Just In
Don't Miss!
- News
"ಕಾಂಗ್ರೆಸ್ ಈಗ ಒಡೆದ ಮನೆ; ಮೂರು ಗುಂಪುಗಳ ನಡುವೆ ನಿರಂತರ ಗುದ್ದಾಟ''
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Sports
ಶ್ರೀಲಂಕಾ ವಿರುದ್ಧದ ಸರಣಿಗೆ ವಿಂಡೀಸ್ ತಂಡ ಪ್ರಕಟ, ಗೇಲ್ ವಾಪಸ್
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Lifestyle
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೆಲವೇ ದಿನಗಳಲ್ಲಿ ರಸ್ತೆಗಿಳಿಯಲಿವೆ 400 ಹೊಸ ಸಿಎನ್‌ಜಿ ಬಸ್‌ಗಳು
ಮಧ್ಯಪ್ರದೇಶದ ಇಂದೋರ್‌ನಲ್ಲಿ 400 ಹೊಸ ಸಿಎನ್‌ಜಿ ಬಸ್‌ಗಳನ್ನು ಮಾರ್ಚ್ ತಿಂಗಳಿನಲ್ಲಿ ರಸ್ತೆಗಿಳಿಸಲಾಗುವುದು. ಈ 400 ಹೊಸ ಸಿಎನ್‌ಜಿ ಬಸ್‌ಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ವಿಜಲ್ ನಗರ ಚೌಕದಲ್ಲಿ ಹೊಸ ಬಸ್ ಡಿಪೋ ನಿರ್ಮಿಸಲು ಇಂದೋರ್'ನ ಅಟಲ್ ನಗರ ಸಾರಿಗೆ ಸೇವೆಯು ಯೋಜನೆ ರೂಪಿಸಿದೆ.

ವಿಜಲ್ ನಗರ ಚೌಕದಲ್ಲಿರುವ ಐಎಂಸಿ ವಲಯ ಕಚೇರಿಯ ಹಿಂದೆ ಮೂರು ಎಕರೆ ಜಮೀನಿನಲ್ಲಿ ಬಸ್ ಡಿಪೋ ಸ್ಥಾಪಿಸಲು ಒಂದು ವರ್ಷದ ಹಿಂದೆಯೇ ಟೆಂಡರ್ಕರೆಯಲಾಗಿತ್ತು. ಆದರೆ ಕರೋನಾ ವೈರಸ್ ಹಿನ್ನೆಲೆಯಲ್ಲಿ ಈ ಕಾಮಗಾರಿಯು ಪೂರ್ತಿಯಾಗಲಿಲ್ಲ. ಈಗ 400 ಸಿಎನ್‌ಜಿ ಬಸ್‌ಗಳನ್ನು ಖರೀದಿಸಲು ಅನುಮತಿನೀಡಲಾಗಿದೆ.

ಈ ಬಸ್‌ಗಳ ಕಾರ್ಯಾಚರಣೆಗೆ ಬಸ್ ಡಿಪೋ ಅಗತ್ಯವಿರುವ ಹಿನ್ನೆಲೆಯಲ್ಲಿ ಕೆಲವು ಬದಲಾವಣೆಗಳೊಂದಿಗೆ ಮತ್ತೆ ಟೆಂಡರ್ ಕರೆಯಲಾಗಿದೆ. ಈ ಬಗ್ಗೆ ಮಾತನಾಡಿರುವ ಇಂದೋರ್ ನಗರ ಸಾರಿಗೆ ಸೇವಾ ಅಧಿಕಾರಿಗಳು, ಟೆಂಡರ್ ನೀಡಿದ ನಂತರ ರೂ.11 ಕೋಟಿ ವೆಚ್ಚದಲ್ಲಿ ಸುಮಾರು 6 ತಿಂಗಳ ಅವಧಿಯಲ್ಲಿ ಬಸ್ ಡಿಪೋ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಡಿಪೋ ಬಸ್‌ಗಳ ನಿರ್ವಹಣೆ ಹಾಗೂ ನಿಲುಗಡೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ. ಎಲ್ಲಾ 400 ಹೊಸ ಸಿಎನ್‌ಜಿ ಬಸ್‌ಗಳು ಮಾರ್ಚ್ ಮಧ್ಯದೊಳಗೆ ತಲುಪುವ ನಿರೀಕ್ಷೆಗಳಿವೆ.

ಹೊಸ ಬಸ್‌ಗಳ ಆಗಮನದ ನಂತರ ಕನಿಷ್ಠ 25 ಹೊಸ ಮಾರ್ಗಗಳಲ್ಲಿ ಸೇವೆಯನ್ನು ಆರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇಂದೋರ್‌ನಲ್ಲಿ 400 ಸಿಎನ್‌ಜಿ ಬಸ್‌ಗಳ ಜೊತೆಗೆ ಎಸಿ ಹೊಂದಿರುವ 150 ಸಿಎನ್‌ಜಿ ಬಸ್ ಹಾಗೂ 100 ನಾನ್ ಎಸಿ ಬಸ್‌ಗಳ ಖರೀದಿಗೆ ಅನುಮತಿ ನೀಡಲಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಬಸ್ಸುಗಳ ಆಗಮನದ ನಂತರ ಅವುಗಳ ಕಾರ್ಯಾಚರಣೆಯ ಹೊಸ ಮಾರ್ಗಗಳ ಬಗ್ಗೆ ಹಾಗೂ ಇನ್ನೊಂದು ಬಸ್ ಡಿಪೋವನ್ನು ಸ್ಥಾಪಿಸುವುದರ ಬಗ್ಗೆ ನಿರ್ಧರಿಸಲಾಗುತ್ತದೆ. ಸಿಎನ್‌ಜಿ ವಾಹನಗಳು ಸದ್ಯಕ್ಕೆ ಭಾರತದಲ್ಲಿ ಜನಪ್ರಿಯತೆವಾಗುತ್ತಿವೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದು ಹಾಗೂ ವಾಯುಮಾಲಿನ್ಯದಂತಹ ಸಮಸ್ಯೆಗಳು ಸಿಎನ್‌ಜಿ ವಾಹನಗಳ ಜನಪ್ರಿಯತೆಗೆ ಪ್ರಮುಖ ಕಾರಣಗಳಾಗಿವೆ. ಸಿಎನ್‌ಜಿ ವಾಹನಗಳ ಖರೀದಿಗೆ ಜನರು ಮಾತ್ರವಲ್ಲದೇ, ರಾಜ್ಯ ಸಾರಿಗೆ ನಿಗಮಗಳು ಸಹ ಆಸಕ್ತಿ ವಹಿಸುತ್ತಿವೆ.
MOST READ: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದೆಹಲಿ ರಾಜ್ಯ ಸಾರಿಗೆ ನಿಗಮವು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇಂದೋರ್ ಮಾತ್ರವಲ್ಲದೇ ದೆಹಲಿ ಸಾರಿಗೆ ನಿಗಮವೂ ಹೆಚ್ಚಿನ ಸಿಎನ್‌ಜಿ ಬಸ್‌ಗಳನ್ನು ಖರೀದಿಸಲು ಮುಂದಾಗಿದೆ. ದೆಹಲಿ ರಾಜ್ಯ ಸರ್ಕಾರವು ಸಿಎನ್‌ಜಿ ಬಸ್‌ಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೂ ಉತ್ತೇಜನ ನೀಡುತ್ತಿದೆ.

ಪರಿಸರ ಸ್ನೇಹಿ ವಾಹನಗಳ ಬಳಕೆಯಲ್ಲಿ ದೆಹಲಿ ಸರ್ಕಾರವು ಉಳಿದ ರಾಜ್ಯಗಳಿಗೆ ಆದರ್ಶಪ್ರಾಯವಾಗಿದೆ. ವಾಯುಮಾಲಿನ್ಯ ಸಮಸ್ಯೆಯಿಂದ ತೀವ್ರವಾಗಿ ತತ್ತರಿಸಿರುವ ಕಾರಣ ದೆಹಲಿಯಲ್ಲಿ ಎಲೆಕ್ಟ್ರಿಕ್ ಹಾಗೂ ಪರ್ಯಾಯ ಇಂಧನ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.