ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿ ಖರೀದಿ ಮೇಲೆ ರೂ.3 ಲಕ್ಷದವರೆಗೆ ಭರ್ಜರಿ ಆಫರ್
ಹೆಚ್ಚಿನ ಖರೀದಿದಾರರನ್ನು ಆಕರ್ಷಿಸಲು ಮತ್ತು ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಮಹೀಂದ್ರಾ ಕಂಪನಿಯು ತನ್ನ ಕೆಲವು ಕಾರು ಮಾದರಿಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ಸ್ವದೇಶಿ ಕಾರು ಉತ್ಪಾದಕರಾದ ಮಹೀಂದ್ರಾ ಇದೀಗ ತನ್ನ ಅಲ್ಟುರಾಸ್ ಎಸ್‍ಯುವಿಯ ಮೇಲೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ.

ವರದಿಗಳ ಪ್ರಕಾರ, ಮಹಿಂದ್ರಾ ತನ್ನ ಅಲ್ಟುರಾಸ್ ಎಸ್‍ಯುವಿಯ ಮೇಲೆ ರೂ.3.02 ಲಕ್ಷದವರೆಗೆ ರಿಯಾಯಿತಿ ಮತ್ತು ಹೆಚ್ಚುವರಿ ಕೊಡುಗೆಗಳನ್ನು ನೀಡುತ್ತಿದೆ. ಈ ಮಹಿಂದ್ರಾ ಅಲ್ಟುರಾಸ್ ಎಸ್‍ಯುವಿಯ ಮೇಲೆ ರೂ.2.2 ಲಕ್ಷವರೆಗೆ ನಗದು ರಿಯಾಯಿತಿ, ಅದರ ಹೊರತಾಗಿ ರೂ.50,000 ವರೆಗೆ ಎಕ್ಸೆಚೇಂಚ್ ಬೋನಸ್ ಎಕ್ಸ್ಚೇಂಜ್ ಬೋನಸ್ ಮತ್ತು ರೂ.11,500 ವರೆಗೆ ಹೆಚ್ಚುವರಿ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಇನ್ನು ಇದರೊಂದಿಗೆ ರೂ.20,000 ಮೌಲ್ಯದ ಅಕ್ಸೆಸರೀಸ್ ಕೂಡ ಈ ರಿಯಾಯಿತಿಯಲ್ಲಿ ಒಳಪಟ್ಟಿರುತ್ತದೆ, ಈ ರಿಯಾಯಿತಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಮಹೀಂದ್ರಾ ಡೀಲರ್ ಅನ್ನು ಸಂಪರ್ಕಿಸಬಹುದು.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಕಳೆದ ವರ್ಷ ಬಿಡುಗಡೆಗೊಳಿಸಿತು. ಈ ಸಂದರ್ಭದಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಹೊರತುಪಡಿಸಿ ಇತರ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.

ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯಲ್ಲಿ 2.2 ಲೀಟರ್ ಇ-ಎಕ್ಸ್‌ಡಿ 220 ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 180 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಎಸ್-6 ಮಾಲಿನ್ಯ ನಿಯಮಕ್ಕೆ ನವೀಕರಿಸಿದರೂ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳಲ್ಲಿ ಬದಲಾವಣೆಯಾಗಿಲ್ಲ. ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯಲ್ಲಿ ಎಂಜಿನ್ ನವೀಕರಣ ಹೊರತುಪಡಿಸಿ ಹೊಸ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ಬೇಸ್ ಮಾದರಿಯು 2ಡಬ್ಲ್ಯೂಡಿ ಮತ್ತು ಹೈ ಮಾದರಿಯಲ್ಲಿ 4ಡಬ್ಲೂಡಿ ಸಿಸ್ಟಂ ಅನ್ನು ಹೊಂದಿದೆ. ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯಲ್ಲಿ ಹಿಂದಿನ ಮಾದರಿಯಲ್ಲಿರುವ ಅದೇ ರೀತಿಯ ಫೀಚರ್ಸ್ ಗಳನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅಲ್ಟುರಾಸ್ ಎಸ್‍ಯುವಿಯಲ್ಲಿ ಪೂರ್ಣ ಪ್ರಮಾಣದ ಎಸ್‍ಯುವಿಯು ಹಲವಾರು ಪ್ರೀಮಿಯಂ ಮತ್ತು ಐಷಾರಾಮಿ ಫೀಚರ್ ಗಳನ್ನು ಹೊಂದಿದೆ. ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ಇಂಟಿರಿಯರ್ ನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಇದರೊಂದಿಗೆ ಎಲೆಕ್ಟ್ರಾನಿಕಲ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು, ಟೇಲ್ ಗೇಡ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ.

ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಒಂಬತ್ತು ಏರ್‌ಬ್ಯಾಗ್, ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳು, 360 ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಬಿಎಸ್ ಜೊತೆ ಇಬಿಡಿ, ಕ್ರೂಸ್ ಕಂಟ್ರೋಲ್, ಹೈಸ್ಪೀಡ್ ಅಲರ್ಟ್ ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಅನ್ನು ಕೂಡ ಹೊಂದಿದೆ.

ಇನ್ನು ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಹೊಸದಾಗಿ ಎಕ್ಸ್‌ಯುವಿ700 ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಹೇಳಿದೆ. ಇದೀಗ ಎಕ್ಸ್‌ಯುವಿ ಸರಣಿಯಲ್ಲಿ ಒಟ್ಟು ನಾಲ್ಕು ಹೊಸ ಎಸ್‍ಯುವಿ ಮಾದರಿಗಳನ್ನು ಬಿಡುಗಡೆಗೊಳಿಸಲಿದೆ ಎಂದು ವರದಿಗಳಾಗಿದೆ.


Click it and Unblock the Notifications








