಲಿಕೆ ಮಾಡಿದ್ದ ಲಕ್ಷಾಂತರ ಹೊಸ ವಾಹನ ಖರೀದಿದಾರರು ಬುಕ್ಕಿಂಗ್ ಹಿಂಪಡೆಯುತ್ತಿದ್ದಾರೆ.

ಕೋವಿಡ್ ಸಂಕಷ್ಟ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹೋಂಡಾ ಕಾರ್ಸ್ ಇಂಡಿಯಾ

ಸದ್ಯದ ಪರಿಸ್ಥಿತಿಯಲ್ಲಿ ಹೊಸ ವಾಹನ ಖರೀದಿಯು ಆರ್ಥಿಕ ಸಂಕಷ್ಟ ಇನ್ನಷ್ಟು ಹೆಚ್ಚಳವಾಗುವ ಭೀತಿಯಿಂದ ಹೊಸ ವಾಹನ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಈ ಪರಿಸ್ಥಿತಿ ಸುಧಾರಣೆಯಾಗಲು ಇನ್ನು ಕೆಲ ತಿಂಗಳುಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.

MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ಕೋವಿಡ್ ಸಂಕಷ್ಟ: ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಹೋಂಡಾ ಕಾರ್ಸ್ ಇಂಡಿಯಾ

ಕೋವಿಡ್‌ನಿಂದಾಗಿ ಮುಂಜಾಗ್ರತ ಕ್ರಮವಾಗಿ ಲಭ್ಯವಿರುವ ಉದ್ಯೋಗಿಗಳೊಂದಿಗೆ ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸಂಕಷ್ಟ ಪರಿಸ್ಥಿತಿಯಲ್ಲಿ ಆಟೋ ಉದ್ಯಮಕ್ಕೆ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‍ಗಳು ಸಹಕಾರಿಯಾಗುತ್ತಿವೆ.

Most Read Articles

Kannada
Read more on ಹೋಂಡಾ honda
English summary
Honda cars India to shut down its plants for 12 days amid corona pandemic. Read in Kannada.
Story first published: Thursday, May 6, 2021, 20:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X