ಹ್ಯುಂಡೈ ಐ20 ಆಧಾರಿತ ಬಯೋನ್ ಎಸ್‍ಯುವಿಯ ಉತ್ಪಾದನೆ ಆರಂಭ
ಹ್ಯುಂಡೈ ಕಂಪನಿಯು ತನ್ನ ಬಹುನಿರೀಕ್ಷಿತ ಬಯೋನ್ ಎಸ್‌ಯುವಿಯನ್ನು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಿತು. ಈ ಹೊಸ ಹ್ಯುಂಡೈ ಬಯೋನ್ ಮಾದರಿಯನ್ನು ಯುರೋಪ್ ಮಾರುಕಟ್ಟೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಬಯೋನ್ ಕ್ರಾಸ್‌ಒವರ್ ಎಸ್‌ಯುವಿಯು ಹೊಸ ಐ20 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಬಯೋನ್ ಹ್ಯುಂಡೈನ ಚಿಕ್ಕ ಎಸ್‍ಯುವಿ ಆಗಿರುತ್ತದೆ. ಟರ್ಕಿಯಲ್ಲಿರುವ ಹ್ಯುಂಡೈ ಕಂಪನಿಯ ಇಜ್ಮಿಟ್ ಘಟಕದಲ್ಲಿ ಬಯೋನ್ ಕಾಂಪ್ಯಾಕ್ಟ್ ಎಸ್‌ಯುವಿಯ ಉತ್ಪದನೆಯನ್ನು ಪ್ರಾರಂಭಿಸಿದೆ. ಇದು ಯುರೋಪಿನ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಮತ್ತು ಫೋರ್ಡ್ ಇಕೋಸ್ಪೋರ್ಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಹ್ಯುಂಡೈ ವೆನ್ಯೂ ಎಸ್‍ಯುವಿ ಮಾರಾಟವಾಗದ ಮಾರುಕಟ್ಟೆಗಳಲ್ಲಿ ಬಯೋನ್ ಎಸ್‌ಯುವಿಯು ಮಾರಾಟವಾಗಲಿದೆ. ಇದರಿಂದ ಈ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಈ ಬಯೋನ್ ಎಸ್‍ಯುವಿಯಲ್ಲಿ ಇಂಟಿರಿಯರ್ ನಲ್ಲಿ ಸುರಕ್ಷತಾ ಮತ್ತು ಕನೆಕ್ಟಿವಿಟಿ ಫೀಚರ್ ಗಳನ್ನು ಒಳಗೊಂಡಿರುತ್ತದೆ

ಹೊಸ ಹ್ಯುಂಡೈ ಬಯೋನ್ ಮಾದರಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಸಿಗ್ನೇಚರ್ ಕ್ಯಾಸ್ಕೇಡಿಂಗ್ ಗ್ರಿಲ್, ಮೂರು-ಭಾಗದ ಮೈಲ್ ಲೈಟ್, ಏರ್ ಇನ್ ಟೆಕ್ ಬ್ಯಾಂಡ್ ಮತ್ತು ಕಡಿಮೆ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ. ಎಲ್ಇಡಿ ಡಿಆರ್ಎಲ್ ಗಳನ್ನು ಮೇಲೆ ಇರಿಸಿದರೆ, ಮೈನ್ ಹೆಡ್ ಲ್ಯಾಂಪ್ ಅನ್ನು ಬಂಪರ್ ಮೇಲೆ ಇರಿಸಲಾಗಿದೆ.

ಇದರ ಸೈಡ್ ಪ್ರೊಫೈಲ್ ಏರೋ- ಆಕಾರದ ಸಿ-ಪಿಲ್ಲರ್, ಉದ್ದನೆಯ ಬಲವಾದ ಬೈಟ್ ಲೈನ್ ಅನ್ನು ಹೊಂದಿದೆ. ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲಾಡಿಂಗ್ ಅನ್ನು ಬಾಡಿಯ ಸುತ್ತ ಕಾಣಬಹುದು. ಹಿಂದಿನ ಪ್ರೊಫೈಲ್ ಏರೋ ಆಕಾರದ ಲೈಟ್ ಗಳನ್ನು ಹೊಂದಿವೆ.

ಈ ಹ್ಯುಂಡೈ ಬಯೋನ್ ಎಸ್‍ಯುವಿ 15 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು 16- ಅಥವಾ 17-ಇಂಚಿನ ಅಲಾಯ್ ವ್ಹೀಲ್ ಆಯ್ಜೆಗಳನ್ನು ಹೊಂದಿವೆ. ಇನ್ನು ಬಯೋನ್ ಒಂಬತ್ತು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಮ್ಯಾಂಗ್ರೋವ್ ಗ್ರೀನ್. ಫ್ಯಾಂಟಮ್ ಬ್ಲ್ಯಾಕ್ ಎಂಬ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಗಳ ರೂಫ್ ಕೂಡ ಲಭ್ಯವಿದೆ.

ಬಯೋನ್ ಫುಲ್ ಬ್ಲ್ಯಾಕ್, ಮತ್ತು ಡಾರ್ಕ್ ಗ್ರೇ ಎಂಬ ಎರಡೂ ಬಣ್ಣಗಳಲ್ಲಿ ಇಂಟಿರಿಯರ್ ಕೂಡಿದೆ. ಇನ್ನು ಇಂಟಿರಿಯರ್ ನಲ್ಲಿ 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಇನ್ನು ಇದರ ಲೋ ವೆರಿಯೆಂಟ್ ಗಳಲ್ಲಿ 8 ಇಂಚಿನ ಡಿಸ್ ಪ್ಲೇ ಆಡಿಯೊ ಸಿಸ್ಟಮ್ ಅನ್ನು ಪಡೆಯುತ್ತವೆ. ಇನ್ನು ಈ ಹ್ಯುಂಡೈ ಬಯೋನ್ ಮಾದರಿಯಲ್ಲಿ ಎಲ್ಇಡಿ ಆಂಬಿಯೆಂಟ್ ಲೈಟಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇನ್ನು ಇನ್ಫೋಟೈನ್ಮೆಂಟ್ ಸಿಸ್ಟಂ ವೈರ್ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿದೆ.

ಇನ್ನು ಈ ಎಸ್‍ಯುವಿ ಮುಂಭಾಗದಲ್ಲಿ ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಮತ್ತು ಹಿಂಭಾಗಕ್ಕೆ ಒಂದನ್ನು ನೀಡಿದೆ. ಈ ಎಸ್‍ಯುವಿ ಪ್ರೀಮಿಯಂ ಬೋಸ್ ಸೌಂಡ್ ಸಿಸ್ಟಂ ಅನ್ನು ಸಹ ಪಡೆಯುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ಬಯಾನ್ ಹ್ಯುಂಡೈನ ಇತ್ತೀಚಿನ ಬ್ಲೂಲಿಂಕ್ ಸಂಪರ್ಕಿತ ಕಾರು ತಂತ್ರಜ್ಞಾನದೊಂದಿಗೆ ಬರುತ್ತದೆ.

ಹ್ಯುಂಡೈ ಬಯೋನ್ ಎಸ್‍ಯುವಿಯಲ್ಲಿ 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೊತೆ 48ವಿ ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡಿಸಿಟಿಯನ್ನು ಜೋಡಿಸಲಾಗಿದೆ. ಇನ್ನು ಈ ಎಸ್‍ಯುವಿಯು ಇಕೋ, ನಾರ್ಮಲ್ ಮತ್ತು ಸ್ಪೋಟ್ಸ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿವೆ. ಇನ್ನು ಈ ಎಸ್‍ಯುವಿ 411-ಲೀಟರ್ ಸಾಮರ್ಥ್ಯದ ಲಗೇಜ್ ಸ್ಪೇಸ್ ಅನ್ನು ಹೊಂದಿದೆ.


Click it and Unblock the Notifications