ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ 11 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್

ಹ್ಯುಂಡೈ ಕಂಪನಿಯು ತನ್ನ ಬಹುನೀರಿಕ್ಷಿತ ಅಲ್ಕಾಜರ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ಒಂದು ತಿಂಗಳು ಪೂರ್ಣಗೊಂಡಿದ್ದು, ಹೊಸ ಕಾರು ದುಬಾರಿ ಬೆಲೆ ನಡುವೆಯೂ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ಮೂಲಕ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ 11 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್

ಅಲ್ಕಾಜರ್ ಕಾರು 6 ಸೀಟರ್ ಮತ್ತು 7 ಸೀಟರ್ ಆಸನ ಸೌಲಭ್ಯದೊಂದಿಗೆ ಪ್ಲ್ಯಾಟಿನಂ, ಪ್ರೆಸ್ಟೀಜ್, ಸಿಗ್ನೆಚೆರ್, ಪ್ಲ್ಯಾಟಿನಂ ಆಪ್ಷನ್, ಪ್ರೆಸ್ಟೀಜ್ ಆಪ್ಷನ್ ಮತ್ತು ಸಿಗ್ನೆಚೆರ್ ಆಪ್ಷನ್ ಎನ್ನುವ ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಖರೀದಿಗೆ ಇದುವರೆಗೆ ಸುಮಾರು 11 ಸಾವಿರ ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದಾರೆ.

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ 11 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್

ಹ್ಯುಂಡೈ ಕಂಪನಿಯು ಇದುವರೆಗೆ ಸುಮಾರು 5,600 ಯುನಿಟ್ ಮಾರಾಟಗೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.16.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.99 ಲಕ್ಷ ಬೆಲೆ ಹೊಂದಿದೆ.

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ 11 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್

ಬುಕ್ಕಿಂಗ್ ಪ್ರಕ್ರಿಯೆಯನ್ನು ಆಧರಿಸಿ ಹೊಸ ಕಾರಿನ ವಿತರಣೆಗೆ ಹ್ಯುಂಡೈ ಕಂಪನಿಯು ಕನಿಷ್ಠ 4 ವಾರಗಳಿಂದ 6 ವಾರಗಳ ಕಾಲ ಕಾಯುವಿಕೆ ಅವಧಿಯನ್ನು ನಿಗದಿಪಡಿಸಿದ್ದು, ಹೊಸ ಕಾರು ಅತ್ಯುತ್ತಮ ಫೀಚರ್ಸ್‌, ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಟಾಟಾ ಸಫಾರಿ ಮತ್ತು ಎಂಜಿ ಹೆಕ್ಟರ್ ಪ್ಲಸ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ 11 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್

ಹೊಸ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಹೊಸ ಕಾರು 4,500 ಎಂಎಂ ಉದ್ದಳತೆಯೊಂದಿಗೆ 6 ಸೀಟರ್(2+2+2) ಮತ್ತು 7 ಸೀಟರ್(2+3+2) ಮಾದರಿಯ ಆಸನ ಸೌಲಭ್ಯವನ್ನು ಹೊಂದಿದೆ.

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ 11 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್

ಅಲ್ಕಾಜರ್‌ನಲ್ಲಿ ಸ್ಪ್ಲಿಟ್-ಶೈಲಿಯ ಎಲ್ಇಡಿ ಹೆಡ್‌ಲ್ಯಾಂಪ್‌, 3ಡಿ ಹನಿಕೊಂಬ್ ಗ್ರಿಲ್, ಹೊಸ ವಿನ್ಯಾಸದ ಬಂಪರ್ ವಿನ್ಯಾಸ, ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್, ವಿವಿಧ ಮಾದರಿಗಳಿಗೆ ಅನುಗುಣವಾಗಿ 17 ಮತ್ತು 18-ಇಂಚಿನ ಅಲಾಯ್ ವೀಲ್ಹ್, ರೂಫ್ ರೈಲ್ಸ್, ಫ್ಲಕ್ಸ್ ಸ್ಕಫ್ ಪ್ಲೇಟ್, ಶಾರ್ಕ್ ಫಿನ್ ಅಂಟೆನಾ, ಬಾಡಿ ಕ್ಲ್ಯಾಡಿಂಗ್ ಹೊಂದಿದೆ.

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ 11 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್

ಅಲ್ಕಾಜರ್ ಕಾರಿನ ಕ್ಯಾಬಿನ್ ಕೂಡಾ ಆಕರ್ಷಕವಾಗಿದ್ದು, 10.25 ಇಂಚಿನ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಬ್ಲ್ಯೂ ಲಿಂಕ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಕಮಾಂಡರ್, ಮೂರು ಸಾಲಿಗೂ ಎಸಿ ವೆಂಟ್ಸ್, ಬ್ಲೈಂಡ್ ವಿಂಡೋ ಮಾನಿಟರ್, ಆ್ಯಂಬಿಯೆಂಟ್ ಲೈಟಿಂಗ್ಸ್, ಸೀಟ್ ಬ್ಲ್ಯಾಟ್ ಟೇಬಲ್, ಆಟೋ ಏರ್ ಪ್ಯೂರಿಫೈರ್, ರಿಮೋಟ್ ಎಂಜಿನ್ ಸ್ಟಾರ್ಟ್, ಕ್ಲೈಮೆಟ್ ಕಂಟ್ರೋಲ್, ಪನೊರಮಿಕ್ ಸನ್‌ರೂಫ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳಿವೆ.

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ 11 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್

ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಕ್ರೂಸ್ ಕಂಟ್ರೋಲ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಬ್ಲೈಂಡ್ ವ್ಯೂ ಮಾನಿಟರ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ 11 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಅಲ್ಕಾಜರ್

ಹಾಗೆಯೇ ಹೊಸ ಕಾರಿನಲ್ಲಿ ಟೈಪೂನ್ ಸಿಲ್ವರ್, ಟೈಟಾನ್ ಗ್ರೇ, ಟೈಗಾ ಬ್ರೌನ್, ಸ್ಟೇರಿ ನೈಟ್, ಪೊಲಾರ್ ವೈಟ್ ಮತ್ತು ಪ್ಯಾಂಥಮ್ ಬ್ಲ್ಯಾಕ್ ಬಣ್ಣ ಸೇರಿ ಎರಡು ಡ್ಯುಯಲ್ ಟೋನ್ ಮಾದರಿಗಳು ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಿಗೆ ಮಾತ್ರವಲ್ಲ ಎಂಪಿವಿ ಕಾರಿಗಳೂ ಪೈಪೋಟಿ ನೀಡುತ್ತಿದೆ.

Most Read Articles
v

Kannada
English summary
Hyundai ALCAZAR received 11000 Bookings in less than a month since launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X