ಪ್ರಮುಖ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ ಹ್ಯುಂಡೈ
ಹ್ಯುಂಡೈ ಮೋಟಾರ್ಸ್ ಹೊಸ ಕಾರು ಮಾರಾಟದಲ್ಲಿ ಹಲವು ತಿಂಗಳಿನಿಂದ ಉತ್ತಮ ಬೇಡಿಕೆ ಕಾಯ್ದುಕೊಳ್ಳುತ್ತಿದ್ದು, ಕೋವಿಡ್ ಪರಿಣಾಮ ತಗ್ಗಿರುವ ಹೊಸ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಹೊಸ ಕೊಡುಗೆಗಳನ್ನು ಪ್ರಕಟಿಸುತ್ತಿದೆ.

ಕೋವಿಡ್‌ನಿಂದಾಗಿ ಕಳೆದ ವರ್ಷ ಕನಿಷ್ಠ ಪ್ರಮಾಣದ ಹೊಸ ವಾಹನಗಳನ್ನು ಮಾರಾಟ ಮಾಡಿದ್ದ ಕಾರು ಕಂಪನಿಗಳಿಗೆ ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಹರಿದುಬಂದಿತ್ತು. ಆದರೆ ಇದೀಗ ಕೋವಿಡ್ 2ನೇ ಅಲೆ ಪರಿಣಾಮ ಆಟೋ ಕಂಪನಿಗಳು ಮತ್ತೆ ಸಂಕಷ್ಟ ಎದುರಿಸುತ್ತಿದ್ದು, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಖರೀದಿದಾರರು ಹೊಸ ಯೋಜನೆಯಿಂದ ಹಿಂದೆ ಸರಿಯುತ್ತಿರುವುದು ಆಟೋ ಕಂಪನಿಗಳಿಗೆ ಭಾರೀ ನಷ್ಟ ಭೀತಿ ಎದುರಾಗಿದೆ.

ಈ ಹಿನ್ನಲೆಯಲ್ಲಿ ಪ್ರಮುಖ ಕಾರು ಕಂಪನಿಗಳು ಹೊಸ ವಾಹನ ಖರೀದಿಯನ್ನು ಉತ್ತೇಜಿಸಲು ಹೊಸ ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಹ್ಯುಂಡೈ ಕಂಪನಿಯು ಸಹ ಜೂನ್ ಅವಧಿಗಾಗಿ ಪ್ರಮುಖ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದೆ.

ಹ್ಯುಂಡೈ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಹ್ಯುಂಡೈ ಸ್ಯಾಂಟ್ರೋ, ಗ್ರಾಂಡ್ ಐ10 ನಿಯೋಸ್ ಮತ್ತು ಔರಾ ಕಾರುಗಳ ಮೇಲೆ ಉತ್ತಮ ಆಫರ್‌ಗಳನ್ನು ನೀಡಿದೆ.

ಹ್ಯುಂಡೈ ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಹೊಸ ಆಫರ್‌ಗಳಲ್ಲಿ ಎಂಟ್ರಿ ಲೆವಲ್ ಮಾದರಿಗಳಾದ ಸ್ಯಾಂಟ್ರೋ ಆವೃತ್ತಿಯ ಮೇಲೆ ರೂ.40 ಸಾವಿರ ಆಫರ್ ನೀಡುತ್ತಿದ್ದು, ಸ್ಯಾಂಟ್ರೋದಲ್ಲಿರುವ ಪ್ರತಿ ವೆರಿಯೆಂಟ್‌ಗಳಿಗೆ ಹೊಸ ಆಫರ್ ಅನ್ವಯವಾಗಲಿದೆ.

ಎಂಟ್ರಿ ಲೆವಲ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ ಗ್ರಾಂಡ್ ಐ10 ನಿಯೋಸ್ ಆವೃತ್ತಿಯ ಮೇಲೆ ಹ್ಯುಂಡೈ ಕಂಪನಿಯು ಗರಿಷ್ಠ ರೂ. 50 ಸಾವಿರ ತನಕ ಉಳಿತಾಯ ಮಾಡಬಹುದಾಗಿದ್ದು, ಎಕ್ಸ್‌ಚೆಂಜ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ಒಳಗೊಂಡಿರಲಿದೆ.

ಇನ್ನು ಔರಾ ಕಂಪ್ಯಾಕ್ಟ್ ಸೆಡಾನ್ ಕಾರು ಮಾದರಿ ಮೇಲೆ ಹ್ಯುಂಡೈ ಕಂಪನಿಯು ರೂ.50 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದ್ದು, ವಾಣಿಜ್ಯ ಬಳಕೆಗಾಗಿ ಖರೀದಿಗೆ ಲಭ್ಯವಿರುವ ಎಕ್ಸೆಂಟ್ ಪ್ರೈಮ್ ಕಾರು ಮಾದರಿಯ ಮೇಲೂ ಗರಿಷ್ಠ ನಗದು ರಿಯಾಯ್ತಿ ಪಡೆದುಕೊಳ್ಳಬಹುದಾಗಿದೆ.

ಇನ್ನು ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ಸ್ ಮಾರ್ಚ್ ತಿಂಗಳಿನಲ್ಲಿನ ತನ್ನ ಕಾರು ಮಾರಾಟದ ಶೇ.100 ರಷ್ಟು ಬೆಳವಣಿಗೆಯನ್ನು ಸಾಧಿಸಿತ್ತು. ಆದರೆ ಕೋವಿಡ್ ಪರಿಣಾಮ ಕಳೆದ ತಿಂಗಳು ಅರ್ಧಕ್ಕಿಂತಲೂ ಹೆಚ್ಚು ವಾಹನ ಮಾರಾಟವು ಕುಸಿತ ಕಂಡಿದೆ.

ಕಳೆದ ವರ್ಷದ ಮಾರ್ಚ್ ಕೊನೆಯಲ್ಲಿ ಲಾಕ್‌ಡೌನ್ ವಿಧಿಸಿದ ಪರಿಣಾಮ ಕಾರು ಮಾರಾಟ ಸ್ಥಗಿತಗೊಳಿಸಿದ್ದ ಕಾರು ಕಂಪನಿಗಳು ಲಾಕ್‌ಡೌನ್ ನಂತರ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದ್ದವು. ಇದೀಗ ಮತ್ತೆ ಕೋವಿಡ್ ಭೀತಿಯಿಂದಾಗಿ ಲಾಕ್‌ಡೌನ್ ವಿಸ್ತರಣೆಯಾಗುತ್ತಿರುವುದು ಹೊಸ ಕಾರುಗಳ ಮಾರಾಟ ಸಾಕಷ್ಟು ತಗ್ಗಿದ್ದು, ಪರಿಸ್ಥಿತಿ ಸುಧಾರಣೆ ಇನ್ನು ಕೆಲವು ತಿಂಗಳುಗಳು ಬೇಕಾಗಬಹುದು.


Click it and Unblock the Notifications