ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ Hyundai Creta ಎಸ್‍ಯುವಿ

ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಟಾಪ್ ಸೆಲ್ಲಿಂಗ್ ಮಾಡೆಲ್ ಕ್ರೆಟಾವನ್ನು ಮಿಡ್-ಲೈಫ್ ಅಪ್‌ಡೇಟ್ ಮಾಡಲು ಸಜ್ಜಾಗಿದೆ. ಇದೀಗ ಹ್ಯುಂಡೈ ಕಂಪನಿಯು ಈ ಹೊಸ ಕ್ರೆಟಾ ಎಸ್‍ಯುವಿಯ ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ Hyundai Creta ಎಸ್‍ಯುವಿ

2022ರ ಹುಂಡೈ ಕ್ರೆಟಾ ಫೇಸ್ ಲಿಫ್ಟ್ ಅನ್ನು ಮೊದಲು ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು, ನಂತರ ಭಾರತದಲ್ಲಿ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ನವೀಕರಿಸಿದ ಮಾದರಿಯನ್ನು ಮರೆಮಾಚಿದ ಅವತಾರದಲ್ಲಿ ಕಾಣಿಸಿಕೊಂಡಿದೆ. ಇದನ್ನು ಕೊರಿಯಾ ಮತ್ತು ಇಂಡೋನೇಷ್ಯಾದಲ್ಲಿ ಹಲವು ಬಾರಿ ಟೆಸ್ಟ್'ಗೆ ಒಳಪಡಿಸಲಾಗಿದೆ. ಇನ್ನು ಬಿಡುಗಡೆಯಾದ ಹೊಸ ಟೀಸರ್‌ಗಳು 2022ರ ಹುಂಡೈ ಕ್ರೆಟಾ ಹೊಸ ಟ್ಯೂಸಾನ್ ಎಸ್‍ಯುವಿ ಮಾದರಿ ಪ್ರೇರಿತ ಮುಂಭಾಗದ ಫಾಸಿಕವನ್ನು ಹೊಂದಿರುತ್ತದೆ ಎಂದು ಖಚಿತವಾಗಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ Hyundai Creta ಎಸ್‍ಯುವಿ

ಈ ಹೊಸ ವಿನ್ಯಾಸದ ಪ್ಯಾರಾಮೆಟ್ರಿಕ್ ಗ್ರಿಲ್ ಹ್ಯುಂಡೈನ ಸೆನ್ಸೂಯಸ್ ಸ್ಪೋರ್ಟಿನೆಸ್ ವಿನ್ಯಾಸದೊಂದಿಗೆ ರಿಫ್ರೆಶ್ ಲುಕ್ ನೀಡುತ್ತದೆ. ಈಗಿರುವ ಮಾದರಿಗೆ ಹೋಲಿಸಿದರೆ, ಹೊಸದು ಹೆಚ್ಚು ಆಯತಾಕಾರದ ಆಕಾರದ ಹೆಡ್ ಲ್ಯಾಂಪ್ ಯುನಿಟ್‌ಗಳನ್ನು ಮೊದಲಿದ್ದಕ್ಕಿಂತ ಸ್ವಲ್ಪ ಕೆಳಗೆ ಇರಿಸಲಾಗಿದೆ. ಇದರ ಎಲ್‌ಇಡಿ ಡಿಆರ್‌ಎಲ್‌ಗಳು (ಡೇಟೈಮ್ ರನ್ನಿಂಗ್ ಲೈಟ್ಸ್) ಹೊಸ ಟ್ಯೂಸನ್ ನಿಂದ ಎರವಲು ಪಡೆದಿವೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ Hyundai Creta ಎಸ್‍ಯುವಿ

ಹೊಸ ಕ್ರೆಟಾ ಫೇಸ್‌ಲಿಫ್ಟ್ ಪರಿಷ್ಕೃತ ಬಂಪರ್‌ಗಳು, ಹೊಸ ಫಾಕ್ಸ್ ಸ್ಕಿಡ್ ಪ್ಲೇಟ್ ಮತ್ತು ಫಾಗ್ ಲ್ಯಾಂಪ್ ಜೋಡಣೆ, ಹೊಸದಾಗಿ ವಿನ್ಯಾಸಗೊಳಿಸಿದ ಅಲಾಯ್ ವ್ಹೀಲ್ ಗಳು ಮತ್ತು ಸ್ಪ್ಲಿಟ್ ಟೈಲ್‌ಲ್ಯಾಂಪ್‌ಗಳೊಂದಿಗೆ ಬರುವ ಸಾಧ್ಯತೆಯಿದೆ. 2022ರ ಹ್ಯುಂಡೈ ಕ್ರೆಟಾ ಫೇಸ್ ಲಿಫ್ಟ್‌ನ ಆಂತರಿಕ ವಿನ್ಯಾಸವು ಬದಲಾಗದೆ ಉಳಿಯುತ್ತದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ Hyundai Creta ಎಸ್‍ಯುವಿ

ಎಸ್‌ಯುವಿ ಹೊಸ ಲೆದರ್ ಹೊದಿಕೆಯೊಂದಿಗೆ ಬರಬಹುದು. ಈ ಎಸ್‍ಯುವಿಯು ಹೆಚ್‍ಯುಡಿ (ಹೆಡ್-ಅಪ್ ಯುನಿಟ್), 360 ಡಿಗ್ರಿ ಕ್ಯಾಮೆರಾ ಮತ್ತು ADAS (ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಂ) ಸೇರಿದಂತೆ ಕೆಲವು ಸುಧಾರಿತ ಫೀಚರ್ಸ್ ಗಳೊಂದಿಗೆ ವಾಹನ ತಯಾರಕರು ಹೊಸ ಮಾದರಿಯನ್ನು ಸಜ್ಜುಗೊಳಿಸಬಹುದು ಎಂದು ವದಂತಿಗಳಿವೆ. ಉಳಿದ ಫೀಚರ್ಸ್ ಗಳು ಈಗಿರುವ ಮಾದರಿಯಿಂದ ಮುಂದೆ ಸಾಗಿಸಲಾಗುವುದು.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ Hyundai Creta ಎಸ್‍ಯುವಿ

ಇಂಡೋನೇಷ್ಯಾದಲ್ಲಿ ಈ ಹೊಸ ಹುಂಡೈ ಕ್ರೆಟಾ ಎಸ್‍ಯುವಿಯು 1.5 ಲೀಟರ್ ಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ 1.5 ಲೀಟರ್ ನ್ಯಾಚುರಲ್ ಪೆಟ್ರೋಲ್ ಎಂಜಿನ್, 1.4 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುವ ಸಾಧ್ಯತೆಯಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ Hyundai Creta ಎಸ್‍ಯುವಿ

ಪ್ರಸ್ತುತ ಮಾದರಿಯಂತೆಯೇ, 2022ರ ಹ್ಯುಂಡೈ ಕ್ರೆಟಾ ಫೇಸ್ ಲಿಫ್ಟ್ ಟರ್ಬೊ-ಪೆಟ್ರೋಲ್ ರೂಪಾಂತರಗಳು ಕೇವಲ 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ Hyundai Creta ಎಸ್‍ಯುವಿ

ಇನ್ನು ಹ್ಯುಂಡೈ ತನ್ನ ಎರಡನೇ ತಲೆಮಾರಿನ ಕ್ರೆಟಾ ಎಸ್‌ಯುವಿಯನ್ನು ಹೊಸ ನವೀಕರಣಗಳೊಂದಿಗೆ ಬ್ರೆಜಿಲ್‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಗಿತ್ತು. ಇದು ಹಲವು ಹೊಸ ನವೀಕರಣಗಳನ್ನು ಪಡೆದುಕೊಂಡಿತ್ತು.ಇದು ಬ್ರೆಜಿಲಿಯನ್-ಸ್ಪೆಕ್ ಹೊಸ ಹುಂಡೈ ಕ್ರೆಟಾ ಮಾದರಿಯೊಂದಿಗೆ ಸ್ಟೈಲಿಂಗ್ ಬದಲಾವಣೆಗಳನ್ನು ಹಂಚಿಕೊಂಡಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ Hyundai Creta ಎಸ್‍ಯುವಿ

ಈ ಹೊಸ ಕ್ರೆಟಾ ಎಸ್‍ಯುವಿಯಲ್ಲಿ ಹೊಸ 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಆಯ್ಕೆಯೊಂದಿಗೆ ನೀಡಲಾಗಿದೆ. ಈ ಎಸ್‌ಯುವಿಯು ಬ್ರಾಂಡ್‌ನ ಹೊಸ ಸಂವೇದನಾಶೀಲ ಸ್ಪೋರ್ಟಿ ವಿನ್ಯಾಸದ ಶೈಲಿಯನ್ನು ಆಧರಿಸಿದೆ. ಇದನ್ನು ನಾವು ಈಗಾಗಲೇ ಅಲ್ಕಾಜರ್, ಟ್ಯೂಸಾನ್ ಮತ್ತು ಪಾಲಿಸೇಡ್ ಸೇರಿದಂತೆ ದೊಡ್ಡ ಹುಂಡೈ ಕಾರುಗಳಲ್ಲಿ ನೋಡಿದ್ದೇವೆ .ಹ್ಯುಂಡೈ ಕಂಪನಿಯು ಬ್ರೆಜಿಲ್ ನಲ್ಲಿರುವ ಕಂಪನಿಯ ಪಿರಾಸಿಕ್ಯಾಬಾ ಕಾರು ತಯಾರಕ ಘಟಕದಲ್ಲಿ ಈ ಎಸ್‍ಯುವಿಯ ಉತ್ಪಾದನೆಯನ್ನು ಪ್ರಾರಂಭಿಸಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ Hyundai Creta ಎಸ್‍ಯುವಿ

ಇದರ ಕ್ಯಾಬಿನ್ ಒಳಗೆ, ಹೊಸ ಹುಂಡೈ ಕ್ರೆಟಾ ಭಾರತ-ಸ್ಪೆಕ್ ಮಾದರಿಯಂತೆಯೇ ಅದೇ ವಿನ್ಯಾಸವನ್ನು ಪಡೆಯುತ್ತದೆ. ಇದು ಸ್ಮಾರ್ಟ್ ಫೋನ್ ಕನೆಕ್ಟ್, ಆಟೋಮ್ಯಾಟಿಕ್ ಎಸಿ, ವೈರ್ಲೆಸ್ ಚಾರ್ಜರ್, ಚಾಲಿತ ಚಾಲಕನ ಆಸನ, ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಇತರವುಗಳೊಂದಿಗೆ ದೊಡ್ಡ 10.25-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಇನ್ಫೋಟೈನ್ಮೆಂಟ್ ಸಿಸ್ಟಂ ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಒಳಗೊಂಡಿದೆ.

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ Hyundai Creta ಎಸ್‍ಯುವಿ

ಈ ಎಸ್‍ಯುವಿಯು ಸಂಪೂರ್ಣ ಎಲ್‌ಇಡಿ ಹೆಡ್‌ಲೈಟ್‌ಗಳು, 360 ಡಿಗ್ರಿ ಕ್ಯಾಮರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಲೇನ್-ಅಸಿಸ್ಟ್, ಆರು ಏರ್‌ಬ್ಯಾಗ್‌ಗಳು ಇತ್ಯಾದಿಗಳನ್ನು ಪಡೆಯುತ್ತದೆ. ಇನ್ನು ಈ ಕ್ರೆಟಾ ಎಸ್‍ಯುವಿಯು 4.30 ಎಂಎಂ ಉದ್ದ, 1.79 ಎಂಎಂ ಅಗಲ ಮತ್ತು 1.62 ಎಂಎಂ ಎತ್ತರವನ್ನು ಹೊಂದಿದೆ, ಈ ಎಸ್‍ಯುವಿಯು 2.61 ಮೀಟರ್ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.ಇದರೊಂದಿಗೆ ಈ ಎಸ್‍ಯುವಿಯಲ್ಲಿ 422-ಲೀಟರ್‌ಗಳಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿದೆ,

ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ Hyundai Creta ಎಸ್‍ಯುವಿ

ಹ್ಯುಂಡೈ ಕಂಪನಿಯು ಕ್ರೆಟಾ ಎಸ್‍ಯುವಿಯ ಮಾರಾಟದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಕಂಪನಿಯು ಮಿಡ್-ಲೈಫ್ ಅಪ್‌ಡೇಟ್ ನೊಂದಿಗೆ ಪರಿಚಯಿಸಲಿದೆ. ಹ್ಯುಂಡೈ ಕ್ರೆಟಾ ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್‍ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Thursday, October 21, 2021, 19:17 [IST]
English summary
Hyundai shared first teaser of upcoming 2022 creta suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+