ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಮಹೀಂದ್ರಾ(Mahindra) ನಿರ್ಮಾಣದ ಹೊಚ್ಚ ಹೊಸ ಎಕ್ಸ್‌ಯುವಿ700(XUV700) ಎಸ್‌ಯುವಿ ಮಾದರಿಯು ಅಕ್ಟೋಬರ್ ಮಧ್ಯಂತರದಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರು ಅಧಿಕೃತ ಬಿಡುಗಡೆಗೂ ಮುನ್ನವೇ ಬೆಲೆ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿದೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಹೊಸ ತಲೆಮಾರಿನ ಎಕ್ಸ್‌ಯುವಿ700 ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಬೆಲೆ ವಿಚಾರವಾಗಿ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ. ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಮಾದರಿಯನ್ನು ಆಧರಿಸಿ ಹೊಸ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಂಡಿದ್ದು, ಹೊಸ ಕಾರು ಖರೀದಿಗೆ ಈಗಾಗಲೇ ಭಾರೀ ಪ್ರಮಾಣದ ಬೇಡಿಕೆ ಸಲ್ಲಿಕೆಯಾಗುತ್ತಿದೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಹೊಸ ಎಸ್‌ಯುವಿ ಮಾದರಿಯು ಪ್ರಮುಖ ಎರಡು ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಎರಡು ಮಾದರಿಗಳಲ್ಲಿ ಎಂಜಿನ್, ಗೇರ್‌ಬಾಕ್ಸ್ ಆಯ್ಕೆ ಆಧರಿಸಿ ಸುಮಾರು 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಆರಂಭಿಕವಾಗಿ ಎಂಎಕ್ಸ್ ಸೀರಿಸ್ ಮತ್ತು ಟಾಪ್ ಎಂಡ್‌ನಲ್ಲಿ ಆಂಡ್ರಿನೊಎಕ್ಸ್ ಸೀರಿಸ್‌ ಒಳಗೊಂಡಿರುವ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 5 ಸೀಟರ್‌ ಮತ್ತು 7 ಸೀಟರ್ ಸೌಲಭ್ಯವನ್ನು ಹೊಂದಿದ್ದು, ಏಳು ಆಸನ ಹೊಂದಿರುವ ಮಾದರಿಗಳು ತುಸು ಐಷಾರಾಮಿ ಫೀಚರ್ಸ್‌ಗಳನ್ನು ಪಡೆದುಕೊಂಡಿರಲಿವೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಹೊಸ ಕಾರಿನ ಆರಂಭಿಕ ಆವೃತ್ತಿಯಾಗಿರುವ ಎಂಎಕ್ಸ್ ಸೀರಿಸ್ ಬೆಲೆ ಮಾಹಿತಿಯನ್ನು ಮಹೀಂದ್ರಾ ಕಂಪನಿಯೇ ಮಾಹಿತಿ ಹಂಚಿಕೊಂಡಿದ್ದು, ಎಎಕ್ಸ್ ಸೀರಿಸ್ ಮಾದರಿಯ ಬೆಲೆ ಮಾಹಿತಿಯನ್ನು ಇನ್ನು ಹಂಚಿಕೊಂಡಿಲ್ಲ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಎಕ್ಸ್‌ಯುವಿ700 ಎಂಎಕ್ಸ್ ಮಾದರಿಯು ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.49 ಲಕ್ಷ ಬೆಲೆ ಹೊಂದಿರುವುದು ಖಚಿತವಾಗಿದೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಆದರೆ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳನ್ನು ಹೊಂದಿರುವ ಎಎಕ್ಸ್ ಸೀರಿಸ್ ಮಾದರಿಗಳು ಆರಂಭಿಕವಾಗಿ ರೂ.13.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.79 ಲಕ್ಷ ಬೆಲೆ ಹೊಂದಿದೆ ಎನ್ನಲಾಗಿದೆ.

MX Series
Fuel Type 5-Seater (MT)
MX Petrol ₹11.99 Lakh
Diesel ₹12.49 Lakh
AndrenoX Series
Fuel Type MT AT
AX3

(5-Seater)

Petrol ₹13.99 Lakh ₹15.59 Lakh
Diesel ₹14.59 Lakh** ₹16.19 Lakh
AX5

(5-Seater)

Petrol ₹14.99 Lakh** ₹16.59 Lakh
Diesel ₹15.59 Lakh** ₹17.19 Lakh**
AX7

(7-Seater)

Petrol ₹17.59 Lakh ₹19.19 Lakh
Diesel ₹18.19 Lakh ₹19.79 Lakh
**Also available in 7-Seater at an additional ₹60,000
ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಟಾಪ್ ಎಂಡ್‌ನಲ್ಲಿರುವ ಪ್ರಮುಖ ವೆರಿಯೆಂಟ್ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ದರ ಶ್ರೇಣಿಯಲ್ಲಿ ಹೊಸ ಕಾರನ್ನು ಆಯ್ಕೆ ಮಾಡಬಹುದಾಗಿದೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಎಕ್ಸ್‌ಯುವಿ700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಮಾರಾಟಗೊಳ್ಳಲಿದ್ದು, ಆರಂಭಿಕ ಮಾದರಿಗಳಲ್ಲಿ MX ವೆರಿಯೆಂಟ್ ನಂತರ AX3, AX5 ಮತ್ತು AX7 ವೆರಿಯೆಂಟ್‌ಗಳು ಮಾರಾಟಗೊಳ್ಳಲಿವೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಆರಂಭಿಕ ಎಂಎಕ್ಸ್ ವೆರಿಯೆಂಟ್‌ನಲ್ಲಿ ಮಹೀಂದ್ರಾ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಇದು 5 ಸೀಟರ್ ಮಾದರಿಯನ್ನು ಮಾತ್ರ ಮಾಡಲಿದ್ದು, ಎಎಕ್ಸ್ ಸೀರಿಸ್‌ಗಳಲ್ಲಿ 5 ಸೀಟರ್ ಮತ್ತು 7 ಸೀಟರ್ ಸೌಲಭ್ಯ ನೀಡಿದೆ. ಒಂದು ವೇಳೆ 5 ಸೀಟರ್ ಮಾದರಿಯಲ್ಲಿ 7 ಸೀಟರ್ ಸೌಲಭ್ಯ ಬಯಸುವ ಗ್ರಾಹಕರು ಹೆಚ್ಚುವರಿಯಾಗಿ ರೂ. 60 ಸಾವಿರ ಪಾವತಿಸಬೇಕಾಗುತ್ತದೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಟಾಪ್ ಎಂಡ್ ಮಾದರಿಗಳಲ್ಲಿರುವ ಎಎಕ್ಸ್3 ವೆರಿಯೆಂಟ್‌ನಲ್ಲಿ ಕಂಪನಿಯು ಐದು ಆಸನ ಸೌಲಭ್ಯವನ್ನು ಮಾತ್ರ ನೀಡಿದ್ದು, ಇದರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ. ಆದರೆ ಈ ರೂಪಾಂತರದಲ್ಲಿ ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಮಾತ್ರ ಲಭ್ಯವಿರಲಿದೆಯೆಂತೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಎಎಕ್ಸ್5 ವೆರಿಯೆಂಟ್‌ಗಳು ಸಹ ಐದು ಮತ್ತು ಏಳು ಆಸನಗಳ ಆಯ್ಕೆಗಳಲ್ಲಿ ಖರೀದಿ ಲಭ್ಯವಿರಲಿದ್ದು, ಎಎಕ್ಸ್5 ಮಾದರಿಗಳಲ್ಲೂ ಕಂಪನಿಯು ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿರುವ ಎಎಕ್ಸ್5 ಮಾದರಿಯ ಹೈ ಎಂಡ್ ಮಾದರಿಯಲ್ಲಿ ಕಂಪನಿಯು ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಮಾಡಬಹುದಾಗಿದೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಇನ್ನುಳಿದಂತೆ ಎಎಕ್ಸ್7 ಟಾಪ್ ಎಂಡ್ ಮಾದರಿಯಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಏಳು ಆಸನ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಹೊಂದಿರುವ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿರುವರಿಯಾಗಿ ಹಲವಾರು ಸುಧಾರಿತ ಫೀಚರ್ಸ್‌ಗಳು ಜೋಡಣೆ ಮಾಡಲಿದೆಯೆಂತೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(ಎಂಟಿ),450-ಎನ್ಎಂ ಟಾರ್ಕ್(ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದ್ದು, ಹೈ ಎಂಡ್ ಮಾದರಿಗಳಲ್ಲಿ ಮಹೀಂದ್ರಾ ಕಂಪನಿಯು 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದೆ.

ಬಿಡುಗಡೆಗೂ ಮುನ್ನವೇ Mahindra XUV700 ಕಾರಿನ ಅಧಿಕೃತ ಬೆಲೆ ಮಾಹಿತಿ ಬಹಿರಂಗ

ಹೊಸ ಎಕ್ಸ್‌ಯುವಿ700 ಮಾದರಿಯ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿರುವ ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯಗಳನ್ನು ಜೋಡಿಸಿದ್ದು, ಹೊಸ ಕಾರಿಗೆ ಮತ್ತಷ್ಟು ಐಷಾರಾಮಿ ಲುಕ್ ನೀಡಲು ಬ್ರಾಂಡ್ ನ್ಯೂ ಲೋಗೋ ನೀಡುತ್ತಿರುವುದು ಮಹತ್ವದ ಬದಲಾವಣೆಯಾಗಿದೆ.

Most Read Articles

Kannada
English summary
Mahindra xuv700 suv expected price revealed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X