12 ಸಾವಿರ ಯುನಿಟ್ ದಾಟಿದ ಹ್ಯುಂಡೈ ಅಲ್ಕಾಜರ್ ಕಾರಿನ ಬುಕ್ಕಿಂಗ್ ಪ್ರಮಾಣ

ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಬಿಡುಗಡೆಯಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಹ್ಯುಂಡೈ ಅಲ್ಕಾಜರ್ ಮಾದರಿಯು ಇದುವರೆಗೆ ಸುಮಾರು 12 ಸಾವಿರ ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಟಾಟಾ ಸಫಾರಿ ಮತ್ತು ಎಂಜಿ ಹೆಕ್ಟರ್ ಪ್ಲಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

12 ಸಾವಿರ ಯುನಿಟ್ ದಾಟಿದ ಹ್ಯುಂಡೈ ಅಲ್ಕಾಜರ್ ಬುಕ್ಕಿಂಗ್ ಪ್ರಮಾಣ

ಹೊಸ ಅಲ್ಕಾಜರ್ ಕಾರು ಮಾದರಿಯು 6 ಸೀಟರ್ ಮತ್ತು 7 ಸೀಟರ್ ಆಸನ ಸೌಲಭ್ಯದೊಂದಿಗೆ ಪ್ಲ್ಯಾಟಿನಂ, ಪ್ರೆಸ್ಟೀಜ್, ಸಿಗ್ನೆಚೆರ್, ಪ್ಲ್ಯಾಟಿನಂ ಆಪ್ಷನ್, ಪ್ರೆಸ್ಟೀಜ್ ಆಪ್ಷನ್ ಮತ್ತು ಸಿಗ್ನೆಚೆರ್ ಆಪ್ಷನ್ ಎನ್ನುವ ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಕಂಪನಿಯು ಇದುವರೆಗೆ ಸುಮಾರು 4 ಸಾವಿರಕ್ಕೂ ಹೆಚ್ಚು ಯುನಿಟ್‌ಗಳನ್ನು ವಿತರಣೆ ಮಾಡಿದ್ದಾರೆ.

12 ಸಾವಿರ ಯುನಿಟ್ ದಾಟಿದ ಹ್ಯುಂಡೈ ಅಲ್ಕಾಜರ್ ಬುಕ್ಕಿಂಗ್ ಪ್ರಮಾಣ

ಕಾರು ಉತ್ಪಾದನಾ ಪ್ರಮಾಣದ ಸಾಮರ್ಥ್ಯಕ್ಕೆ ಅನುಗುಣವಾಗಿ ಹೊಸ ಕಾರನ್ನು ವಿತರಣೆ ಮಾಡಲಾಗುತ್ತಿದ್ದು, ಹೊಸ ಕಾರನ್ನು ಖರೀದಿಸಲು ಬುಕ್ಕಿಂಗ್ ನಂತರ ವಿತರಣೆ ಪಡೆದುಕೊಳ್ಳಲು ಕನಿಷ್ಠ 4 ವಾರಗಳಿಂದ 6 ವಾರಗಳ ಕಾಲ ಕಾಯಬೇಕಾಗುತ್ತದೆ.

12 ಸಾವಿರ ಯುನಿಟ್ ದಾಟಿದ ಹ್ಯುಂಡೈ ಅಲ್ಕಾಜರ್ ಬುಕ್ಕಿಂಗ್ ಪ್ರಮಾಣ

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.16.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.99 ಲಕ್ಷ ಬೆಲೆ ಹೊಂದಿದ್ದು, ಅತ್ಯುತ್ತಮ ಫೀಚರ್ಸ್‌, ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಟಾಟಾ ಸಫಾರಿ ಮತ್ತು ಎಂಜಿ ಹೆಕ್ಟರ್ ಪ್ಲಸ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

12 ಸಾವಿರ ಯುನಿಟ್ ದಾಟಿದ ಹ್ಯುಂಡೈ ಅಲ್ಕಾಜರ್ ಬುಕ್ಕಿಂಗ್ ಪ್ರಮಾಣ

ಹೊಸ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಹೊಸ ಕಾರು 4,500 ಎಂಎಂ ಉದ್ದಳತೆಯೊಂದಿಗೆ 6 ಸೀಟರ್(2+2+2) ಮತ್ತು 7 ಸೀಟರ್(2+3+2) ಮಾದರಿಯ ಆಸನ ಸೌಲಭ್ಯವನ್ನು ಹೊಂದಿದೆ.

12 ಸಾವಿರ ಯುನಿಟ್ ದಾಟಿದ ಹ್ಯುಂಡೈ ಅಲ್ಕಾಜರ್ ಬುಕ್ಕಿಂಗ್ ಪ್ರಮಾಣ

ಅಲ್ಕಾಜರ್‌ನಲ್ಲಿ ಸ್ಪ್ಲಿಟ್-ಶೈಲಿಯ ಎಲ್ಇಡಿ ಹೆಡ್‌ಲ್ಯಾಂಪ್‌, 3ಡಿ ಹನಿಕೊಂಬ್ ಗ್ರಿಲ್, ಹೊಸ ವಿನ್ಯಾಸದ ಬಂಪರ್ ವಿನ್ಯಾಸ, ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್, ವಿವಿಧ ಮಾದರಿಗಳಿಗೆ ಅನುಗುಣವಾಗಿ 17 ಮತ್ತು 18-ಇಂಚಿನ ಅಲಾಯ್ ವೀಲ್ಹ್, ರೂಫ್ ರೈಲ್ಸ್, ಫ್ಲಕ್ಸ್ ಸ್ಕಫ್ ಪ್ಲೇಟ್, ಶಾರ್ಕ್ ಫಿನ್ ಅಂಟೆನಾ, ಬಾಡಿ ಕ್ಲ್ಯಾಡಿಂಗ್ ಹೊಂದಿದೆ.

12 ಸಾವಿರ ಯುನಿಟ್ ದಾಟಿದ ಹ್ಯುಂಡೈ ಅಲ್ಕಾಜರ್ ಬುಕ್ಕಿಂಗ್ ಪ್ರಮಾಣ

ಅಲ್ಕಾಜರ್ ಕಾರಿನ ಕ್ಯಾಬಿನ್ ಕೂಡಾ ಆಕರ್ಷಕವಾಗಿದ್ದು, 10.25 ಇಂಚಿನ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಬ್ಲ್ಯೂ ಲಿಂಕ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಕಮಾಂಡರ್, ಮೂರು ಸಾಲಿಗೂ ಎಸಿ ವೆಂಟ್ಸ್, ಬ್ಲೈಂಡ್ ವಿಂಡೋ ಮಾನಿಟರ್, ಆ್ಯಂಬಿಯೆಂಟ್ ಲೈಟಿಂಗ್ಸ್, ಸೀಟ್ ಬ್ಲ್ಯಾಟ್ ಟೇಬಲ್, ಆಟೋ ಏರ್ ಪ್ಯೂರಿಫೈರ್, ರಿಮೋಟ್ ಎಂಜಿನ್ ಸ್ಟಾರ್ಟ್, ಕ್ಲೈಮೆಟ್ ಕಂಟ್ರೋಲ್, ಪನೊರಮಿಕ್ ಸನ್‌ರೂಫ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳಿವೆ.

12 ಸಾವಿರ ಯುನಿಟ್ ದಾಟಿದ ಹ್ಯುಂಡೈ ಅಲ್ಕಾಜರ್ ಬುಕ್ಕಿಂಗ್ ಪ್ರಮಾಣ

ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಕ್ರೂಸ್ ಕಂಟ್ರೋಲ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಬ್ಲೈಂಡ್ ವ್ಯೂ ಮಾನಿಟರ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

12 ಸಾವಿರ ಯುನಿಟ್ ದಾಟಿದ ಹ್ಯುಂಡೈ ಅಲ್ಕಾಜರ್ ಬುಕ್ಕಿಂಗ್ ಪ್ರಮಾಣ

ಹೊಸ ಕಾರು ಟೈಪೂನ್ ಸಿಲ್ವರ್, ಟೈಟಾನ್ ಗ್ರೇ, ಟೈಗಾ ಬ್ರೌನ್, ಸ್ಟೇರಿ ನೈಟ್, ಪೊಲಾರ್ ವೈಟ್ ಮತ್ತು ಪ್ಯಾಂಥಮ್ ಬ್ಲ್ಯಾಕ್ ಬಣ್ಣಗಳು ಸೇರಿ ಎರಡು ಡ್ಯುಯಲ್ ಟೋನ್ ಮಾದರಿಗಳು ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಿಗೆ ಮಾತ್ರವಲ್ಲ ಎಂಪಿವಿ ಕಾರಿಗಳೂ ಪೈಪೋಟಿ ನೀಡುತ್ತಿದೆ.

Article Published On: Friday, July 30, 2021, 8:45 [IST]
English summary
Hyundai Alcazar Receives More Than 12,000 Bookings. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+