Just In
- 3 hrs ago ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- 5 hrs ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 5 hrs ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 7 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
Don't Miss!
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂನ್ ಅವಧಿಗಾಗಿ ಮಹೀಂದ್ರಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ
ಕೋವಿಡ್ನಿಂದಾಗಿ ಇಳಿಕೆಯಾಗಿರುವ ಹೊಸ ವಾಹನಗಳ ಮಾರಾಟವನ್ನು ಸುಧಾರಿಸಲು ಪ್ರಮುಖ ಕಾರು ಕಂಪನಿಗಳು ತಮ್ಮ ಹೊಸ ವಾಹನಗಳ ಖರೀದಿ ಮೇಲೆ ಹಲವಾರು ಘೋಷಿಸುತ್ತಿದ್ದು, ಮಹೀಂದ್ರಾ ಕಾರುಗಳ ಮೇಲೂ ಸಹ ಜೂನ್ ಅವಧಿಗಾಗಿ ವಿಶೇಷ ರಿಯಾಯ್ತಿ ಘೋಷಣೆ ಮಾಡಿದೆ.
ಮಹೀಂದ್ರಾ ಕಂಪನಿಯು ಕೋವಿಡ್ ಪರಿಣಾಮ ಇಳಿಕೆಯಾಗಿರುವ ಕಾರು ಮಾರಾಟವನ್ನು ಸುಧಾರಿಸಲು ವಿವಿಧ ಕೊಡುಗೆಗಳೊಂದಿಗೆ ನಗದು ರಿಯಾಯಿತಿಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್ಗಳಲ್ಲಿ ಕ್ಯಾಶ್ ಬ್ಲ್ಯಾಕ್ ಆಫರ್, ಎಕ್ಸ್ಚೆಂಜ್ ಬೋನಸ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ. ಹೊಸ ಆಫರ್ಗಳು ಈ ತಿಂಗಳಾಂತ್ಯದ ತನಕ ಅನ್ವಯವಾಗಲಿದ್ದು, ಆಯ್ದ ಡೀಲರ್ಸ್ಗಳಲ್ಲಿ ಇನ್ನು ಹೆಚ್ಚಿನ ಮಟ್ಟದ ಆಫರ್ ಪಡೆದುಕೊಳ್ಳಬಹುದಾಗಿದೆ.
ಕೆಯುವಿ100 ನೆಕ್ಸ್ಟ್
ಮಹೀಂದ್ರಾ ಕಂಪನಿಯು ಕೆಯುವಿ100 ನೆಕ್ಸ್ಟ್ ಕಾರು ಖರೀದಿಯ ಮೇಲೆ ಗರಿಷ್ಠ ರೂ. 38,055 ಕ್ಯಾಶ್ಬ್ಯಾಕ್ ಆಫರ್ ನೀಡುತ್ತಿದ್ದು, ಇನ್ನುಳಿದಂತೆ ರೂ.20 ಸಾವಿರ ಎಕ್ಸ್ಚೆಂಜ್ ಆಫರ್ ಮತ್ತು ರೂ.3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.
ಬೊಲೆರೊ ಎಸ್ಯುವಿ
ಮಹೀಂದ್ರಾ ಜನಪ್ರಿಯ ಬೊಲೆರೊ ಕಾರು ಖರೀದಿ ಮೇಲೆ ಒಟ್ಟು ರೂ. 1,500 ಕ್ಯಾಶ್ ಡಿಸ್ಕೌಂಟ್ ಜೊತೆಗೆ ಉಚಿತವಾಗಿ ನಾಲ್ಕನೇ ವರ್ಷದ ವಾರಂಟಿ ಲಭ್ಯವಿದ್ದು, ಇನ್ನುಳಿದಂತೆ ರೂ.10 ಸಾವಿರ ಎಕ್ಸ್ಚೆಂಜ್ ಆಫರ್, ರೂ. 3,500 ಕಾರ್ಪೊರೆಟ್ ಡಿಸ್ಕೌಂಟ್ ಸಹ ಲಭ್ಯವಿರಲಿವೆ.
ಮರಾಜೋ ಎಂಪಿವಿ
ಮರಾಜೋ ಎಂಪಿವಿ ಕಾರು ಖರೀದಿಯ ಮೇಲೆ ಮಹೀಂದ್ರಾ ಕಂಪನಿಯು ರೂ. 20 ಸಾವಿರ ತನಕ ಕ್ಯಾಶ್ ಡಿಸ್ಕೌಂಟ್ ಘೋಷಣೆ ಮಾಡಿದ್ದು, ರೂ. 15 ಸಾವಿರ ಎಕ್ಸ್ಚೆಂಜ್ ಆಫರ್ ಮತ್ತು ರೂ. 5,200 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.
ಎಕ್ಸ್ಯುವಿ300
ಕಂಪ್ಯಾಕ್ಟ್ ಎಸ್ಯುವಿ ಮಾದರಿಯಾದ ಎಕ್ಸ್ಯುವಿ300 ಕಾರು ಖರೀದಿಯ ಮೇಲೆ ಉಚಿತ ಆಕ್ಸೆಸರಿಸ್ ಒಳಗೊಂಡ ರೂ.10 ಸಾವಿರ ಕ್ಯಾಶ್ ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್ನಲ್ಲಿ ರೂ. 25 ಸಾವಿರ ಎಕ್ಸ್ಚೆಂಜ್ ಬೋನಸ್ ಮತ್ತು ರೂ. 4 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದೆ.
ಎಕ್ಸ್ಯುವಿ500 ಎಸ್ಯುವಿ
ಮಹೀಂದ್ರಾ ಕಂಪನಿಯು ಎಕ್ಸ್ಯುವಿ500 ಕಾರು ಖರೀದಿಯ ಮೇಲೆ ರೂ.15 ಸಾವಿರ ಮೌಲ್ಯದ ಆಕ್ಸೆಸರಿಸ್ ಒಳಗೊಂಡು ರೂ. 51 ಸಾವಿರ ಕ್ಯಾಶ್ ಡಿಸ್ಕೌಂಟ್ ನೀಡುತ್ತಿದ್ದು, ರೂ. 36 ಸಾವಿರ ಎಕ್ಸ್ಚೆಂಜ್ ಆಫರ್, ರೂ. 6,500 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.
MOST READ: ಲಾಕ್ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ
ಸ್ಕಾರ್ಪಿಯೋ ಎಸ್ಯುವಿ
ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಕಾರು ಖರೀದಿಯ ಮೇಲೆ ರೂ.10 ಸಾವಿರ ಮೌಲ್ಯದ ಆಕ್ಸೆಸರಿಸ್ ಪ್ಯಾಕೇಜ್ನೊಂದಿಗೆ ರೂ. 17 ಸಾವಿರ ಎಕ್ಸ್ಚೆಂಜ್ ಬೋನಸ್ ಮತ್ತು ರೂ. 4 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.
ಅಲ್ಟುರಾಸ್ ಜಿ4 ಎಸ್ಯುವಿ
ಮಹೀಂದ್ರಾ ಕಂಪನಿ ತನ್ನ ಹೈ ಎಂಡ್ ಎಸ್ಯುವಿ ಕಾರು ಮಾದರಿಯಾದ ಅಲ್ಟುರಾಸ್ ಜಿ4 ಕಾರು ಖರೀದಿ ಮೇಲೆ ರೂ.20 ಸಾವಿರ ಮೌಲ್ಯದ ಆಕ್ಸೆಸರಿಸ್ ಒಳಗೊಂಡು ರೂ. 2.20 ಲಕ್ಷ ಭರ್ಜರಿ ಆಫರ್ ಘೋಷಣೆ ಮಾಡಿದ್ದು, 50 ಸಾವಿರ ಎಕ್ಸ್ಚೆಂಜ್ ಬೋನಸ್ ಮತ್ತು ರೂ. 11,500 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.
MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು
ಮಹೀಂದ್ರಾ ಕಂಪನಿಯ ಹೊಸ ಆಫರ್ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಕಂಪನಿಯು ತನ್ನ ನ್ಯೂ ಜನರೇಷನ್ ಥಾರ್ ಕಾರು ಖರೀದಿಯ ಮೇಲೆ ಯಾವುದೇ ರೀತಿಯ ಕೊಡುಗೆಗಳನ್ನು ಘೋಷಣೆ ಮಾಡಿಲ್ಲ.