ನ್ಯೂ ಜನರೇಷನ್ ಕ್ರೆಟಾ ಕಾರು ಮಾರಾಟದಲ್ಲಿ ಹ್ಯುಂಡೈ ಹೊಸ ದಾಖಲೆ

ಹ್ಯುಂಡೈ ನಿರ್ಮಾಣದ ಕ್ರೆಟಾ ನ್ಯೂ ಜನರೇಷನ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾಗಿ ಒಂದು ವರ್ಷ ಪೂರೈಸಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿರುವ ಕ್ರೆಟಾ ಆವೃತ್ತಿಯು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ನ್ಯೂ ಜನರೇಷನ್ ಕ್ರೆಟಾ ಕಾರು ಮಾರಾಟದಲ್ಲಿ ಹ್ಯುಂಡೈ ಹೊಸ ದಾಖಲೆ

2020ರ ಮಾರ್ಚ್ 16ರಂದು ನ್ಯೂ ಜನರೇಷನ್ ಕ್ರೆಟಾ ಕಾರು ಮಾದರಿಯನ್ನು ಭಾರೀ ಬದಲಾವಣೆಯೊಂದಿಗೆ ಬಿಡುಗಡೆಗೊಳಿಸಿದ ಹ್ಯುಂಡೈ ಕಂಪನಿಯು ಸರಿಯಾಗಿ ಒಂದು ವರ್ಷದ ಅವಧಿಯಲ್ಲಿ 1.21 ಲಕ್ಷ ಯುನಿಟ್ ಮಾರಾಟಗೊಳಿಸಿದ್ದು, ನ್ಯೂ ಜನರೇಷನ್ ಮಾದರಿಯೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ನ್ಯೂ ಜನರೇಷನ್ ಕ್ರೆಟಾ ಕಾರು ಮಾರಾಟದಲ್ಲಿ ಹ್ಯುಂಡೈ ಹೊಸ ದಾಖಲೆ

ಹ್ಯುಂಡೈ ಕಂಪನಿಯು ಕ್ರೆಟಾ ಮಾದರಿಯನ್ನು ಭಾರತದಲ್ಲಿ ಮೊದಲ ಬಾರಿಗೆ 2016ರಲ್ಲಿ ಪರಿಚಯಿಸಿದ್ದ ಹ್ಯುಂಡೈ ಕಂಪನಿಯು ಕಳೆದ ವರ್ಷ ಮಾರ್ಚ್‌ನಲ್ಲಿ ನ್ಯೂ ಜನರೇಷನ್ ಮಾದರಿಯೊಂದಿಗೆ ಬಿಡುಗಡೆ ಮಾಡಿತ್ತು. ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ ಕ್ರೆಟಾ ಕಾರು ನ್ಯೂ ಜನರೇಷನ್ ಮಾದರಿಯ ನಂತರ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ನ್ಯೂ ಜನರೇಷನ್ ಕ್ರೆಟಾ ಕಾರು ಮಾರಾಟದಲ್ಲಿ ಹ್ಯುಂಡೈ ಹೊಸ ದಾಖಲೆ

ಕಳೆದ ಜನವರಿಯಲ್ಲಿ ಕ್ರೆಟಾ ಮಾದರಿಯು ಭಾರತದಲ್ಲಿ ಬಿಡುಗಡೆಯಾದ ನಂತರ ಇದುವರೆಗೆ ಒಟ್ಟು 5 ಲಕ್ಷ ಯುನಿಟ್ ಮಾರಾಟಗೊಂಡಿದ್ದು, 2020ರ ಮಾರ್ಚ್ 16ರಿಂದ ಇದುವರೆಗೆ ಕೇವಲ ಒಂದೇ ವರ್ಷದಲ್ಲಿ 1.21 ಲಕ್ಷ ಯುನಿಟ್ ಮಾರಾಟಗೊಂಡಿದೆ.

ನ್ಯೂ ಜನರೇಷನ್ ಕ್ರೆಟಾ ಕಾರು ಮಾರಾಟದಲ್ಲಿ ಹ್ಯುಂಡೈ ಹೊಸ ದಾಖಲೆ

ಕೈಗೆಟುಕುವ ಬೆಲೆ, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಕ್ರೆಟಾ ಕಾರು ಕಾಲ ಕಾಲಕ್ಕೆ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳುತ್ತಾ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಹ್ಯುಂಡೈ ಕಂಪನಿಯ ಇತರೆ ಕಾರುಗಳ ಮಾದರಿಗಳ ಪೈಕಿ ಕ್ರೆಟಾ ಮಾದರಿಯು ಭಾರೀ ಪ್ರಮಾಣದ ಆದಾಯ ತಂದುಕೊಟ್ಟಿದೆ.

ನ್ಯೂ ಜನರೇಷನ್ ಕ್ರೆಟಾ ಕಾರು ಮಾರಾಟದಲ್ಲಿ ಹ್ಯುಂಡೈ ಹೊಸ ದಾಖಲೆ

ಸದ್ಯ ಮಾರುಕಟ್ಟೆಯಲ್ಲಿ ಎರಡನೇ ತಲೆಮಾರಿನ ಕ್ರೆಟಾ ಮಾದರಿಯು ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಹಳೆಯ ತಲೆಮಾರಿನ ಆವೃತ್ತಿಗಿಂತಲೂ ಹೆಚ್ಚು ಬಲಿಷ್ಠ, ಪ್ರೀಮಿಯಂ ಫೀಚರ್ಸ್ ಮತ್ತು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವುದು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.

ನ್ಯೂ ಜನರೇಷನ್ ಕ್ರೆಟಾ ಕಾರು ಮಾರಾಟದಲ್ಲಿ ಹ್ಯುಂಡೈ ಹೊಸ ದಾಖಲೆ

ಹೊಸ ಕ್ರೆಟಾ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ನ್ಯೂ ಜನರೇಷನ್ ಕ್ರೆಟಾ ಕಾರು ಮಾರಾಟದಲ್ಲಿ ಹ್ಯುಂಡೈ ಹೊಸ ದಾಖಲೆ

ಕ್ರೆಟಾ ಆವೃತ್ತಿಯಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ತೆಗೆದುಹಾಕಲಾಗಿದ್ದು, ಸಾಮಾನ್ಯ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಖರೀದಿಸಬಹುದಾಗಿದೆ.

ನ್ಯೂ ಜನರೇಷನ್ ಕ್ರೆಟಾ ಕಾರು ಮಾರಾಟದಲ್ಲಿ ಹ್ಯುಂಡೈ ಹೊಸ ದಾಖಲೆ

1.5-ಲೀಟರ್ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ನ್ಯೂ ಜನರೇಷನ್ ಕ್ರೆಟಾ ಕಾರು ಮಾರಾಟದಲ್ಲಿ ಹ್ಯುಂಡೈ ಹೊಸ ದಾಖಲೆ

ಕ್ರೆಟಾ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.17.53 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

More from DriveSpark

Article Published On: Wednesday, March 17, 2021, 8:45 [IST]
English summary
Hyundai New Generation Creta Completes 1 Year, Sold 1.21 Lakh Units. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+