ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ Hyundai Casper

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ(Hyundai) ತನ್ನ ಹೊಸ ಕ್ಯಾಸ್ಪರ್(Casper) ಮೈಕ್ರೋ ಎಸ್‍ಯುವಿಯನ್ನು ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹುಂಡೈ ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯ ಖರೀದಿಗಾಗಿ ಒಂದೇ ದಿನದಲ್ಲಿ 12,000 ಬುಕ್ಕಿಂಗ್‌ಗಳನ್ನು ಪಡೆದಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ Hyundai Casper

ವಿಶೇಷವೆಂದರೆ ಈ ಹೊಸ ಹುಂಡೈ ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯ ಖರೀದಿಗಾಗಿ ದಕ್ಷಿಣ ಕೊರಿಯಾದ ಅಧ್ಯಕ್ಷರು ಬುಕ್ಕಿಂಗ್ ಮಾಡಿದ್ದಾರೆ. ಇನ್ನು ಈ ಹ್ಯುಂಡೈ ಕ್ಯಾಸ್ಪರ್ 3,595 ಎಂಎಂ ಉದ್ದ, 1,595 ಎಂಎಂ ಅಗಲ ಮತ್ತು 1,575 ಎಂಎಂ ಎತ್ತರವನ್ನು ಹೊಂದಿದೆ. ಇದು ಸ್ಯಾಂಟ್ರೊ ಹ್ಯಾಚ್‌ಬ್ಯಾಕ್‌ಗಿಂತ ಚಿಕ್ಕದಾಗಿದೆ. ಆದರೆ ಇದು ಕ್ಯಾಬಿನ್‌ನಲ್ಲಿ ಯೋಗ್ಯವಾದ ಜಾಗವನ್ನು ಹೊಂದಿದೆ. ಈ ಕ್ಯಾಸ್ಪರ್ ನಾಲ್ಕು ಸೀಟ್ ಮಾದರಿಯಾಗಿದೆ. ಆದರೆ ನಾಲ್ಕೂ ಸೀಟುಗಳು ಉತ್ತಮ ಸೌಕರ್ಯ ಮತ್ತು ಬೆಂಬಲವನ್ನು ನೀಡುತ್ತವೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ Hyundai Casper

ಎರಡೂ ಮುಂಭಾಗದ ಸೀಟುಗಳನ್ನು ಫ್ಲಾಟ್ ಆಗಿ ಮಡಚಬಹುದು, ಇದು ಪ್ರೊಡಕ್ಷನ್ ಕಾರ್‌ಗೆ ವಿಶ್ವದಲ್ಲೇ ಮೊದಲನೆಯದು. ಹೀಗಾಗಿ ಮೇಕ್-ಶಿಫ್ಟ್ ಕ್ಯಾಂಪಿಂಗ್ ಟೇಬಲ್‌ಗಳಾಗಿ ಕಾರ್ಯನಿರ್ವಹಿಸುತ್ತದೆ. ಹಿಂಭಾಗದ ಸೀಟುಗಳನ್ನು ಪ್ರತ್ಯೇಕವಾಗಿ 160 ಎಂಎಂ ಮುಂದಕ್ಕೆ ಮತ್ತು ಹಿಂದಕ್ಕೆ ಸ್ಲೈಡ್ ಮಾಡಬಹುದು. ಇನ್ನು 39 ಡಿಗ್ರಿಗಳವರೆಗೆ ಒರಗಬಹುದು, ಇದು ಹಿಂಭಾಗದ ಪ್ರಯಾಣಿಕರ ಸೌಕರ್ಯಕ್ಕೆ ಉತ್ತಮವಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ Hyundai Casper

ಈ ಹೊಸ ಹುಂಡೈ ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಪೂರ್ಣ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ (ಎರಡು-ಸ್ಪೋಕ್, ಫ್ಲಾಟ್-ಬಾಟಮ್ ವಿನ್ಯಾಸ), ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೀಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ, ವೆಂಟಿಲೇಟೆಡ್ ಡ್ರೈವರ್ ಸೀಟ್ ಮತ್ತು.ಮುಂತಾದ ಹಲವು ಫೀಚರ್ಸ್ ಗಳನ್ನು ಮತ್ತು ತಂತ್ರಜ್ಙಾನಗಳನ್ನು ಹೊಂದಿವೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ Hyundai Casper

ಈ ಹೊಸ ಹುಂಡೈ ಪ್ರಾಜೆಕ್ಟ್ AX1 ನ ಉತ್ಪಾದನೆಯ ಆವೃತ್ತಿಯಾದ ಹ್ಯುಂಡೈ ಕ್ಯಾಸ್ಪರ್ ಸಿಟಿ ಮೂಲದ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳುತ್ತದೆ. ಹ್ಯುಂಡೈ ಐ10 ಗಾಗಿ ಬಳಸಿದ ಪ್ಲಾಟ್‌ಫಾರ್ಮ್ ಅನ್ನು ಕಾರು ಹಂಚಿಕೊಂಡಿದೆ, ಅಂದರೆ ಕೋನಾ ಅಥವಾ ವೆನ್ಯೂ ಎಸ್‌ಯುವಿಗಳಿಗೆ ಹೋಲಿಸಿದರೆ ಇದು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ Hyundai Casper

ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯು ಆಕರ್ಷಕ ಬಾಕ್ಸಿ ವಿನ್ಯಾಸವನ್ನು ಹೊಂದಿದೆ. ಈ ಮಕ್ರೋ ಎಸ್‍ಯುವಿಯು ವೃತ್ತಾಕಾರದ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸುತ್ತಿನ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿಸಿ, ದೊಡ್ಡ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ಗಳ ತೆಳುವಾದ ಸ್ಟ್ರಿಪ್ ಟರ್ನ್ ಇಂಡಿಕೇಟರ್‌ಗಳು, ಸ್ಪ್ಲಿಟ್ ಟೈಲ್ ಲ್ಯಾಂಪ್ಸ್, ರೂಫ್ ಮೇಲೆ ಜೋಡಿಸಲಾದ ಸ್ಪಾಯ್ಲರ್ ಜೊತೆಗೆ ಟೈಲ್ ಗೇಟ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ Hyundai Casper

ಇನ್ನು ಈ ಮೈಕ್ರೋ ಎಸ್‍ಯುವಿಯಲ್ಲಿ 7-ಏರ್‌ಬ್ಯಾಗ್‌ಗಳು, TPMS, ಫಾರ್ವರ್ಡ್ ಕಾಲಿಷನ್ ಅವೈಡನ್ಸ್ ಅಸಿಸ್ಟ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಡ್ರೈವರ್ ಅಟೆಕ್ಷನ್ ಮಾನಿಟರ್, ಇತ್ಯಾದಿ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳು ಲಭ್ಯವಿದೆ. ಇನ್ನು ಈ ಪುಟ್ಟ ಎಸ್‍ಯುವಿಯಲ್ಲಿ ಸ್ನೋ, ಸ್ಯಾಂಡ್ ಮತ್ತು ಮಾಡ್ ಎಂಬ ಡ್ರೈವಿಂಗ್ ಮೋಡ್ ಗಳನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ Hyundai Casper

ಹೊಸ ಹ್ಯುಂಡೈ ಕ್ಯಾಸ್ಪರ್ ಸಣ್ಣ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ, -1.0-ಲೀಟರ್ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು ಹೊಸ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 76 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ Hyundai Casper

ಇದರೊಂದಿಗೆ ಯೋಸ್ ಟರ್ಬೊ ಮತ್ತು ಔರಾ ಟರ್ಬೊ ಮಾದರಿಯಲ್ಲಿರುವ 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಟರ್ಬೋ ಎಂಜಿನ್ 100 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ Hyundai Casper

ಹೊಸ ಹ್ಯುಂಡೈ ಎಎಕ್ಸ್1 ಮಿನಿ ಎಸ್‌ಯುವಿ ಜಿಜಿಎಂ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು. ಈ ಮೈಕ್ರೊ ಎಸ್‍ಯುವಿಯು ಬೋರ್ಗ್‌ವರ್ನರ್ ಇಂಟಿಗ್ರೇಟೆಡ್ ಡ್ರೈವ್ ಮಾಡ್ಯೂಲ್ (ಐಡಿಎಂ) ಅನ್ನು ಪಡೆಯುತ್ತದೆ, ಇದು ಮಾಡ್ಯುಲರ್ ಘಟಕದಲ್ಲಿ ಎಲೆಕ್ಟ್ರಿಕ್ ಮೋಟರ್, ಗೇರ್‌ಬಾಕ್ಸ್ ಮತ್ತು ಪವರ್ ಎಲೆಕ್ಟ್ರಾನಿಕ್ ಅನ್ನು ಒಳಗೊಂಡಿರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ Hyundai Casper

ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ಕಂಪನಿಯು ತನ್ನ ಆಗಸ್ಟ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಕಂಪನಿಯು ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ, ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 46,866 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಹ್ಯುಂಡೈ ಕಂಪನಿಯು ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿ ಎಂದು ಕರೆಯಲ್ಪಡುತ್ತದೆ. ಕಂಪನಿಯು ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ 2.3% ನಷ್ಟು ಮಾರಾಟ ಬೆಳವಣಿಗೆಯನ್ನು ಸಾಧಿಸಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ Hyundai Casper

ಇನ್ನು 2020ರ ಆಗಸ್ಟ್ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು ಒಟ್ಟು 45,809 ಯುನಿಟ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತ್ತು.ಇನ್ನು ಹ್ಯುಂಡೈ ಮೋಟಾರ್ ಇಂಡಿಯಾ ಕಂಪನಿಯ ರಫ್ತು ಬಗ್ಗೆ ಹೇಳುವುದಾದರೆ, ಕಂಪನಿಯು ರಫ್ತಿನಲ್ಲಿ 79.4% ನಷ್ಟು ಬೆಳವಣಿಗೆಯನ್ನು ಸಾಧಿಸಿದೆ. 2020ರ ಆಗಸ್ಟ್ ತಿಂಗಳಿನಲ್ಲಿ ಕಂಪನಿಯು ಭಾರತದಿಂದ ಒಟ್ಟು 6,800 ಯುನಿಟ್ ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿತ್ತು.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ Hyundai Casper

ಒಟ್ಟಿನಲ್ಲಿ ಬಹುನಿರೀಕ್ಷಿತ ಹೊಸ ಹುಂಡೈ ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯು ತಾಯಿನಾಡು ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗಿದೆ. ಈ ಮೈಕ್ರೋ ಎಸ್‍ಯುವಿಗೆ ಮೊದಲ ದಿನವೇ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ. ಇನ್ನು ಈ ಹುಂಡೈ ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

Article Published On: Saturday, September 18, 2021, 10:25 [IST]
English summary
Hyundai launched new casper micro suv in south korea details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+