Just In
- 4 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 5 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 5 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 5 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜೊತೆಗೂಡಿ ಸಣ್ಣ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿವೆ ಮಾರುತಿ - ಟೊಯೊಟಾ ಕಂಪನಿಗಳು
ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಗಳಾದ ಮಾರುತಿ ಸುಜುಕಿ ಇಂಡಿಯಾ ಹಾಗೂ ಟೊಯೊಟಾ ಕಿರ್ಲೋಸ್ಕರ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇತ್ತೀಚಿನ ಮಾಹಿತಿಗಳ ಪ್ರಕಾರ ಟೊಯೊಟಾ ಹಾಗೂ ಮಾರುತಿ ಸುಜುಕಿ ಕಂಪನಿಗಳು ಹೊಸ ಮಧ್ಯಮ ಗಾತ್ರದ ಎಂಪಿವಿಯನ್ನು ಅಭಿವೃದ್ದಿಪಡಿಸುತ್ತಿವೆ.

ಈ ಎರಡೂ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಲಿರುವ ಹೊಸ ಎಂಪಿವಿಯು ಮಾರುತಿ ಎರ್ಟಿಗಾ ಹಾಗೂ ಟೊಯೊಟಾ ಇನ್ನೋವಾ ಕ್ರಿಸ್ಟಾ ನಡುವೆ ಇರಲಿದೆ. ಟೀಮ್ ಬಿಹೆಚ್‌ಪಿ ವರದಿಯ ಪ್ರಕಾರ ಈ ಜಂಟಿ ಸಹಭಾಗಿತ್ವದಲ್ಲಿ ಹೊಸ ಸಣ್ಣ ಕಾರನ್ನು ಸಹ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಲಾಗುವುದು.

ಈ ಸಣ್ಣ ಕಾರಿಗೆ 560 ಬಿ ಎಂಬ ಕೋಡ್ ವರ್ಡ್ ನೀಡಲಾಗಿದೆ. ಈ ಕಾರನ್ನು ಟೊಯೊಟಾದ ಕಂಪನಿಯಡಿಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ವರದಿಯಾಗಿದೆ. ಈ ಕಾರಿನ ಬಿಡುಗಡೆಯ ಬಗ್ಗೆ ಬೇರೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟೊಯೊಟಾದ ಈ ಹೊಸ ಸಣ್ಣ ಕಾರು 2021ರ ಅಂತ್ಯದ ವೇಳೆಗೆ ಅಥವಾ 2022ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇದನ್ನು ಹೊರತುಪಡಿಸಿ ಈ ಹೊಸ ಕಾರಿನ ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.

ಈ ಹೊಸ ಸಣ್ಣ ಕಾರು ಕಾಂಪ್ಯಾಕ್ಟ್ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (ಬಿಇವಿ) ಆಗಿರಬಹುದು ಎಂದು ಹೇಳಲಾಗಿದೆ. ಈ ಕಾಂಪ್ಯಾಕ್ಟ್ ಕಾರು 2018ರಿಂದ ಪರೀಕ್ಷೆಗೊಳ ಪಟ್ಟಿರುವ ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿನ ಎಂಜಿನ್ ಪಡೆಯಬಹುದು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಕಾರಿನಲ್ಲಿರುವ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಕಾರು 130 ಕಿ.ಮೀನಿಂದ 180 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ. ಟೊಯೊಟಾ ಕಂಪನಿಯು ಈ ಕಾರಿನ ಬೆಲೆಯನ್ನು ರೂ.10 ಲಕ್ಷಗಳಿಗಿಂತ ಕಡಿಮೆ ನಿಗದಿಪಡಿಸುವ ಕಾರಣ ಈ ಕಾರು ಭಾರತದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ ಆಗಿರಲಿದೆ.

ಇನ್ನು ಮಾರುತಿ ಹಾಗೂ ಟೊಯೊಟಾ ಕಂಪನಿಗಳ ಹೊಸ ಎಂಪಿವಿ ಬಗ್ಗೆ ಹೇಳುವುದಾದರೆ ಈ ಎಂಪಿವಿಯು 2022ರ ಎರಡನೇ ತ್ರೈಮಾಸಿಕದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ವಿಭಿನ್ನ ಶೈಲಿಯ ಈ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಎಂಪಿವಿಯನ್ನು ಮಾರುತಿ ಸುಜುಕಿ ಕಂಪನಿಯಡಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಮಾರುತಿ ಮತ್ತು ಟೊಯೊಟಾ ಕಂಪನಿಗಳ ಈ ಹೊಸ ಎಂಪಿವಿಯು ಮಹೀಂದ್ರಾ ಮಾರ್ಜೊ, ಕಿಯಾ ಮೋಟಾರ್ಸ್ ಹಾಗೂ ಹ್ಯುಂಡೈ ಕಂಪನಿಗಳ ಎಂಪಿವಿಗಳಿಗೆ ಪೈಪೋಟಿ ನೀಡಲಿದೆ.

ಟೊಯೊಟಾ-ಸುಜುಕಿ ಕಂಪನಿಗಳು ಸಹ ಜೊತೆಗೂಡಿ ಹೊಸ ಮಧ್ಯಮ ಗಾತ್ರದ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿವೆ. ಈ ಹೊಸ ಎಸ್‌ಯುವಿಯು ಹ್ಯುಂಡೈ ಕ್ರೆಟಾ ಹಾಗೂ ಕಿಯಾ ಸೆಲ್ಟೋಸ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ ಎಂದು ಈ ಹಿಂದೆ ವರದಿಯಾಗಿತ್ತು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಎಸ್‌ಯುವಿಯನ್ನು ಟೊಯೊಟಾದ ಡಿಎನ್‌ಜಿಎ (ಡೈಹತ್ಸು ನ್ಯೂ ಜನರೇಷನ್ ಆರ್ಕಿಟೆಕ್ಚರ್) ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗುವುದು. ಈ ಎಸ್‌ಯುವಿಯು ಟೊಯೊಟಾ ರೆಜ್ ಹಾಗೂ ಡೈಹತ್ಸು ರಾಕಿಗಳನ್ನು ಆಧರಿಸಿರಬಹುದು. ಈ ಎಸ್‌ಯುವಿಯನ್ನು 2022-23ರ ವೇಳೆಗೆ ಬಿಡುಗಡೆಗೊಳಿಸಲಾಗುವುದು.