Just In
- 2 hrs ago ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- 2 hrs ago Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- 2 hrs ago ಬ್ರಿಟೀಷ್ ಮಾರುಕಟ್ಟೆಯನ್ನು ಆಳಲು ಹೊರಟ ಭಾರತೀಯ ಬೈಕ್: ಯುಕೆ ನಲ್ಲಿ ಟ್ರಯಂಫ್ಗೆ ನೇರ ಹಣಾಹಣಿ!
- 3 hrs ago Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
Don't Miss!
- Movies Yuva Twitter Review:"ಕಾಲರ್ ಎತ್ತಿಕೊಂಡು ಓಡಾಡಿ", "ದೊಡ್ಮನೆ ಪರಂಪರೆ"; 'ಯುವ' ನೋಡಿ ಫ್ಯಾನ್ಸ್ ಏನಂದ್ರು?
- Finance ಭಾರತದ ಮೊದಲ ಬುಲೆಟ್ ರೈಲಿನ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಸಿಸ್ಟಮ್ ಹಳಿ ಚಿತ್ರ ಬಹಿರಂಗ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಗಸ್ಟ್ 15ರಂದು ಬಿಡುಗಡೆಯಾಗಲಿದೆಯೆಂತೆ ಮಹೀಂದ್ರಾ ಎಕ್ಸ್ಯುವಿ700 ಎಸ್ಯುವಿ
ಹೊಸ ಎಕ್ಸ್ಯುವಿ700 ಬಿಡುಗಡೆಯ ಕುರಿತಂತೆ ಮಹೀಂದ್ರಾ ಕಂಪನಿಯು ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಕೆಲವು ಮಾಹಿತಿಗಳ ಪ್ರಕಾರ ಅಗಸ್ಟ್ 15ರಂದೇ ಬಿಡುಗಡೆಯಾಗಲಿದೆ ಎನ್ನಲಾಗಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದಲ್ಲಿ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.
ಹೊಸ ಎಕ್ಸ್ಯುವಿ700 ಬಿಡುಗಡೆಯ ಕುರಿತಂತೆ ಮಹೀಂದ್ರಾ ಕಂಪನಿಯು ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಕೆಲವು ಮಾಹಿತಿಗಳ ಪ್ರಕಾರ ಅಗಸ್ಟ್ 15ರಂದೇ ಬಿಡುಗಡೆಯಾಗಲಿದೆ ಎನ್ನಲಾಗಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದಲ್ಲಿ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.
ಮಹೀಂದ್ರಾ ಕಂಪನಿು ಪ್ರಸ್ತುತ ಮಾರುಕಟ್ಟೆಯಲ್ಲಿನ ಎಕ್ಸ್ಯುವಿ500 ಮಾದರಿಯ ನ್ಯೂ ಜನರೇಷನ್ ಮಾದರಿಯನ್ನೇ ಎಕ್ಸ್ಯುವಿ700 ಕಾರು ಮಾದರಿಯಾಗಿ ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ಗಳನ್ನು ಜೋಡಣೆ ಹೊಂದಿದೆ.
ಹೊಸ ಕಾರಿನಲ್ಲಿ ಸೆಗ್ಮೆಂಟ್ ಫಸ್ಟ್ ಫೀಚರ್ಸ್ಗಳಾದ ಆಟೋ ಬೂಸ್ಟರ್ ಹೆಡ್ಲ್ಯಾಂಪ್, ಸೆಗ್ಮೆಂಟ್ ಫಸ್ಟ್ ಲಾರ್ಜ್ ಸನ್ರೂಫ್, ಡ್ರೈವರ್ ಡ್ರಾವ್ಸಿನೆಸ್ ಡಿಟೆಕ್ಷನ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳಿದ್ದು, ಆಸಕ್ತ ಗ್ರಾಹಕರಿಗಾಗಿ ಸೇಫ್ಟಿ ಫೀಚರ್ಸ್ಗಳನ್ನು ವೈಯಕ್ತಿಕರಣಗೊಳಿಸುವ ಆಯ್ಕೆ ನೀಡಿರುವುದು ಮಹತ್ವದ ಬದಲಾವಣೆಯಾಗಿದೆ.
ಇನ್ನು ಹೊಸ ಎಕ್ಸ್ಯುವಿ700 ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್ಗಳೊಂದಿಗೆ ವಿವಿಧ ಎಂಜಿನ್ ಆಯ್ಕೆಯಲ್ಲಿ ಒಟ್ಟು 11 ವೆರಿಯೆಂಟ್ಗಳನ್ನು ಪಡೆದುಕೊಳ್ಳಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳನ್ನು ಹೊಂದಿರುವ ಹೊಸ ಕಾರಿನಲ್ಲಿ ಡೀಸೆಲ್ ಪವರ್ಫುಲ್ ಎಂಜಿನ್ ಆಯ್ಕೆ ಹೊಂದಿರಲಿದೆ.
2.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸದ್ಯ ಕಂಪನಿಯು 180 ಬಿಎಚ್ಪಿ, 190 ಬಿಎಚ್ಪಿ ಮತ್ತು 210 ಬಿಎಚ್ಪಿ ಟ್ಯೂನ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದ್ದು, ಹೊಸ ಕಾರು ಉತ್ಪಾದನಾ ಮಾದರಿಯಲ್ಲಿ 180-ಬಿಎಚ್ಪಿ ಮಾದರಿಯನ್ನು ಪಡೆದುಕೊಳ್ಳುವ ನೀರಿಕ್ಷೆಗಳಿವೆ.
ಹೊಸ ಕಾರಿನಲ್ಲಿ ನೀಡಲಾಗುತ್ತಿರುವ ಪೆಟ್ರೋಲ್ ಎಂಜಿನ್ ಮಾಹಿತಿ ಲಭ್ಯವಿಲ್ಲವಾದರೂ ಥಾರ್ ಮಾದರಿಯಲ್ಲಿ ನೀಡಲಾಗಿರುವ 2.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದುವ ಸಾಧ್ಯತೆಗಳಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಕಂಪನಿಯು ಡೀಸೆಲ್ ಮಾದರಿಯ ಹೈ ಎಂಡ್ ಆವೃತ್ತಿಯಲ್ಲಿ 210 ಬಿಎಚ್ಪಿ ಮಾದರಿಯನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಗಳಿವೆ.
ಎಕ್ಸ್ಯುವಿ700 ಬಿಡುಗಡೆಯ ನಂತರ ಎಕ್ಸ್ಯುವಿ500 ಮಾದರಿಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಿರುವ ಮಹೀಂದ್ರಾ ಕಂಪನಿಯು ಸದ್ಯ ಲಭ್ಯವಿರುವಂತಹ 7 ಸೀಟರ್ ಸೌಲಭ್ಯವನ್ನು ತೆಗೆದುಹಾಕಿ ಆರಾಮದಾಯಕ ಕ್ಯಾಬಿನ್ ರೂಂ ಹೊಂದಿರುವ 5 ಸೀಟರ್ ಮಾದರಿಯನ್ನಾಗಿ ಮರುಬಿಡುಗಡೆ ಮಾಡಲಿದೆ.
ಈ ಮೂಲಕ 5 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್ಯುವಿ500 ಮತ್ತು 7 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್ಯುವಿ700 ಮಾರಾಟ ಮಾಡಲಿದ್ದು, ಇತ್ತೀಚೆಗೆ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿರುವ ಹಿನ್ನಲೆಯಲ್ಲಿ ಕಂಪನಿಯು ಎಕ್ಸ್ಯುವಿ ಸರಣಿಯಲ್ಲಿ ಈ ಬದಲಾವಣೆ ತಂದಿದೆ.