ಕೋವಿಡ್ ಎಫೆಕ್ಟ್:ಕಾರು ಖರೀದಿ ಯೋಜನೆಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಮಹೀಂದ್ರಾ ಹೊಸ ಆಫರ್

ಕೋವಿಡ್ ಆತಂಕದಿಂದ ಆಟೋ ಉದ್ಯಮವು ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಹೊಸ ವಾಹನ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದೆ. ಕೋವಿಡ್ ಸಂಕಷ್ಟದಿಂದಾಗಿ ವಾಹನ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವ ಗ್ರಾಹಕರು ಸೆಳೆಯಲು ಪ್ರಮುಖ ಕಾರು ಕಂಪನಿಗಳು ಹರಸಾಹಸಪಡುತ್ತಿವೆ.

ಕಾರು ಖರೀದಿ ಯೋಜನೆಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಆಫರ್

ದೇಶಾದ್ಯಂತ ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಹೊಸ ಸುರಕ್ಷಾ ಕ್ರಮಗಳ ಪರಿಣಾಮ ಆಟೋ ಉದ್ಯಮವು ಕಳೆದ ವರ್ಷಕ್ಕಿಂತೂ ಹೆಚ್ಚು ನಷ್ಟು ಅನುಭವಿಸುವ ಭೀತಿಯಲ್ಲಿವೆ. ಕಳೆದ ವರ್ಷದ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಣೆಯ ಹಾದಿಯಲ್ಲಿದ್ದ ಆಟೋ ಉದ್ಯಮವು ಇದೀಗ ಮತ್ತೆ ಸಂಕಷ್ಟ ಎದುರಿಸುತ್ತಿದ್ದು, ದೇಶಾದ್ಯಂತ ಹಲವು ಆಟೋ ಕಂಪನಿಗಳು ಈಗಾಗಲೇ ಕನಿಷ್ಠ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ.

ಕಾರು ಖರೀದಿ ಯೋಜನೆಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಆಫರ್

ಉದ್ಯೋಗಿಗಳ ಆರೋಗ್ಯದ ದೃಷ್ಠಿಯಿಂದ ಇನ್ನು ಕೆಲವು ವಾಹನ ಕಂಪನಿಗಳು ಹೊಸ ವಾಹನಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ಕುಸಿತ ಕಂಡಿದೆ.

ಕಾರು ಖರೀದಿ ಯೋಜನೆಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಆಫರ್

ಇದರ ನಡುವೆ ಹೊಸ ವಾಹನಗಳ ಖರೀದಿಗೆ ಬುಕ್ಕಿಂಗ್ ಸಲ್ಲಿಕೆ ತೀವ್ರ ಕುಸಿತ ಕಂಡಿರುವುದಲ್ಲದೆ ಈಗಾಗಲೇ ಬುಕ್ಕಿಂಗ್ ಸಲ್ಲಿಕೆ ಮಾಡಿದ್ದ ಲಕ್ಷಾಂತರ ಹೊಸ ವಾಹನ ಖರೀದಿದಾರರು ಕೂಡಾ ಈಗಾಗಲೇ ದಾಖಲಿಸಲಾಗಿದ್ದ ಬುಕ್ಕಿಂಗ್ ಅನ್ನು ಸಹ ಹಿಂಪಡೆಯುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಹೊಸ ವಾಹನ ಖರೀದಿಯಿಂದ ಆರ್ಥಿಕ ಸಂಕಷ್ಟ ಇನ್ನಷ್ಟು ಹೆಚ್ಚಳವಾಗುವ ಭೀತಿಯಿಂದ ಹೊಸ ವಾಹನ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದಾರೆ.

ಕಾರು ಖರೀದಿ ಯೋಜನೆಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಆಫರ್

ಸದ್ಯ ಉಂಟಾಗುವ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯು ಸುಧಾರಣೆಯಾಗಲು ಇನ್ನು ಕೆಲ ತಿಂಗಳುಗಳೇ ಬೇಕಾಗಬಹುದು ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ಮಹೀಂದ್ರಾ ಕಂಪನಿಯು ಹೊಸ ಯೋಜನೆಯೊಂದನ್ನು ಪ್ರಕಟಿಸಿದೆ.

ಕಾರು ಖರೀದಿ ಯೋಜನೆಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಆಫರ್

ಮಹೀಂದ್ರಾ ಕಂಪನಿಯು ಸದ್ಯ ಪರಿಸ್ಥಿತಿಯಿಂದ ಕಾರು ಖರೀದಿ ಯೋಜನೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವ ಗ್ರಾಹಕರಿಗೆ ಅನುಕೂಲವಾಗಲಿದ್ದು, ವಿಶೇಷ ಹಣಕಾಸು ಸೌಲಭ್ಯವನ್ನು ಘೋಷಣೆ ಮಾಡಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಕಾರು ಖರೀದಿ ಯೋಜನೆಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಆಫರ್

ಹೊಸ ಆಫರ್‌ನಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ಹೊಸ ಕಾರು ವಿತರಣೆ ಮಾಡಿದ 90 ದಿನಗಳ ನಂತರ ಇಎಂಐ ಪಾವತಿ ಆರಂಭಕ್ಕೆ ಅವಕಾಶ ನೀಡಿದ್ದು, ಕಾರು ಖರೀದಿಯನ್ನು ಮುಂದೂಡಿರುವ ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗಿದೆ.

ಕಾರು ಖರೀದಿ ಯೋಜನೆಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಆಫರ್

ಜೊತೆಗೆ ವಿವಿಧ ಹಣಕಾಸು ಸಂಸ್ಥೆಗಳ ಜೊತೆಗೂಡಿ ವಾಹನ ಖರೀದಿದಾರರಿಗೆ ಶೇ.90ರಷ್ಟು ಆನ್‌ರೋಡ್ ಸಾಲಸೌಲಭ್ಯವನ್ನು ಒದಗಿಸುತ್ತಿದ್ದು, ಇಎಂಐ ಪಾವತಿಗಾಗಿ ಗ್ರಾಹಕರ ಮೂರು ತಿಂಗಳು ಕಾಲ ಕಾಲಾವಕಾಶ ನೀಡುತ್ತದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಕಾರು ಖರೀದಿ ಯೋಜನೆಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಆಫರ್

ಇನ್ನು ಕೋವಿಡ್ ಹೆಚ್ಚಿರುವುದರಿಂದ ವಾಹನ ಮಾರಾಟ ಮಳಿಗೆಗಳಿಗೆ ಗ್ರಾಹಕರ ನೇರ ಭೇಟಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಸುರಕ್ಷತೆಯ ದೃಷ್ಠಿಯಿಂದ ಆನ್‌ಲೈನ್ ಮೂಲಕ ಬುಕ್ಕಿಂಗ್ ಪ್ರಕ್ರಿಯೆ ನಡೆಸುವುದು ಮತ್ತು ಗ್ರಾಹಕರ ಮನೆ ಬಾಗಿಲಿಗೆ ಸುರಕ್ಷಾ ಕ್ರಮಗಳೊಂದಿಗೆ ವಾಹನಗಳ ವಿತರಣೆ ಮಾಡಲಾಗುತ್ತಿದೆ.

Article Published On: Thursday, June 3, 2021, 15:51 [IST]
English summary
Mahindra announced special finance offer for new car buyers. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+