ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಆಕ್ಸಿಯಮ್ ಜೊತೆ ಕೈಜೋಡಿಸಿದ ಮೆಜೆಂಟಾ

ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ. ವಾಹನ ಸವಾರರ ನಾಡಿ ಮಿಡಿತವನ್ನು ಅರಿತಿರುವ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಗೆ ಆದ್ಯತೆ ನೀಡುತ್ತಿವೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನೇಕ ಕಂಪನಿಗಳು ಚಾರ್ಜಿಂಗ್ ಕೇಂದ್ರಗಳ ನಿರ್ಮಾಣಕ್ಕೆ ಮುಂದಾಗಿವೆ.

ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಆಕ್ಸಿಯಮ್ ಜೊತೆ ಕೈಜೋಡಿಸಿದ ಮೆಜೆಂಟಾ

ಈಗ ಮೆಜೆಂಟಾ (Magenta) ಪವರ್, ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸೊಲ್ಯೂಷನ್ಸ್ ಕಂಪನಿಯು ಭಾರತದ ಅತ್ಯಂತ ಹಳೆಯ ಎಲೆಕ್ಟ್ರಿಕ್ ವಾಹನ ಘಟಕ ತಯಾರಕ ಕಂಪನಿಗಳಲ್ಲಿ ಒಂದಾದ ಆಕ್ಸಿಯಮ್ (Axiom) ಎನರ್ಜಿ ಕನ್ವರ್ಷನ್ ಲಿಮಿಟೆಡ್‌ನಲ್ಲಿ ತನ್ನ ಹೂಡಿಕೆಯನ್ನು ಘೋಷಿಸಿದೆ. ಹೈದರಾಬಾದ್ ಮೂಲದ 25 ವರ್ಷ ಹಳೆಯ ಕಂಪನಿಯು ಬ್ಯಾಟರಿ, ಚಾರ್ಜರ್‌ ಹಾಗೂ ಡಿಸಿ ಕನ್ವರ್ಟರ್ ಗಳನ್ನು ತಯಾರಿಸುತ್ತದೆ.

ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಆಕ್ಸಿಯಮ್ ಜೊತೆ ಕೈಜೋಡಿಸಿದ ಮೆಜೆಂಟಾ

ಕಂಪನಿಯು ವಾರ್ಷಿಕವಾಗಿ 6,50,000 ಯುನಿಟ್‌ಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ ಇ-ರಿಕ್ಷಾ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ವಾಹನಗಳ ಚಾರ್ಜರ್ ಅನ್ನು ಸಹ ತಯಾರಿಸುತ್ತದೆ. ಆಕ್ಸಿಯಮ್ ಹಲವಾರು ವಾಹನ ತಯಾರಕ ಕಂಪನಿಗಳಿಗೆ ಹಾಗೂ ರಿಟೇಲ್ ವ್ಯಾಪಾರಿಗಳಿಗೆ ಎಲೆಕ್ಟ್ರಿಕ್ ವಾಹನ ಚಾರ್ಜರ್‌ಗಳನ್ನು ಪೂರೈಸುತ್ತದೆ. ಮೆಜೆಂಟಾ ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಲಿದೆ ಎಂಬ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಆಕ್ಸಿಯಮ್ ಜೊತೆ ಕೈಜೋಡಿಸಿದ ಮೆಜೆಂಟಾ

ಈ ಹೂಡಿಕೆಯೊಂದಿಗೆ ಚಾರ್ಜರ್‌, ಕನ್ವರ್ಟರ್, ಮೋಟಾರ್ ಕಂಟ್ರೋಲರ್ ಹಾಗೂ ಡ್ರೈವ್‌ಟ್ರೇನ್ ಘಟಕಗಳನ್ನು ಒಳಗೊಂಡಂತೆ ಹಲವಾರು ಎಲೆಕ್ಟ್ರಿಕ್ ವಾಹನ ಘಟಕಗಳಿಗೆ ಗ್ರೀನ್‌ಫೀಲ್ಡ್ ಉತ್ಪಾದನಾ ಸೆಟಪ್‌ನಲ್ಲಿ ಕಂಪನಿಯನ್ನು ದೃಢವಾಗಿ ಇರಿಸಲು ಮೆಜೆಂಟಾ ಕಂಪನಿ ಮುಂದಾಗಿದೆ. ಕಂಪನಿಯು ಆಕ್ಸಿಯಮ್‌ನಲ್ಲಿ ಬಹುಪಾಲು ಪಾಲನ್ನು ಹೊಂದಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಆಕ್ಸಿಯಮ್ ಜೊತೆ ಕೈಜೋಡಿಸಿದ ಮೆಜೆಂಟಾ

ಇದರಿಂದ ತನ್ನ ಇವಿ ಸಾಧನಗಳಿಗೆ ದೊಡ್ಡ ಆಂತರಿಕ ಉತ್ಪಾದನಾ ಸೌಲಭ್ಯವನ್ನು ಹೊಂದಲು ಸಾಧ್ಯವಾಗಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈಪಾಲುದಾರಿಕೆಯು ಮೆಜೆಂಟಾ ಆಕ್ಸಿಯಮ್ ಅನ್ನು ಚಾರ್ಜರ್ ತಯಾರಿಕೆಯಿಂದ ಹಿಡಿದು ಚಾರ್ಜಿಂಗ್ ತಂತ್ರಜ್ಞಾನದವರೆಗೆ ಎಲ್ಲವನ್ನೂ ಒಳಗೊಂಡಿರುವ ಒಂದು ಸಂಯೋಜಿತ ಚಾರ್ಜಿಂಗ್ ಪರಿಹಾರಗಳ ಕಂಪನಿಯಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಆಕ್ಸಿಯಮ್ ಜೊತೆ ಕೈಜೋಡಿಸಿದ ಮೆಜೆಂಟಾ

ಮೆಜೆಂಟಾ ತನ್ನ ಭವಿಷ್ಯದ ವಿಸ್ತರಣಾ ಯೋಜನೆಗಳನ್ನು ಸಹ ಘೋಷಿಸಿದೆ. ಕಂಪನಿಯು ದೇಶಾದ್ಯಂತ ಸಂಯೋಜಿತ ಇವಿ ಪರಿಹಾರಗಳನ್ನು ತಯಾರಿಸುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ತಯಾರಿಸುವ ಸ್ಟಾರ್ಟಪ್ ಕಂಪನಿಯಾದ ಮೆಜೆಂಟಾ ತಮಿಳುನಾಡಿನಲ್ಲಿ ರೂ. 250 ಕೋಟಿಗಳ ಹೂಡಿಕೆಯೊಂದಿಗೆ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಆಕ್ಸಿಯಮ್ ಜೊತೆ ಕೈಜೋಡಿಸಿದ ಮೆಜೆಂಟಾ

ಈ ಘಟಕವು ಇ-ಮೊಬಿಲಿಟಿ ಉದ್ಯಮದಲ್ಲಿ ಎಲೆಕ್ಟ್ರಿಕ್ ವಾಹನಗಳ ವಿನ್ಯಾಸ, ಉತ್ಪನ್ನ ಅಭಿವೃದ್ಧಿ ಹಾಗೂ ಚಾರ್ಜಿಂಗ್ ಮಾನದಂಡಗಳ ಮೇಲೆ ಗಮನ ಹರಿಸುತ್ತದೆ. ತಮಿಳುನಾಡಿನಲ್ಲಿ ಹೊಸ ಉತ್ಪಾದನಾ ಘಟಕದ ಯೋಜನೆಗಳ ಮೂಲಕ ಮೆಜೆಂಟಾ ಕಂಪನಿಯು ಸ್ಥಳೀಯ ಸಮುದಾಯಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 500 ಉದ್ಯೋಗಗಳನ್ನು ಸೃಷ್ಟಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಆಕ್ಸಿಯಮ್ ಜೊತೆ ಕೈಜೋಡಿಸಿದ ಮೆಜೆಂಟಾ

ಹೆಚ್ಚುವರಿಯಾಗಿ ಮುಂದಿನ ಐದು ವರ್ಷಗಳಲ್ಲಿ 1,600 ಉದ್ಯೋಗಿಗಳಿಗೆ ಇವಿ ಚಾರ್ಜರ್ ತಯಾರಿಕೆ, ಜೋಡಣೆ, ಸ್ಥಾಪನೆ ಹಾಗೂ ಕಾರ್ಯಾಚರಣೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಕಂಪನಿಯು ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ನಿರ್ಮಿಸಲಾದ ಭಾರತದ ಮೊದಲ ಎಲೆಕ್ಟ್ರಿಕ್ ವಾಹನ ಕಾರಿಡಾರ್‌ನಲ್ಲಿ ಚಾರ್ಜಿಂಗ್ ಸೌಲಭ್ಯಗಳನ್ನು ಒದಗಿಸಿದೆ. ತನ್ನ ಚಾರ್ಜಿಂಗ್ ಕೇಂದ್ರಗಳು ಸಂಪೂರ್ಣವಾಗಿ ಸೌರಶಕ್ತಿ ಚಾಲಿತವಾಗಿವೆ ಎಂದು ಮೆಜೆಂಟಾ ಕಂಪನಿ ಹೇಳಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಆಕ್ಸಿಯಮ್ ಜೊತೆ ಕೈಜೋಡಿಸಿದ ಮೆಜೆಂಟಾ

ನುರಿತ ಕಾರ್ಯಪಡೆ, ಬಲವಾದ ಮೂಲಸೌಕರ್ಯ, ಸರ್ಕಾರದ ಪ್ರಗತಿಪರ ಹಾಗೂ ಹೂಡಿಕೆದಾರ ಸ್ನೇಹಿ ವಿಧಾನದೊಂದಿಗೆ ರಾಜ್ಯವನ್ನು ದೇಶದ ಮುಂದಿನ ಇವಿ ಹಬ್ ಆಗುವಂತೆ ಮಾಡಲಾಗುತ್ತದೆ ಎಂದು ಮೆಜೆಂಟಾ ಕಂಪನಿ ಹೇಳಿದೆ. ಈ ವರ್ಷದ ಮಾರ್ಚ್‌ನಲ್ಲಿ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಹಯೋಗದೊಂದಿಗೆ ಮೆಜೆಂಟಾ ಕಂಪನಿಯು ದೆಹಲಿ ಹಾಗೂ ಮುಂಬೈನಲ್ಲಿ ದೇಶದ ಮೊದಲ ಬೀದಿ ದೀಪದ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಿತು.

ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಆಕ್ಸಿಯಮ್ ಜೊತೆ ಕೈಜೋಡಿಸಿದ ಮೆಜೆಂಟಾ

ಈ ಚಾರ್ಜರ್ ನ ವಿಶೇಷತೆ ಎಂದರೆ ಬೀದಿ ದೀಪದ ಕಂಬದ ಮೇಲೆ ಚಾರ್ಜರ್ ಅಳವಡಿಸಲಾಗಿದೆ. ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡುವ ಎಲ್ಲಾ ಉಪಕರಣಗಳನ್ನು ಕಂಬದ ಮೇಲೆಯೇ ಅಳವಡಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಚಾರ್ಜಿಂಗ್ ಸ್ಟೇಷನ್ ಅಗತ್ಯವಿಲ್ಲ. ಈ ಚಾರ್ಜಿಂಗ್ ಕಂಬದ ಪ್ರಯೋಜನವೆಂದರೆ ಅದರ ನಿರ್ವಹಣೆ ತುಂಬಾ ಕಡಿಮೆಯಾಗಿದ್ದು, ಹೆಚ್ಚುವರಿ ಸ್ಥಳಾವಕಾಶದ ಅಗತ್ಯವಿಲ್ಲ.

ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಆಕ್ಸಿಯಮ್ ಜೊತೆ ಕೈಜೋಡಿಸಿದ ಮೆಜೆಂಟಾ

ಮೆಜೆಂಟಾ ಸ್ಟ್ರೀಟ್ ಲ್ಯಾಂಪ್ ಇವಿ ಚಾರ್ಜಿಂಗ್ ಕೇಂದ್ರವನ್ನು ಪತ್ತೆ ಹಚ್ಚಲು ಕಂಪನಿಯು ಚಾರ್ಜ್‌ಗ್ರಿಡ್ ಅಪ್ಲಿಕೇಶನ್ ಅನ್ನು ಆರಂಭಿಸಿದೆ. ಈ ಆ್ಯಪ್ ಮೂಲಕ ಚಾರ್ಜಿಂಗ್ ಪೋಲ್‌ ಇರುವ ಸ್ಥಳವನ್ನು ನೋಡಬಹುದು. ಚಾರ್ಜಿಂಗ್ ಶುಲ್ಕ ವಿಧಿಸಲು ಆನ್‌ಲೈನ್ ಮೂಲಕವೇ ಪಾವತಿ ಮಾಡುವ ಸೌಲಭ್ಯವನ್ನು ಈ ಆ್ಯಪ್ ನಲ್ಲಿ ಒದಗಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಆಕ್ಸಿಯಮ್ ಜೊತೆ ಕೈಜೋಡಿಸಿದ ಮೆಜೆಂಟಾ

ಕಂಪನಿಯು ಈ ರೀತಿಯ ಕಡಿಮೆ ವೆಚ್ಚದ ಚಾರ್ಜಿಂಗ್ ಸ್ಟೇಷನ್ ಗಳನ್ನು ದೇಶದ ಹಲವು ನಗರಗಳಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ಕಂಪನಿಯು ಈ ವರ್ಷ ದೇಶದಲ್ಲಿ 100 ಕ್ಕೂ ಹೆಚ್ಚು ಚಾರ್ಜಿಂಗ್ ಗ್ರಿಡ್‌ಗಳನ್ನು ಸ್ಥಾಪಿಸಲಿದೆ ಎಂದು ವರದಿಯಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಅಗತ್ಯ ಎಂದು ಕಂಪನಿ ಹೇಳಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಒದಗಿಸಲು ಆಕ್ಸಿಯಮ್ ಜೊತೆ ಕೈಜೋಡಿಸಿದ ಮೆಜೆಂಟಾ

ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯು ಹೆಚ್ಚಾಗಲಿದೆ. ಇದಕ್ಕಾಗಿ ಸಾಕಷ್ಟು ಸಂಖ್ಯೆಯ ಚಾರ್ಜಿಂಗ್ ಸ್ಟೇಷನ್‌ಗಳ ಲಭ್ಯತೆಯ ಬಗ್ಗೆಯೂ ಗಮನಹರಿಸುವ ಅವಶ್ಯಕತೆಯಿದೆ. ದೇಶದ ಹಲವು ಆಟೋಮೊಬೈಲ್ ಕಂಪನಿಗಳು ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಗೆ ಮುಂದೆ ಬರುತ್ತಿವೆ.

Most Read Articles

Kannada
English summary
Magenta company partners with axiom energy details
Story first published: Friday, December 10, 2021, 10:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X