ಡೀಲರ್ ಬಳಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಹೊಸ ಬೊಲೆರೊ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಬೊಲೆರೊ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಯಾಗಲಿದೆ.

ಡೀಲರ್ ಬಳಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿ

ಮಹೀಂದ್ರಾ ತನ್ನ ಹೊಸ ಬೊಲೆರೊ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿಯ ಅಧಿಕೃತ ಟೀಸರ್ ಬಿಡುಗಡೆಗೊಳಿಸಲಾಗಿದೆ. ಇದೀಗ ಈ ಹೊಸ ಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿಯು ಡೀಲರ್ ಬಳಿ ತಲುಪಿಸುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಸ್ಪೈ ಚಿತ್ರದಲ್ಲಿ ಬೊಲೆರೊ ನಿಯೋ ಎಂಬ ಬ್ಯಾಡ್ಜಿಂಗ್ ಅನ್ನು ಹೊಂದಿದ್ದು, ಇದರೊಂದಿಗೆ 'ಎನ್ 10' ಬ್ಯಾಡ್ಜಿಂಗ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಹೊಸ ಸ್ಪಾಯ್ಲರ್, ಬ್ಲ್ಯಾಕ್ ಡೋರ್ ಹ್ಯಾಂಡಲ್ ಮತ್ತು ಕೆಲವು ಸಣ್ಣ ಬದಲಾವಣೆಗಳಿವೆ.

ಡೀಲರ್ ಬಳಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿ

ಈ ಹೊಸ ಬೊಲೆರೊ ನಿಯೋ ಮಾದರಿಯು ಟಿಯುವಿಯು300 ಕಾಂಪ್ಯಾಕ್ಟ್ ಎಸ್‍ಯುವಿಯ ರಿ-ಬ್ಯಾಡ್ಕ್ ಆವೃತ್ತಿಯಾಗಿರುತ್ತದೆ. ಹೊಸ ಮಹೀಂದ್ರಾ ಬೊಲೆರೊ ನಿಯೋ ಭಾರತದಲ್ಲಿ ಈಗಾಗಲೇ ಹಲವು ಬಾರಿ ಸ್ಫಾಟ್ ಟೆಸ್ಟ್ ಅನ್ನು ನಡೆಸಲಾಗಿತ್ತು. ಈ ಕಾಂಪ್ಯಾಕ್ಟ್ ಎಸ್‍ಯುವಿ ಒಟ್ಟಾರೆ ಪ್ರೊಫೈಲ್ ಟಿಯುವಿಯು300 ಮಾದರಿಗೆ ಹೋಲುತ್ತದೆ.

ಡೀಲರ್ ಬಳಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿ

ಈ ಬೊಲೆರೊ ನಿಯೋ ಮುಂಭಾಗದ ಹೊಸ ಫಾಸಿಕವನ್ನು ಹೊಂದಿದ್ದು, ಇದು ಹೊಸ ಸಿಕ್ಸ್-ಸ್ಲ್ಯಾಟ್ ಕ್ರೋಮ್ ಗ್ರಿಲ್, ಡಿಆರ್‌ಎಲ್‌ಗಳೊಂದಿಗೆ ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌ಗಳು (ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು), ಮರುವಿನ್ಯಾಸಗೊಳಿಸಲಾದ ಫಾಗ್ ಲ್ಯಾಂಪ್ ಮತ್ತು ಹೊಸ ಬಂಪರ್ ಅನ್ನು ಹೊಂದಿದೆ.

ಡೀಲರ್ ಬಳಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿ

ಇನ್ನು ಎಸ್‌ಯುವಿ ಹೊಸದಾಗಿ ಶೈಲಿಯ ಡ್ಯುಯಲ್ ಫೈವ್-ಸ್ಪೋಕ್ ಅಲಾಯ್ ವ್ಹೀಲ್‌ಗಳೊಂದಿಗೆ ಸಿಲ್ವರ್ ಅಂಶಗಳನ್ನು ಹೊಂದಿವೆ. ಹಿಂದಿನ ಮಾದರಿಯಲ್ಲಿರುವಂತಹ ಕ್ಲಾಮ್-ಶೆಲ್ ಬಾನೆಟ್, ವ್ಹೀಲ್ ಆರ್ಚಾರ್ ಮತ್ತು ಹೆಡ್‌ಲ್ಯಾಂಪ್‌ಗಳನ್ನು ಉಳಿಸಿಕೊಂಡಿದೆ.

ಡೀಲರ್ ಬಳಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿ

ಎಸ್‌ಯುವಿ ಹೊಸ ಹಿಂಭಾಗದ ಬಂಪರ್ ಮತ್ತು ಟೈಲ್-ಲ್ಯಾಂಪ್‌ಗಳನ್ನು ಜೊತೆಗೆ ಟೈಲ್‌ಗೇಟ್‌ನಲ್ಲಿ ಸ್ಪೇರ್ ವೀಲ್ ಕವರ್ ಅನ್ನು ಪಡೆಯುತ್ತದೆ. ಮಹೀಂದ್ರಾ ನಿಯೋ ಕ್ಯಾಬಿನ್ ಗಮನಾರ್ಹ ಬದಲಾವಣೆಗಳೊಂದಿಗೆ ಬರಲಿದೆ.

ಡೀಲರ್ ಬಳಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿ

ಇದು ನವೀಕರಿಸಿದ ಇನ್ಸ್ ಟ್ರೂಮೆಂಟ್ ನ್ಸೋಲ್, ಹೊಸ ಟೆಕ್ಸ್ಚರ್ಡ್ ಸೀಟುಗಳು, ಬೀಜ್ ಕಲರ್ ಅಪ್ಹೋಲ್ಸ್ಟರಿ ಮತ್ತು ಬ್ಲ್ಯಾಕ್ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿರುತ್ತದೆ. ಎರಡನೇ ಸೀಟಿನಲ್ಲಿ ಆರ್ಮ್ ರೆಸ್ಟ್ ಮತ್ತು ಹೆಡ್ ರೆಸ್ಟ್ ಅನ್ನು ಹೊಂದಿದೆ.

ಡೀಲರ್ ಬಳಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿ

ಈ ಹೊಸ ಬೊಲೆರೊ ನಿಯೋ ಎಸ್‍ಯುವಿಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಪಡೆಯುವ ಸಾಧ್ಯತೆಯಿದೆ. ನಿಯೋ ಎಂಜಿನ್ ಸ್ಟಾರ್ಟ್-ಸ್ಟಾಪ್ ಸಿಸ್ಟಂ ಅನ್ನು ಪಡೆಯುವ ನಿರೀಕ್ಷಿಯಿದೆ.

ಡೀಲರ್ ಬಳಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿ

ಇನ್ನು ಈ ಎಸ್‍ಯುವಿಯಲ್ಲಿ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್, ರಿವರ್ಸ್ ಕ್ಯಾಮೆರಾ ಮತ್ತು ಇತ್ಯಾದಿ ಫೀಚರ್ಸ್ ಗಳನ್ನು ಹೊಂದಿವೆ. ಇನ್ನು ಈ ಹೊಸ ಮಹೀಂದ್ರಾ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಟಿಯುವಿ300 ಮಾದರಿಯಲ್ಲಿದ್ದ ಅದೇ 1.5-ಲೀಟರ್, 3-ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದುವ ಸಾಧ್ಯತೆಯಿದೆ.

ಡೀಲರ್ ಬಳಿ ಕಾಣಿಸಿಕೊಂಡ ಮಹೀಂದ್ರಾ ಬೊಲೆರೊ ನಿಯೋ ಕಾಂಪ್ಯಾಕ್ಟ್ ಎಸ್‌ಯುವಿ

ಈ ಎಂಜಿನ್ ಈ ಎಂಜಿನ್ ಅನ್ನು ಟ್ಯೂನ್ ಮಾಡಲಾಗುತ್ತದೆ. ಬಿಎಸ್4 ಆವೃತ್ತಿಯು 100 ಬಿಹೆಚ್‌ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸ್ಟ್ಯಾಂಡರ್ಡ್ ಆಗಿ ಬರುತ್ತದೆ.

Source: Facebook

Article Published On: Tuesday, July 6, 2021, 19:32 [IST]
English summary
Mahindra Bolero Neo Started Arrives At Dealers. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+