ಸೂರ್ಯನ ಬೆಳಕಿನಿಂದ ಚಲಿಸುವ ವಿಶ್ವದ ಮೊದಲ ಎಸ್‌ಯುವಿಯಿದು
ಹಂಬಲ್ ಮೋಟಾರ್ಸ್ ಅಮೆರಿಕಾ ಮೂಲದ ಸ್ಟಾರ್ಟ್ ಅಪ್ ವಾಹನ ತಯಾರಕ ಕಂಪನಿಯಾಗಿದೆ. ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವ ಈ ಕಂಪನಿಯು ಸೂರ್ಯನ ಬೆಳಕಿನಿಂದ ಚಲಿಸುವ ಎಸ್‌ಯುವಿಯನ್ನು ಅಭಿವೃದ್ಧಿಪಡಿಸಿದೆ.

ಅಮೆರಿಕಾ ಮೂಲದ ಟೆಸ್ಲಾ, ಲುಸಿಡ್, ಫ್ಯಾರಡೆ ಫ್ಯೂಚರ್ ಹಾಗೂ ಫಿಸ್ಕರ್ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಯುಂಟು ಮಾಡುತ್ತಿವೆ. ಹಂಬಲ್ ಮೋಟಾರ್ಸ್ ಈ ಸರಣಿಗೆ ಹೊಸ ಸೇರ್ಪಡೆಯಾಗಿದೆ.

ಕಂಪನಿಯು ಸೂರ್ಯನ ಬೆಳಕಿನಿಂದ ಚಲಿಸುವ ಎಸ್‌ಯುವಿಯನ್ನು ಅಭಿವೃದ್ಧಿಪಡಿಸಿರುವ ಕಾರಣಕ್ಕೆ ಇತರ ಕಂಪನಿಗಳ ವಾಹನಗಳನ್ನು ಹಿಂದಿಕ್ಕಬಲ್ಲದು. ಈ ಎಸ್‌ಯುವಿಯಲ್ಲಿ ಸೂರ್ಯನ ಬೆಳಕನ್ನು ನೇರವಾಗಿ ಸ್ವೀಕರಿಸಲು ರೂಫ್ ಮೇಲೆ ಸೋಲಾರ್ ಪ್ಯಾನೆಲ್'ಗಳನ್ನು ಅಳವಡಿಸಲಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಪ್ಯಾನೆಲ್ ಮೂಲಕ ಸೂರ್ಯನ ಬೆಳಕನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸಿ, ಅಗತ್ಯವಿರುವ ವಿದ್ಯುತ್ ಆಗಿ ಬಳಸುವಂತೆ ಈ ಕಾರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಈ ಸಾಮರ್ಥ್ಯವನ್ನು ಪಡೆದ ವಿಶ್ವದ ಮೊದಲ ಎಸ್‌ಯುವಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ಕಂಪನಿಯು ಈ ಎಸ್‌ಯುವಿಗೆ ಹಂಬಲ್ ಒನ್ ಎಂದು ಹೆಸರಿಟ್ಟಿದೆ. ಈ ಎಸ್‌ಯುವಿಯ ರೂಫ್ ಮೇಲೆ 80 ಚದರ ಅಡಿ ಸೋಲಾರ್ ಪ್ಯಾನೆಲ್'ಗಳನ್ನು ಸ್ಥಾಪಿಸಲಾಗಿದೆ. ಇವುಗಳು ಫೋಟೋ ವೋಲ್ಟಿಕ್ ಸೋಲಾರ್ ಪ್ಯಾನೆಲ್'ಗಳು ಎಂಬುದು ವಿಶೇಷ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಪ್ಯಾನೆಲ್'ಗಳಲ್ಲಿ ಚಾರ್ಜ್ ಮಾಡಿದರೆ ದಿನಕ್ಕೆ 96 ಕಿ.ಮೀಗಳವರೆಗೆ ಪ್ರಯಾಣಿಸಬಹುದಾದಷ್ಟು ವಿದ್ಯುತ್ ಪಡೆಯಬಹುದು. ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಕ್ರಾಂತಿಯುಂಟುಮಾಡಲು ಈ ಹೊಸ ಫೀಚರ್ ಹೊಂದಿರುವ ಕಾರ್ ಅನ್ನು ಪರಿಚಯಿಸಲಾಗುತ್ತಿದೆ.

ವಿದ್ಯುತ್ ಸಂಗ್ರಹಿಸಲು ಈ ಎಸ್‌ಯುವಿಯಲ್ಲಿ ಯಾವ ರೀತಿಯ ಬ್ಯಾಟರಿಗಳನ್ನು ಬಳಸಲಾಗುತ್ತದೆ ಎಂಬುದರ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಹಂಬಲ್ ಕಂಪನಿಯು 2024ರಲ್ಲಿ ಸೋಲಾರ್ ಪ್ಯಾನಲ್ ಹೊಂದಿರುವ ಕಾರನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಅದೇ ವರ್ಷ ಕಾರಿನ ವಿತರಣೆಯನ್ನು ನೀಡಲಾಗುವುದು. ಇದರಿಂದಾಗಿ ಜನರು ಸೂರ್ಯನ ಬೆಳಕಿನಿಂದ ಚಲಿಸುವ ಈ ಎಸ್‌ಯುವಿಯಲ್ಲಿ ಪ್ರಯಾಣಿಸಲು ಇನ್ನೂ ಮೂರು ವರ್ಷ ಕಾಯುವುದು ಅನಿವಾರ್ಯ.

ಹಂಬಲ್ ಒನ್ ಸೋಲಾರ್ ಪ್ಯಾನಲ್ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ 1,09,000 ಅಮೆರಿಕನ್ ಡಾಲರ್'ಗಳಾಗ ಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.80.2 ಲಕ್ಷಗಳಾಗಲಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹಂಬಲ್ ಒನ್ ನೂರಕ್ಕೆ ನೂರರಷ್ಟು ಪರಿಸರ ಸ್ನೇಹಿಯಾಗಿರಲಿದೆ. ಅಮೇರಿಕಾದಲ್ಲಿ ಈಗಾಗಲೇ ಈ ಎಸ್‌ಯುವಿಯ ಬುಕ್ಕಿಂಗ್'ಗಳನ್ನು ಆರಂಭಿಸಲಾಗಿದೆ. ಬೆರಗುಗೊಳಿಸುವ ಫೀಚರ್'ಗಳನ್ನು ಹೊಂದಿರುವ ಕಾರಣಕ್ಕೆ ಈ ಎಸ್‌ಯುವಿಯು ಹೆಚ್ಚು ಬುಕ್ಕಿಂಗ್'ಗಳನ್ನು ಪಡೆಯುತ್ತಿದೆ.

ನಾಲ್ಕು ಸೀಟುಗಳನ್ನು ಹೊಂದಿರುವ ಈ ಎಸ್‌ಯುವಿಯು ಮನಮೋಹಕ ಶೈಲಿ, ಹೊಸ ತಂತ್ರಜ್ಞಾನ, ಹೆಚ್ಚು ಆಕ್ಷನ್-ಪ್ಯಾಕ್ಡ್ ಬಾರ್ ಕ್ಲಬ್ ಸೌಲಭ್ಯಗಳಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯ ಒಟ್ಟು ತೂಕ 1,800 ಕೆ.ಜಿಗಳಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹಲವು ಫೀಚರ್'ಗಳನ್ನು ಹೊಂದಿರುವ ಈ ಎಸ್‌ಯುವಿಯು ಅಮೇರಿಕಾದಲ್ಲಿ ಬಿಡುಗಡೆಯಾಗುವುದು ಖಚಿತ. ಆದರೆ ಭಾರತದಲ್ಲಿ ಈ ಎಸ್‌ಯುವಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications