ಅಲ್ಕಾಜರ್ 7 ಸೀಟರ್ ಎಸ್‌ಯುವಿ ಕಾರಿನ ಪರ್ಫಾಮೆನ್ಸ್ ವಿಡಿಯೋ ಬಿಡುಗಡೆ ಮಾಡಿದ ಹ್ಯುಂಡೈ
ಹ್ಯುಂಡೈ ಇಂಡಿಯಾ ಕಂಪನಿಯು ಇದೇ ತಿಂಗಳು 6ರಂದು ತನ್ನ ಬಹುನೀರಿಕ್ಷಿತ ಅಲ್ಕಾಜರ್ ಎಸ್‌ಯುವಿ ಕಾರು ಮಾದರಿಯನ್ನು ಅನಾರವಣಗೊಳಿಸುವ ಸಿದ್ದತೆಯಲ್ಲಿದ್ದು, ಹೊಸ ಕಾರು ಅನಾವರಣಕ್ಕೂ ಮುನ್ನ ಅಲ್ಕಾಜರ್ ಎಸ್‌ಯುವಿ ಪರ್ಫಾಮೆನ್ಸ್ ವಿಡಿಯೋ ಬಿಡುಗಡೆ ಮಾಡಿದೆ.

ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಆಧರಿಸಿ ಉತ್ಪಾದನೆಗೊಂಡಿರುವ ಹೊಸ ಅಲ್ಕಾಜರ್ ಕಾರು ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾದರಿಗಳಲ್ಲೇ ಅತ್ಯುತ್ತಮ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಸೌಲಭ್ಯಗಳೊಂದಿಗೆ 6 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಬಿಡುಗಡೆಯಾಗುತ್ತಿದೆ.

ಹೊಸ ಅಲ್ಕಾಜರ್ ಕಾರು ಹ್ಯುಂಡೈ ಹೈ ಎಂಡ್ ಮಾದರಿಗಳಾದ ಎಲಾಂಟ್ರಾ ಮತ್ತು ಟ್ಯುಸಾನ್‌ನಲ್ಲಿ ಅಳವಡಿಸಲಾಗುತ್ತಿರುವ 2.0-ಲೀಟರ್ ಪೆಟ್ರೋಲ್ ಮತ್ತು 1.4-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಯಲ್ಲಿದೆ.

ಅಲ್ಕಾಜರ್ ಕಾರಿನಲ್ಲಿ ಹ್ಯುಂಡೈ ಕಂಪನಿಯು ಡೀಸೆಲ್ ಎಂಜಿನ್ ಬಿಡುಗಡೆ ಮಾಡುವ ಬಗ್ಗೆ ಯಾವುದೇ ನಿಖರ ಮಾಹಿತಿಗಳು ಲಭ್ಯವಿಲ್ಲವಾದರೂ ಗ್ರಾಹಕರ ಬೇಡಿಕೆಯೆಂತೆ ಬಿಡುಗೆಡೆ ಮಾಡುವ ಸಾಧ್ಯತೆಗಳಿದ್ದು, ಹೊಸ ಕಾರು ಪೆಟ್ರೋಲ್ ಮಾದರಿಯೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಖಾತ್ರಿಪಡಿಸುವ ಹೊಸ ವಿಡಿಯೋ ಬಿಡುಗಡೆ ಮಾಡಲಾಗಿದೆ.
ನಾಳೆ ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣದೊಂದಿಗೆ ಹೊಸ ಕಾರಿನ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲಿರುವ ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ಅಲ್ಕಾಜರ್ ಮಾರಾಟಕ್ಕೆ ಚಾಲನೆ ನೀಡಲಿದ್ದು, ಹೊಸ ಕಾರು ಕ್ರೆಟಾ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಖರೀದಿಗೆ ಲಭ್ಯವಾಗಲಿದೆ.

ವಿಸ್ತರಿತ ಕ್ಯಾಬಿನ್ ಮೂಲಕ ಮೂರು ಸಾಲಿನ ಆಸನಗಳೊಂದಿಗೆ 7 ಸೀಟರ್ ಸೌಲಭ್ಯವನ್ನು ಅಚ್ಚುಕಟ್ಟಾಗಿ ಜೋಡಣೆ ಮಾಡಲಾಗಿದ್ದು, ಹೊಸ ಕಾರಿನ ಹೈ ಎಂಡ್ 6 ಸೀಟರ್ ಮಾದರಿಯಲ್ಲಿ ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ನೊಂದಿಗೆ ಆರ್ಮ್ ರೆಸ್ಟ್, ಕಪ್ ಹೋಲ್ಡರ್ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳನ್ನು ನೀಡಲಾಗಿದೆ.

ಹಿಂಬದಿಯ ಸವಾರರಿಗೂ ಹೆಡ್‌ರೆಸ್ಟ್, ಸೈಡ್ ಬಾಟಲ್ ಹೋಲ್ಡರ್ ಸೌಲಭ್ಯಗಳಿದ್ದು, 6 ಸೀಟರ್ ಮಾದರಿಯು 2+2+2 ಮತ್ತು 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯವನ್ನು ಹೊಂದಿರಲಿದೆ.

ಹೊಸ ಅಲ್ಕಾಜರ್ ಕಾರು ಟಾಟಾ ನ್ಯೂ ಜನರೇಷನ್ ಸಫಾರಿ, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಎಂಜಿ ಹೆಕ್ಟರ್ ಪ್ಲಸ್ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಸ್ಟ್ಯಾಂಡರ್ಡ್ ಕ್ರೆಟಾ ಕಾರು ಮಾದರಿಗಿಂತ ರೂ. 1.50 ಲಕ್ಷದಿಂದ ರೂ. 2 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದೆ.

ಅಲ್ಕಾಜರ್ ಕಾರು ಕ್ರೆಟಾ 5 ಸೀಟರ್ ಕಾರು ಮಾದರಿಗಿಂತಲೂ ತುಸು ಪ್ರೀಮಿಯಂ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಇತ್ತೀಚೆಗೆ ಪ್ರಮುಖ ಕಾರು ಕಂಪನಿಯು 5 ಸೀಟರ್ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲಿ 5 ಸೀಟರ್ ಜೊತೆಗೆ 7 ಸೀಟರ್ ಮಾದರಿಯನ್ನು ಪರಿಚಯಿಸುತ್ತಿರುವ ಅಲ್ಕಾಜರ್ ಬಿಡುಗಡೆಗೆ ಪ್ರಮುಖ ಕಾರಣವಾಗಿದೆ.

ಈ ಮೂಲಕ ಎಂಪಿವಿ ಮಾದರಿಯಲ್ಲಿ ಸದ್ಯ ಜನಪ್ರಿಯವಾಗಿರುವ ಇನೋವಾ ಕ್ರಿಸ್ಟಾ ಗ್ರಾಹಕರನ್ನು ಸಹ ಸೆಳೆಯಲು ಯತ್ನಿಸುತ್ತಿರುವ ಹ್ಯುಂಡೈ ಕಂಪನಿಯು ಬೃಹತ್ ಯೋಜನೆ ರೂಪಿಸಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ.


Click it and Unblock the Notifications








