ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

Mahindra ಕಂಪನಿಯು ತನ್ನ ಬಹುನೀರಿಕ್ಷಿತ XUV700 ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿ ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರು ಮುಂಬರುವ ಅಕ್ಟೋಬರ್ ಮಧ್ಯಂತರದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಾಗಲಿದೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

XUV700 ಮಾದರಿಯ ಆರಂಭಿಕ ಆವೃತ್ತಿಗಳ ಬೆಲೆ ಮಾಹಿತಿ ಹಂಚಿಕೊಳ್ಳುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿರುವ Mahindra ಕಂಪನಿಯು ಹೊಸ ಕಾರಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಅಧಿಕೃತ ಬುಕ್ಕಿಂಗ್ ಆರಂಭಕ್ಕೂ ಮುನ್ನವೇ ಸಾವಿರಾರು ಗ್ರಾಹಕರು ಹೊಸ ಕಾರು ಖರೀದಿಗಾಗಿ Mahindra ಪ್ರಮುಖ ಡೀಲರ್ಸ್‌ಗಳಲ್ಲಿ ಬುಕ್ಕಿಂಗ್ ಸಲ್ಲಿಸುತ್ತಿದ್ದಾರೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನಕ್ಕಾಗಿ XUV700 ಮಾದರಿಗಳನ್ನು ಅಚ್ಚರಿಯ ಬೆಲೆಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಬೆಲೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ Mahindra ಡೀಲರ್ಸ್‌ಗಳಲ್ಲಿ ಹೊಸ ಕಾರು ಖರೀದಿಗಾಗಿ ಭಾರೀ ಪ್ರಮಾಣದ ಬೇಡಿಕೆ ಸಲ್ಲಿಕೆಯಾಗಿದೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

ನಮ್ಮ ಬೆಂಗಳೂರಿನ Mahindra ಕಂಪನಿಯು ಪ್ರಮುಖ ಮಾರಾಟ ಪಾಲುದಾರ ಸಂಸ್ಥೆಯಾದ ಅನಂತ್ ಕಾರ್ಸ್ ಡೀಲರ್ಸ್‌ನಲ್ಲಿ ರೂ. 25 ಸಾವಿರ ಮುಂಗಡದೊಂದಿಗೆ ಹೊಸ ಕಾರಿಗಾಗಿ ಬುಕ್ಕಿಂಗ್ ಸ್ವಿಕರಿಸುತ್ತಿದ್ದು, ಹೊಸ ಕಾರು ಬೆಲೆ ವಿಚಾರವಾಗಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

ಹೊಸ XUV700 ಕಾರಿನ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆ ಅನ್ನು Mahindra ಕಂಪನಿಯು ಮುಂದಿನ ತಿಂಗಳು ಆರಂಭಿಸುವ ಮುನ್ನವೇ ಗ್ರಾಹಕರು ಹೊಸ ಕಾರು ಖರೀದಿಗಾಗಿ ಬುಕ್ಕಿಂಗ್ ಸಲ್ಲಿಸುತ್ತಿದ್ದು, ಹೊಸ ಕಾರಿನ ಮೂಲಕ Mahindra ಕಂಪನಿಯು ಭರ್ಜರಿ ಬೇಡಿಕೆ ಪಡೆದುಕೊಳ್ಳುವ ಯೋಜನೆಯಲ್ಲಿದೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಎಕ್ಸ್‌ಯುವಿ700 ಎಸ್‌ಯುವಿ ಅಭಿವೃದ್ದಿಗೊಂಡಿದ್ದು, ಸಂಪೂರ್ಣವಾಗಿ ಹೊಸ ತಂತ್ರಜ್ಞಾನ, ವಿನೂತನ ವಿನ್ಯಾಸ ಮತ್ತು ಬಲಿಷ್ಠ ಎಂಜಿನ್ ಆಯ್ಕೆ ಪಡೆದುಕೊಂಡಿದೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

ಹೊಸ XUV700 ಎಸ್‌ಯುವಿ ಮಾದರಿಯ ಪ್ರಮುಖ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಎಂಎಕ್ಸ್ ಸೀರಿಸ್ ಮತ್ತು ಆಂಡ್ರಿನೊಎಕ್ಸ್ ಸೀರಿಸ್‌ ಪಡೆದುಕೊಂಡಿದೆ. ಇದರಲ್ಲಿ ಎಂಎಕ್ಸ್ ಸೀರಿಸ್ ಮಾದರಿಗಳು 5 ಸೀಟರ್‌ನೊಂದಿಗೆ ಬಿಡುಗಡೆಯಾಗಲಿದ್ದರೆ ಆಂಡ್ರಿನೊಎಕ್ಸ್ ಸೀರಿಸ್‌ ಕಾರುಗಳು 7 ಸೀಟರ್ ಸೌಲಭ್ಯದೊಂದಿಗೆ ತುಸು ಐಷಾರಾಮಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

Mahindra ಕಂಪನಿಯು ಎಂಎಕ್ಸ್ ಸೀರಿಸ್ ಹೊಂದಿರುವ ಎಕ್ಸ್‌ಯುವಿ700 ಮಾದರಿಯ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.99 ಲಕ್ಷ ಬೆಲೆಗೆ ನಿಗದಿಪಡಿಸಿದ್ದು, ಎಂಎಕ್ಸ್ ಸೀರಿಸ್ ಕಾರುಗಳನ್ನು ಮ್ಯಾನುವಲ್ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಮಾತ್ರ ಮಾರಾಟ ಮಾಡಲಿದೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

ಸದ್ಯ ಎಂಎಕ್ಸ್ ಸರಣಿ ಬೆಲೆ ಹಂಚಿಕೊಂಡರುವ ಮಹೀಂದ್ರಾ ಕಂಪನಿಯು ಹೈ ಮಾದರಿಯಾದ ಆಂಡ್ರಿನೊಎಕ್ಸ್ ಸೀರಿಸ್‌ ಎಕ್ಸ್‌ಯುವಿ700 ಎಸ್‌ಯುವಿ ಬೆಲೆ ಹಂಚಿಕೊಳ್ಳಲಿದ್ದು, ಎಂಎಕ್ಸ್ ಸರಣಿಗಿಂತ ಆಂಡ್ರಿನೊಎಕ್ಸ್ ಸರಣಿ ಮಾದರಿಗಳ ಬೆಲೆ ತುಸು ದುಬಾರಿಯಾಗಿರಲಿದೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

ಹೊಸ XUV700 ಮಾದರಿಯ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿರುವ ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯಗಳನ್ನು ಜೋಡಿಸಿದ್ದು, ಆಕರ್ಷಕ ಗ್ರಿಲ್ ಜೊತೆ ವರ್ಟಿಕಲ್ ಸ್ಲಾಟ್ ಮತ್ತು ಡ್ಯುಯಲ್ ಟೋನ್ ಕ್ರೋಮ್, ಹೊಸ ಕಾರಿಗೆ ಮತ್ತಷ್ಟು ಐಷಾರಾಮಿ ಲುಕ್ ನೀಡಲು ಬ್ರಾಂಡ್ ನ್ಯೂ ಲೋಗೋ ನೀಡಲಾಗಿದೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

ಹೊಸ ಕಾರಿನಲ್ಲಿ ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್, 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಪಡೆದುಕೊಂಡಿದೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

XUV700 ಮಾದರಿಯ ಸೈಡ್ ಪ್ರೋಫೈಲ್ ಮತ್ತು ಹಿಂಬದಿಯ ವಿನ್ಯಾಸವು ಕೂಡಾ ಸಾಕಷ್ಟು ಹೊಸತನದಿಂದ ಕೂಡಿದ್ದು, ಹಿಂಬದಿಯ ಫೆಂಡರ್‌ನೊಂದಿಗೆ ಹರಡಿಕೊಂಡಿರುವ ವಿಭಜಿತ ಟೈಲ್‌ಲ್ಯಾಂಪ್, ವಿನೂತನ ವಿನ್ಯಾಸದ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್, ಶಾರ್ಕ್ ಫಿನ್ ಆಂಟೆನಾ, ರೂಫ್ ಸ್ಪಾಯ್ಲರ್ ಪಡೆದುಕೊಂಡಿದೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಆಂಡ್ರಿನೊಎಕ್ಸ್ ಸೀರಿಸ್‌ ಆವೃತ್ತಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 15 ಲಕ್ಷದಿಂದ ರೂ. 21 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿವೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

ಹಾಗೆಯೇ 10.25 ಇಂಚಿನ ಡಿಜಿಟಲ್ ಮತ್ತು ಇನ್ಪೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲೂ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್ ಮತ್ತು ಏರ್ ಪ್ಯೂರಿಫ್ಲೈರ್ ಸೌಲಭ್ಯಗಳಿವೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

ಹೊಸ XUV700 ಮಾದರಿಯಲ್ಲಿ 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ. 2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(ಎಂಟಿ),450-ಎನ್ಎಂ ಟಾರ್ಕ್(ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದ್ದು, ಹೈ ಎಂಡ್ ಮಾದರಿಗಳಲ್ಲಿ ಮಹೀಂದ್ರಾ ಕಂಪನಿಯು 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದೆ.

ಆಯ್ದ Mahindra ಡೀಲರ್ಸ್‌ಗಳಲ್ಲಿ XUV700 ಎಸ್‌ಯುವಿ ಖರೀದಿಗೆ ಬುಕ್ಕಿಂಗ್ ಸ್ವಿಕಾರ ಆರಂಭ

ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂ ಸೌಲಭ್ಯವು ಹೊಸ ಕಾರಿನ ಪ್ರಮುಖ ಸುರಕ್ಷಾ ಸೌಲಭ್ಯವಾಗಿದ್ದು, ಇದರ ಜೊತೆಗೆ 7-ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್, ಲೆನ್ ಕಿಪ್ ಅಸಿಸ್ಟ್ ಸೌಲಭ್ಯ ಹೊಂದಿದೆ.

More from DriveSpark

Article Published On: Thursday, August 19, 2021, 20:13 [IST]
English summary
Mahindra dealers start accepting xuv700 suv unofficial bookings details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+