ಭಾರತದಲ್ಲಿ ಎಲಿವೇಟ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಹೋಂಡಾ
ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ಇತ್ತೀಚೆಗೆ ಭಾರತದಲ್ಲಿ ಎಲಿವೇಟ್ ಎಂಬ ಹೆಸರಿಗಾಗಿ ಟ್ರೇಡ್‌ಮಾರ್ಕ್ ನೋಂದಾಯಿಸಿದೆ. ಭಾರತೀಯ ಮಾರುಕಟ್ಟೆಯ ಬಿಡುಗಡೆಯಾಗಲಿರುವ ಹೊಸ ಹೋಂಡಾ 7-ಸೀಟರ್ ಎಸ್‍ಯುವಿಗೆ ಎಲಿವೇಟ್ ಎಂಬ ಹೆಸರನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಹೋಂಡಾ 7-ಸೀಟರ್ ಎಸ್‍ಯುವಿಯು ಸ್ಥಗಿತಗೊಂಡಿರುವ ಬಿಆರ್-ವಿ ಮಾದರಿಯ ಉತ್ತರಾಧಿಕಾರಿಯಾಗಲಿದೆ. ಹೊಸ ಹೋಂಡಾ 7-ಸೀಟರ್ ಎಸ್‍ಯುವಿಯು ಎನ್7 ಎಕ್ಸ್ ಕಾನ್ಸೆಪ್ಟ್ ಮಾದರಿಯನ್ನು ಆಧರಿಸಿರಬಹುದು. ಕೆಲವು ವಾರಗಳ ಹಿಂದೆ ಹೋಂಡಾ ಕಂಪನಿಯು ಇಂಡೋನೇಷ್ಯಾದಲ್ಲಿ ಹೊಸ ಎನ್7ಎಕ್ಸ್ ಕಾನ್ಸೆಪ್ಟ್ ಎಸ್‍ಯುವಿಯವಿಯನ್ನು ಅನಾವರಣಗೊಳಿಸಿತು.

ಹೊಸ ಹೋಂಡಾ ಎನ್7ಎಕ್ಸ್ ಮಾದರಿಯು 7-ಸೀಟರ್ ಎಸ್‍ಯುವಿಯಾಗಿದೆ. ಈ ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಟೊಯೊಟಾ ರಶ್ ಮತ್ತು ಮಿತ್ಸುಬಿಷಿ ಎಕ್ಸ್‌ಪಾಂಡರ್ ಕ್ರಾಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಎನ್7ಎಕ್ಸ್ ಕಾನ್ಸೆಪ್ಟ್ ಮಾದರಿಯು ಪರಿಚಿತ ಹೋಂಡಾ ವಿನ್ಯಾಸದೊಂದಿಗೆ ಬರುತ್ತದೆ,

ಇದೇ ರೀತಿಯ ವಿನ್ಯಾಸವನ್ನು ಹೊಸ ಸಿಟಿ, ಹೊಸ ಹೆಚ್ಆರ್-ವಿ ಮತ್ತು ದೊಡ್ಡ ಸಿಆರ್-ವಿ ಎಸ್‌ಯುವಿ ಸೇರಿದಂತೆ ಇತ್ತೀಚಿನ ಹೋಂಡಾ ಕಾರುಗಳಲ್ಲಿ ನಾವು ಈಗಾಗಲೇ ನೋಡಿದ್ದೇವೆ. ಹೊಸ ಹೋಂಡಾ ಎನ್7ಎಕ್ಸ್ ಕಾನ್ಸೆಪ್ಟ್ ಮುಂಭಾಗ ಕ್ಲಾಮ್‌ಶೆಲ್ ಬಾನೆಟ್ ಹೊಂದಿದೆ.

ಇನ್ನು ಮಲ್ಟಿ-ಸ್ಲ್ಯಾಟ್ ಕ್ರೋಮ್ ಲಾಡೆನ್ ಗ್ರಿಲ್ ಮತ್ತು ಸ್ಲಿಮ್ ಆಗಿರುವ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಹೆಡ್‌ಲ್ಯಾಂಪ್ ವಿನ್ಯಾಸವು ಹೊಸ ಸಿಟಿ ಸೆಡಾನ್‌ನಿಂದ ಸ್ಫೂರ್ತಿ ಪಡೆದಿದೆ. ಗ್ರಿಲ್ ಮಧ್ಯದಲ್ಲಿ ದೊಡ್ಡ ಪ್ರಮುಖ ಹೋಂಡಾ ಬ್ಯಾಡ್ಜ್ ಅನ್ನು ಇರಿಸಲಾಗಿದೆ.

ಇದರೊಂದಿಗೆ ಡ್ಯುಯಲ್-ಎಲ್ಇಡಿ ಡಿಆರ್ಎಲ್ ಸೆಟಪ್ ಇದೆ, ಒಂದು ಎಲ್ಇಡಿ ಡಿಆರ್ಎಲ್ ಅನ್ನು ಹೆಡ್ ಲ್ಯಾಂಪ್ ಮೇಲೆ ಮತ್ತು ಇನ್ನೊಂದನ್ನು ಬಂಪರ್ ಮೇಲೆ ಇರಿಸಲಾಗಿದೆ. ಕೆಳಗಿನ ಬಂಪರ್ ವಿಶಾಲವಾದ ವೈಡ್ ಏರ್ ಡ್ಯಾಮ್ ಅನ್ನು ಹೊಂದಿದೆ. ಹೊಸ ಹೋಂಡಾ ಎನ್7ಎಕ್ಸ್ ಕಾನ್ಸೆಪ್ಟ್‌ನ ಸೈಡ್ ಪ್ರೊಫೈಲ್ ನಲ್ಲಿ ಬೆಟ್ ಲೈನ್ ಬೆಲ್ಟ್‌ಲೈನ್ ಅನ್ನು ಒಳಗೊಂಡಿದೆ.

ಈ ಎಸ್‍ಯುವಿಯಲ್ಲಿ ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲಾಡಿಂಗ್‌ನೊಂದಿಗೆ ರೌಂಡ್ ವ್ಹೀಲ್ ಅರ್ಚಾರ್ ಅನ್ನು ಪಡೆಯುತ್ತದೆ. ಈ ಎಸ್‍ಯುವಿ ಸಿಟಿ ಸೆಡಾನ್‌ನಲ್ಲಿ ನೀಡಲಾಗುವಂತೆಯೇ ಸಿಗ್ನೇಚರ್ ಎಲ್‌ಇಡಿ ಅಂಶಗಳೊಂದಿಗಿನ ಟೈಲ್ ಲ್ಯಾಂಪ್ ಅನ್ನು ಪಡೆಯುತ್ತದೆ.

ಹೋಂಡಾ ಎಸ್‍ಯುವಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 121 ಬಿಹೆಚ್‌ಪಿ ಮತ್ತು 145 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗುತ್ತದೆ.

ಇದರೊಂದಿಗೆ ಈ ಎಸ್‍ಯುವಿಯಲ್ಲಿ ಹೊಸ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಕೂಡ ನೀಡಬಹುದು, ಈ ಎಂಜಿನ್ 121 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-6 ಮಾಲಿನ್ಯ ನಿಯಮ ಜಾರಿಗೆ ಬರುವ ಮುನ್ನವೇ ಬಿಆರ್-ವಿ ಅನ್ನು ಕಳೆದ ವರ್ಷ ಸ್ಥಗಿತಗೊಳಿಸಲಾಯಿತು. ಇದರ ಜಾಗದಲ್ಲಿ ಯಾವುದೇ ಹೊಸ ಮಾದರಿಯನ್ನು ಪರಿಚಯಿಸಿಲ್ಲ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ 7-ಸೀಟರ್ ಎಸ್‍ಯುವಿಗಳಿಗೆ ಹೆಚ್ಚಿನ ಬೇಡಿಕೆಯನ್ನು ಇರುವುದರಿಂದ, ಹೊಸ 7-ಸೀಟರ್ ಎಸ್‍ಯುವಿಯನ್ನು ಎಲಿವೇಟ್ ಹೆಸರಿನಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications