ಅಲ್ಕಾಜರ್ ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಘೋಷಣೆ ಮಾಡಿದ ಹ್ಯುಂಡೈ
ಹ್ಯುಂಡೈ ಕಂಪನಿಯು ತನ್ನ ಬಹುನೀರಿಕ್ಷಿತ ಅಲ್ಕಾಜರ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಹಲವಾರು ತಾಂತ್ರಿಕ ಸೌಲಭ್ಯಗಳ ಆಕ್ಸೆಸರಿಸ್ ಪ್ಯಾಕೇಜ್ ಪಡೆದುಕೊಂಡಿದೆ.

ಪ್ರೀಮಿಯಂ ಎಸ್‌ಯುವಿ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಕ್ಸೆಸರಿಸ್ ಹೊರತು ಮತ್ತಷ್ಟು ಹೊಸ ಪರಿಕರಗಳನ್ನು ನೀಡುವ ಉದ್ದೇಶದಿಂದ ಹೆಚ್ಚುವರಿ ಮೌಲ್ಯದೊಂದಿಗೆ ಹ್ಯುಂಡೈ ಕಂಪನಿಯು ಡಾರ್ಕ್, ಎಲಿವೇಟರ್, ಲಗ್ಷುರಿ ಮತ್ತು ಸುಪ್ರೀಂ ಆಕ್ಸೆಸರಿಸ್ ಪ್ಯಾಕ್ ಬಿಡುಗಡೆ ಮಾಡಿದ್ದು, ಬೆಲೆ ಆಧಾರದ ಮೇಲೆ ವಿವಿಧ ಪ್ಯಾಕೇಜ್ ಹಲವು ಹೊಸ ಆಕ್ಸೆಸರಿಸ್ ಸೌಲಭ್ಯಗಳನ್ನು ವಿವಿಧ ಪ್ಯಾಕೇಜ್‌ನಲ್ಲಿ ನೀಡಲಾಗಿದೆ.

ಆಕ್ಸೆಸರಿಸ್ ಪ್ಯಾಕೇಜ್ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ರೂ. 12,715 ರಿಂದ ರೂ. 30,898 ಬೆಲೆ ಹೊಂದಿದ್ದು, ಆಸಕ್ತ ಗ್ರಾಹಕರಿಗಾಗಿ ಮಾತ್ರ ಈ ಹೆಚ್ಚುವರಿ ಆಕ್ಸೆಸರಿಸ್ ಪ್ಯಾಕೇಜ್ ಖರೀದಿ ಮಾಡಬಹುದು.

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಕಾರಿನ ವಿವಿಧ ತಾಂತ್ರಿಕ ಅಂಶಗಳಿಗೆ ಹೆಚ್ಚಿನ ಮಟ್ಟದ ಕ್ರೋಮ್ ಸೌಲಭ್ಯ ದೊರಲಿದ್ದು, ಒಳಾಂಗಣ ಸೌಲಭ್ಯಗಳನ್ನು ಒಳಗೊಂಡ ಹಲವು ಪರಿಕರಗಳು ದೊರೆಯಲಿವೆ. ಸುಪ್ರೀಂ ಪ್ಯಾಕೇಜ್ ಹೆಚ್ಚುವರಿಯಾಗಿ ಪ್ರೀಮಿಯಂ ಸೀಟ್ ಕವರ್‌ಗಳು ದೊರೆಯಲಿದ್ದು, ಹೆಚ್ಚಿನ ಮಟ್ಟದ ಪ್ರೀಮಿಯಂ ಬಯಸುವವರಿಗೆ ಹೊಸ ಆಕ್ಸೆಸರಿಸ್ ಪ್ಯಾಕೇಜ್ ಅನುಕೂಲವಾಗಿದೆ.

ಹೊಸ ವಾಹನಗಳ ಉತ್ಪಾದನೆ, ಮಾರಾಟದಲ್ಲಿ ಸಾಕಷ್ಟು ಸುಧಾರಣೆ ಕಂಡಿರುವ ಭಾರತೀಯ ಆಟೋ ಉದ್ಯಮದಲ್ಲಿ ಎಸ್‌ಯುವಿ ಸೆಗ್ಮೆಂಟ್ ತೀವ್ರವಾಗಿ ಬೆಳವಣಿಗೆ ಕಾಣುತ್ತಿದ್ದು, ದೇಶದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಹ್ಯುಂಡೈ ಮೋಟಾರ್ಸ್ ಕಂಪನಿಯು ತನ್ನ ಹೊಚ್ಚ ಹೊಸ ಅಲ್ಕಾಜರ್ ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹೊಸ ಅಲ್ಕಾಜರ್ ಕಾರು ಮಾದರಿಯುು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯಗಳೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ತೀವ್ರ ಪೈಪೋಟಿ ನೀಡುವ ಸಿದ್ದತೆಯಲ್ಲಿದ್ದು, ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಆಧರಿಸಿ ನಿರ್ಮಾಣವಾಗಿರುವ ಹೊಸ ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳೊಂದಿಗೆ ಸೆಗ್ಮೆಂಟ್ ಇನ್ ಫಸ್ಟ್ ಫೀಚರ್ಸ್‍ಗಳನ್ನು ಹೊಂದಿದೆ.

2,760-ಎಂಎಂ ವ್ಹೀಲ್ ಬೆಸ್ ಹೊಂದಿರುವ ಹೊಸ ಕಾರು ಕ್ರೆಟಾ ಮಾದರಿಗಿಂತಲೂ ಹೆಚ್ಚಿನ ಸ್ಥಳಾವಕಾಶದೊಂದಿಗೆ ಮೂರನೇ ಆಸನ ಸಾಲು ಹೊಂದಿದ್ದು, ಹೈ ಎಂಡ್ ಮಾದರಿಗಳಲ್ಲಿ 2.0-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ ಮತ್ತು ಆರಂಭಿಕ ಮಾದರಿಗಳಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದೆ.

2.0-ಲೀಟರ್(1,999 ಸಿಸಿ) ಎಂಪಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಮಾದರಿಗಳು ಉತ್ತಮ ಇಂಧನ ದಕ್ಷತೆಯೊಂದಿಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ಪೆಟ್ರೋಲ್ ಮಾದರಿಯು 157-ಬಿಎಚ್‌ಪಿ, 191-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ ಡೀಸೆಲ್ ಮಾದರಿಯು 113.4-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಅಲ್ಕಾಜರ್ ಕಾರು ಪ್ಲ್ಯಾಟಿನಂ, ಪ್ರೆಸ್ಟೀಜ್, ಸಿಗ್ನೆಚೆರ್, ಪ್ಲ್ಯಾಟಿನಂ ಆಪ್ಷನ್, ಪ್ರೆಸ್ಟೀಜ್ ಆಪ್ಷನ್ ಮತ್ತು ಸಿಗ್ನೆಚೆರ್ ಆಪ್ಷನ್ ಎನ್ನುವ ಆರು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.30 ಲಕ್ಷದಿಂದ ಟಾಪ್ ಎಂಡ್ ಮಾದರಿಯ ರೂ. 19.99 ಲಕ್ಷ ಬೆಲೆ ಹೊಂದಿದೆ.


Click it and Unblock the Notifications








