ಕರೋನಾ ವೈರಸ್ ತಡೆಗೆ ಹೊಸ ಏರ್ ಫಿಲ್ಟರ್ ಪರಿಚಯಿಸಿದ ಹೋಂಡಾ ಮೋಟಾರ್

ಕಳೆದ ಒಂದು ವರ್ಷದಿಂದ ಕರೋನಾ ವೈರಸ್ ಕಾರಣದಿಂದಾಗಿ ಇಡೀ ಜಗತ್ತು ತತ್ತರಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಕರೋನಾ ವೈರಸ್ ಇನ್ನು ಸುಮಾರು ಒಂದು ವರ್ಷಗಳವರೆಗೆ ಇರಲಿದೆ ಎಂದು ಘೋಷಿಸಿದೆ.

ಕರೋನಾ ವೈರಸ್ ತಡೆಗೆ ಹೊಸ ಏರ್ ಫಿಲ್ಟರ್ ಪರಿಚಯಿಸಿದ ಹೋಂಡಾ ಮೋಟಾರ್

ವಿಶ್ವದ ಹಲವು ದೇಶಗಳಲ್ಲಿ ಕರೋನಾ ವೈರಸ್ ಲಸಿಕೆ ನೀಡುತ್ತಿದ್ದರೂ ಕರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕರೋನಾ ವೈರಸ್ ತಡೆಗೆ ಹೊಸ ಏರ್ ಫಿಲ್ಟರ್ ಪರಿಚಯಿಸಿದ ಹೋಂಡಾ ಮೋಟಾರ್

ಕರೋನಾ ವೈರಸ್ ಹರಡುವುದನ್ನು ತಡೆಯಲು ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹಲವು ವಾಹನ ತಯಾರಕ ಕಂಪನಿಗಳು ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕರೋನಾ ವೈರಸ್ ತಡೆಗೆ ಹೊಸ ಏರ್ ಫಿಲ್ಟರ್ ಪರಿಚಯಿಸಿದ ಹೋಂಡಾ ಮೋಟಾರ್

ಹೋಂಡಾ ಮೋಟಾರ್ ಯುರೋಪ್ ಕೂಡ ಇದೇ ರೀತಿಯ ಹೆಜ್ಜೆ ಇಟ್ಟಿದೆ. ಇತ್ತೀಚಿನ ಮಾಹಿತಿಗಳ ಪ್ರಕಾರ, ಪ್ರಯಾಣಿಕರ ಸುರಕ್ಷತೆಗಾಗಿ ಹೋಂಡಾ ಮೋಟಾರ್ ಯುರೋಪ್ ಹೆಚ್ಚಿನ ಸಾಮರ್ಥ್ಯದ ಹೊಸ ಕ್ಯಾಬಿನ್ ಏರ್ ಫಿಲ್ಟರ್ ಅನ್ನು ಪರಿಚಯಿಸಿದೆ.

ಕರೋನಾ ವೈರಸ್ ತಡೆಗೆ ಹೊಸ ಏರ್ ಫಿಲ್ಟರ್ ಪರಿಚಯಿಸಿದ ಹೋಂಡಾ ಮೋಟಾರ್

ಹೋಂಡಾ ಮೋಟಾರ್ ಯುರೋಪ್ ಪರಿಚಯಿಸಿದ ಈ ಹೊಸ ಏರ್ ಫಿಲ್ಟರ್ ಮೊದಲ ಎರಡು ಮೈಕ್ರೋಫೈಬರ್‌ಗಳ ಜೊತೆಗೆ ನಾಲ್ಕು ಲೇಯರ್'ಗಳ ಮೆಟಿರಿಯಲ್ ಅನ್ನು ಹೊಂದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕರೋನಾ ವೈರಸ್ ತಡೆಗೆ ಹೊಸ ಏರ್ ಫಿಲ್ಟರ್ ಪರಿಚಯಿಸಿದ ಹೋಂಡಾ ಮೋಟಾರ್

ಇವುಗಳು ಧೂಳು ಹಾಗೂ ಇನ್ನಿತರ ಕಣಗಳನ್ನು ಕಾರಿನ ಕ್ಯಾಬಿನ್‌ನೊಳಗೆ ಪ್ರವೇಶಿಸುವುದನ್ನು ತಡೆಯುತ್ತವೆ. ಮೂರನೆಯ ಲೇಯರ್ ಆಕ್ಟಿವ್ ಚಾರ್ ಕೋಲ್ ಫಿಲ್ಟರ್‌ನ ಪದರವಾಗಿದ್ದು, ಹೆಚ್ಚುವರಿ ರಕ್ಷಣೆ ನೀಡುತ್ತದೆ.

ಕರೋನಾ ವೈರಸ್ ತಡೆಗೆ ಹೊಸ ಏರ್ ಫಿಲ್ಟರ್ ಪರಿಚಯಿಸಿದ ಹೋಂಡಾ ಮೋಟಾರ್

ಇನ್ನು ಕೊನೆಯ ಫಿಲ್ಟರ್ ಹಣ್ಣಿನ ಸಾರಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಕಂಪನಿಯ ಪ್ರಕಾರ ಈ ಫಿಲ್ಟರ್ ವೈರಸ್ ಕಣಗಳನ್ನು ಬಲೆಗೆ ಬೀಳಿಸುವ ಸಾಮರ್ಥ್ಯವನ್ನು ಹೊಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕರೋನಾ ವೈರಸ್ ತಡೆಗೆ ಹೊಸ ಏರ್ ಫಿಲ್ಟರ್ ಪರಿಚಯಿಸಿದ ಹೋಂಡಾ ಮೋಟಾರ್

ಕಳೆದ ಹಲವಾರು ತಿಂಗಳುಗಳಿಂದ ಕರೋನಾ ವೈರಸ್ ಅನ್ನು ಅರ್ಥಮಾಡಿಕೊಂಡ ನಂತರ ಈ ಫಿಲ್ಟರ್‌ ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ ಎಂದು ಹೋಂಡಾ ಕಂಪನಿ ಹೇಳಿದೆ.

ಕರೋನಾ ವೈರಸ್ ತಡೆಗೆ ಹೊಸ ಏರ್ ಫಿಲ್ಟರ್ ಪರಿಚಯಿಸಿದ ಹೋಂಡಾ ಮೋಟಾರ್

ಹೋಂಡಾ ಮೋಟಾರ್ ಯುರೋಪಿನ ಅಧ್ಯಕ್ಷ ಎಚಿ ಹಿನೋ ಮಾತನಾಡಿ, ಕೋವಿಡ್ -19 ವಿರುದ್ಧ ಜನರು ಹೆಚ್ಚು ಜಾಗೃತರಾಗಿರುವುದರಿಂದ ರಕ್ಷಣಾತ್ಮಕ ಅಂಶಗಳಿಗೆ ಹೆಚ್ಚು ಬೇಡಿಕೆ ಉಂಟಾಗಿದೆ ಎಂದು ಹೇಳಿದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕರೋನಾ ವೈರಸ್ ತಡೆಗೆ ಹೊಸ ಏರ್ ಫಿಲ್ಟರ್ ಪರಿಚಯಿಸಿದ ಹೋಂಡಾ ಮೋಟಾರ್

ಕಂಪನಿಯಿಂದ ಲಭ್ಯವಾದ ಮಾಹಿತಿಗಳ ಪ್ರಕಾರ, ಯುರೋಪಿಯನ್ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಎಲ್ಲಾ ಹೊಸ ಹೋಂಡಾ ಕಾರುಗಳಿಗೆ ಈ ಫಿಲ್ಟರ್ ಅನ್ವಯಿಸಲಿದೆ. ವಿಶ್ವದ ಇತರ ದೇಶಗಳಿಗೆ ಇದನ್ನು ಯಾವಾಗ ಸಾಗಿಸಲಾಗುತ್ತದೆ ಹಾಗೂ ಬಳಸಲಾಗುತ್ತದೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.

ಕರೋನಾ ವೈರಸ್ ತಡೆಗೆ ಹೊಸ ಏರ್ ಫಿಲ್ಟರ್ ಪರಿಚಯಿಸಿದ ಹೋಂಡಾ ಮೋಟಾರ್

ಕಾರು ತಯಾರಕ ಕಂಪನಿಗಳು ತಮ್ಮ ವಾಹನಗಳಲ್ಲಿ ಕೋವಿಡ್ -19 ವಿರುದ್ಧ ಹೋರಾಡುವ ತಂತ್ರಜ್ಞಾನವನ್ನು ಬಳಸುತ್ತಿರುವುದು ಇದೇ ಮೊದಲಲ್ಲ. 2020ರ ಮಾರ್ಚ್ ತಿಂಗಳಿನಲ್ಲಿ ವೋಲ್ವೋ ಹಾಗೂ ಲೋಟಸ್‌ನ ಮೂಲ ಕಂಪನಿಯಾದ ಗೀಲಿ ಕಂಪನಿಯು ತನ್ನ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಫಿಲ್ಟರ್ ಅನ್ನು ಬಳಸಿರುವುದಾಗಿ ಹೇಳಿಕೊಂಡಿತ್ತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕರೋನಾ ವೈರಸ್ ತಡೆಗೆ ಹೊಸ ಏರ್ ಫಿಲ್ಟರ್ ಪರಿಚಯಿಸಿದ ಹೋಂಡಾ ಮೋಟಾರ್

ಗೀಲಿ ಕಂಪನಿಯು ತನ್ನ ಹೊಸ ಎಸ್‌ಯುವಿಯನ್ನು ಐಕಾನ್ ಹೆಸರಿನಲ್ಲಿ ಬಿಡುಗಡೆಗೊಳಿಸಿದೆ. ಈ ಎಸ್‌ಯುವಿಯು ಸುಧಾರಿತ ಫಿಲ್ಟರಿಂಗ್ ಸಿಸ್ಟಂ ಹೊಂದಿದ್ದು, ವೈರಸ್ ವಿರುದ್ಧ ಹೋರಾಡಲು ನೆರವಾಗುತ್ತದೆ.

ಕರೋನಾ ವೈರಸ್ ತಡೆಗೆ ಹೊಸ ಏರ್ ಫಿಲ್ಟರ್ ಪರಿಚಯಿಸಿದ ಹೋಂಡಾ ಮೋಟಾರ್

ಮರ್ಸಿಡಿಸ್ ಹಾಗೂ ಟೆಸ್ಲಾದಂತಹ ಕಂಪನಿಗಳು ತಮ್ಮ ಕೆಲವು ಕಾರುಗಳಲ್ಲಿ ಹೆಚ್‌ಇಪಿಎ ಸಿಸ್ಟಂ ಅನ್ನು ಆಪ್ಶನಲ್ ಆಗಿ ನೀಡುವುದಾಗಿ ತಿಳಿಸಿವೆ.

Most Read Articles

Kannada
Read more on ಹೋಂಡಾ honda
English summary
Honda Motor Europe introduces cabin air filter to fight against coronavirus. Read in Kannada.
Story first published: Friday, March 12, 2021, 19:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X