Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ 2021ರ ಗೈಕಿಂಡೋ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಆಟೋ ಶೋನಲ್ಲಿ ಎಸ್‍ಯುವಿ ಆರ್‌ಎಸ್ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದೆ. ಈ ಹೋಂಡಾ ಎಸ್‍ಯುವಿ ಆರ್‌ಎಸ್ ಕಾನ್ಸೆಪ್ಟ್ ಮಾದರಿಯು ಭಾರತದಲ್ಲಿ ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಬರಬಹುದು.

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಈ ಎಸ್‌ಯುವಿ ಆರ್‌ಎಸ್ ಹೋಂಡಾ ಸಿಟಿ ಸೆಡಾನ್‌ನಂತೆಯೇ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಅದರ ಒಡಹುಟ್ಟಿದಂತೆಯೇ ಇದು ಉತ್ಪಾದನಾ ಮಾದರಿ ಬಂದಾಗ 4,000 ಎಂಎಂ ಮಾರ್ಕ್‌ಗಿಂತ ಉದ್ದವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೊಸ ಎಸ್‍ಯುವಿಯು ಆರ್‌ಎಸ್ ಕಾನ್ಸೆಪ್ಟ್ ಆಯಾಮಗಳ ಬಗ್ಗೆ ಹೋಂಡಾ ಯಾವುದೇ ವಿವರಗಳನ್ನು ನೀಡಿಲ್ಲ. ಹೋಂಡಾ ಆರ್‌ಎಸ್ ಕಾನ್ಸೆಪ್ಟ್ ಮಾದರಿಯು ZR-V ಕೋಡ್ ನೇಮ್ ನೀಡಿರುವ ಎಸ್‍ಯುವಿ ಮಾದರಿಯಾಗಿರುವ ಸಾಧ್ಯತೆಗಳಿದೆ.

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಹೋಂಡಾ ಎಸ್‍ಯುವಿ ಆರ್‌ಎಸ್ ಕಾನ್ಸೆಪ್ಟ್ ಮಾದರಿಯು ಹೆಆರ್-ವಿ ಎಸ್‍ಯುವಿಯಿಂದ ವಿನ್ಯಾಸ ಅಂಶಗಳನ್ನು ಎರವಲು ಪಡೆಯುತ್ತದೆ. ಕಾನ್ಸೆಪ್ಟ್ ಮಾದರಿಯು ಮಸ್ಕ್ಯುಲರ್ ಎಸ್‌ಯುವಿ ಮತ್ತು ಸ್ಪೋರ್ಟಿ ಕೂಪ್ ನಡುವಿನ ಸಂಗಮದಂತೆ ಕಾಣುತ್ತದೆ ಕೊನೆಯ ಪ್ರೊಫೈಲ್‌ನ ಕಡೆಗೆ ತಿರುಗುವ ರೂಫ್‌ಲೈನ್ ಹೊಂದಿದೆ.

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಈ ಎಸ್‍ಯುವಿ ಮಾದರಿಯಲ್ಲಿ ಎಲ್ಇಡಿ ಹೆಡ್ ಲೈಟ್ ಗಳನ್ನು ಹೊಂದಿವೆ. ನಯವಾದ ಗ್ರಿಲ್ ಮತ್ತು ಅಸ್ಸೆಂಟ್ ನಿಂದ ಬಂಪರ್ ಅನ್ನು ಅಲಂಕರಿಸಲ್ಪಟ್ಟ ಸ್ಮಾರ್ಟ್ ಮುಂಭಾಗವನ್ನು ಹೊಂದಿದೆ. ಈ ಎಸ್‍ಯುವಿಯ ಬದಿಯಲ್ಲಿ ಕಾನ್ಸೆಪ್ಟ್ ಅತ್ಯಂತ ಉದಾರವಾದ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ ಮತ್ತು ವೃತ್ತಾಕಾರದ ವ್ಹೀಲ್ ಆರ್ಚಾರ್ ಮತ್ತು ಬ್ಲ್ಯಾಕ್ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿವೆ.

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಹೋಂಡಾ ಎಸ್‍ಯುವಿ ಆರ್‌ಎಸ್ ಕಾನ್ಸೆಪ್ಟ್ ಮಾದರಿಯು ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಸೈಡ್ ಪ್ರೊಫೈಲ್‌ನಿಂದ ಉತ್ತಮವಾಗಿ ಸ್ಪಷ್ಟವಾಗಿ ಕಂಡುಬರುತ್ತದೆ. ಇನ್ನು ಎಸ್‍ಯುವಿ ಹಿಂಭಾಗದಲ್ಲಿ ಬೂಟ್ ಡೋರ್‌ನಲ್ಲಿ ವಿಸ್ತರಿಸಿದ ಲಿಟ್ ಲೈನ್‌ನೊಂದಿಗೆ ಸಂಪರ್ಕಗೊಂಡಿರುವ ಎಲ್ಇಡಿ ಲೈಟ್ ಯೂನಿಟ್‌ಗಳೊಂದಿಗೆ ನಿಜವಾಗಿಯೂ ಆಧುನಿಕ ದೃಶ್ಯ ರೂಪವನ್ನು ಹೊಂದಿದೆ. ಇದು ಪ್ರೊಫೈಲ್ ಲುಕ್ ಅನ್ನು ಮತ್ತಷ್ಟು ಆಕರ್ಷಕವಾಗಿಸಿದೆ.

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಪ್ರಸ್ತುತ, ಹೋಂಡಾ ಕ್ಯಾಬಿನ್ ವಿವರಗಳನ್ನು ಬಹಿರಂಗಪಡಿಸಿಲ್ಲ ಆದರೆ ಪ್ರತಿಸ್ಪರ್ಧಿಗಳನ್ನು ಉತ್ತಮವಾಗಿ ಪೈಪೋಟಿ ನೀಡಲು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿರಬಹುದು. ಇಂಜಿನ್ ಮತ್ತು ಟ್ರಾನ್ಸ್‌ಮಿಷನ್ ವಿವರಗಳು ಇನ್ನೂ ತಿಳಿದಿಲ್ಲ. ಆದರೆ ಪ್ರೊಡಕ್ಷನ್-ಸ್ಪೆಕ್ ಎಸ್‍ಯುವಿಯು ಹೋಂಡಾ ಸಿಟಿಯ 1.5-ಲೀಟರ್ ಎಂಜಿನ್ ಅನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ.

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಹೊಸ ಹೋಂಡಾ ಎಸ್‍ಯುವಿಯು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಈ ವರ್ಷದ ಆಗಸ್ಟ್‌ನಲ್ಲಿ ಹೋಂಡಾ ಭಾರತದಲ್ಲಿ ಹೊಸ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ಹೇಳಿತ್ತು. ಕಂಪನಿಯ ನಿರ್ಧಾರವು 2021 ರಲ್ಲಿ ಭಾರತದಲ್ಲಿ ಎಸ್‌ಯುವಿಗಳ ಮಾರಾಟದ ಬೆಳವಣಿಗೆಯನ್ನು ಆಧರಿಸಿದೆ.

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಎಸ್‌ಯುವಿ ವಿಭಾಗದ ವಿಶ್ಲೇಷಣೆಯ ನಂತರ ಹೋಂಡಾ ಭಾರತದಲ್ಲಿ ಎಸ್‌ಯುವಿಗಳಿಗೆ ಅಪಾರ ಸಾಮರ್ಥ್ಯವಿದೆ ಎಂಬ ತೀರ್ಮಾನಕ್ಕೆ ಬಂದಿತು.ಹೆಚ್ಚಿನ ಜಾಗತಿಕ ಮಾರುಕಟ್ಟೆಗಳಲ್ಲಿ ಎಸ್‍ಯುವಿಗಳಿಗೆ ಆದ್ಯತೆ ಹೆಚ್ಚುತ್ತಿರುವಾಗ, ಬಿಡುಗಡೆಯ ಸಾಧ್ಯತೆಗಳು ಹೆಚ್ಚಾಗಿದೆ.

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಹೋಂಡಾದ ಮೌಲ್ಯಮಾಪನದ ಪ್ರಕಾರ, ಎಸ್‍ಯುವಿ ವಿಭಾಗವು ಶೀಘ್ರದಲ್ಲೇ ದೇಶದ ಒಟ್ಟಾರೆ ಪ್ರಯಾಣಿಕ ವಾಹನ ಮಾರಾಟಕ್ಕೆ 40% ಕ್ಕಿಂತ ಹೆಚ್ಚು ಕೊಡುಗೆ ನೀಡಲಿದೆ. ಒಂದು ಅವಕಾಶವನ್ನು ಗ್ರಹಿಸಿದ ಹೋಂಡಾ ಭಾರತದಲ್ಲಿ ಹೊಸ ಎಸ್‍ಯುವಿ ಬಿಡುಗಡೆ ಮಾಡಲು ಕೆಲಸ ಮಾಡುತ್ತಿದೆ.

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಇನ್ನು ಹೋಂಡಾ ಕಂಪನಿಯು ತನ್ನ ನ್ಯೂ ಜನರೇಷನ್ ಸಿವಿಕ್ ಸೆಡಾನ್ ಕಾರನ್ನು ಫಿಲಿಪೈನ್ಸ್‌ನ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೋಂಡಾ ಕಂಪನಿಯು ಫಿಲಿಪೈನ್ಸ್‌ನ ಮಾರುಕಟ್ಟೆಯಲ್ಲಿ ನ್ಯೂ ಜನರೇಷನ್ ಸಿವಿಕ್ ಕಾರು ಬಿಡುಗಡೆ ಮಾಡುವ ಟೈಮ್‌ಲೈನ್ ಬಹಿರಂಗಪಡಿಸಿದೆ. ಹೋಂಡಾ ಸಿವಿಕ್ ಕಾರು ಫಿಲಿಪೈನ್ಸ್‌ನ ಮಾರುಕಟ್ಟೆಯಲ್ಲಿ ಇದೇ ತಿಂಗಳ 23 ರಂದು ಬಿಡುಗಡೆಯಾಗಲಿದೆ.

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಹೋಂಡಾ ಸಿವಿಕ್ ಕಾರನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆಗೊಳಿಸುತ್ತಿದೆ, ಈ 2022ರ ಹೋಂಡಾ ಸಿವಿಕ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕಡಿಮೆ ಬಾಡಿ ಕ್ರೀಸ್‌ಗಳು ಮತ್ತು ಸ್ಪೋರ್ಟ್ಸ್ ಕ್ಲೀನರ್ ವಿನ್ಯಾಸದೊಂದಿಗೆ ಇದು ಹೆಚ್ಚು ಪ್ರಬುದ್ಧವಾಗಿ ಕಾಣುತ್ತದೆ, ಹೊಸ ಸಿವಿಕ್ ಸ್ಪೋರ್ಟಿ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ.ಇದರ ಅಪ್‌ಫ್ರಂಟ್ ವಿಶಾಲವಾದ, ಅಡ್ಡಲಾಗಿ ಇರಿಸಿದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು (ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು) ಮತ್ತು ಬಾಡಿ ಬಣ್ಣ ಗ್ರಿಲ್ ಅನ್ನು ಹೊಂದಿದೆ.

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಹೊಸ ಸಿವಿಕ್ ಸೆಡಾನ್ ಮಾದರಿಯು ಸರಿಯಾದ ಸೆಡಾನ್ ತರಹದ ಹಿಂಭಾಗದ ಪ್ರೊಫೈಲ್ ಅನ್ನು ಹೊಂದಿದೆ. 2022ರ ಹೋಂಡಾ ಸಿವಿಕ್ ಕಾರು 4,673 ಎಂಎಂ ಉದ್ದ, 1,800 ಎಂಎಂ ಅಗಲ ಮತ್ತು 1,414 ಎಂಎಂ ಎತ್ತರವನ್ನು ಹೊಂದಿದೆ. ಇನ್ನು 2,735 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಈ ಹೊಸ ಹೋಂಡಾ ಸಿವಿಕ್ ಕಾರನ್ನು ಹಿಂದಿನ ಮಾದರಿಗೆ ಹೋಲಿಸಿದರೆ 32 ಎಂಎಂ ಉದ್ದ ಮತ್ತು 35 ಎಂಎಂ ನಷ್ಟು ವ್ಹೀಲ್‌ಬೇಸ್ ಅನ್ನು ಹೆಚ್ಚಿಸಲಾಗಿದೆ. ಈ ಹೊಸ ಸಿವಿಕ್ ಕಾರು 419-ಲೀಟರ್‌ ಬೂಟ್ ಸ್ಪೇಸ್ ಅನ್ನು ಒಳಗೊಂಡಿದೆ,

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಈ ಹೊಸ ಹೋಂಡಾ ಸಿವಿಕ್ ಕಾರಿನ ಇಂಟಿರಿಯರ್ ನಲ್ಲಿ 7-ಇಂಚಿನಿಂದ 9-ಇಂಚಿನವರೆಗಿನ ಆಯ್ಕೆಯ ಫ್ಲೋಟಿಂಗ್ ಡಿಸ್ ಪ್ಲೇಯನ್ನು ಹೊಂದಿದೆ. ಇನ್ನು ಇದರ ಇನ್ಫೋಟೈನ್ಮೆಂಟ್ ಯುನಿಟ್ ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಒಳಗೊಂಡಿದೆ. ಇದರೊಂದಿಗೆ ಟೂರಿಂಗ್ 10.2-ಇಂಚಿನ ಫುಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಇತರ ರೂಪಾಂತರಗಳು 7 ಇಂಚಿನ ಡಿಸ್ ಪ್ಲೇಯನ್ನು ಪಡೆಯುತ್ತದೆ. ಇನ್ನು ಸ್ಮಾರ್ಟ್‌ಫೋನ್‌ಗಳಿಗೆ ವೈರ್‌ಲೆಸ್ ಚಾರ್ಜರ್ ಮತ್ತು 12 ಸ್ಪೀಕರ್‌ಗಳನ್ನು ಹೊಂದಿರುವ ಬೋಸ್ ಸೌಂಡ್ ಸಿಸ್ಟಂನೊಂದಿಗೆ ಬರುತ್ತದೆ. ಹೋಂಡಾ ಕಂಪನಿಯ ನ್ಯೂ ಜನರೇಷನ್ ಸಿವಿಕ್ ಸೆಡಾನ್ ಅನ್ನು ಇತ್ತೀಚೆಗೆ ಆಗ್ನೇಯ ಏಷ್ಯಾದ ದೇಶಗಳ ಹೊಸ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ASEAN NCAP) ಕ್ರ್ಯಾಶ್ ಟೆಸ್ಟ್‌ಗೆ ಇತ್ತೀಚೆಗೆ ಒಳಪಡಿಸಿದೆ. ಕ್ರ್ಯಾಶ್ ಟೆಸ್ಟ್‌ನಲ್ಲಿ ನ್ಯೂ ಜನರೇಷನ್ ಹೋಂಡಾ ಸಿವಿಕ್ ಸೆಡಾನ್ ಕಾರು 5-ಸ್ಟಾರ್ ಸುರಕ್ಷತಾ ರೇಟಿಂಗ್‌ ಅನ್ನು ಪಡೆದುಕೊಂಡಿದೆ.

Hyundai Creta ಪ್ರತಿಸ್ಪರ್ಧಿಯಾಗಿ ಬರಲಿರುವ Honda SUV RS ಕಾನ್ಸೆಪ್ಟ್ ಅನಾವರಣ

ಹೊಸ ಹೋಂಡಾ ಎಸ್‍ಯುವಿ ಆರ್‌ಎಸ್ ಕಾನ್ಸೆಪ್ಟ್ ಮಾದರಿಯು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಈ ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿರುವ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಆದರೆ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿಗಳು ಖಚಿತವಾಗಿಲ್ಲ.

Most Read Articles

Kannada
Read more on ಹೋಂಡಾ honda
English summary
Honda cars unveiled new suv rs concept in indonesia details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X