ಹೊಸ ಹ್ಯುಂಡೈ ಕೋನಾ ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ
ಹ್ಯುಂಡೈ ಎನ್ ಸರಣಿಯ ಪರ್ಫಾಮೆನ್ಸ್ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಬಿಎಂಡಬ್ಲ್ಯು ಎಂ, ಸ್ಕೋಡಾದ ಆರ್‌ಎಸ್ ಮಾದರಿಗಳ ಹಾಗೇ ಹ್ಯುಂಡೈ ಕಂಪನಿಯ ಎನ್ ಸರಣಿಯ ಕಾರುಗಳು ಪರ್ಫಾಮೆನ್ಸ್ ಮಾದರಿಗಳಾಗಿವೆ.

ಇದೀಗ ಹ್ಯುಂಡೈ ಕಂಪನಿಯು ತನ್ನ ಹೊಸ ಕೋನಾ ಎನ್ ಪರ್ಫಾಮೆನ್ಸ್ ಮಾದರಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಹೊಸ ಕೋನಾ ಎನ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಟೀಸರ್ ಚಿತ್ರಗಳು ಈ ಪರ್ಫಾಮೆನ್ಸ್ ಮಾದರಿಯ ವಿನ್ಯಾಸದ ವಿವರಗಳು ಬಹಿರಂಗವಾಗಿದೆ. ಕೋನಾ ಎನ್ ಕಾರು ಹ್ಯುಂಡೈನ ಎನ್ ಸರಣಿಗೆ ಹೊಸ ಸೇರ್ಪಡೆಯಾಗಲಿದ್ದು, ಎಸ್‌ಯುವಿ ಬಾಡಿ ಪ್ರಕಾರವನ್ನು ಹೊಂದಿರುವ ಮೊದಲ ಎನ್ ಮಾದರಿಯಾಗಿದೆ.

ಹೊಸ ಕೋನಾ ಎನ್ ಕಾರು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ, ಇದು ವಿಶಾಲ ಮತ್ತು ಕಡಿಮೆ ನಿಲುವನ್ನು ಹೊಂದಿದೆ. ಇನ್ನು ಸಾಮಾನ್ಯ ಕೋನಾ ಕಾರಿನ ಕೆಲವು ವಿನ್ಯಾಸ ಅಂಶಗಳನ್ನು ಇದರಲ್ಲಿ ನೋಡಬಹುದಾಗಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ

ಹ್ಯುಂಡೈ ಕೋನಾ ಎನ್ ಕಾರಿನ ಮುಂಭಾಗ ಸ್ಪೋರ್ಟಿ ಏರ್ ಇನ್ ಟೆಕ್ ಅನ್ನು ಹೊಂದಿದೆ. ಇನ್ನು ಎನ್ ಬ್ಯಾಡ್ಜ್ ನೊಂದಿಗೆ ಬೋಲ್ಡರ್ ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಪಡೆಯುತ್ತದೆ.ಕೆಳಗಿನ ಗ್ರಿಲ್ ಏರೋನಾಟಿಕ್ ಫ್ಯೂಸ್ಲೇಜ್ನಿಂದ ಸ್ಫೂರ್ತಿ ಪಡೆದ ಆಕಾರವನ್ನು ಹೊಂದಿದೆ ಮತ್ತು ಕಾರಿನ ಬದಿಗೆ ವಿಸ್ತರಿಸುತ್ತದೆ.

ಹ್ಯುಂಡೈ ಕೋನಾ ಎನ್ ಕಾರಿನ ಹಿಂಭಾಗದಲ್ಲಿ ದೊಡ್ಡ ಡಬಲ್-ವಿಂಗ್ ರೂಫ್ ಸ್ಪಾಯ್ಲರ್ ಅನ್ನು ಪಡೆಯುತ್ತದೆ. ಇನ್ನು ತ್ರಿಕೋನ ಬ್ರೇಕ್ ಲೈಟ್, ದೊಡ್ಡ ಎನ್ ಡ್ಯುಯಲ್ ಎಕ್ಸಾಸ್ಟ್ ಮಫ್ಲರ್‌ಗಳು ಮತ್ತು ಹಿಂಭಾಗದ ಬಂಪರ್‌ನಲ್ಲಿ ದೊಡ್ಡ ಡಿಫ್ಯೂಸರ್ ಅನ್ನು ಕೆಳಕ್ಕೆ ಪಡೆಯುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಈ ಪರ್ಫಾಮೆನ್ಸ್ ಕಾರಿನ ಬಾಡಿ-ಬಣ್ಣದ ಫೆಂಡರ್‌ಗಳ ಮೂಲಕ ಸ್ಪೋರ್ಟಿ ಲುಕ್‌ಗೆ ಮತ್ತಷ್ಟು ಹೆಚ್ಚಿದೆ. ಹ್ಯುಂಡೈ ಕೋನಾ ಎನ್ ವಿಶೇಷ ಅಲಾಯ್ ವ್ಹೀಲ್ ಗಳು ಮತ್ತು ಕೆಂಪು ಬಣ್ಣದ ಅಸ್ಸೆಂಟ್ ಗಳನ್ನು ಹೊಂದಿದೆ. ಇನ್ನು ಒಟ್ಟಾರೆಯಾಗಿ ಹ್ಯುಂಡೈ ಕೋನಾ ಎನ್ ಕಾರು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಇನ್ನು ಹೊಸ ಹ್ಯುಂಡೈ ಕೋನಾ ಎನ್ ಕಾರಿನಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 275 ಬಿಹೆಚ್‍ಪಿ ಪವರ್ ಮತ್ತು 353 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಇನ್ನು ಹೊಸ ಕೋನಾ ಎನ್ ಪರ್ಫಾಮೆನ್ಸ್ ಕಾರು ಎಫ್‌ಡಬ್ಲ್ಯೂಡಿ ಅಥವಾ ಎಡಬ್ಲ್ಯೂಡಿ ಆಯ್ಕೆಯೊಂದಿಗೆ ಬರಲಿದೆ. ಇನ್ನು ಈ ಕಾರಿನಲ್ಲಿ ಲಾಂಚ್ ಕಂಟ್ರೋಲ್ ಸಿಸ್ಟಂ ಅನ್ನು ಸಹ ಹೊಂದಿರುತ್ತದೆ,

ಈ ಹೊಸ ಹ್ಯುಂಡೈ ಕೋನಾ ಎನ್ ಪರ್ಫಾಮೆನ್ಸ್ ಕಾರು ಕಾರಿನ ಬಿಡುಗಡೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇನ್ನು ಭಾರತದಲ್ಲಿ ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರನ್ನು ಬಿಡುಗಡೆಗೊಳಿಸಲಿದೆ.


Click it and Unblock the Notifications