ಮಹೀಂದ್ರಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಕೋವಿಡ್‌ನಿಂದಾಗಿ ಇಳಿಕೆಯಾಗಿರುವ ಹೊಸ ವಾಹನಗಳ ಮಾರಾಟವನ್ನು ಸುಧಾರಿಸಲು ಪ್ರಮುಖ ಕಾರು ಕಂಪನಿಗಳು ವಾಹನಗಳ ಖರೀದಿ ಮೇಲೆ ಹಲವಾರು ಆಫರ್ಗಳನ್ನು ಘೋಷಿಸುತ್ತಿದ್ದು, ಮಹೀಂದ್ರಾ ಕಾರುಗಳ ಮೇಲೂ ಸಹ ಇದೀಗ ವಿಶೇಷ ರಿಯಾಯ್ತಿ ಘೋಷಣೆ ಮಾಡಲಾಗಿದೆ.

ಮಹೀಂದ್ರಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಸತತವಾಗಿ ಕುಸಿತ ಕಂಡಿರುವ ಕಾರು ಮಾರಾಟವನ್ನು ಸುಧಾರಿಸಲು ಮಹೀಂದ್ರಾ ಕಂಪನಿಯು ವಿವಿಧ ಕೊಡುಗೆಗಳೊಂದಿಗೆ ನಗದು ರಿಯಾಯಿತಿಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್ ಬ್ಲ್ಯಾಕ್ ಆಫರ್, ಎಕ್ಸ್‌ಚೆಂಜ್ ಬೋನಸ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ. ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಅನ್ವಯವಾಗಲಿದ್ದು, ಆಯ್ದ ಡೀಲರ್ಸ್‌ಗಳಲ್ಲಿ ಇನ್ನು ಹೆಚ್ಚಿನ ಮಟ್ಟದ ಆಫರ್ ಪಡೆದುಕೊಳ್ಳಬಹುದಾಗಿದೆ.

ಮಹೀಂದ್ರಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಕೆಯುವಿ100 ನೆಕ್ಸ್ಟ್

ಆರಂಭಿಕ ಕಾರು ಮಾದರಿಯಾದ ಕೆಯುವಿ100 ನೆಕ್ಸ್ಟ್ ಕಾರು ಖರೀದಿಯ ಮೇಲೆ ಮಹೀಂದ್ರಾ ಕಂಪನಿಯು ಗರಿಷ್ಠ ರೂ. 38,055 ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದ್ದು, ಇನ್ನುಳಿದಂತೆ ರೂ.20 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ರೂ.3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.

ಮಹೀಂದ್ರಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಎಕ್ಸ್‌ಯುವಿ300

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಎಕ್ಸ್‌ಯುವಿ300 ಕಾರು ಖರೀದಿಯ ಮೇಲೆ ಉಚಿತ ಆಕ್ಸೆಸರಿಸ್ ಒಳಗೊಂಡಂತೆ ರೂ.10 ಸಾವಿರ ಕ್ಯಾಶ್ ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್‌ನಲ್ಲಿ ರೂ. 25 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 4 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದೆ.

ಮಹೀಂದ್ರಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಮರಾಜೋ ಎಂಪಿವಿ

ಮಹೀಂದ್ರಾ ಕಂಪನಿಯು ಮರಾಜೋ ಎಂಪಿವಿ ಕಾರು ಖರೀದಿಯ ಮೇಲೆ ರೂ. 20 ಸಾವಿರ ತನಕ ಕ್ಯಾಶ್ ಡಿಸ್ಕೌಂಟ್ ಘೋಷಣೆ ಮಾಡಿದ್ದು, ರೂ. 15 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ರೂ. 5,200 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಮಹೀಂದ್ರಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಸ್ಕಾರ್ಪಿಯೋ ಎಸ್‌ಯುವಿ

ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಕಾರು ಖರೀದಿಯ ಮೇಲೆ ರೂ.10 ಸಾವಿರ ಮೌಲ್ಯದ ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ರೂ. 17 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 4 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಮಹೀಂದ್ರಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಎಕ್ಸ್‌ಯುವಿ500 ಎಸ್‌ಯುವಿ

ಎಸ್‌ಯುವಿ ಮಾದರಿಯಾದ ಎಕ್ಸ್‌ಯುವಿ500 ಕಾರು ಖರೀದಿಯ ಮೇಲೆ ಮಹೀಂದ್ರಾ ಕಂಪನಿಯು ರೂ.15 ಸಾವಿರ ಮೌಲ್ಯದ ಆಕ್ಸೆಸರಿಸ್ ಒಳಗೊಂಡ ರೂ. 51 ಸಾವಿರ ಕ್ಯಾಶ್ ಡಿಸ್ಕೌಂಟ್ ನೀಡುತ್ತಿದ್ದು, ರೂ. 36 ಸಾವಿರ ಎಕ್ಸ್‌ಚೆಂಜ್ ಆಫರ್, ರೂ. 6,500 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಮಹೀಂದ್ರಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಬೊಲೆರೊ ಎಸ್‌ಯುವಿ

ಮಹೀಂದ್ರಾ ಜನಪ್ರಿಯ ಬೊಲೆರೊ ಕಾರು ಖರೀದಿ ಮೇಲೆ ಒಟ್ಟು ರೂ. 1,500 ಕ್ಯಾಶ್ ಡಿಸ್ಕೌಂಟ್ ಜೊತೆಗೆ ಉಚಿತವಾಗಿ ನಾಲ್ಕನೇ ವರ್ಷದ ವಾರಂಟಿ ಲಭ್ಯವಿದ್ದು, ಇನ್ನುಳಿದಂತೆ ರೂ.10 ಸಾವಿರ ಎಕ್ಸ್‌ಚೆಂಜ್ ಆಫರ್, ರೂ. 3,500 ಕಾರ್ಪೊರೆಟ್ ಡಿಸ್ಕೌಂಟ್ ಸಹ ಲಭ್ಯವಿರಲಿವೆ.

ಮಹೀಂದ್ರಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

ಅಲ್ಟುರಾಸ್ ಜಿ4 ಎಸ್‌ಯುವಿ

ಮಹೀಂದ್ರಾ ಕಂಪನಿ ತನ್ನ ಹೈ ಎಂಡ್ ಎಸ್‌ಯುವಿ ಕಾರು ಮಾದರಿಯಾದ ಅಲ್ಟುರಾಸ್ ಜಿ4 ಕಾರು ಖರೀದಿ ಮೇಲೆ ರೂ.20 ಸಾವಿರ ಮೌಲ್ಯದ ಆಕ್ಸೆಸರಿಸ್ ಒಳಗೊಂಡು ರೂ. 2.20 ಲಕ್ಷ ಭರ್ಜರಿ ಆಫರ್ ಘೋಷಣೆ ಮಾಡಿದ್ದು, 50 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 11,500 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

Article Published On: Tuesday, June 22, 2021, 14:17 [IST]
English summary
Mahindra Offers Great Discounts On Accross Its Porfolio. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+