ಭಾರತದಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ i20 N line ವರ್ಷನ್ ಅನಾವರಣಗೊಳಿಸಿದ Hyundai
Hyundai ಕಂಪನಿಯು ಪರ್ಫಾಮೆನ್ಸ್ ಪ್ರಿಯರಾಗಿ ತನ್ನ ಪ್ರಮುಖ ಕಾರು ಮಾದರಿಗಳಲ್ಲಿ N line ಆವೃತ್ತಿಗಳ ಮಾರಾಟವನ್ನು ಹೊಂದಿದ್ದು, ಕಂಪನಿಯು ಮೊದಲ ಬಾರಿಗೆ ಹೊಸ ಆವೃತ್ತಿಗಳ ಮಾರಾಟವನ್ನು ಭಾರತಕ್ಕೂ ಪರಿಚಯಿಸುತ್ತಿದೆ.

ವಿಶ್ವಾದ್ಯಂತ ಕೆಲವೇ ಕೆಲವು ರಾಷ್ಟ್ರಗಳಲ್ಲಿ N line ಮಾದರಿಗಳನ್ನು ಮಾರಾಟ ಮಾಡುತ್ತಿರುವ Hyundai ಕಂಪನಿಯು ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಭಾರತೀಯ ಆಟೋ ಮಾರುಕಟ್ಟೆಯಲ್ಲೂ ತನ್ನ ಪರ್ಫಾಮೆನ್ಸ್ ಕಾರುಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಮೊದಲ ಹಂತವಾಗಿ i20 N line ವರ್ಷನ್ ಅನಾವರಣಗೊಳಿಸಿದೆ.

i20 N line ವರ್ಷನ್ ಅನಾವರಣಗೊಳಿಸಿರುವ Hyundai ಕಂಪನಿಯು ಹೊಸ ಕಾರಿನ ಖರೀದಿಗೆ ರೂ.25 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕ್ಕಿಂಗ್ ಆರಂಭಿಸಿದ್ದು, ಹೊಸ ಕಾರು ಮುಂದಿನ ತಿಂಗಳು ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.

ಹೊಸ ಕಾರಿನಲ್ಲಿ ಗ್ರಾಹಕರು ತಮ್ಮ ಬೇಡಿಕೆಗೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದ್ದು, N6 iMT, N8 iMT ಮತ್ತು N8 DCT ಆವೃತ್ತಿಗಳನ್ನು ಹೊಂದಿದೆ.

Hyundai ಕಂಪನಿಯು i20 N line ವರ್ಷನ್ ಬಿಡುಗಡೆ ನಂತರ ಇತರೆ ಕಾರು ಮಾದರಿಗಳಲ್ಲೂ N line ಮಾದರಿಯನ್ನು ಹಂತ-ಹಂತವಾಗಿ ಬಿಡುಗಡೆ ಮಾಡಲಿದ್ದು, N line ಆವೃತ್ತಿಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಪರ್ಫಾಮೆನ್ಸ್ ಮತ್ತು ಸ್ಪೋರ್ಟಿ ವಿನ್ಯಾಸಗಳನ್ನು ಹೊಂದಿರಲಿವೆ.

i20 N line ಮಾದರಿಯನ್ನು Hyundai ಕಂಪನಿಯು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರ ಬಿಡುಗಡೆ ಮಾಡಲಿದ್ದು, 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು 6-ಸ್ಪೀಡ್ ಇಂಟಲಿಜೆಂಟ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆ ಹೊಂದಿರಲಿದೆ.

ಇದು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಅತ್ಯುತ್ತಮ ಪರ್ಫಮೆನ್ಸ್ ಹಿಂದಿರುಗಿಸಲಿದ್ದು, i20 N line ಮಾದರಿಯು 120-ಬಿಎಚ್‌ಪಿ ಮತ್ತು 172-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಸೊನ್ನೆಯಿಂದ 100 ಕಿ.ಮೀ ಕ್ವಿಕ್ ಸ್ಪೀಡ್ ಪಡೆದುಕೊಳ್ಳುತ್ತದೆ.

ಇನ್ನು ಪರ್ಫಾಮೆನ್ಸ್ ಮಾದರಿಗೆ ಪೂರಕವಾಗಿ ಹೊಸ ಕಾರಿನಲ್ಲಿ ಹಲವಾರು ಸ್ಪೋರ್ಟಿ ವಿನ್ಯಾಸಗಳನ್ನು ನೀಡಲಾಗಿದ್ದು, ಡ್ಯುಯಲ್ ಟೋನ್ ಫ್ರಂಟ್ ಬಂಪರ್, ಸ್ಪೋರ್ಟಿಯಾಗಿರುವ ರೆಡ್ ಆಕ್ಸೆಂಟ್, ಫ್ರಂಟ್ ಫಾಸಿಯಾದಲ್ಲಿಯೇ N line ಲೊಗೊ ನೀಡಲಾಗಿದೆ.

ಹೊಸ ಕಾರಿನಲ್ಲಿ ಸ್ಪೋರ್ಟಿ ವಿನ್ಯಾಸದ 16-ಇಂಚಿನ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್, ಸೈಡ್ ಗಾರ್ನಿಶ್ ಜೊತೆ ರೆಡ್ ಇನ್ಸರ್ಟ್, ಮುಂಭಾಗದ ಚಕ್ರಗಳಲ್ಲಿ ರೆಡ್ ಬ್ರೇಕ್ ಕ್ಯಾಲಿಪರ್‌ನೊಂದಿಗೆ ಕಾರಿನ ಹಿಂಬದಿಯಲ್ಲಿ ಸ್ಪೋರ್ಟಿ ಬಂಪರ್, ಡಿಫ್ಯೂಸರ್, ಟ್ವಿನ್ ಎಕ್ಸಾಸ್ಟ್, ಟೈಲ್ ಗೇಡ್ ಸ್ಪಾಯ್ಲರ್, ಟೈಲ್ ಲ್ಯಾಂಪ್ ಜೋಡಣೆಗಾಗಿ ಡಾರ್ಕ್ ಕ್ರೋಮ್ ನೀಡಲಾಗಿದೆ.

ಹೊಸ ಕಾರಿನ ಹೊರಭಾಗದಂತೆ ಕಾರಿನ ಒಳಭಾಗದಲ್ಲೂ ಹಲವಾರು ಸ್ಪೋರ್ಟಿ ಫೀಚರ್ಸ್ ನೀಡಲಾಗಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೊಸ ಕಾರಿನ ಡ್ಯಾಶ್‌ಬೋರ್ಡ್ ಆಕರ್ಷಕವಾಗಿದೆ. ಹೊಸ ಕಾರಿನಲ್ಲಿ ಆಲ್ ಬ್ಲ್ಯಾಕ್ ಥೀಮ್ ನೀಡಲಾಗಿದ್ದು, ರೆಡ್ ಆಕ್ಸೆಂಟ್ ಜೊತೆ ಆ್ಯಂಬಿಯೆಂಟ್ ಲೈಟಿಂಗ್ಸ್ ನೀಡಲಾಗಿದೆ.

ಕೆಲವು ಫೀಚರ್ಸ್‌ಗಳು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಜೋಡಣೆ ಮಾಡಲಾಗಿದ್ದು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಸಿಂಗಲ್ ಪ್ಯಾನ್ ಸನ್‌ರೂಫ್, ಬಾಷ್ ಕಂಪನಿಯ 7-ಸ್ಪೀಕರ್ಸ್ ಸೌಂಡ್ ಸಿಸ್ಟಂ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳಿವೆ.

Hyundai ಕಂಪನಿಯು N line ಮಾದರಿಯನ್ನು i20 ಮಾದರಿಯ ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ ಪರಿಚಯಿಸಲಿದ್ದು, ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಎಕ್ಸ್‌ಶೋರೂಂ ಪ್ರಕಾರ ರೂ. 1 ಲಕ್ಷದಿಂದ ರೂ.1.50 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದೆ.

ಸದ್ಯ ಮಾರುಕಟ್ಟೆಯಲ್ಲಿ i20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯು ಮ್ಯಾಗ್ನಾ, ಸ್ಪೋರ್ಟ್ಜ್, ಆಸ್ಟಾ ಮತ್ತು ಆಸ್ಟಾ ಆಪ್ಷನ್ ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.91 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 11.40 ಲಕ್ಷ ಬೆಲೆ ಹೊಂದಿದೆ.

ನ್ಯೂ ಜನರೇಷನ್ i20 ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಒಂದು ಡೀಸೆಲ್ ಮತ್ತು ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆ ನೀಡಿದಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 1.0-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.5-ಲೀಟರ್ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ.ಹೊಸ ತಲೆಮಾರಿನ i20 ಕಾರು ಆಕರ್ಷಕ ಎಕ್ಸ್‌ಟಿರಿಯರ್ ಡಿಸೈನ್‌ನೊಂದಿಗೆ ಏರೋ ಡೈನಾಮಿಕ್ ಸ್ಪೋರ್ಟಿ ಲುಕ್ ಹೊಂದಿದ್ದು, ಹೊಸ ಕಾರು ಹಳೆಯ ಮಾದರಿಗಿಂತಲೂ ಹೆಚ್ಚಿನ ಮಟ್ಟದ ವೀಲ್ಹ್ ಬೆಸ್‌ನೊಂದಿಗೆ ಆರಾಮದಾಯಕ ಸ್ಥಳಾವಕಾಶ ಹೊಂದಿದೆ.


Click it and Unblock the Notifications








