ಪವರ್‌ಫುಲ್ ಎಂಜಿನ್‌ನೊಂದಿಗೆ ಅನಾವರಣಗೊಂಡ ಹ್ಯುಂಡೈ ಕೋನಾ ಎನ್ ಎಸ್‍ಯುವಿ
ಹ್ಯುಂಡೈ ಎನ್ ಸರಣಿಯ ಪರ್ಫಾಮೆನ್ಸ್ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಇದೀಗ ಹ್ಯುಂಡೈ ಎನ್ ಸರಣಿಯ ಹೊಸ ಕೋನಾ ಎನ್ ಪರ್ಫಾಮೆನ್ಸ್ ಎಸ್‍ಯುವಿಯನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಿದೆ.

ಹೊಸ ಹ್ಯುಂಡೈ ಕೋನಾ ಎನ್ ಎಸ್‍ಯುವಿಯು ಐ30 ಮಾದರಿಯಲ್ಲಿರುವ "ಮೋಟರ್ ರ್ಸ್ಪೋರ್ಟ್-ಪ್ರೇರಿತ" ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತದೆ. ಈ ಹೊಸ ಹ್ಯುಂಡೈ ಕೋನಾ ಎನ್ ಎಸ್‍ಯುವಿಯಲ್ಲಿ ಟರ್ಬೋಚಾರ್ಜ್ಡ್ 2.0ಎಲ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 276 ಬಿಹೆಚ್‌ಪಿ ಮತ್ತು 392 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಪವರ್ ಫುಲ್ ಎಂಜಿನ್ ಆಗಿದೆ.

ಇನ್ನು ಈ ಹೊಸ ಕೋನಾ ಎನ್ ಎಸ್‍ಯುವಿಯು 5.5 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಅಲ್ಲದೇ ಈ ಪರ್ಫಾಮೆನ್ಸ್ ಎಸ್‍ಯುವಿಯು 240 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಎಂಜಿನ್ ನೊಂದಿಗೆ 8-ಸ್ಪೀಡ್ ಡಿಸಿಟಿ (ಎನ್ ಡಿಸಿಟಿ) ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಎನ್ ಪವರ್ ಶಿಫ್ಟ್, ಎನ್ ಗ್ರಿನ್ ಶಿಫ್ಟ್ ಮತ್ತು ಎನ್ ಟ್ರ್ಯಾಕ್ ಸೆನ್ಸ್ ಶಿಫ್ಟ್ ಎಂಬ ಮೂರು ಹೈ-ಪರ್ಫಾಮೆನ್ಸ್ ಮೋಡ್ ಗಳನ್ನು ಹೊಂದಿರುತ್ತದೆ.

2022ರ ಹ್ಯುಂಡೈ ಕೋನಾ ಎನ್ ಎಸ್‍ಯುವಿಯು 4215 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1565 ಎಂಎಂ ಎತ್ತರವನ್ನು ಹೊಂದಿದೆ. ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ, ಈ ಪರ್ಫಾಮೆನ್ಸ್ ಎಸ್‍ಯುವಿಯು 10 ಎಂಎಂ ಹೆಚ್ಚು ಉದ್ದವನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಈ ಎಸ್‍ಯುವಿಯು 2600 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದ್ದರೆ, 361-ಲೀಟರ್ ಸ್ಟ್ರೋರೇಜ್ ಸ್ಪೇಸ್ ಅನ್ನು ಹೊಂದಿದೆ. 2022ರ ಹ್ಯುಂಡೈ ಕೋನಾ ಎನ್ ಅನ್ನು ಗರಿಷ್ಠ ತೂಕ ಇಳಿಕೆ ಮತ್ತು ಹೆಚ್ಚಿನ ಪವರ್ ಅನ್ನು ಕೇಂದ್ರೀಕರಿಸಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಇನ್ನು ಈ ಎಸ್‍ಯುವಿಯು ಸೋನಿಕ್ ಬ್ಲೂ, ಅಲ್ಟಾಸ್ ವೈಟ್, ಫ್ಯಾಂಟಮ್ ಬ್ಲ್ಯಾಕ್ ಪರ್ಲ್, ಡಾರ್ಕ್ ನೈಟ್ ಗ್ರೇ ಪರ್ಲ್, ಸೈಬರ್ ಗ್ರೇ ಮೆಟಾಲಿಕ್, ಪರ್ಫಾರ್ಮೆನ್ಸ್ ಬ್ಲೂ ಮತ್ತು ಇಗ್ನೈಟ್ ರೆಡ್ ಎಂಬ ಬಣ್ಣಗಳಲ್ಲಿ ಲಭ್ಯವಿರಲಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು ಈ ಕೋನಾ ಎನ್ ಎಸ್‍ಯುವಿಯು ಏರೋಡೈನಾಮಿಕ್ ಲೋವರ್ ಗ್ರಿಲ್, ಮೆಷ್ ಡಿಸೈನ್ ವಿನ್ಯಾಸದೊಂದಿಗೆ ಮುಂಭಾಗದ ಗ್ರಿಲ್ ಮತ್ತು ಸಂಯೋಜಿತ ಎನ್ ಲೋಗೊ, ಡಬಲ್-ವಿಂಡ್ ರೂಫ್ ಸ್ಪಾಯ್ಲರ್, ಟ್ರೈಗಲ್ ಬ್ರೇಕ್ ಲೈಟ್, ದೊಡ್ಡ ಡಿಫ್ಯೂಸರ್ ಮತ್ತು ರೆಡ್ ಅಸೆಂಟ್ ಗಳನ್ನು ಒಳಗೊಂಡಿದೆ.

ಹ್ಯುಂಡೈನ ಹೊಸ ಹಾಟ್ ಎಸ್‌ಯುವಿ ಒಳಭಾಗದಲ್ಲಿ ಪರ್ಫಾರ್ಮೆನ್ಸ್ ಹೆಡ್-ಅಪ್-ಡಿಸ್ಪ್ಲೇ (ಎಚ್‌ಯುಡಿ), 10.25-ಇಂಚಿನ ಡಿಜಿಟಲ್ ಎನ್ ಕ್ಲಸ್ಟರ್, 10.25-ಇಂಚಿನ ಎವಿಎನ್ ಟಚ್‌ಸ್ಕ್ರೀನ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಬ್ಲೂಲಿಂಕ್ ಕೆನೆಕ್ಟಿವಿಟಿಯನ್ನು ಒಳಗೊಂಡಿದೆ.

ಇನ್ನು ಈ ಎಸ್‍ಯುವಿಯಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಸೌಂಡ್ ಜನರೇಟರ್, ಲಾಂಚ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಮತ್ತು ಇತರ ತಂತ್ರಜ್ಙಾನಗಳನ್ನು ಒಳಗೊಂಡಿದೆ. ಇನ್ನು ದೊಡ್ಡ ಎಕ್ಸಾಸ್ಟ್ ಮಫ್ಲರ್‌ಗಳು, ಹಗುರವಾದ 19-ಇಂಚಿನ ಖೋಟಾ ಅಲಾಯ್ ವ್ಹೀಲ್ ಗಳು ಅದರ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸುತ್ತದೆ.


Click it and Unblock the Notifications