ಮಾರ್ಚ್ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು 2021ರ ಮಾರ್ಚ್ ಅವಧಿಯಲ್ಲಿನ ಕಾರು ಮಾರಾಟ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಹೀಂದ್ರಾ ಕಂಪನಿಯು ಕಳೆದ ವರ್ಷದ ಮಾರ್ಚ್ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಭಾರೀ ಮುನ್ನಡೆ ಕಾಯ್ದುಕೊಂಡಿದೆ.

ಮಾರ್ಚ್ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

2020ರ ಮಾರ್ಚ್ ಅವಧಿಯಲ್ಲಿ 3,171 ಯನಿಟ್ ಕಾರುಗಳನ್ನು ಮಾರಾಟ ಮಾಡಿದ್ದ ಮಹೀಂದ್ರಾ ಕಂಪನಿಯು 2021ರ ಮಾರ್ಚ್ ಅವಧಿಯಲ್ಲಿ 16,700 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಶೇ.427 ರಷ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಕಳೆದ ವರ್ಷದ ಮಾರ್ಚ್ ಅವಧಿಯಲ್ಲಿ ಕರೋನಾ ವೈರಸ್ ಪರಿಣಾಮ ವಿಧಿಸಲಾಗಿದ್ದ ಲಾಕ್‌ಡೌನ್ ಪರಿಣಾಮ ಅತಿ ಕಡಿಮೆ ವಾಹನ ಮಾರಾಟ ಮಾಡಿದ್ದ ಆಟೋ ಕಂಪನಿಗಳು ಇದೀಗ ಹೆಚ್ಚಿನ ಮಟ್ಟದ ಮಾರಾಟ ಬೆಳವಣಿಗೆ ಸಾಧಿಸಿವೆ.

ಮಾರ್ಚ್ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಪ್ರತಿ ತಿಂಗಳ ವಾಹನ ಮಾರಾಟದಲ್ಲಿ ಮಹೀಂದ್ರಾ ಕಂಪನಿಯು ಫೆಬ್ರವರಿ ತಿಂಗಳಿಗಿಂತ ಮಾರ್ಚ್ ಅವಧಿಯಲ್ಲಿ ಶೇ. 9ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಮಾರ್ಚ್ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಸದ್ಯ ಟಾಟಾ ಮೋಟಾರ್ಸ್ ಮತ್ತು ಕಿಯಾ ಮೋಟಾರ್ಸ್‌ನೊಂದಿಗೆ ಉತ್ತಮ ಪೈಪೋಟಿ ಹೊಂದಿರುವ ಮಹೀಂದ್ರಾ ಕಂಪನಿಯು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮೂಲಕ ಪ್ರತಿ ತಿಂಗಳು 30 ಸಾವಿರ ಯುನಿಟ್ ಮಾರಾಟ ಗುರಿಹೊಂದಿದೆ.

ಮಾರ್ಚ್ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಮಹೀಂದ್ರಾ ಕಾರುಗಳ ಮಾರಾಟ ಪಟ್ಟಿಯಲ್ಲಿ ಸದ್ಯ ಬೊಲೆರೊ ಕಾರು ಮಾದರಿಯು ಅಗ್ರಸ್ಥಾನದಲ್ಲಿದ್ದು, ತದನಂತರದ ಸ್ಥಾನದಲ್ಲಿ ಎಕ್ಸ್‌ಯುವಿ300, ಕೆಯುವಿ100 ನೆಕ್ಸ್ಟ್, ಸ್ಕಾರ್ಪಿಯೋ, ಎಕ್ಸ್‌ಯುವಿ 500, ಮರಾಜೋ, ಥಾರ್, ಅಲ್ಟುರಾಸ್ ಜಿ4 ಕಾರುಗಳು ಸ್ಥಾನಪಡೆದುಕೊಂಡಿವೆ.ಮಾಹಿತಿಗಳ ಪ್ರಕಾರ, ಮಹೀಂದ್ರಾ ಹೊಸ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದರೂ ಕೂಡಾ ಬಿಡಿಭಾಗಗಳ ಕೊರತೆ ಹಿನ್ನಲೆಯಲ್ಲಿ ವಾಹನ ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದೆ ಎನ್ನಲಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿನ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಮಹೀಂದ್ರಾ ಕಾರುಗಳ ಮೇಲೆಯೇ ಹೆಚ್ಚಿನ ಪರಿಣಾಣ ಉಂಟುಮಾಡಿದೆ.

ಮಾರ್ಚ್ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಆಟೋ ಉತ್ಪಾದನಾ ಕಂಪನಿಗಳಿಗೆ ಸಂಕಷ್ಟಕ್ಕಿಡು ಮಾಡಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಬಿಡಿಭಾಗಗಳನ್ನು ನೆಚ್ಚಿಕೊಂಡಿರುವ ಮಹೀಂದ್ರಾ ಕಂಪನಿಗೆ ಹೆಚ್ಚಿನ ಪರಿಣಾಮ ಬೀರಿದೆ.

ಮಾರ್ಚ್ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಮಹೀಂದ್ರಾ ನಿರ್ಮಾಣದ ಬಹುತೇಕ ಕಾರುಗಳಿಗೆ ವಿದೇಶಿ ಮಾರುಕಟ್ಟೆಗಳಿಂದ ಹೆಚ್ಚಿನ ಪ್ರಮಾಣದ ಬಿಡಿಭಾಗಗಳು ಆಮದು ಮಾಡಲಾಗುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಹೊಸ ಉತ್ಪಾದನೆಯಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿವೆ.

ಮಾರ್ಚ್ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಕೋವಿಡ್ ಅವಧಿಯಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಾಹನ ಬಿಡಿಭಾಗಗಳ ಪೂರೈಕೆ ಸರಪಳಿಯಲ್ಲಿ ಆದ ಅಸ್ತವ್ಯಸ್ತವು ಇದೀಗ ಹೊಸ ವಾಹಗಳ ಉತ್ಪಾದನೆ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದ್ದು. ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಆಟೋ ಉತ್ಪಾದನಾ ಕಂಪನಿಗಳಿಗೆ ಸಂಕಷ್ಟಕ್ಕಿಡು ಮಾಡಿದೆ.

ಮಾರ್ಚ್ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಕಳೆದ ಕೆಲ ತಿಂಗಳಿಂದ ಆಟೋಮೊಬೈಲ್ ಜೊತೆಗೆ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳಾದ ಲ್ಯಾಪ್‌ಟಾಪ್‌, ಮೊಬೈಲ್‌ಗಳು ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳಿಗೆ ಭಾರೀ ಬೇಡಿಕೆ ಹರಿದುಬರುತ್ತಿದ್ದು, ಆಟೋಮೊಬೈಲ್ ವಲಯಕ್ಕೆ ಹೆಚ್ಚಿನ ಮಟ್ಟದಲ್ಲಿ ಎಲೆಕ್ಟ್ರಾನಿಕ್ ಚಿಪ್ ಪೂರೈಕೆ ಮಾಡುತ್ತಿದ್ದ ಕಂಪನಿಗಳು ಎಲೆಕ್ಟ್ರಾನಿಕ್ ಸಾಧನೆಗಳಿಗೆ ಹೆಚ್ಚಿನ ಮಟ್ಟದ ಚಿಪ್ ಪೂರೈಕೆ ಮಾಡುತ್ತಿರುವುದು ಆಟೋ ಮೊಬೈಲ್ ಕ್ಷೇತ್ರದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ.

ಮಾರ್ಚ್ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಯುರೋಪ್, ಅಮೆರಿಕಾ ಹಾಗೂ ಏಷ್ಯಾದ ಪ್ರಮುಖ ದೇಶಗಳಲ್ಲಿನ ವಾಹನ ಉತ್ಪಾದನೆಯು ಮೇಲೂ ಪರಿಣಾಮ ಉಂಟುಮಾಡುತ್ತಿದ್ದು, ಹೊಸ ಕಾರುಗಳ ಗ್ರಾಹಕರ ಕಾಯುವ ಅವಧಿಯು ಕೂಡಾ ಸಾಕಷ್ಟು ಹೆಚ್ಚಳವಾಗುತ್ತಿದೆ.

ಮಾರ್ಚ್ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳ ಸಂಪರ್ಕದಲ್ಲಿ ಪ್ರಮುಖ ಪಾತ್ರವಹಿಸುವ ಸೆಮಿ ಕಂಡಕ್ಟರ್ ಚಿಪ್‌ಗಳನ್ನು ಕಾರಿನ ಡಿಸ್ ಪ್ಲೇ, ಸ್ಪೀಕರ್, ಸ್ಟೆಬಿಲಿಟಿ ಕಂಟ್ರೋಲ್, ಲೈಟಿಂಗ್ ಮುಂತಾದ ಫೀಚರ್ಸ್‌ ಜೋಡಣೆಯಲ್ಲಿ ಬಳಸಲಾಗುತ್ತದೆ.

ಮಾರ್ಚ್ ಅವಧಿಯಲ್ಲಿ ಭಾರೀ ಪ್ರಮಾಣದ ಕಾರು ಮಾರಾಟ ಮಾಡಿದ ಮಹೀಂದ್ರಾ

ಆದರೆ ಕರೋನಾ ನಂತರ ಮೊದಲ ಬಾರಿಗೆ ಹೊಸ ವಾಹನಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿರುವ ಸಂದರ್ಭದಲ್ಲೇ ಹೊಸ ಚಿಪ್‌ಗಳ ಕೊರೆತೆಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನಗಳ ಜೊತೆಗೆ ಹೊಸ ವಾಹನಗಳ ಬಿಡುಗಡೆಯ ಮೇಲೂ ಪರಿಣಾಮ ಪರಿಣಾಮ ಬೀರುತ್ತದ್ದು, ಮಹೀಂದ್ರಾ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಗೊಳಿಸಬೇಕಿದ್ದ ನ್ಯೂ ಜನರೇಷನ್ ಎಕ್ಸ್‌ಯುವಿ500 ಮತ್ತು ಸ್ಕಾರ್ಪಿಯೋ ಕಾರುಗಳ ಬಿಡುಗಡೆಯನ್ನು ಇದೇ ಕಾರಣಕ್ಕೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

Article Published On: Saturday, April 3, 2021, 13:22 [IST]
English summary
Mahindra Clocks Fifth Position In March 2021 Sales Chart. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+