ಆರಂಭದಲ್ಲೇ ಭರ್ಜರಿ ಬೇಡಿಕೆ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ

ಹ್ಯುಂಡೈ ಕಂಪನಿಯು ತನ್ನ ಬಹುನೀರಿಕ್ಷಿತ ಅಲ್ಕಾಜರ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಬಿಡುಗಡೆ ಆರಂಭದಲ್ಲೇ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ಮೂಲಕ ಮಧ್ಯಮ ಕ್ರಮಾಂಕದ ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಆರಂಭದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ

ಅಲ್ಕಾಜರ್ ಕಾರು 6 ಸೀಟರ್ ಮತ್ತು 7 ಸೀಟರ್ ಆಸನ ಸೌಲಭ್ಯದೊಂದಿಗೆ ಪ್ಲ್ಯಾಟಿನಂ, ಪ್ರೆಸ್ಟೀಜ್, ಸಿಗ್ನೆಚೆರ್, ಪ್ಲ್ಯಾಟಿನಂ ಆಪ್ಷನ್, ಪ್ರೆಸ್ಟೀಜ್ ಆಪ್ಷನ್ ಮತ್ತು ಸಿಗ್ನೆಚೆರ್ ಆಪ್ಷನ್ ಎನ್ನುವ ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.16.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.99 ಲಕ್ಷ ಬೆಲೆ ಹೊಂದಿರುವ ಹೊಸ ಕಾರು ಖರೀದಿಗಾಗಿ ಈಗಾಗಲೇ ಸುಮಾರು 4 ಸಾವಿರ ಗ್ರಾಹಕರು ರೂ.25 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ದಾಖಲಿಸಿದ್ದಾರೆ.

ಆರಂಭದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ

ಹ್ಯುಂಡೈ ಕಂಪನಿಯು ಜುಲೈ ಮೊದಲ ವಾರದಿಂದ ಹೊಸ ಕಾರಿನ ವಿತರಣೆ ಆರಂಭಿಸುವ ಸಿದ್ದತೆಯಲ್ಲಿದ್ದು, ಬುಕ್ಕಿಂಗ್ ಆಧರಿಸಿ ಹೊಸ ಕಾರಿನ ವಿತರಣೆಗೆ ಕನಿಷ್ಠ 4 ವಾರಗಳಿಂದ 6 ವಾರಗಳ ಕಾಲ ಕಾಯುವಿಕೆ ಅವಧಿ ನಿಗದಿಪಡಿಸಲಾಗಿದೆ.

ಆರಂಭದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ

ಹೊಸ ಅಲ್ಕಾಜರ್ ಕಾರು ಅತ್ಯುತ್ತಮ ಫೀಚರ್ಸ್‌, ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಟಾಟಾ ಸಫಾರಿ ಮತ್ತು ಎಂಜಿ ಹೆಕ್ಟರ್ ಪ್ಲಸ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದೆ.

ಆರಂಭದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ

2.0-ಲೀಟರ್ ಎಂಪಿಐ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಮಾದರಿಗಳು ಉತ್ತಮ ಇಂಧನ ದಕ್ಷತೆಯೊಂದಿಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ಕಂಫರ್ಟ್, ಇಕೋ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳೊಂದಿಗೆ ಪೆಟ್ರೋಲ್ ಮಾದರಿಯು 159-ಬಿಎಚ್‌ಪಿ ಉತ್ಪಾದಿಸಿದ್ದಲ್ಲಿ ಡೀಸೆಲ್ ಮಾದರಿಯು 115-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ಆರಂಭದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ

ಅಲ್ಕಾಜರ್ ಕಾರಿನ 6 ಸೀಟರ್ ಮಾದರಿಯು 2+2+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯವನ್ನು ಹೊಂದಿದ್ದು, ಹೊಸ ಕಾರು 4,500 ಎಂಎಂ ಉದ್ದ, 1,790 ಎಂಎಂ ಅಗಲ, 1,675 ಎಂಎಂ ಎತ್ತರ ಮತ್ತು 2,760 ಎಂಎಂ ವೀಲ್ಹ್‌ಬೆಸ್ ಪಡೆದುಕೊಂಡಿದೆ.

ಆರಂಭದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ

ಹೊಸ ಕಾರಿನಲ್ಲಿ ಸ್ಪ್ಲಿಟ್-ಶೈಲಿಯ ಎಲ್ಇಡಿ ಹೆಡ್‌ಲ್ಯಾಂಪ್‌, 3ಡಿ ಹನಿಕೊಂಬ್ ಗ್ರಿಲ್, ಹೊಸ ವಿನ್ಯಾಸದ ಬಂಪರ್ ವಿನ್ಯಾಸ, ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್, ವಿವಿಧ ಮಾದರಿಗಳಿಗೆ ಅನುಗುಣವಾಗಿ 17 ಮತ್ತು 18-ಇಂಚಿನ ಅಲಾಯ್ ವೀಲ್ಹ್, ರೂಫ್ ರೈಲ್ಸ್, ಫ್ಲಕ್ಸ್ ಸ್ಕಫ್ ಪ್ಲೇಟ್, ಶಾರ್ಕ್ ಫಿನ್ ಅಂಟೆನಾ, ಬಾಡಿ ಕ್ಲ್ಯಾಡಿಂಗ್ ಹೊಂದಿದೆ.

ಆರಂಭದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ

ಅಲ್ಕಾಜರ್ ಕಾರಿನ ಕ್ಯಾಬಿನ್ ಕೂಡಾ ಆಕರ್ಷಕವಾಗಿದ್ದು, 10.25 ಇಂಚಿನ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಬ್ಲ್ಯೂ ಲಿಂಕ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಕಮಾಂಡರ್, ಮೂರು ಸಾಲಿಗೂ ಎಸಿ ವೆಂಟ್ಸ್, ಬ್ಲೈಂಡ್ ವಿಂಡೋ ಮಾನಿಟರ್, ಆ್ಯಂಬಿಯೆಂಟ್ ಲೈಟಿಂಗ್ಸ್, ಸೀಟ್ ಬ್ಲ್ಯಾಟ್ ಟೇಬಲ್, ಆಟೋ ಏರ್ ಪ್ಯೂರಿಫೈರ್, ರಿಮೋಟ್ ಎಂಜಿನ್ ಸ್ಟಾರ್ಟ್, ಕ್ಲೈಮೆಟ್ ಕಂಟ್ರೋಲ್, ಪನೊರಮಿಕ್ ಸನ್‌ರೂಫ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳಿವೆ.

ಆರಂಭದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ

ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಕ್ರೂಸ್ ಕಂಟ್ರೋಲ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಬ್ಲೈಂಡ್ ವ್ಯೂ ಮಾನಿಟರ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಆರಂಭದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ

ಹಾಗೆಯೇ ಹೊಸ ಕಾರಿನಲ್ಲಿ ಟೈಪೂನ್ ಸಿಲ್ವರ್, ಟೈಟಾನ್ ಗ್ರೇ, ಟೈಗಾ ಬ್ರೌನ್, ಸ್ಟೇರಿ ನೈಟ್, ಪೊಲಾರ್ ವೈಟ್ ಮತ್ತು ಪ್ಯಾಂಥಮ್ ಬ್ಲ್ಯಾಕ್ ಬಣ್ಣ ಸೇರಿ ಎರಡು ಡ್ಯುಯಲ್ ಟೋನ್ ಮಾದರಿಗಳು ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಿಗೆ ಮಾತ್ರವಲ್ಲ ಎಂಪಿವಿ ಕಾರಿಗಳೂ ಪೈಪೋಟಿ ನೀಡುವ ವೈಶಿಷ್ಟ್ಯತೆಗಳನ್ನು ಹೊಂದಿದೆ.

More from DriveSpark

Article Published On: Saturday, June 19, 2021, 10:56 [IST]
English summary
Hyundai Alcazar Bookings, Waiting Period & Delivery Details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+