Just In
- 8 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 10 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 11 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 12 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಸ್ಯುವಿ ಕಾರುಗಳ ಮಾರಾಟದಲ್ಲಿ Mahindra XUV700 ಹೊಸ ದಾಖಲೆ
ಹೊಸದಾಗಿ ಬಿಡುಗಡೆಯಾಗಿರುವ ಮಹೀಂದ್ರಾ ಎಕ್ಸ್ಯುವಿ700(Mahindra XUV700) ಮಾದರಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಹೊಸ ಕಾರು ಇದುವರೆಗೆ ಸುಮಾರು 65 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ.
ಹೊಸ ಎಕ್ಸ್ಯುವಿ700 ಕಾರು ಮಾದರಿಯನ್ನು ಬಿಡುಗಡೆಗೊಳಿಸಿದ ಮೊದಲ ದಿನವೇ 25 ಸಾವಿರ ಬುಕ್ಕಿಂಗ್ ಮತ್ತು ಎರಡನೇ ದಿನದ ಬುಕ್ಕಿಂಗ್ ಅವಧಿಯಲ್ಲಿ ಮತ್ತೆ 25 ಸಾವಿರ ಬುಕ್ಕಿಂಗ್ ಪಡೆದುಕೊಳ್ಳುವ ಮೊದಲ ಎರಡು ದಿನಗಳಲ್ಲಿ 50 ಸಾವಿರ ಬುಕ್ಕಿಂಗ್ ಪಡೆದುಕೊಂಡಿದ್ದು, ಇದೀಗ ಹೊಸ ಕಾರಿನ ಬುಕ್ಕಿಂಗ್ ಪ್ರಮಾಣವು 65 ಸಾವಿರಕ್ಕೆ ತಲುಪಿದೆ.
ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಬೆಲೆಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಈ ತಿಂಗಳಾಂತ್ಯಕ್ಕೆ ಹೊಸ ಕಾರಿನ ವಿತರಣೆಯನ್ನು ಆರಂಭವಾಗಲಿದೆ.
ಹೊಸ ಕಾರಿನ ಬೇಡಿಕೆಗೆ ಅನುಗುಣವಾಗಿ ಉತ್ಪಾದನಾ ಪ್ರಮಾಣವನ್ನು ಕೂಡಾ ಹೆಚ್ಚಿಸಿರುವ ಮಹೀಂದ್ರಾ ಕಂಪನಿಯು ಮೊದಲು ಪೆಟ್ರೋಲ್ ಮಾದರಿಯನ್ನು ವಿತರಣೆ ಮಾಡಲಿದ್ದು, ತದನಂತರ ಡೀಸೆಲ್ ಮಾದರಿಗಳನ್ನು ವಿತರಣೆ ಮಾಡಲಿದೆ.
ಈ ತಿಂಗಳು ಕೊನೆಯ ವಾರದಲ್ಲಿ ಪೆಟ್ರೋಲ್ ಮಾದರಿಗಳ ವಿತರಣೆಯು ಆರಂಭವಾಗಲಿದ್ದರೆ ಮುಂದಿನ ತಿಂಗಳು ನವೆಂಬರ್ ಕೊನೆಯ ವಾರದಲ್ಲಿ ಡೀಸೆಲ್ ಕಾರುಗಳ ವಿತರಣೆ ಆರಂಭವಾಗಲಿದ್ದು, ಹೊಸ ಕಾರಿನ ಬೆಲೆಯು ಮೊದಲ 25 ಸಾವಿರ ಯುನಿಟ್ ಪಡೆಯುವ ಗ್ರಾಹಕರಿಗೆ ಒಂದು ಬೆಲೆಯಾದರೆ 25 ಸಾವಿರ ನಂತರ ಬುಕ್ಕಿಂಗ್ ನಂತರ ಕಾರು ಖರೀದಿಸಲು ಬುಕ್ಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಬೆಲೆಯು ತುಸು ದುಬಾರಿಯಾಗಿರಲಿದೆ.
50 ಸಾವಿರ ಯುನಿಟ್ ನಂತರ ಬುಕ್ಕಿಂಗ್ ದಾಖಲಿಸುತ್ತಿರುವ ಗ್ರಾಹಕರಿಗೆ ಹೊಸ ಕಾರು ಮತ್ತಷ್ಟು ದುಬಾರಿಯಾಗಿರುವ ಬಗ್ಗೆ ಕಂಪನಿಯೇ ಮಾಹಿತಿ ನೀಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.
ಎರಡು ಎಂಜಿನ್ ಆಯ್ಕೆಯೊಂದಿಗೆ ಬರೋಬ್ಬರಿ 21 ವೆರಿಯೆಂಟ್ ಹೊಂದಿರುವ ಹೊಸ ಕಾರಿನ ಮೊದಲ 25 ಸಾವಿರ ಯುನಿಟ್ ಖರೀದಿಸುವ ಗ್ರಾಹಕರಿಗೆ ಕಂಪನಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯನ್ನು ರೂ. 22.89 ಲಕ್ಷಕ್ಕೆ ವಿತರಣೆ ಮಾಡಲಿದೆ.
25 ಸಾವಿರ ಯುನಿಟ್ ನಂತರ ಹೊಸ ಕಾರು ವಿತರಣೆ ಪಡೆದುಕೊಳ್ಳಲಿರುವ ಗ್ರಾಹಕರಿಗೆ ಹೊಸ ಕಾರಿನ ಬೆಲೆಯು ಆರಂಭಿಕವಾಗಿ ರೂ. 12.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22.99 ಲಕ್ಷ ಅನ್ವಯವಾಗಲಿದೆ.
ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ಎನ್ನುವ ವಿವಿಧ ವೆರಿಯೆಂಟ್ಗಳೊಂದಿಗೆ ಆಕರ್ಷಕ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿದ್ದು, ಕಂಪನಿಯೇ ಜೋಡಣೆ ಮಾಡುವ 7 ಸೀಟರ್ ಮಾದರಿಗಳನ್ನು ಹೊರತುಪಡಿಸಿ 5 ಸೀಟರ್ ಹೊಂದಿರುವ ಮಾದರಿಗಳಲ್ಲಿ 7 ಸೀಟರ್ ಬಯಸುವ ಗ್ರಾಹಕರು ಹೆಚ್ಚುವರಿ ರೂ. 70 ಸಾವಿರ ಪಾವತಿ ಮಾಡಬೇಕಾಗುತ್ತದೆ.
ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.
2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.
ಹೊಸ ಕಾರಿನಲ್ಲಿ ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್, 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಪಡೆದುಕೊಂಡಿದೆ.
ಎಕ್ಸ್ಯುವಿ700 ಮಾದರಿಯ ಸೈಡ್ ಪ್ರೋಫೈಲ್ ಮತ್ತು ಹಿಂಬದಿಯ ವಿನ್ಯಾಸವು ಕೂಡಾ ಸಾಕಷ್ಟು ಹೊಸತನದಿಂದ ಕೂಡಿದ್ದು, ಹಿಂಬದಿಯ ಫೆಂಡರ್ನೊಂದಿಗೆ ಹರಡಿಕೊಂಡಿರುವ ವಿಭಜಿತ ಟೈಲ್ಲ್ಯಾಂಪ್, ವಿನೂತನ ವಿನ್ಯಾಸದ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್, ಶಾರ್ಕ್ ಫಿನ್ ಆಂಟೆನಾ, ರೂಫ್ ಸ್ಪಾಯ್ಲರ್ ಪಡೆದುಕೊಂಡಿದೆ.
ಹಾಗೆಯೇ ಹೊಸ ಕಾರಿನಲ್ಲಿ 10.25 ಇಂಚಿನ ಡಿಜಿಟಲ್ ಮತ್ತು ಇನ್ಪೋಟೈನ್ಮೆಂಟ್ ಟಚ್ಸ್ಕ್ರೀನ್ ಡಿಸ್ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ಪ್ಲೇ, ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲೂ ಎಸಿ ವೆಂಟ್ಸ್, ಪನೋರಮಿಕ್ ಸನ್ರೂಫ್ ಮತ್ತು ಏರ್ ಪ್ಯೂರಿಫ್ಲೈರ್ ಸೌಲಭ್ಯಗಳಿವೆ.
ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂ ಸೌಲಭ್ಯವು ಹೊಸ ಕಾರಿನ ಪ್ರಮುಖ ಸುರಕ್ಷಾ ಸೌಲಭ್ಯವಾಗಿದ್ದು, ಇದರ ಜೊತೆಗೆ 7-ಏರ್ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್, ಲೆನ್ ಕಿಪ್ ಅಸಿಸ್ಟ್ ಸೌಲಭ್ಯ ಹೊಂದಿದೆ.