ಹೊಸ ವರ್ಷದ ಸಂಭ್ರಮದಲ್ಲಿ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ಆಫರ್

ಹೊಸ ವರ್ಷದ ಸಂಭ್ರಮದಲ್ಲಿ ಕಾರು ಖರೀದಿದಾರರನ್ನು ಸೆಳೆಯಲು ಮಹೀಂದ್ರಾ ಕಂಪನಿಯು ತನ್ನ ವಿವಿಧ ಕಾರು ಮಾದರಿಗಳ ಮೇಲೆ ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದ್ದು, ಕಾರು ಮಾದರಿಗಳಿಗೆ ಅನುಗುಣವಾಗಿ ರೂ. 2.20 ಲಕ್ಷದ ತನಕ ಗರಿಷ್ಠ ಆಫರ್ ನೀಡುತ್ತಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ಆಫರ್

ಕರೋನಾ ವೈರಸ್ ಪರಿಣಾಮ ಕಾರು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದ ಮಹೀಂದ್ರಾ ಕಂಪನಿಯು ಮುಂಬರುವ ದಿನಗಳಲ್ಲಿ ಹೊಸ ಕಾರುಗಳ ಮಾರಾಟದಲ್ಲಿ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದ್ದು, ಹೊಸ ವರ್ಷದ ಸಂಭ್ರಮದಲ್ಲಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರನ್ನು ಸೆಳೆಯಲು ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ಹಾಗಾದ್ರೆ ಯಾವ ಕಾರಿನ ಮೇಲೆ ಎಷ್ಟು ಆಫರ್ ಲಭ್ಯವಿದೆ ಎಂಬುವುದನ್ನು ಇಲ್ಲಿ ತಿಳಿಯೋಣ.

ಹೊಸ ವರ್ಷದ ಸಂಭ್ರಮದಲ್ಲಿ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ಆಫರ್

ಕೆಯುವಿ100 ನೆಕ್ಸ್ಟ್

ಮಹೀಂದ್ರಾ ಎಂಟ್ರಿ ಲೆವಲ್ ಮೈಕ್ರೋ ಎಸ್‌ಯುವಿ ಕಾರು ಮಾದರಿಯಾದ ಕೆಯುವಿ100 ನೆಕ್ಸ್ಟ್ ಕಾರು ಮಾದರಿಯ ಮೇಲೆ ರೂ.38 ಸಾವಿರದಷ್ಟು ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ಆಫರ್

ಎಕ್ಸ್‌ಯುವಿ300

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಎಕ್ಸ್‌ಯುವಿ300 ಕಾರು ಖರೀದಿಯ ಮೇಲೆ ಒಟ್ಟು ರೂ. 29,500 ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್‌ನಲ್ಲಿ ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ಆಫರ್

ಬೊಲೆರೊ

ಮಹೀಂದ್ರಾ ಜನಪ್ರಿಯ ಬೊಲೆರೊ ಕಾರು ಖರೀದಿ ಮೇಲೆ ಒಟ್ಟು ರೂ.17,500 ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್ ಆಫರ್, ಕಾರ್ಪೊರೆಟ್ ಬೊನಸ್ ಮತ್ತು ಕ್ಯಾಶ್ ಡಿಸ್ಕೌಂಟ್ ಸಹ ಲಭ್ಯವಿರಲಿವೆ. ಜೊತೆಗೆ ಆಯ್ದ ಮಾದರಿಗಳ ಮೇಲೆ ವಿಸ್ತರಿತ ವಾರಂಟಿ ಸೌಲಭ್ಯವು ಸಹ ಲಭ್ಯವಾಗಲಿದ್ದು, ನ್ಯೂ ಜನರೇಷನ್ ಮಾದರಿಗಳ ಬಿಡುಗಡೆಗಾಗಿ ಹೊಸ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಾಗುತ್ತಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ಆಫರ್

ಸ್ಕಾರ್ಪಿಯೋ

ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಕಾರು ಖರೀದಿಯ ಮೇಲೆ ರೂ.60 ಸಾವಿರ ತನಕ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳು ಎಕ್ಸ್‌ಚೆಂಜ್ ಬೋನಸ್, ಕ್ಯಾಶ್ ಡಿಸ್ಕೌಂಟ್ ಮತ್ತು ಎಸ್5 ವೆರಿಯೆಂಟ್ ಮೇಲೆ ಹೆಚ್ಚುವರಿಯಾಗಿ ರೂ.10 ಸಾವಿರ ಕ್ಯಾಶ್ ಡಿಸ್ಕೌಂಟ್ ಲಭ್ಯವಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ವರ್ಷದ ಸಂಭ್ರಮದಲ್ಲಿ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ಆಫರ್

ಎಕ್ಸ್‌ಯುವಿ500

ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ500 ಕಾರು ಖರೀದಿಯ ಮೇಲೆ ರೂ.48,800 ಡಿಸ್ಕೌಂಟ್ ನೀಡುತ್ತಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಡಿಸ್ಕೌಂಟ್ ಲಭ್ಯವಿದೆ. ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ನೀಡಲಾಗುತ್ತಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ಆಫರ್

ಅಲ್ಟುರಾಸ್ ಜಿ4

ಮಹೀಂದ್ರಾ ಕಂಪನಿ ತನ್ನ ಹೈ ಎಂಡ್ ಎಸ್‌ಯುವಿ ಕಾರು ಮಾದರಿಯಾದ ಅಲ್ಟುರಾಸ್ ಜಿ4 ಕಾರು ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಹೊಸ ಕಾರು ಖರೀದಿಸುವ ಗ್ರಾಹಕರಿಗೆ ರೂ. 2.20 ಲಕ್ಷದಷ್ಟು ಆಫರ್ ನೀಡುತ್ತಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೊಸ ವರ್ಷದ ಸಂಭ್ರಮದಲ್ಲಿ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ಆಫರ್

ಹೊಸ ಆಫರ್‌ನಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯಕ್ಕೆ ಮುಕ್ತಾಯಗೊಳ್ಳಲಿವೆ.

Article Published On: Friday, January 15, 2021, 8:45 [IST]
English summary
Mahindra Offering Attractive Discounts In January 2021. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+