ಅಲ್ಕಾಜರ್ ಕಾರಿನ ಡ್ಯುಯಲ್ ಟೋನ್ ಮಾದರಿಗಳ ಬೆಲೆ ಮಾಹಿತಿ ಹಂಚಿಕೊಂಡ ಹ್ಯುಂಡೈ

ಹ್ಯುಂಡೈ ಇಂಡಿಯಾ ಕಂಪನಿಯು ಕಳೆದ ವಾರವಷ್ಟೇ ತನ್ನ ಬಹುನೀರಿಕ್ಷಿತ ಅಲ್ಕಾಜರ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಕಂಪನಿಯು ಹೊಸ ಕಾರಿನಲ್ಲಿ ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿ ಹಲವಾರು ಹೊಸ ತಾಂತ್ರಿಕ ಸೌಲಭ್ಯ, ಅತ್ಯುತ್ತಮ ಎಂಜಿನ್ ಆಯ್ಕೆ ಮತ್ತು ಆಕರ್ಷಕ ಬೆಲೆಯೊಂದಿಗೆ ಮಾರಾಟ ಮಾಡುತ್ತಿದೆ.

ಅಲ್ಕಾಜರ್ ಕಾರಿನ ಡ್ಯುಯಲ್ ಟೋನ್ ಮಾದರಿಗಳ ಬೆಲೆ ಮಾಹಿತಿ ಬಹಿರಂಗ

ಅಲ್ಕಾಜರ್ ಎಸ್‌ಯುವಿ ಮಾದರಿಯ 6 ಸೀಟರ್ ಮತ್ತು 7 ಸೀಟರ್ ಮಾದರಿಗಳೊಂದಿಗೆ ಸಿಂಗಲ್ ಟೋನ್ ಮತ್ತು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯೊಂದಿಗೆ ಮಾರಾಟವಾಗುತ್ತಿದ್ದು, ಹೊಸ ಕಾರಿನ ಡ್ಯುಯಲ್ ಟೋನ್ ಮಾದರಿಗಳ ಬೆಲೆ ಇದೀಗ ಬಹಿರಂಗಪಡಿಸಲಾಗಿದೆ. ಹೊಸ ಕಾರು ಸಾಮಾನ್ಯ ಮಾದರಿಯೊಂದಿಗೆ ಆರಂಭಿಕವಾಗಿ ರೂ. 16.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.19.99 ಲಕ್ಷ ಬೆಲೆ ಹೊಂದಿದ್ದು, ಡ್ಯುಯಲ್ ಟೋನ್ ಮಾದರಿಗಳು ಸಿಂಗಲ್ ಟೋನ್ ಮಾದರಿಗಿಂತಲೂ ರೂ. 15 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿವೆ.

ಅಲ್ಕಾಜರ್ ಕಾರಿನ ಡ್ಯುಯಲ್ ಟೋನ್ ಮಾದರಿಗಳ ಬೆಲೆ ಮಾಹಿತಿ ಬಹಿರಂಗ

ಸಿಂಗಲ್ ಟೋನ್ ಮಾದರಿಗಳಲ್ಲಿ ಟೈಪೂನ್ ಸಿಲ್ವರ್, ಟೈಟಾನ್ ಗ್ರೇ, ಟೈಗಾ ಬ್ರೌನ್, ಸ್ಟೇರಿ ನೈಟ್, ಪೊಲಾರ್ ವೈಟ್ ಮತ್ತು ಪ್ಯಾಂಥಮ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಿದ್ದು, ಡ್ಯುಯಲ್ ಟೋನ್ ಮಾದರಿಗಳಲ್ಲಿ ಪೊಲಾರ್ ವೈಟ್+ಪ್ಯಾಂಥಮ್ ಬ್ಲ್ಯಾಕ್, ಟೈಟಾನ್ ಗ್ರೇ+ಪ್ಯಾಂಥಮ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಲಭ್ಯವಿದೆ.

ಅಲ್ಕಾಜರ್ ಕಾರಿನ ಡ್ಯುಯಲ್ ಟೋನ್ ಮಾದರಿಗಳ ಬೆಲೆ ಮಾಹಿತಿ ಬಹಿರಂಗ

ಡ್ಯುಯಲ್ ಟೋನ್ ಮದರಿಗಳು ಹೈ ಎಂಡ್ ಮಾದರಿಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಬಣ್ಣ ಆಯ್ಕೆ ಹೊರತುಪಡಿಸಿ ತಾಂತ್ರಿಕ ಅಂಶಗಳ ಜೋಡಣೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಅಲ್ಕಾಜರ್ ಕಾರಿನ ಡ್ಯುಯಲ್ ಟೋನ್ ಮಾದರಿಗಳ ಬೆಲೆ ಮಾಹಿತಿ ಬಹಿರಂಗ

ಇನ್ನು ಹೊಸ ಅಲ್ಕಾಜರ್ ಕಾರು ಅತ್ಯುತ್ತಮ ಫೀಚರ್ಸ್‌, ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಟಾಟಾ ಸಫಾರಿ ಮತ್ತು ಎಂಜಿ ಹೆಕ್ಟರ್ ಪ್ಲಸ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದೆ.

ಅಲ್ಕಾಜರ್ ಕಾರಿನ ಡ್ಯುಯಲ್ ಟೋನ್ ಮಾದರಿಗಳ ಬೆಲೆ ಮಾಹಿತಿ ಬಹಿರಂಗ

ಅಲ್ಕಾಜರ್ ಕಾರಿನ 6 ಸೀಟರ್ ಮಾದರಿಯು 2+2+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯವನ್ನು ಹೊಂದಿದ್ದು, ಹೊಸ ಕಾರು 4,500 ಎಂಎಂ ಉದ್ದ, 1,790 ಎಂಎಂ ಅಗಲ, 1,675 ಎಂಎಂ ಎತ್ತರ ಮತ್ತು 2,760 ಎಂಎಂ ವೀಲ್ಹ್‌ಬೆಸ್ ಪಡೆದುಕೊಂಡಿದೆ.

ಅಲ್ಕಾಜರ್ ಕಾರಿನ ಡ್ಯುಯಲ್ ಟೋನ್ ಮಾದರಿಗಳ ಬೆಲೆ ಮಾಹಿತಿ ಬಹಿರಂಗ

ಹೊಸ ಕಾರಿನಲ್ಲಿ ಸ್ಪ್ಲಿಟ್-ಶೈಲಿಯ ಎಲ್ಇಡಿ ಹೆಡ್‌ಲ್ಯಾಂಪ್‌, 3ಡಿ ಹನಿಕೊಂಬ್ ಗ್ರಿಲ್, ಹೊಸ ವಿನ್ಯಾಸದ ಬಂಪರ್ ವಿನ್ಯಾಸ, ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್, ವಿವಿಧ ಮಾದರಿಗಳಿಗೆ ಅನುಗುಣವಾಗಿ 17 ಮತ್ತು 18-ಇಂಚಿನ ಅಲಾಯ್ ವೀಲ್ಹ್, ರೂಫ್ ರೈಲ್ಸ್, ಫ್ಲಕ್ಸ್ ಸ್ಕಫ್ ಪ್ಲೇಟ್, ಶಾರ್ಕ್ ಫಿನ್ ಅಂಟೆನಾ, ಬಾಡಿ ಕ್ಲ್ಯಾಡಿಂಗ್ ಹೊಂದಿದೆ.

ಅಲ್ಕಾಜರ್ ಕಾರಿನ ಡ್ಯುಯಲ್ ಟೋನ್ ಮಾದರಿಗಳ ಬೆಲೆ ಮಾಹಿತಿ ಬಹಿರಂಗ

ಅಲ್ಕಾಜರ್ ಕಾರಿನ ಕ್ಯಾಬಿನ್ ಕೂಡಾ ಆಕರ್ಷಕವಾಗಿದ್ದು, 10.25 ಇಂಚಿನ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಬ್ಲ್ಯೂ ಲಿಂಕ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಕಮಾಂಡರ್, ಮೂರು ಸಾಲಿಗೂ ಎಸಿ ವೆಂಟ್ಸ್, ಬ್ಲೈಂಡ್ ವಿಂಡೋ ಮಾನಿಟರ್, ಆ್ಯಂಬಿಯೆಂಟ್ ಲೈಟಿಂಗ್ಸ್, ಸೀಟ್ ಬ್ಲ್ಯಾಟ್ ಟೇಬಲ್, ಆಟೋ ಏರ್ ಪ್ಯೂರಿಫೈರ್, ರಿಮೋಟ್ ಎಂಜಿನ್ ಸ್ಟಾರ್ಟ್, ಕ್ಲೈಮೆಟ್ ಕಂಟ್ರೋಲ್, ಪನೊರಮಿಕ್ ಸನ್‌ರೂಫ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳಿವೆ.

ಅಲ್ಕಾಜರ್ ಕಾರಿನ ಡ್ಯುಯಲ್ ಟೋನ್ ಮಾದರಿಗಳ ಬೆಲೆ ಮಾಹಿತಿ ಬಹಿರಂಗ

ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಕ್ರೂಸ್ ಕಂಟ್ರೋಲ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಬ್ಲೈಂಡ್ ವ್ಯೂ ಮಾನಿಟರ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

More from DriveSpark

Article Published On: Wednesday, June 23, 2021, 14:07 [IST]
English summary
Hyundai India Revealed New Alcazar Dual Tone Variants Prices. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+