ಹೊಸ ನವೀಕರಣದೊಂದಿಗೆ ಮಹೀಂದ್ರಾ ಥಾರ್ ಎಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ

ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಥಾರ್ ಮಾದರಿಯ ಮಾರಾಟದಲ್ಲಿ ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ಕಂಪನಿಯು ಥಾರ್ ಕಾರಿನ ಆರಂಭಿಕ ಮಾದರಿಯನ್ನು ಹೊಸ ನವೀಕರಣಗಳೊಂದಿಗೆ ಮರುಬಿಡುಗಡೆ ಮಾಡಿದೆ.

ಮಹೀಂದ್ರಾ ಥಾರ್ ಎಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ

ಥಾರ್ ಹೊಸ ಮಾದರಿಯನ್ನು ಬಿಡುಗಡೆ ಮಾಡಿದ್ದ ಸಂದರ್ಭದಲ್ಲಿ ಎಎಕ್ಸ್ ಬೆಸ್ ವೆರಿಯೆಂಟ್ ಅನ್ನು ಸಹ ಪರಿಚಯಿಸಿದ್ದ ಮಹೀಂದ್ರಾ ಕಂಪನಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿಯೇ ಹೊಸ ಆವೃತ್ತಿಯನ್ನು ಸ್ಥಗಿತಗೊಳಿಸಿತ್ತು. ಇದೀಗ ಬೆಸ್ ಮಾದರಿಯನ್ನು ಕೆಲವು ಹೊಸ ಬದಲಾವಣೆಗಳೊಂದಿಗೆ ಮರುಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದೆ.

ಮಹೀಂದ್ರಾ ಥಾರ್ ಎಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ

ಹೊಸ ಎಎಕ್ಸ್ ಬೆಸ್ ವೆರಿಯೆಂಟ್ 6 ಆಸನ ಮಾದರಿಯಾಗಿದ್ದು, ಪೆಟ್ರೋಲ್ ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 10.68 ಲಕ್ಷಕ್ಕೆ ಮತ್ತು ಡೀಸೆಲ್ ಮಾದರಿಯು ರೂ.11.53 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ಮಹೀಂದ್ರಾ ಥಾರ್ ಎಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ

ಎಎಕ್ಸ್ ಬೆಸ್ ವೆರಿಯೆಂಟ್‌ 6 ಆಸನ ಸೌಲಭ್ಯ ಹೊಂದಿದ್ದು, ಇನ್ನುಳಿದ ಥಾರ್ ಮಾದರಿಗಳಲ್ಲಿ 4 ಆಸನ ಮಾತ್ರ ಹೊಂದಿರಲಿದೆ. 6 ಆಸನ ಮಾದರಿಯಲ್ಲಿ ಹಿಂಬದಿಯ ಆಸನಗಳು ಬೆಂಚ್ ಮಾದರಿಯಾಗಿದ್ದು, 4 ಆಸನ ಹೊಂದಿರುವ ಮಾದರಿಯ ಪ್ರತ್ಯೇಕ ಆಸನ ಸೌಲಭ್ಯ ಹೊಂದಿರುತ್ತವೆ.

ಮಹೀಂದ್ರಾ ಥಾರ್ ಎಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ

ಮಹೀಂದ್ರಾ ಕಂಪನಿಯು ಎಎಕ್ಸ್ ಬೆಸ್ ವೆರಿಯೆಂಟ್ ಅನ್ನು ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಉನ್ನತೀಕರಿಸಿದ್ದು, ಹೊಸ ಮಾದರಿಯಲ್ಲಿ ಸಾಫ್ಟ್ ಟಾಪ್ ಜೊತೆ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಜೋಡಿಸಲಾಗಿದೆ. ಥಾರ್ ಕಾರಿನ ಆರಂಭಿಕ ಮಾದರಿಯೊಂಂದಿಗೆ ಮತ್ತಷ್ಟು ಆಫ್ ರೋಡ್ ಪ್ರಿಯರನ್ನು ಸೆಳೆಯುವ ಯೋಜನೆಯಲ್ಲಿರುವ ಮಹೀಂದ್ರಾ ಕಂಪನಿಯು ಬೆಸ್ ಮಾದರಿಯನ್ನು ಹೊರತುಪಡಿಸಿ ಇನ್ನುಳಿದ ಮಾದರಿಗಳಲ್ಲಿ ಯಾವುದೇ ಬದಲಾವಣೆ ಪರಿಚಯಿಸಿಲ್ಲ.

ಮಹೀಂದ್ರಾ ಥಾರ್ ಎಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ

ಹೊಸ ವೆರಿಯೆಂಟ್ ಮರುಬಿಡುಗಡೆಗೂ ಮುನ್ನ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.79 ಲಕ್ಷ ಬೆಲೆ ಹೊಂದಿದ್ದ ಥಾರ್ ಕಾರು ಇದೀಗ ರೂ. 10.68 ಲಕ್ಷ ಬೆಲೆ ಪಡೆದುಕೊಂಡಿದ್ದು, ಟಾಪ್ ಎಂಡ್ ಮಾದರಿಯು ರೂ. 15. 08 ಲಕ್ಷ ಬೆಲೆ ಹೊಂದಿದೆ.

ಮಹೀಂದ್ರಾ ಥಾರ್ ಎಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ

ಇನ್ನು ಹೊಸ ಕಾರು ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಇದುವರೆಗೆ ಬರೋಬ್ಬರಿ ಸುಮಾರು 55 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ.

ಮಹೀಂದ್ರಾ ಥಾರ್ ಎಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

ಮಹೀಂದ್ರಾ ಥಾರ್ ಎಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ

ಹೊಸ ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಮಹೀಂದ್ರಾ ಥಾರ್ ಎಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ

ಹೊಸ ಕಾರಿನ ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

More from DriveSpark

Article Published On: Monday, July 12, 2021, 14:55 [IST]
English summary
Mahindra Thar Base AX Variant Launched.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+