ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಸ್‌ಯುವಿ ಮಾದರಿಯು ಅಕ್ಟೋಬರ್ ಮಧ್ಯಂತರದಲ್ಲಿ ಬಿಡುಗಡೆಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಹೊಸ ಕಾರನ್ನು ಕಂಪನಿಯು ಆಯ್ದ ಡೀಲರ್ಸ್ ಯಾರ್ಡ್‌ಗಳಲ್ಲಿ ಸ್ಟಾಕ್ ಮಾಡುತ್ತಿದೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು ಮಾದರಿಯು ಬೆಲೆ ವಿಚಾರವಾಗಿ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಮಾದರಿಯನ್ನು ಆಧರಿಸಿರುವ ಎಕ್ಸ್‌ಯುವಿ700 ಮಾದರಿಯು ಹೊಸ ಪ್ಲ್ಯಾಟ್‌ಫಾರ್ಮ್‌ನೊಂದಿಗೆ ವಿನೂತನ ಫೀಚರ್ಸ್ ಮತ್ತು ಎಂಜಿನ್ ಆಯ್ಕೆ ಪಡೆದುಕೊಂಡಿದೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಎಕ್ಸ್‌ಯುವಿ700 ಕಾರು ಮಾದರಿಯು ಪ್ರಮುಖ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಎಂಜಿನ್, ಗೇರ್‌ಬಾಕ್ಸ್ ಆಯ್ಕೆ ಆಧರಿಸಿ ಸುಮಾರು 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ ಎನ್ನಲಾಗಿದೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಎಂಎಕ್ಸ್ ಸೀರಿಸ್ ಮತ್ತು ಆಂಡ್ರಿನೊಎಕ್ಸ್ ಸೀರಿಸ್‌‌ಗಳೊಂದಿಗೆ ಖರೀದಿಗೆ ಲಭ್ಯವಿರಲಿರುವ ಹೊಸ ಕಾರನ್ನು ಗ್ರಾಹಕರು ತಮ್ಮ ಬೇಡಿಕೆಯೆಂತೆ 5 ಸೀಟರ್‌ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಖರೀದಿ ಮಾಡಬಹುದಾಗಿದ್ದು, ಎಂಎಕ್ಸ್ ಸೀರಿಸ್‌ಗಿಂತಲೂ ಎಎಕ್ಸ್ ಸೀರಿಸ್ ಆವೃತ್ತಿಗಳು ಹೆಚ್ಚು ಐಷಾರಾಮಿ ಸೌಲಭ್ಯಗಳನ್ನು ಹೊಂದಿರಲಿವೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಎಕ್ಸ್‌ಯುವಿ700 ಹೊಸ ಕಾರಿನ ಆರಂಭಿಕ ಆವೃತ್ತಿಯ ಬೆಲೆಯನ್ನು ಈಗಾಗಲೇ ಬಹಿರಂಗ ಪಡಿಸಲಾಗಿದ್ದು, ಆರಂಭಿಕ ಎಂಎಕ್ಸ್ ಆವೃತ್ತಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.99 ಲಕ್ಷ ಬೆಲೆ ಹೊಂದಿರುವುದು ಖಚಿತವಾಗಿದೆ. ಆದರೆ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳನ್ನು ಹೊಂದಿರುವ ಎಎಕ್ಸ್ ಮಾದರಿಗಳ ಬೆಲೆ ಮಾಹಿತಿ ಇನ್ನು ಲಭ್ಯವಾಗಬೇಕಿದ್ದು, ಟಾಪ್ ಆವೃತ್ತಿಯು ಆರಂಭಿಕವಾಗಿ ರೂ.15 ಲಕ್ಷದಿಂದ ರೂ. 21.69 ಲಕ್ಷ ಬೆಲೆ ಹೊಂದಿರಬಹುದು ಎನ್ನಲಾಗಿದೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಹೊಸ ಕಾರಿನ ಟಾಪ್ ಎಂಡ್‌ನಲ್ಲಿರುವ ಪ್ರಮುಖ ವೆರಿಯೆಂಟ್‌ಗಳು ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ದರ ಶ್ರೇಣಿಯಲ್ಲಿ ಹೊಸ ಕಾರನ್ನು ಆಯ್ಕೆ ಮಾಡಬಹುದಾಗಿದೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಎಕ್ಸ್‌ಯುವಿ700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಮಾರಾಟಗೊಳ್ಳಲಿದ್ದು, ಆರಂಭಿಕ ಮಾದರಿಗಳಲ್ಲಿ MX ವೆರಿಯೆಂಟ್ ನಂತರ AX3, AX5 ಮತ್ತು AX7 ವೆರಿಯೆಂಟ್‌ಗಳು ಮಾರಾಟಗೊಳ್ಳಲಿವೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಆರಂಭಿಕ ಎಂಎಕ್ಸ್ ವೆರಿಯೆಂಟ್‌ನಲ್ಲಿ ಮಹೀಂದ್ರಾ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಆಯ್ಕೆಗಳನ್ನು ನೀಡುತ್ತಿದ್ದು, ಇದು 5 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಮ್ಯಾನುವಲ್ ಆವೃತ್ತಿಯಲ್ಲಿ ಮಾತ್ರ ಮಾರಾಟವಾಗಲಿದೆಯೆಂತೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಎಎಕ್ಸ್3 ವೆರಿಯೆಂಟ್‌ಗಳು ಐದು ಆಸನ ಸೌಲಭ್ಯವನ್ನು ಮಾತ್ರ ಹೊಂದಿದ್ದು, ಇದರಲ್ಲೂ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ. ಆದರೆ ಈ ರೂಪಾಂತರದಲ್ಲಿ ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಮಾತ್ರ ಲಭ್ಯವಿರಲಿದೆಯೆಂತೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಎಎಕ್ಸ್5 ವೆರಿಯೆಂಟ್‌ಗಳು ಸಹ ಐದು ಮತ್ತು ಏಳು ಆಸನಗಳ ಆಯ್ಕೆಗಳಲ್ಲಿ ಖರೀದಿ ಲಭ್ಯವಿರಲಿದ್ದು, ಎಎಕ್ಸ್5 ಮಾದರಿಗಳಲ್ಲೂ ಕಂಪನಿಯು ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿರುವ ಎಎಕ್ಸ್5 ಮಾದರಿಯ ಹೈ ಎಂಡ್ ಮಾದರಿಯಲ್ಲಿ ಕಂಪನಿಯು ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಮಾಡಬಹುದಾಗಿದೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಇನ್ನುಳಿದಂತೆ ಎಎಕ್ಸ್7 ಟಾಪ್ ಎಂಡ್ ಮಾದರಿಯಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಏಳು ಆಸನ ಆವೃತ್ತಿಯನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಹೊಂದಿರುವ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿರುವರಿಯಾಗಿ ಹಲವಾರು ಸುಧಾರಿತ ಫೀಚರ್ಸ್‌ಗಳು ಜೋಡಣೆ ಮಾಡಲಿದೆಯೆಂತೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(ಎಂಟಿ),450-ಎನ್ಎಂ ಟಾರ್ಕ್(ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದ್ದು, ಹೈ ಎಂಡ್ ಮಾದರಿಗಳಲ್ಲಿ ಮಹೀಂದ್ರಾ ಕಂಪನಿಯು 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದೆ.

ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಬಹುನೀರಿಕ್ಷಿತ Mahindra XUV700 ಎಸ್‌ಯುವಿ

ಹಾಗೆಯೇ ಹೊಸ ಕಾರು ವಿವಿಧ ವೆರಿಯೆಂಟ್‌ಗಳೊಂದಿಗೆ ಎಲೆಕ್ಟ್ರಿಕ್ ಬ್ಲ್ಯೂ, ಎವರೆಸ್ಟ್ ವೈಟ್, ಡ್ಯಾಜಿಂಗ್ ಸಿಲ್ವರ್, ಮಿಡ್‌ನೈಟ್ ಬ್ಲ್ಯಾಕ್ ಮತ್ತು ರೆಡ್ ರೇಂಜ್ ಬಣ್ಣಗಳ ಆಯ್ಕೆ ಹೊಂದಿದ್ದು, ಬೆಲೆ ಶ್ರೇಣಿಯ ಮೂಲಕ ಈ ಹೊಸ ಕಾರು ಸುಮಾರು 15ಕ್ಕೂ ಹೆಚ್ಚು ಕಾರುಗಳಿಗೆ ಪೈಪೋಟಿ ನೀಡಲಿದೆ.

Article Published On: Wednesday, September 29, 2021, 12:59 [IST]
English summary
Mahindra xuv700 suv reaches dealership ahead of lunch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+